Friday, August 12, 2011

ಭಾವನೆಗಳ ಕೊಲೆ


ಮನಸ್ಸಿನಲ್ಲಿಲ್ಲ ಈಗ ಆ ಅಲೆ
ಆಯಿತು ಭಾವನೆಗಳ ಕೊಲೆ

ಮನದಲ್ಲಿ ಮೂಡುತ್ತಿದ್ದ ಅನೇಕ 
ಪ್ರಕಾರದ ವಿಚಾರಗಳ
ಹೃದಯದ ಕೋಣೆಗಳಲ್ಲಿ
ಅಡಗಿಟ್ಟ ಹಲವು ಕನಸುಗಳ

ಮನ ಮೋಹಿಸಿದ
ಆ ಅದ್ಭುತ ದೃಶ್ಯಗಳ 
ಕಣ್ಣಿರು ಸುರಿಸಿದ
ಆ ಹೃದಯ ನಡುಗಿಸಿದ  ಘಟನೆಗಳ 

ಪ್ರೇರಿಸಿದ ಆ
ಸುಂದರ ಕಲ್ಪನೆಗಳ
ಜ್ಞಾನದ
ಆ ಸುಂದರ ಮಾತುಗಳ

ಆನಂದದಿಂದ ಜೀವಿಸಿದ
ಜೀವನದ ಆ ಮಧುರ ಕ್ಷಣಗಳ
ದುಃಖದಲ್ಲಿ ಕಳೆದ
ಆ ಕಷ್ಟದ ದಿನಗಳ

ಸಾಹಿತ್ಯದ ಲೋಕವ ಬಂದು
ಸಾಹಿತ್ಯದಲ್ಲಿ  ಸ್ಥಾನ
ಪಡೆಯಲು  ಅಸಮರ್ಥನಾದೆ
ಹೇಗೆ ಬರೆಯುವುದು ಕವಿತೆಗಳ?
ಹೇಗೆ ಉಪೋಯೋಗಿಸುವುದು ಪದಗಳ?
ಎಲ್ಲಿಂದ ತರಲಿ ಶಬ್ದಗಳ?

ಕಾಯುತಿದ್ದ
ಪುಸ್ತಕದ ಖಾಲಿ ಹಾಳೆಗಳ
ಪೆನ್ನಿನ
ಒಣಗಿದ ಶಾಯಿಗಳ 
ವ್ಯಕ್ತಪಡಿಸುವುದು ಹೇಗೆ
ಭಾವನೆಗಳ 

ಮನಸ್ಸಿನಲ್ಲಿಲ್ಲ ಈಗ ಆ ಅಲೆ
ಆಯಿತು ಭಾವನೆಗಳ ಕೊಲೆ
by ಹರೀಶ್ ಶೆಟ್ಟಿ , ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...