ಕನಕವೆಂದು ಭಾವಿಸಿ
ಕೆಸರಲ್ಲಿ ಕಾಲಿಟ್ಟೆ ನಾನು
ಕಮಲವಾಗುವ ಬಯಕೆಯಲ್ಲಿ
ಕೆಸರ ಮೆತ್ತಿ ಹೊರ ಬಂದಾಗ
ಸೂರ್ಯೋದಯದ ಸಮಯ
ಅರಳುತ್ತಿದ್ದೆ ಸುಂದರ ಚೆಲುವೆಯಂತೆ
ನನ್ನ ಅಂದ ಕಂಡು ಹೊಗಳಿದರು
ನನ್ನ ಮೃದು ಶರೀರವನ್ನು ಕೊಂಡಾಡಿದರು
ಹಲವರು ಬಂದು ನನ್ನ ಮೈಯ ರಸ ಹೀರಿದರು
ಸೂರ್ಯಾಸ್ತ ಆಗುತ್ತಲೇ
ನಾ ಬಾಡಿ ಆ ಕೆಸರಲ್ಲೇ ಅಡ್ಡ ಬಿದ್ದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment