Showing posts with label ಕಬೀರ ಪ್ರೇಮ ಗೀತೆ. Show all posts
Showing posts with label ಕಬೀರ ಪ್ರೇಮ ಗೀತೆ. Show all posts

Thursday, January 12, 2012

ಕಬೀರ ಪ್ರೇಮ ಗೀತೆ

Kabir Love Songs
Supne Mein Sayeen Mile, Sovat Liya Lagaye
Aankh Na Khoolun Darpatta, Mat Sapna Hai Jaye
Sayeen Mera Bahut Gun, Likhe Jo Hirde Mahin
Piyoon Na Pani Darpatta, Mat Veh Dhoye Jahin
Naina Bheeter Aav Tu, Nain Jhaamp Tohe Layoon
Na Mein Dekhun Aur Ko, Na Tehi Dekhan Deyoon
__________________________
ನನ್ನ ಪ್ರೀತಿ ಬಂದಳು ಕನಸಲಿ
ಸಂಪರ್ಕಿಸಿದೆ ಅವಳನ್ನು ನಿದ್ದೆಯಲಿ
ಕಣ್ಣನ್ನು ತೆರೆಯಲು ಹೆದರುವೆ
ಕನಸು ಮಾಯವಾಗಿ ಹೋದರೆ

ನನ್ನವಳು ತುಂಬಾ ಜಾಣೆ
ಬರೆಯುವಳು ನನ್ನ ಹೃದಯದಲಿ
ನೀರನ್ನು ಕುಡಿಯಲು ಹೆದರುವೆ
ಅವಳು ಬರೆದ ಸಂದೇಶ ತೊಳೆದು ಹೋದರೆ

ನನ್ನ ಕಣ್ಣಲ್ಲಿ ಪ್ರವೇಶಿಸು
ಕಣ್ಣ ರೆಪ್ಪೆಗಳಿಂದ ನಿನ್ನನ್ನು ಅಡಗಿಸುವೆ
ನಾನು ಯಾರನ್ನು ನೋಡಲಾರೆ
ನಿನ್ನನ್ನು ನೋಡಲು ಯಾರನ್ನು ಬಿಡಲಾರೆ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Tuesday, January 10, 2012

ಕಬೀರ ಪ್ರೇಮ ಗೀತೆ

Kabir Love Songs
Sayeen Bin Darad Karejae Hoye
Din Nahin Chain Raat Nahin Nindia, Kase Kahun Dukh Hoye
Aadhi Ratia Pichle Paharva, Sayeen Bin Taras Rahi Soye
Kahat Kabir Suno Bhai Sadho,Sayeen Mile Sukh Hoye
_________________________
ಪ್ರಿಯತಮ ಇಲ್ಲದೆ ವೇದನೆ ಹೃದಯದಲಿ

ದಿವಸದಲ್ಲಿಲ್ಲ ನೆಮ್ಮದಿ ನಿದ್ದೆ ಇಲ್ಲ ರಾತ್ರಿಯಲಿ
ದುಃಖ ನನ್ನ ಯಾರ ಹತ್ತಿರ ಹೇಳಲಿ

ನಿನ್ನೆ ಮಧ್ಯ ರಾತ್ರಿಯ ಅಮೃತ ಗಳಿಗೆಯಲಿ
ಮಲಗಿದೆ ನಾ ಪ್ರೀತಿಯ ವಿರಹದಲಿ

ಕಬೀರ ಹೇಳುವನು ಕೇಳಿ ಮಿತ್ರರೇ
ನನ್ನ ಸಂತೋಷ ಅಡಗಿದೆ ಒಲವಿನ ಬೇಟಿಯಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Monday, January 9, 2012

ಕಬೀರ ಪ್ರೇಮ ಗೀತೆ

Kabir Love Songs
Mein Ka Se Bujhon, Aapne Piya Ki Baat Ri
Jaan Sujaan Pranpriya Priya Bin, Sabe Bataun Jaat Ri
Aasa Nadi Agadh Kumati Bahe, Roki Kahu Pe Na Jaat Ri
Kam Krodh Dou Bhaye Karare, Padhen Bisaye Rus Maat Ri
Je Panche Aapmaan Ke Sungi, Sumiran Ko Alsaat Ri
Kahe Kabir Bichuri Nahin Milihe, Jyon Taruvar Bin Paat Ri
_____________
ಯಾರಿಂದ ಪರಿಹರಿಸಲಿ
ನನ್ನ ಪ್ರೀತಿಯ ಒಗಟನ್ನು
ಅವಳಿಲ್ಲದೆ ಜೀವನ ಜೀವರಹಿತ
ಎಲ್ಲರಿಂದ ಹೇಳುವೆ ಈ ಮಾತನ್ನು
ಭರವಸೆಯ ನದಿಯಲ್ಲಿ ಹರಿಯುತ್ತಿದೆ ಬಾಗಿದ ಆಸೆಗಳು
ತಡೆಗಟ್ಟಲು ಸಾದ್ಯವಿಲ್ಲ ಅದನ್ನು
ಕಾಮ ಕ್ರೋಧ ಎರಡೂ ತನ್ನ ಪೂರ್ಣ ಶಕ್ತಿಯಿಂದ ಪ್ರಯತ್ನಿಸುತ್ತಿದೆ
ಅನೈತಿಕ ಕಾರ್ಯದಲ್ಲಿ ಸಿಲುಕಿಸಲು ನನ್ನನ್ನು
ಅಪಮಾನದ "ಐದರ" ಸಂಘ ಒಟ್ಟಿಗೆ ಬಂದು
ಭಕ್ತಿಯನ್ನು ಕಳೆದು ಹುಟ್ಟಿಸುತ್ತಿದೆ ಆಲಸ್ಯವನ್ನು
ಕಬೀರ ಹೇಳುವನು ಮರದಿಂದ ಬಿದ್ದ ಎಲೆಯ ಹಾಗೆ
ಒಟ್ಟುಗೂಡಿಸಲು ಸಾದ್ಯವಿಲ್ಲ ಒಮ್ಮೆ ಆದ ಒಡಕನ್ನು
ಅನುವಾದ : by ಹರೀಶ್ ಶೆಟ್ಟಿ, ಶಿರ್ವ
"ಐದು" ಅಂದರೆ ಕಾಮ, ಕ್ರೋಧ ,ಲೋಭ ,ಮದ, ಮತ್ಸರ
ಈ "ಐದರ" ಸಂಘ ಮನುಷ್ಯನನ್ನು ಸ್ವಾರ್ಥತೆ ಹಾಗು ಅಂಧಕಾರದ ಮಾರ್ಗಕ್ಕೆ ದೂಡುವುದು.

Sunday, January 8, 2012

ಕಬೀರ ಪ್ರೇಮ ಗೀತೆ

Kabir Love Songs
Baalam Avo Humre Geh Re, Tum Bin Dukhiya Deh Re
Sab Koi Kahet Tumhari Nari, Mo Ko Eehe Andeh Re
Dil Se Nahin Dil Lagayo,Tub Laga Kaisa Sneh Re
Ek mek Ve Sej Na Soyo,Tub Lug Kaisa Neh Re
Anna Na Bhave Neend Na Aave, Ghar Bar Dhare Na Dheer Re
Kamin Hai Balam Pyara, Jyon Pyase Ko Neer Re
Hai Koi Aisa Upkari, Piv Se Kahun Sunaye Re
Ab To Behal Kabir Bhayo Hai, Bin Dekhe Jiya Jaye Re

ಪ್ರಿಯೆ ಬಾ ನನ್ನ ಮನೆಗೆ
ನಿನ್ನ ವಿನಃ ದೇಹಕ್ಕೆ ವೇದನೆ  !!
ಎಲ್ಲ ಹೇಳುವರು ನೀ ನನ್ನ ಮಡದಿ
ನನಗೆ ಯಾಕೆ ಸಂಶಯದ ಮತಿ   !!
ಹೃದಯ ಹೃದಯ ಸೇರದಿದ್ದರೆ
ಯಾವ ರೀತಿಯ ಈ ಮೋಹ !!
ಒಂದು ಶಯನದಲ್ಲಿ ಮಲಗದಿದ್ದರೆ
ಹೇಗೆ ಆಗುವುದು ಕಣ್ಣು ಕಣ್ಣಿನ ಸ್ನೇಹ !!
ಆಹಾರದಲ್ಲಿ ರುಚಿ ಇಲ್ಲ ನಿದ್ದೆ ಬರುದಿಲ್ಲ
ಸ್ವಂತ ಮನೆಯಲ್ಲಿ ಇಲ್ಲ ತೃಪ್ತ ಮನೋಭಾವ!!
ಭಾವೋದ್ದೀಪ್ತ ನನ್ನ ಪ್ರೀತಿ
ನೀರಿಗಾಗಿ ಬಾಯಾರಿದ ಮನುಷ್ಯನಂತೆ !!
ಯಾರಿದ್ದಾರೆ ಇಲ್ಲಿ ಪರೋಪಕಾರಿ
ಅವಳಿಗೆ ನನ್ನ ವ್ಯಥೆ ಹೇಳುವ ಉಪಕಾರಿ !!
ಇನ್ನೂ ಕಬೀರ ಯಾತನೆಯಲ್ಲಿ ಇರುವನು
ಅವಳನ್ನು ಕಾಣದೆ ಹೋದರೆ ಸಾಯುವನು !!
ಅನುವಾದ :ಹರೀಶ್ ಶೆಟ್ಟಿ, ಶಿರ್ವ

Saturday, January 7, 2012

ಕಬೀರ ಪ್ರೇಮ ಗೀತೆ

Kabir Love Songs
________________
Samajh Dekh Man Meet Piyarva, Aashiq Ho Kar Sona Kya Re?
Paya Ho To Den Le Pyare, Paye Paye Fir Khona Kya Re?
Rookha Sookha Gumka Tukra, Feeka Aur Salona Kya Re?
Jab Ankhiyan Me Neend Ghaneri, Takiya Aur Bichona Kya Re?
Kahet Kabir Prem Ka Marag, Sir Dena To Rona Kya Re?
ಕಬೀರ ಪ್ರೇಮ ಗೀತೆ
_________________
ಓ ಪ್ರೀತಿಯ ಮನಸ್ಸೇ ಅರ್ಥೈಸು
ಪ್ರೇಮಿಯಾಗಿ ನಿದ್ರಿಸುವಿ ಏನು  ?
ಪಡೆದುದನ್ನು ಹಂಚಿಕೊಳ್ಳು
ಪಡೆದ ನಂತರ ಕಳೆದುಕೊಳ್ಳುವಿ ಏನು ?
ಹೇಗೋ ಇದು ದುಃಖದ ಅಂಶ
ರುಚಿ ಇಲ್ಲದ್ದಿದ್ದರೇನು ರುಚಿ ಇದ್ದರೇನು ?
ಕಣ್ಣಲ್ಲಿ ನಿದ್ರೆ ತುಂಬಾ ತುಂಬಿದೆ
ತಲೆದಿಂಬು ಹಾಸಿಗೆ  ಬೇಕೇನು ?
ಕಬೀರ ಹೇಳುವನು ಪ್ರೇಮದ ಮಾರ್ಗದಲ್ಲಿ
ಹೃದಯ ಸೋತ ನಂತರ ಅಳುವ ಅಗತ್ಯ ಇದೆಯೇನು ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Thursday, July 14, 2011

ಎಲ್ಲಿ ಹುಡುಕುವೆ ನನ್ನನ್ನು,ಮಾನವ

ಎಲ್ಲಿ ಹುಡುಕುವೆ ನನ್ನನ್ನು ,ಮಾನವ
ನಾ ನಿನ್ನಲ್ಲೇ ಇದ್ದೇನೆ
ತಿರ್ಥದಲ್ಲೂ ಇಲ್ಲ , ಮೂರ್ತಿಯಲ್ಲೂ ಇಲ್ಲ
ಏಕಾಂತವಾಸದಲ್ಲೂ ಇಲ್ಲ
ಮಂದಿರದಲ್ಲೂ ಇಲ್ಲ, ಮಸ್ಜಿದಿಯಲ್ಲೂ ಇಲ್ಲ
ನಾ ಕಾಬಾ
ಕೈಲಾಸದಲ್ಲೂ ಇಲ್ಲ
ನಾ ನಿನ್ನಲೇ ಇದ್ದೇನೆ , ಮಾನವ
ನಾ ನಿನ್ನಲೇ ಇದ್ದೇನೆ
ನಾ ಜಪದಲ್ಲೂ ಇಲ್ಲ , ನಾ ತಪದಲ್ಲೂ ಇಲ್ಲ
ಉಪವಾಸದಲ್ಲೂ ನನ್ನ ವಾಸವಿಲ್ಲ
ನಾ ಕ್ರಿಯಾ ಕರ್ಮದಲ್ಲೂ ಇಲ್ಲ
ಜೋಗಿ ಸನ್ಯಾಸದಲ್ಲೂ ಇಲ್ಲ
ಪ್ರಾಣದಲ್ಲೂ ಇಲ್ಲ ಪಿಂಡದಲ್ಲೂ ಇಲ್ಲ
ಬ್ರಹ್ಮಾಂಡ ಆಕಾಶದಲ್ಲೂ ಇಲ್ಲ
ನಾ ಗುಫ್ಹಾದಲ್ಲೂ ಇಲ್ಲ
ನಾ ಶ್ವಾಸದಲ್ಲೂ ಇಲ್ಲ
ಹುಡುಕಿದರೆ ಕೂಡಲೇ ಸಿಗುವೇನು
ಒಂದೇ ಕ್ಷಣದ ಸಾಧನೆಯಲ್ಲಿ
ಕಬೀರ ಹೇಳುತ್ತಾನೆ ಕೇಳು ಸಾಧು
ನಾ ಇರುವುದು ನಿನ್ನ ವಿಶ್ವಾಸದಲ್ಲಿ

ರಚನೆ : ಸಂತ ಕಬೀರ್
ಅನುವಾದ : ಹರೀಶ್ ಶೆಟ್ಟಿ , ಶಿರ್ವ

ಸಿದ್ಧಿದಾತ್ರಿ