Monday, July 9, 2012

ಒಬ್ಬ ಏಕಾಂಗಿ ಈ ನಗರದಲಿ

ಒಬ್ಬ ಏಕಾಂಗಿ ಈ ನಗರದಲಿ
ರಾತ್ರಿ ಹಾಗು ಮಧ್ಯಾಹ್ನದಲಿ
ಹೊಟ್ಟೆ ಪಾಡಿಗಾಗಿ ಹುಡುಕುತ್ತಾನೆ
ವಸತಿಗಾಗಿ ಹುಡುಕುತ್ತಾನೆ

ದಿನ ಖಾಲಿ ಖಾಲಿ ಪಾತ್ರೆಗಳು
ಮತ್ತೆ ರಾತ್ರಿ ಒಂದು ಪಾಳು ಬಾವಿಯು
ಈ ಬತ್ತಿದ ಕಣ್ಣಿನಿಂದ 
ಕಣ್ಣೀರ ಬದಲು ಬರುತ್ತದೆ ಹೊಗೆಯು
ಜೀವಿಸುವ ಕಾರಣ ಏನಿಲ್ಲ
ಸಾಯುವ ಹಾದಿ ಹುಡುಕುತ್ತಾನೆ
ಒಬ್ಬ ಏಕಾಂಗಿ ಈ ನಗರದಲಿ ...

ಈ ವಯಸ್ಸಿಂದ ಉದ್ದ ರಸ್ತೆಯನ್ನು
ತಾಣ ತಲುಪುವುದನ್ನು ನೋಡಲಿಲ್ಲ
ಕೇವಲ ಓಡುತ ಅಲೆಯುತ ಇರುತ್ತದೆ
ನಿಲ್ಲುವುದನ್ನು ನೋಡಲಿಲ್ಲ
ಈ ಅಪರಿಚಿತ ನಗರದಲಿ
ಪರಿಚಿತನನ್ನು ಹುಡುಕುತ್ತಾನೆ
ಒಬ್ಬ ಏಕಾಂಗಿ ಈ ನಗರದಲಿ...

ಮೂಲ :ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭುಪಿಂದರ್
ಸಂಗೀತ : ಜೈದೇವ್ 
Ek Akela Is Shahar Mein
Raat Mein Aur Dopahar Mein
Aabodaana Dhoondta Hai
Aashiyana Dhoondta Hai

Din Khali Khali Bartan Hai
Aur Raat Hai Jaise Andha Kuan
In Sooni Andheri Aankhon Se
Aansoon Ki Jagah Aata Hain Dhuan
Jeene Ki Vajah To Koi Nahi
Marne Ka Bahana Dhoondta Hai
Ek Akela Is Shahar Mein...

In Umar Se Lambi Sadkon ko
Manzil Pe Pohonchte Dekha Nahin
Bas Daudti Phirti Rahti Hain
Humne To Theherte Dekha Nahin
Is Ajnabi Se Shahar Mein
Jaana Pehechana Dhoondta Hai
Ek Akela Is Shahar Mein...
   
www.youtube.com/watch?v=i_w4OeYMAWw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...