Showing posts with label ಅಂದು ಇಂದು. Show all posts
Showing posts with label ಅಂದು ಇಂದು. Show all posts

Sunday, November 4, 2012

ಗುಲಾಬಿ ಹೂವು

ಗೆಳತಿ...
ಇಂದು
ನೀನು ನನ್ನಿಂದ
ಬಿಡುಗಡೆ ಪಡೆದಿದ್ದರೂ
ಅಂದು
ನೀನು ಕೊಟ್ಟ
ಗುಲಾಬಿ ಹೂವು
ಇಂದೂ
ನಾನು ನಿನ್ನನ್ನು ಕುರಿತು
ಬರೆದ ಕವನಗಳ ಪುಸ್ತಕದಲ್ಲಿ ಬಂಧಿ
by ಹರೀಶ್ ಶೆಟ್ಟಿ, ಶಿರ್ವ

Saturday, September 15, 2012

ಸಂಪಿಗೆಯ ಗಿಡ

ಗೆಳತಿ...
ಅಂದು
ನೀ ನೆಟ್ಟ
ಸಂಪಿಗೆಯ ಗಿಡ
ನಾನು ಪೋಷಿಸಿದ್ದೇನೆ
ಇಂದು
ಆ ಗಿಡ ಮರವಾಗಿದೆ
ಹಾಗು
ಅದರ ಹೂವಿನ ಕಂಪು
ನನ್ನ ತುಂಡು ಹೃದಯದ ಮದ್ದಾಗಿದೆ
by ಹರೀಶ್ ಶೆಟ್ಟಿ, ಶಿರ್ವ

Thursday, May 17, 2012

ನಿಸರ್ಗದ ಸೌಂದರ್ಯ

ಗೆಳತಿ.....
ಅಂದು
ಪ್ರೀತಿಯ ಆ ದಿನಗಳಲ್ಲಿ
ನನಗೆ
ನದಿ ಸರೋವರ
ಪರ್ವತ
ಪ್ರಾಣಿ ಪಕ್ಷಿಗಳು
ಗಿಡ ಮರಗಳು
ವೃಕ್ಷದ ನೆರಳು
ಮುಂಜಾನೆಯ ಸೂರ್ಯ
ರಾತ್ರಿಯ ಚಂದಿರ ನಕ್ಷತ್ರಗಳು
ಎಲ್ಲವೂ ಎಷ್ಟು ಸುಂದರವಾಗಿ ಕಾಣುತ್ತಿತ್ತು......
ಆದರೆ ಇಂದು...
ನಿಸರ್ಗದ
ಈ ಎಲ್ಲ ಸೌಂದರ್ಯಗಳನ್ನು
ಕಣ್ಣೀರ ಕಣ್ಣುಗಳಿಂದ
ನೋಡುವಾಗ
ಎಲ್ಲವೂ
ಮಸುಕಾಗಿ ಕಾಣುತ್ತದೆ......
by ಹರೀಶ್ ಶೆಟ್ಟಿ, ಶಿರ್ವ

Saturday, May 12, 2012

ಉದ್ಯಾನದ ಹೂಗಳು

ಅವಳಿಲ್ಲದೆ
ಉದ್ಯಾನದ ಹೂಗಳು ಈಗ ಶಾಂತವಾಗಿದೆ
ಅಂದು
ತನ್ನ ಪರಿಮಳ ಬೀರುತ್ತಿದ್ದ
ಮಲ್ಲಿಗೆ, ಸಂಪಿಗೆ, ಗುಲಾಬಿ ಹೂಗಳು
ಇಂದು
ನನ್ನನ್ನು ಅನುಕಂಪದಿಂದ ನೋಡುತ್ತಿದೆ  !
by ಹರೀಶ್ ಶೆಟ್ಟಿ, ಶಿರ್ವ

Monday, April 30, 2012

ನರಕ ಬಾದೆ

ಅಂದು
ವಿನಃ ಕಾರಣ ನಿನ್ನ ಅವಮಾನ ಮಾಡಿ
ನಿನ್ನನ್ನು ನನ್ನಿಂದ ದೂರ ಮಾಡಿದೆ
ಇಂದು
ಅದೇ ಕಾರಣ ನಾನು ಅನುಭವಿಸುತ್ತಿದ್ದೇನೆ
ಸಹಿಸಲಾಗದ ನರಕ ಬಾದೆ
by ಹರೀಶ್ ಶೆಟ್ಟಿ, ಶಿರ್ವ

Sunday, April 29, 2012

ರಜೆಯ ದಿವಸ

ಅಂದು
ರಜೆಯ ದಿವಸ
ಮನೆಯಲ್ಲಿ
ನಿನ್ನೊಂದಿಗೆ ಹಬ್ಬದ ವಾತಾವರಣ
ಇಂದು
ನೀನಿಲ್ಲದೆ ರಜೆಯಲ್ಲಿ ನಾನು
ಕೇವಲ ಹಳೆ ನೆನಪು
ಬೇಸರ ದುಃಖಗಳ ಶರಣ
by ಹರೀಶ್ ಶೆಟ್ಟಿ, ಶಿರ್ವ

Saturday, April 28, 2012

ಬರಡು ಗೋರಿ

ಅಂದು
ನನ್ನ ಹೃದಯ ಮಂದಿರದಲ್ಲಿ
ದಿನ ರಾತ್ರಿ
ನಿನ್ನದೆ ಹಾಜರಿ
ಇಂದು
ನೀನಿಲ್ಲದೆ
ನನ್ನ ತುಂಡಾದ ಹೃದಯ
ಬರಡು ಗೋರಿ
by ಹರೀಶ್ ಶೆಟ್ಟಿ, ಶಿರ್ವ

Friday, April 27, 2012

ಹಬ್ಬದಂದು

ಅಂದು
ಹಬ್ಬದಂದು ನಿನ್ನೊಂದಿಗೆ ಎಷ್ಟೊಂದು ಉಲ್ಲಾಸ
ಇಂದು
ಹಬ್ಬದಂದು ನನಗೆ ಕೇವಲ ಏಕಾಂತದ ವಾಸ
by ಹರೀಶ್ ಶೆಟ್ಟಿ, ಶಿರ್ವ

Thursday, April 26, 2012

ದೇವರ ಸ್ಥಾನ

ಅಂದು
ನಾವು ಸತತ ಒಟ್ಟಿಗೆ
ದೇವರನ್ನು ಕಾಣಲು ಹೋಗುತ್ತಿದ್ದೆವು ದೇವಸ್ಥಾನ
ಇಂದು
ನನ್ನ ವಾಸವೆ ದೇವಸ್ಥಾನ
ಕಾಣುವೆ ಕೇವಲ ನಿನ್ನನ್ನೆ ದೇವರ ಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

Wednesday, April 25, 2012

ಕವಿತೆ

ಅಂದು
ನಿನ್ನ ಪ್ರೀತಿಯಲಿ ಪ್ರಯತ್ನಪಟ್ಟು ಕವಿತೆ ಕಟ್ಟುತ್ತಿದ್ದೆ
ಇಂದು
ನಿನ್ನ ಅಗಲಿಕೆಯಲಿ ಸುಲಭವಾಗಿ ಕವಿತೆ ಹುಟ್ಟುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

Tuesday, April 24, 2012

ನಿನ್ನ ಪತ್ರ

ಅಂದು
ನೀನು ನನಗೆ ಕೊಟ್ಟ
ಮೊದಲ ಪತ್ರ ನೋಡಿ
ಹರ್ಷದಿಂದ ಹುಚ್ಚು ಹಿಡಿದ ಹಾಗೆ ನಲಿದಿದ್ದೆ
ಇಂದೂ
ಆ ಪತ್ರ ನನ್ನ ಹತ್ತಿರ ಇದೆ
ಆದರೆ  ಅದರಲ್ಲಿ
ಬರೆದ ಪದಗಳು ಕಣ್ಮರೆಯಾಗಿದೆ 
by ಹರೀಶ್ ಶೆಟ್ಟಿ, ಶಿರ್ವ

Monday, April 23, 2012

ಕಣ್ಣ ಸರೋವರ

ಅಂದು
ನಾನು ಸುಂದರ ಭವಿಷ್ಯದ 
ಕನಸು ಕಾಣುತ
ನಿನ್ನ ಕಣ್ಣ ಸರೋವರದಲಿ ಈಜುತ್ತಿದೆ
ಇಂದು
ಆ ತುಂಡಾದ ಕನಸು
ನನ್ನ ಕಣ್ಣಿಂದ 
ದುಃಖದ ಮಹಾ ಸಾಗರವಾಗಿ ಹರಿಯುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

Sunday, April 22, 2012

ಆಳವಾದ ಗಾಯ

ಅಂದು
ನಿನ್ನ ನೋವನ್ನು
ನನ್ನ ನೋವೆಂದು ಭಾವಿಸಿ
ಸಂತೋಷದಿಂದ ಅನುಭವಿಸುತ್ತಿದ್ದೆ
ಇಂದು
ನೀನು ನನ್ನ ಹೃದಯಕ್ಕೆ
ಆಳವಾದ ಗಾಯ ಕೊಟ್ಟು
ತಾಳಲಾರದ ನೋವನ್ನು ಅನುಭವಿಸುತ್ತ ಇದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

Saturday, April 21, 2012

ಕಣ್ಣೀರ ನದಿ

ಅಂದು
ನಿನ್ನ ಪ್ರೀತಿಯಲಿ  
ನಿನ್ನ ಕಣ್ಣೀರ ಅಮೃತವನ್ನು ಕುಡಿದು
ನನ್ನ ಪ್ರೀತಿ ಅಮರ ಎಂದು ತಿಳಿದಿದ್ದೆ
ಇಂದು
ನನ್ನಿಂದ
ನೀನು ದೂರವಾದ ನಂತರ
ನನ್ನ ಕಣ್ಣೀರ ನದಿ ಸತತ ಹರಿಯುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

Friday, April 20, 2012

ಸೂರ್ಯಾಸ್ತದ ಸಮಯ

ಅಂದು
ಸೂರ್ಯಾಸ್ತದ ಸಮಯ
ಸೂರ್ಯ ಮುಳುಗಿದ ನಂತರವೂ
ಕೇವಲ ನಿನ್ನ ಮುಖದ 
ಕಾಂತಿಯಿಂದಲೇ
ಜೀವನ ಬೆಳಗುತ್ತಿತ್ತು
ಇಂದು
ಸೂರ್ಯಾಸ್ತದ ಸಮಯ
ಸೂರ್ಯ ಮುಳುಗಿದಂತೆ 
ನನ್ನ ಹೃದಯವು ಮುಳುಗುತ್ತದೆ
by  ಹರೀಶ್ ಶೆಟ್ಟಿ, ಶಿರ್ವ

ಮುಖಚಿತ್ರ

ಅಂದು
ನಿನ್ನ ಮುಖದ ಅಂದವನ್ನು ನೋಡುತ
ಸಂತೋಷದಿಂದ
ಕಾಲ ಕಳೆಯುತ್ತಿದ್ದೆ
ಇಂದು
ಕೇವಲ ನಿನ್ನ ಮುಖಚಿತ್ರ ನೋಡಿ
ದುಃಖದಿಂದ
ಕಾಲ ಕಳೆಯುತ್ತಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

Thursday, April 19, 2012

ನೀನು ಅಲ್ಲಿ ನಾನು ಇಲ್ಲಿ

ಅಂದು
ನಾನು ನಿನ್ನಲ್ಲಿ
ನೀನು ನನ್ನಲ್ಲಿ
ಇಂದು
ನೀನು ಅಲ್ಲಿ
ನಾನು ಇಲ್ಲಿ
by ಹರೀಶ್ ಶೆಟ್ಟಿ, ಶಿರ್ವ

ಕರವಸ್ತ್ರ

ಅಂದು
ನೀ ನನ್ನನ್ನು
ಮರೆಯ ಬೇಡ
ಎಂದು ಕೊಟ್ಟ ಕರವಸ್ತ್ರ
ಇಂದು
ನನ್ನ ಕಣ್ಣೀರು
ಒರೆಸಲು
ಬಳಸುತ್ತಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

ನಿನ್ನದೆ ನೆನಪು

ಅಂದು
ನೀನು ಮುಡಿದ
ಮಲ್ಲಿಗೆ ಹೂವಿನ
ಪರಿಮಳದಲ್ಲಿ ನನಗೆ
ಸ್ವರ್ಗ ಲೋಕದ ಅನುಭವ
ಮನಕ್ಕೆ ಮುದ ನೀಡುತಿತ್ತು
ಇಂದು
ಮಲ್ಲಿಗೆಯ ಹೂವಿನ
ಪರಿಮಳದಲ್ಲೂ ನನಗೆ 
ನರಕ ಯಾತನೆ
ನಿನ್ನದೆ ನೆನಪು ಕಾಡುತ್ತದೆ 
by ಹರೀಶ್ ಶೆಟ್ಟಿ, ಶಿರ್ವ

Wednesday, April 18, 2012

ಕನಸು

ಅಂದು
ನಿನ್ನ ಮಡಿಲಲ್ಲಿ
ತಲೆ ಇಟ್ಟು
ಕಣ್ಣು ಮುಚ್ಚಿ
ಕನಸು ಕಾಣುತ್ತಿದೆ
ಇಂದು ಮುರಿದ ಕನಸುಗಳನ್ನು ನೆನಪಿಸಿ
ನನ್ನ ತಲೆದಿಂಬಲ್ಲಿ
ತಲೆ ಇಟ್ಟು
ಭಾರ ಹೃದಯದಿಂದ
ಕಣ್ಣೀರು ಸುರಿಸುತ್ತಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ