Showing posts with label Kabir Doha (ಕಬೀರ ದೋಹ ). Show all posts
Showing posts with label Kabir Doha (ಕಬೀರ ದೋಹ ). Show all posts

Wednesday, July 16, 2014

Kabir Doha (ಕಬೀರ ದೋಹ )

ಕಬೀರ ದೋಹ
ಅನ್ಯರ ದೋಷ ನೋಡಿ, ನಗು ನಗುತ್ತಲೇ ಹೋದನಲ್ಲ!
ತನ್ನದು ನೆನಪಾಗಲಿಲ್ಲ, ಅದರ ಆದಿಯಿಲ್ಲ ಅಂತ್ಯವಿಲ್ಲ!!

कबीर दोहा  
दोस पराए देखि करि, चला हसन्त हसन्त,
अपने याद न आवई, जिनका आदि न अंत।

ಅನುವಾದ : by ಹರೀಶ್ ಶೆಟ್ಟಿ, ಶಿರ್ವ 

Sunday, August 18, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಹಿಳಾ ಪುರುಷರು ಎಲ್ಲರೂ ಕೇಳಿ, ಗುರುಗಳ ಭೋಧನೆ ಇದು!
ವಿಷ ಫಲ ಬೆಳೆಯುವುದು ಅನೇಕ, ನೋಡಬೇಡಿ ಯಾರೂ ಸವಿದು!!
ಅನುವಾದ by ಹರೀಶ್ ಶೆಟ್ಟಿ, ಶಿರ್ವ
कबीर दोहा
नारी पुरुष सब ही सुनो, यह सतगुरु की साख |
विष फल फले अनेक है, मत देखो कोई चाख ||

Monday, August 12, 2013

Kabir Doha (ಕಬೀರ ದೋಹ )

ಕಬೀರ ದೋಹ
ನನ್ನ ನನ್ನಲ್ಲಿ ಏನಿಲ್ಲ ,ಇದ್ದದ್ದೆಲ್ಲ ನಿನ್ನ!
ನಿನ್ನ ನಿನಗೆ ನೀಡುವಾಗ, ಏಕೆ ಸಂಕೋಚ ಮನದಲಿ ನನ್ನ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मेरा मुझ में कुछ नहीं, जो कुछ है सो तोह |
तेरा तुझको सौपता, क्या लागे है मोह ||

Tuesday, June 25, 2013

Kabir Doha (ಕಬೀರ ದೋಹ )

ಕಬೀರ ದೋಹ
ಹರಿ ರಸ ಕುಡಿದವನೇ ಅರಿಯುವನು, ಅದರ ಅಮಲು ಎಂದೂ ಹೋಗದು!
ಹುಚ್ಚುಹಿಡಿದವನಂತೆ ಅಲೆಯುವನು, ಗೊಡವೆಯೂ ಇರುವುದಿಲ್ಲ ದೇಹದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
हरी रस पीया जानिये, कबहू न जाए खुमार |
मैमता घूमत फिरे, नाही तन की सार ||

Saturday, June 22, 2013

Kabir Doha (ಕಬೀರ ದೋಹ )

ಕಬೀರ ದೋಹ
ನಯನದೊಳಗೆ ಬಾ ನೀನು, ಒಳ ತೆಗೊಂಡು ನಯನ ಮುಚ್ಚುವೆ!  
ಬೇರೆ ಯಾರನ್ನೂ ನೋಡಲಾರೆ, ನಿನಗೂ ನೋಡಲು ಬಿಡಲಾರೆ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा  
नैना अंतर आव तू, नैन झापी तोही लेऊ |
न में देखू और को, न तोही देखन देऊ ||
*ಭಕ್ತನಿಗೆ ದೇವರಲ್ಲದೆ ಇತರ ಯಾವುದರ ಗೋಚರ ಇರುವುದಿಲ್ಲ, ಪ್ರತಿ ಕ್ಷಣ ಅವನು ದೇವರ ಸಾನ್ನಿಧ್ಯ ಪಡೆಯಲು ಬಯಸುವನು. ನಯನ ಹೃದಯಕ್ಕೆ ಹೋಗುವ ಮಾರ್ಗದ ಒಂದು ದ್ವಾರ, ಭಕ್ತ ಯಾವಾಗಲು ದೇವರನ್ನು ತನ್ನ ಕಣ್ಣಲ್ಲಿ ತುಂಬಿ ತನ್ನ ಹೃದಯ ಮಂದಿರದಲ್ಲಿ ನೆಲೆಸುವನು.

Thursday, June 20, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಚಿಪ್ಪು ಸಮುದ್ರದ, ಅಂಗೀಕರಿಸುವುದಿಲ್ಲ ಉಪ್ಪು ನೀರನ್ನು!
ಕುಡಿಯುವುದು ಸ್ವಾತಿ ಮಳೆನೀರು, ಶೋಭಿಸುವುದು ಸಾಗರವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा सीप समुंदर की, खरा जल नाही ले |
पानी पिए स्वाति का, शोभा सागर दे ||
*ಚಿಪ್ಪು ಸಮುದ್ರದಲ್ಲಿದ್ದು ಉಪ್ಪು ನೀರನ್ನು ಅಸ್ವೀಕರಿಸಿ ಸ್ವಾತಿ ಮಳೆಕ್ಕಾಗಿ ಕಾದು ಕೇವಲ ಅದನ್ನೇ ಅಂಗೀಕರಿಸುತ್ತದೆ ಹಾಗು ಸಾಗರದ ಸೌಂದರ್ಯವನ್ನು ಏರಿಸುತ್ತದೆ. 

Wednesday, June 19, 2013

Kabir Doha (ಕಬೀರ ದೋಹ )

ಕಬೀರ ದೋಹ
ಹೇಳುವೆ ಆ ಜಾತಿದವನೆಂದು, ಹೇಳಿ ಬಾರಿಸುವೆ ಡೋಲನ್ನು!
ಉಸಿರು ವ್ಯರ್ಥಗೊಳಿಸುವೆ, ಕಳೆದುಕೊಳ್ಳುವೆ ಮೂರು ಲೋಕದ ಮೌಲ್ಯವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कहता हूँ कही जात हूँ, कहत बजाये ढोल |
स्वसा ख़ाली जात है, तीन लोक का मोल ||
*ನೀನು ಜಗಕ್ಕೆಲ್ಲ ನೀನೊಬ್ಬ ಉತ್ತಮ ಜಾತಿದವನೆಂದು ಹೆಮ್ಮೆ ಪಡುವೆ, ಆದರೆ ಈ ರೀತಿಯಲ್ಲಿ ನೀನು ತನ್ನ ಜೀವನ ಶಕ್ತಿ ಉಸಿರನ್ನು ವ್ಯರ್ಥಗೊಳಿಸುವೆ, ಯಾಕೆಂದರೆ ನೀನು ಈ ಉತ್ತಮ ಮಾನವ ಜನ್ಮಕ್ಕೆ ಮೌಲ್ಯ ನೀಡುವುದಿಲ್ಲ, ಈ ಜನ್ಮವನ್ನು ಮೂರು ಲೋಕದಿಂದ ಪಡೆಯುವುದು ತುಂಬಾ ಕಷ್ಟ. ಇಲ್ಲಿ ಕಬೀರರು ಮಾನವ ಜನ್ಮ ಎಷ್ಟು ಅಮೂಲ್ಯವಾಗಿದೆಯೆಂದು ಹಾಗು ಜಾತಿವಾದದ ಮೇಲೆ ಒಂದು ತೀಕ್ಷ್ಣ ಪ್ರಹಾರ ಮಾಡಿದ್ದಾರೆ. 

Tuesday, June 18, 2013

Kabir Doha (ಕಬೀರ ದೋಹ )

ಕಬೀರ ದೋಹ
ದಾಸನಾಗುವುದು ಕಠಿಣ, ದಾಸರ ಸೇವೆ ಮಾಡುವೆ ದಾಸನಾಗಿ!!
ಈಗಂತೂ ಹೀಗೆಯೇ ಇದ್ದಿರುವೆ, ಪಾದ ಅಡಿಯ ಹುಲ್ಲಾಗಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
दास कहावन कठिन है, में दासन का दास |
अब तो ऐसा होए रहू, पाँव तले की घास ||

Monday, June 17, 2013

Kabir Doha (ಕಬೀರ ದೋಹ )

ಕಬೀರ ದೋಹ
ಅರೆ ಕ್ಷಣದ ಜ್ಞಾಪಕ ಇಲ್ಲ, ಸಿಂಗರಿಸುವೆ ನಾಳೆಯನ್ನು !
ನಾಳೆ ಇದ್ದಕ್ಕಿದ್ದಂತೆ ಸಾಯುವೆ,  ಹದ್ದು ಹಿಂಡುವಂತೆ ಪಕ್ಷಿಯ ಪ್ರಾಣವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
पाव पलक की सुधि नाहि, करे काल को साज |
काल अचानक मारसी, ज्यों तीतर को बाज़ ||

Sunday, June 16, 2013

Kabir Doha (ಕಬೀರ ದೋಹ )

ಕಬೀರ ದೋಹ
ತೋಟಗಾರ ಬರುವುದನ್ನು ಕಂಡು, ಶುರುವಾಯಿತು ಮೊಗ್ಗುಗಳ ಗೋಳಾಟ!
ಅರಳಿದ ಹೂಗಳನ್ನು ಕೊಯ್ದುಕೊಂಡ, ನಾಳೆ ನಮ್ಮ ಕೂಡ ಮುಗಿಯುವುದು ಆಟ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मलिन आवत देख के, कलियन करे पुकार |
फूले फूले चुन लिए, काल हमारी बार ||
*ಒಂದಾನೊಂದು ದಿನ ನಮಗೆ ಈ ಸಂಸಾರ ತ್ಯಜಿಸಿ ಹೋಗಬೇಕು ಎಂದು ಪ್ರತಿ ಅನುಭವವುಳ್ಳ ಮನುಷ್ಯನಿಗೆ ತಿಳಿದಿದೆ.  ಈ ಅಲ್ಪ ಜೀವನದಲ್ಲಿ ಒಳ್ಳೆಯ ಕರ್ಮ ಮಾಡಿ ತನ್ನ ಇದ್ದಷ್ಟು ಜೀವನ ಪಾವನ ಮಾಡುವುದೇ ಒಳಿತು ಎಂದು ಇಲ್ಲಿ ಹೇಳುವ ಕಬೀರರ ಮರ್ಮವಾಗಿತ್ತು. 

Saturday, June 15, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾಂತಿ ನನ್ನ ಕಂದನ, ನಿನ್ನದೇ ಕಾಂತಿ ಎಲ್ಲಿಯೂ ನೋಡಿದಲ್ಲಿ!
ಕಾಂತಿ ಕಾಣಲು ನಾ ಹೋದೆ, ನಾನೂ ವಿಲೀನವಾದೆ ಆ ಕಾಂತಿಯಲಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
लाली मेरे लाल की, जित देखू तित लाल |
लाली देखन में गयी, में भी हो गयी लाल ||
*ಭಕ್ತನಿಗೆ ಒಮ್ಮೆ ದೇವರ ಅರಿವಾದ ನಂತರ ಅವನಿಗೆ ಎಲ್ಲೆಡೆ ದೇವರ ಪ್ರಕಾಶ ಕಂಡು ಬರುತ್ತದೆ ಹಾಗು ಅವನು ದೇವರಲ್ಲಿ ವಿಲೀನವಾಗುತ್ತಾನೆ. ಇಲ್ಲಿ ಕಬೀರರು ಬಹಳ ಸುಂದವಾಗಿ ಇದನ್ನು ವಿವರಿಸಿದ್ದಾರೆ.

Thursday, June 13, 2013

Kabir Doha (ಕಬೀರ ದೋಹ )

ಕಬೀರ ದೋಹ
ಹುಡುಕಿದವರು ಪಡೆದರು, ನೀರಿನ ಆಳಕ್ಕೆ ಧುಮುಕಿ!
ನಾನು ಮೂರ್ಖ ಮುಳುಗುವೆಯೆಂದು ಹೆದರಿ, ತೀರದಲ್ಲಿಯೇ ಉಳಿದೆ ಬಾಕಿ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
जिन ढूंढा तिन पाईया, गहरे पानी पैठ |
में बोरी डूबन डरी, रही किनारे बैठ ||
*ಮುತ್ತು ಪಡೆಯ ಬೇಕಾದರೆ ನೀರಿನ ಆಳಕ್ಕೆ ಹೋಗ ಬೇಕಾಗುತ್ತದೆ, ಮುಳುಗುವೆಯೆಂದು ಹೆದರಿದವನಿಗೆ ಏನೂ ಸಿಗುದಿಲ್ಲ. ಹಾಗೆಯೇ ದೇವರನ್ನು ತಿಳಿಯಲು ಆಳವಾದ ಧ್ಯಾನ ಮಾಡಿ ದೇವರ ಸಾನ್ನಿಧ್ಯ ಹಾಗು ಪ್ರೀತಿ ಪಡೆಯಬಹುದು.

Wednesday, June 12, 2013

Kabir Doha (ಕಬೀರ ದೋಹ )

ಕಬೀರ ದೋಹ
ನೀನು ನೀನೆಂದು ನಾನು ನಿನ್ನಲ್ಲಿ ವಿಲೀನ, ನನ್ನಲ್ಲಿ ಉಳಿಯಲಿಲ್ಲ ಅಹಂ ಇನ್ನು!
ಪುನರ್ಜನ್ಮದ ಕಷ್ಟ ಕಣ್ಮರೆಯಾಯಿತು, ಎಲ್ಲಿ ನೋಡಿದರೂ ನೀನೆ ನೀನು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
तू तू करता तू भया, मुझमें रही न हूँ |
बारी फेरी बलि गई, जित देखू तित तू ||
*ದೇವರ ನಾಮ ಜಪಿಸುವವರು ದೇವರ ನಿಕಟವಾಗುತ್ತಾರೆ ಹಾಗು ಅವರು ದೇವಲೋಕದಲ್ಲಿ ತಲುಪುತ್ತಾರೆ. ಇದರಿಂದ ಅವರು ಪುನರ್ಜನ್ಮದ ಚಕ್ರದಿಂದ ಮುಕ್ತವಾಗುತ್ತಾರೆ, ಹನಿ ಸಮುದ್ರದಲ್ಲಿ ಸೇರಿದ ನಂತರ ಅಗಲಿಕೆಯ ಪ್ರಶ್ನೆ ಎಲ್ಲಿ ಉಳಿಯುತ್ತದೆ. 

Tuesday, June 11, 2013

Kabir Doha (ಕಬೀರ ದೋಹ )

ಕಬೀರ ದೋಹ
ಹುಡುಕಿ ಹುಡುಕಿ ಹೇ ಗೆಳತಿ, ಕಬೀರ ಮರೆಯಾದನು!
ಹನಿ ಸಮುದ್ರದಲಿ ಸೇರಿದೆ, ಹುಡುಕುವುದು ಹೇಗೆ ಅದನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
हेरत हेरत हे सखी, रहा कबीर हेराय |
बूँद समानी समुंदर में, सो कत हेरी जाय ||
*ಭಗವಂತನ ಮಾಯೆ ಅದ್ಭುತ ಹಾಗು ವ್ಯಾಪಕವಾಗಿದೆ, ಅವನನ್ನು ಹುಡುಕಲು ಹೋದವನು ಅವನಲ್ಲಿಯೇ ಮರೆಯಾಗುವನು ಎಂದು ಸಮುದ್ರದಲ್ಲಿ ಸೇರಿದ ಹನಿಯ ಉದಾಹರಣೆ ಕೊಟ್ಟು ಕಬೀರರು ಹೇಳಿದ್ದಾರೆ.

Monday, June 10, 2013

Kabir Doha (ಕಬೀರ ದೋಹ )

ಕಬೀರ ದೋಹ
ಖನನ ಅಗೆಯುವಿಕೆ ಭೂಮಿ ಸಹಿಸಿಕೊಳ್ಳುವುದು,  ಕಡಿಯುವುದನ್ನು ಕಾಡು!
ಕುಟಿಲ ನುಡಿ ಋಷಿ ಮುನಿ ಸಹಿಸಿಕೊಳ್ಳುವರು,ಇತರರಿಂದ ಸಹಿಸಲಾಗದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
खोद्खाद धरती सहे, काटकूट बनराय |
कुटिल वचन साधू  सहे, और से सहा न जाय ||

Sunday, June 9, 2013

Kabir Doha (ಕಬೀರ ದೋಹ )

ಕಬೀರ ದೋಹ
ಒಂದು ದಿನ ಹೀಗೆ ಬರುವುದು,ಅಗಲುವೆ ಎಲ್ಲದಿಂದ ನೀನು!
ರಾಜ ರಾಣಿ ಸಾಹುಕಾರ ಬಡವ ಎಲ್ಲರ ಗತಿ ಒಂದೇ, ಎಚ್ಚರಿಸುವುದಿಲ್ಲ ಯಾಕೆ ನೀನು!!
ಅನುವಾದ :ಹರೀಶ್ ಶೆಟ್ಟಿ,ಶಿರ್ವ
कबीर दोहा
एक दिन ऐसा होयेगा, सब सो परे बिछोहू |
राजा रानी राव रंक, सावध क्यों नाहि होहु ||
*ಅಂತ್ಯ ಸಮಯ ಎಲ್ಲರ ಗತಿ ಒಂದೇ, ಇಲ್ಲಿ ಕಬೀರರು ಆಸೆ ಆಕಾಂಕ್ಷೆ ಮೋಹ ಕೋಪ ಲೋಭ ಮತ್ಸರ ಇದರಿಂದ ದೂರ ಇರಿ ಎಂದು ಎಚ್ಚರಿಸುತ್ತಿದ್ದಾರೆ .

Saturday, June 8, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾಗೆ ಯಾರದ್ದು ಸಂಪತ್ತು ಕದಿಯದು, ಕೋಗಿಲೆ ಯಾರಿಗೂ ಏನನ್ನೂ ನೀಡದು!
ಆದರೆ ಸಿಹಿ ನುಡಿ ಹಾಡಿ ಕೋಗಿಲೆ, ಜಗವನ್ನು ತನ್ನ ಮಾಡುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಕಬೀರ್ ದೋಹ
कागा काको धन हरे, कोयल काको देत |
मीठे शब्द सुनायके, जग अपनों कर लेत ||
*ತನ್ನ ಪ್ರಕೃತಿ ಮತ್ತು ಸ್ವಭಾವ ಪ್ರಕಾರ ನಾವು ಇತರರನ್ನು ಮೆಚ್ಚಿಸ ಬಹುದು ಹಾಗು ನಮ್ಮವರನ್ನಾಗಿ ಮಾಡ ಬಹುದು .

Thursday, June 6, 2013

Kabir Doha (ಕಬೀರ ದೋಹ )

ಕಬೀರ ದೋಹ
ಎಲ್ಲಾ ಭೂಮಿ ಕಾಗದ ಮಾಡುವೆ, ಲೇಖನಿ ಮರಗಳನ್ನೆಲ್ಲಾ!
ಏಳು ಸಾಗರ ಮಸಿ ಮಾಡುವೆ, ಆದರೂ ಗುರು ಮಹಿಮೆ ಬರೆಯಲು ಸಾಧ್ಯವಿಲ್ಲ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
सब धरती कागज करूँ, लेखनी सब बनराय!
सात समुंदर की मसि करूँ, गुरुगुण लिखा न जाय!!
*ಗುರು ಕೀರ್ತಿ ಅಷ್ಟು ಅದ್ಭುತ, ಎಷ್ಟು ವಿವರಿಸಿದರೂ ಕಡಿಮೆ.

Wednesday, June 5, 2013

Kabir Doha (ಕಬೀರ ದೋಹ )

ಕಬೀರ ದೋಹ
ದುರ್ಬಲರಿಗೆ ಸತಾಯಿಸದಿರಿ, ಅವರ ಶಾಪ ದೊಡ್ಡದು!
ಸತ್ತ ಶರೀರದ ಉಸಿರಿಂದ, ಕಬ್ಬಿಣ ಭಸ್ಮವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
दुर्बल को न सताइये, जाकी मोटी हाय |
मरी खाल की सांस से, लोह भसम हो जाय ||

Tuesday, June 4, 2013

Kabir Doha (ಕಬೀರ ದೋಹ )

ಕಬೀರ ದೋಹ
ಯಾರಾದರು ನಿನಗೆ ಮುಳ್ಳು ಚುಚ್ಚಿದರೆ,ನೀನು ಅವರಿಗಾಗಿ ಹೆಕ್ಕು ಹೂವುಗಳ!
ನಿನಗೆ ಹೂವಿನ ಬದಲು ಸಿಗುವುದು ಹೂವು,  ಮುಳ್ಳಿಗೆ ಸಿಗುವುದು ತ್ರಿಶೂಲ!!  
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा  
जो तोको कांटा बुवै, ताहि तू बुवै फूल |
तो को फूल को फूल है , काँटा को तिरसूल ||

ಸಿದ್ಧಿದಾತ್ರಿ