ಕೇಳಿದೆ ನಾ ತ್ರಿವರ್ಣ ಧ್ವಜವನ್ನು
"ನಿನ್ನನ್ನು ಏರಿಸುತ್ತಾರೆ ಎತ್ತರ
೨೬ ಜನವರಿ ಹಾಗು ೧೫ ಆಗಸ್ಟ್ ರಂದು
ಗೌರವಿಸುತ್ತಾರೆ ಅಭಿಮಾನದಿಂದ
ಬೇರೆ ಸಮಯ ಅವರಿಗೆ ನೀನೊಂದು ಪ್ರದರ್ಶನದ ವಸ್ತು
ಅಲ್ಲದೆ ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕು"
ಬೇಸರವಿಲ್ಲವೇ ನಿನಗೆ ?
ಭಾರತ ದೇಶದ ಧ್ವಜ ವಾಗಿ
ಭಾರತದಲ್ಲೇ ನಿನ್ನ ಗತಿ ಈಗೆ ಯಾಕೆ?
ವರ್ಷದ ಈ ಎರಡು ದಿವಸದ ಗೌರವ ನಿನಗೆ ಬೇಕೇ?
ತ್ರಿವರ್ಣ ಧ್ವಜ ಹೇಳಿತು ದುಃಖದಿಂದ
"ನಿಮ್ಮ ಮನದಲ್ಲಿ ನನಗೆ ಸದಾ ಗೌರವ ಇದೆ
ಆದರೆ ಬಡತನ, ಭ್ರಷ್ಟಾಚಾರದಿಂದ
ನಿಮಗೆ ಮನಶಾಂತಿ ಇಲ್ಲದಾಗಿದೆ
ನನಗೆ ಈ ಗೌರವ ೩೬೫ ದಿವಸ ಬೇಕಾಗಿದೆ
ಆದರೆ ಈಗ ದೇಶದ ಸ್ಥಿತಿ ಗಂಭೀರವಾಗಿದೆ
ನನ್ನ ಮರ್ಯಾದೆ ಬೀದಿ ಪಾಲಾಗಿದೆ,
ದೇಶದ ಅಭಿಮಾನವಾದ ನನಗೆ
ನನ್ನದೇ ಅವಸ್ಥೆ ದಯನೀಯವಾಗಿದೆ
ರಾಜಕಾರಣಿಗಳ ದುರಾಶೆಯಿಂದ
ನನ್ನ ಬಾಳೆ ಅಪಾಯಕಾರಿಯಾಗಿದೆ "
ನನ್ನ ತಲೆ ತಗ್ಗಿಸ ಬೇಡ ಮಾನವ
ದೇಶ ಪ್ರೇಮದ ಚಿಹ್ನೆಯಾದ ನನಗೆ
ಒಂದು ಪ್ರದರ್ಶನದ ವಸ್ತು ಹಾಗು
ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕಾಗಿ
ಅಗೌರವ ತೋರಿಸ ಬೇಡ ಮಾನವ"
by ಹರೀಶ್ ಶೆಟ್ಟಿ, ಶಿರ್ವ