ಕೇಳಿದೆ ನಾ ಗುಲಾಬಿ ಹೂವಿನ ಮುಳ್ಳಿಗೆ
"ಎಷ್ಟು ಸುಂದರ ಈ ಸುಹಾಸಿತ ಗುಲಾಬಿ ಹೂವು
ಏಕೆ ನಿನಗಿಲ್ಲ ಗುಲಾಬಿ ಹೂವಿನ ಅಂದ ಚೆಂದ
ಗುಲಾಬಿ ಹೂವಿನ ಮುಳ್ಳು ಹೇಳಿತು ನಕ್ಕು
"ನನಗೆ ಬೇಡ ಅಂದ ಚೆಂದ
ಆದರೆ ನಿಮಗೆ ಒಂದು ಜ್ಞಾನ ನನ್ನಿಂದ
ನನ್ನ ಇಲ್ಲಿ ಮುಖ್ಯ ಪಾತ್ರ
ನಾನಿಲ್ಲದೆ ಗುಲಾಬಿ ಹೂವು ಇಲ್ಲ
ಜೀವನ ಸುಖ ದುಃಖದ ಸಂಗಮ
ಕೂಡಿ ಬಾಳುವುದೇ ಉತ್ತಮ
ಜೀವನದಲ್ಲಿ ಬೇಕು ನೋವಿನ ಅನುಭವ
ಆಗಲೇ ಜೀವನವನ್ನು ಗೆಲ್ಲಲು ಸಂಭವ"
by ಹರೀಶ್ ಶೆಟ್ಟಿ, ಶಿರ್ವ
"ಎಷ್ಟು ಸುಂದರ ಈ ಸುಹಾಸಿತ ಗುಲಾಬಿ ಹೂವು
ಆದರೆ ನೀ ಕೊಡುವಿ ಎಲ್ಲರಿಗೆ ನೋವು
ಏನು ಗುಲಾಬಿ ಹೂವು ಹಾಗು ನಿನ್ನ ಸಂಬಂದ ಏಕೆ ನಿನಗಿಲ್ಲ ಗುಲಾಬಿ ಹೂವಿನ ಅಂದ ಚೆಂದ
ಏನು ನಿನ್ನ ಈ ಆಟ
ಯಾಕೆ ನಿನ್ನ ಈ ಕಾಟ
ನಿನ್ನಿಂದ ಕಷ್ಟ ಮಾತ್ರ ಇಲ್ಲಿ ಏನು ನಿನ್ನ ಪಾತ್ರ"
ಗುಲಾಬಿ ಹೂವಿನ ಮುಳ್ಳು ಹೇಳಿತು ನಕ್ಕು
"ನನಗೆ ಬೇಡ ಅಂದ ಚೆಂದ
ಆದರೆ ನಿಮಗೆ ಒಂದು ಜ್ಞಾನ ನನ್ನಿಂದ
ನನ್ನ ಇಲ್ಲಿ ಮುಖ್ಯ ಪಾತ್ರ
ಹಲವು ಪ್ರಮಾಣ ನನ್ನತ್ರ
ಗುಲಾಬಿ ಹೂವು ಇಲ್ಲದೆ ನಾನಿಲ್ಲ ನಾನಿಲ್ಲದೆ ಗುಲಾಬಿ ಹೂವು ಇಲ್ಲ
ಜೀವನ ಸುಖ ದುಃಖದ ಸಂಗಮ
ಕೂಡಿ ಬಾಳುವುದೇ ಉತ್ತಮ
ಜೀವನದಲ್ಲಿ ಬೇಕು ನೋವಿನ ಅನುಭವ
ಆಗಲೇ ಜೀವನವನ್ನು ಗೆಲ್ಲಲು ಸಂಭವ"
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment