Showing posts with label ಮನುಜ. Show all posts
Showing posts with label ಮನುಜ. Show all posts

Tuesday, September 4, 2012

ಅಸೂಯೆಯ ಬಾಣ

ಮನುಜ...
ಕೊಲ್ಲಬೇಡ ಯಾರನ್ನೂ ಬಿಟ್ಟುನಿನ್ನ ಅಸೂಯೆಯ ಬಾಣ
ಯಾರಿಲ್ಲ ಇಲ್ಲಿ ಎಲ್ಲ ತಿಳಿದ ಜಾಣ
ಯಾರಿಲ್ಲ ಇಲ್ಲಿ ಏನೂ ತಿಳಿಯದ ಕೋಣ
ಅಸೂಯೆಯ ಜ್ವಾಲೆ ತೀಕ್ಷ್ಣ
ಉರಿಯುವೆ ಅದರಲ್ಲಿ ನೀನೆ ಕ್ಷಣ ಕ್ಷಣ
ಬಿಟ್ಟು ಬಿಡು ಈ ವ್ಯರ್ಥ ಚಟ ತಕ್ಷಣ
by ಹರೀಶ್ ಶೆಟ್ಟಿ, ಶಿರ್ವ

Friday, August 17, 2012

ಸಮಯ

Tuesday, August 7, 2012

ಲೋಭ

ಮನುಜ...
ಲೋಭ
ಸರ್ವ ನಾಶಕ
ಸ್ವಾರ್ಥ ಘಾತಕ
ಪಾಪದ ಕಾರಕ
ಹಿಂಸೆ, ಸುಳ್ಳು, ವ್ಯಭಿಚಾರ, ಸಂಚು, ಕೋಪ, ದ್ವೇಷ ಇದರ ಉತ್ಪಾದಕ
ಲೋಭಿ ವ್ಯಕ್ತಿಯ ಹತ್ತಿರ ಇರುವುದಿಲ್ಲ ಸದ್ಗುಣದ ಅಸ್ತಿತ್ವ
ಲೋಭ ಸಮಸ್ತ ಸದ್ಗುಣಗಳ ಹಂತಕ
ಲೋಭ ಮಾಡದಿರು, ಇದರಿಂದ ದೂರವಿರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, August 6, 2012

ದುಃಖ

ಮನುಜ...
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸ್ನೇಹ

ಚಾರಿತ್ರ್ಯ

Thursday, August 2, 2012

ದಾರಿ ದೀಪ

ಮನುಜ...
ದೀಪದ ಗುಣ ನೋಡು
ಸ್ವತಃ ಉರಿದು ಅನ್ಯರಿಗೆ ಬೆಳಕು ನೀಡುತ್ತದೆ 
ನಿನ್ನ ಜೀವನವೂ ಹೀಗೆಯೇ ಇರಲಿ
ಸನ್ಮಾರ್ಗದ ಹಾದಿ ನಿನ್ನದಾಗಲಿ
ನಿನ್ನ ಜೀವನ ಅನ್ಯರ ಬದುಕಿನ ದಾರಿ ದೀಪ ಆಗಲಿ
ಅನ್ಯರ ಕಷ್ಟವನ್ನು ತನ್ನದೆಂದು ತಿಳಿದು
ಅದರಲ್ಲಿ ನೀನು ಬೆಂದು
ನಿನ್ನ ಜೀವನ ಕಂಚನವಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ವಾಣಿ

Tuesday, July 31, 2012

ದೃಡ ಸಂಕಲ್ಪ

ಮನುಜ...
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ

Monday, July 30, 2012

ಜೀವನ ರಸ

ಮನುಜ...
ಜೀವನ ಇರುವುದು
ಜನ್ಮ ಹಾಗು ಮೃತ್ಯು ಇದರ ಮಧ್ಯೆ
ಜೀವನ ನಿನಗೆ ಸಿಕ್ಕಿದ ಅಮೂಲ್ಯ ಕೊಡುಗೆ
ಜೀವನ ಕಪಟ ವಂಚನೆಯ ಬೀಜ ಬಿತ್ತುವುದಿಲ್ಲ
ವಿನಾಶ ಬಯಸುವುದಿಲ್ಲ
ಜೀವನದ ಅರ್ಥ ತಿಳಿದುಕೊಳ್ಳು
ಅರ್ಥದ ಅನರ್ಥ ಮಾಡಬೇಡ
ಸ್ವಾರ್ಥ ಅಹಂಕಾರದ ಕಹಿ ಕಷಾಯ ಕುಡಿಯಬೇಡ
ಜೀವನದ ಸಿಹಿ ರಸವನ್ನು ಹೀರುತ ಇರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Sunday, July 29, 2012

ದಾನ

ಮನುಜ...
ದಾನ ಒಂದು ಉತ್ತಮ ಕಾರ್ಯ
ದಾನದ ಮಹತ್ವ ಶ್ರೇಷ್ಠ
ಸ್ನಾನ ಮಾಡಿದ ನಂತರ ಮೈ ಶುದ್ಧ ಆಗುವ ಹಾಗೆ
ದಾನ ಮಾಡಿದರೆ ಧನ ಶುದ್ಧ ಆಗುತ್ತದೆ
ಕಪಟ ಮನಸ್ಸಿಂದ ಮಾಡಿದ ದಾನ ದಾನ ಅಲ್ಲ
ನಿಷ್ಕಪಟ ಮನಸ್ಸಿಂದ ಮಾಡಿದ ದಾನವೇ ನಿಜ ದಾನ
ದಾನ ಅಂದರೆ ತ್ಯಾಗ
ದಾನ ಮನಸ್ಸು ಪವಿತ್ರ ಮಾಡುವ ಯೋಗ
ದಾನ ದೇವರ ಪೂಜೆ ಸಮಾನ
ಕೈಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, July 28, 2012

ನಕಾರಾತ್ಮಕ ಸಕಾರಾತ್ಮಕ

ಮನುಜ...
ನಕಾರಾತ್ಮಕ ಚಿಂತನೆ ಅಂದರೆ
ಒಂದು ಅಂಟು ರೋಗ
ಇದರಿಂದ ದೂರವಿರು
ಸಕಾರಾತ್ಮಕ ಚಿಂತನೆ ಮಾಡು
ಆದರೆ ಸಕಾರಾತ್ಮಕ ಚಿಂತನೆಯಿಂದ
ಒಳ್ಳೆಯದೇ ಸಂಭವಿಸುವುದು ಎಂಬ ಇಡಬೇಡ ತಪ್ಪುಗ್ರಹಿಕೆ
ಏನು ಆಗುವುದೋ ಎಲ್ಲ ಒಳ್ಳೆಯದೇ ಆಗುವುದು ಎಂದು ಇಡು ನಂಬಿಕೆ
ನಕಾರಾತ್ಮಕ ಚಿಂತನೆಯಿಂದ ಒಳಗಾಗುವೆ ತೊಂದರೆಗೆ  
ಸಕಾರಾತ್ಮಕ ಚಿಂತನೆಯಿಂದ ನೀನು ನಡೆ ಯಶಸ್ಸಿನ ದಾರಿಗೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Thursday, July 26, 2012

ಶರೀರ

ಮನುಜ...
ನಿನ್ನ ಶರೀರ ಒಂದು ಅಮೂಲ್ಯ ಕೊಡುಗೆ
ಇದು ಒಂದು ಕ್ರಿಯಾತ್ಮಕ ದೇವಾಲಯ
ಇದನ್ನು ಪವಿತ್ರವಾಗಿ ಇಡು
ನಿನ್ನ ಮನಸ್ಸು ನಿರ್ಮಲ ಶಾಂತವಾಗಿರಲಿ
ಮನಸ್ಸು ಉದ್ವೇಗ ಮುಕ್ತವಾಗಿದ್ದರೆ
ನಿನ್ನ ಶರೀರ ಶಕ್ತಿ ನಿರ್ಮಾಣ ಮಾಡುವ ಮನೆ ಆಗುತ್ತದೆ
ನಿನ್ನ ಆರೋಗ್ಯ ನಿನ್ನ ಕೈಯಲ್ಲಿ
ದಿನ ನಿತ್ಯ ಸ್ವಲ್ಪ ಸಮಯ ಕಳೆ ವ್ಯಾಯಾಮ ಹಾಗು ಧ್ಯಾನದಲಿ
ಶರೀರವೆ ನಿನ್ನ ಸಂಪತ್ತು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, July 25, 2012

ಸಮಯ ಬಂದಾಗ

ಮನುಜ...
ಇಷ್ಟು ಅವಸರ ಯಾಕೆ?
ಮನಸ್ಸು ಓಡುತ್ತಿದೆಯೇ
ಮನಸ್ಸನ್ನು ಹತೋಟಿಯಲ್ಲಿ ಇಡು
ಎಲ್ಲ ಕಾರ್ಯ ಸಮಯ ಬಂದಾಗಲೇ ಆಗುವುದು
ಸಮಯ ಬರದೆ ಯಾವುದೇ ಕೆಲಸ ಆಗದು
ಉಪಯುಕ್ತ ಸಮಯ ಬಂದಾಗಲೇ ನಿನಗೆ ಬೇಕಾದ ವಸ್ತು ಸಿಗುವುದು
ರೈತ ದುಡಿಯುವನು ದಿನ ರಾತ್ರಿ ಹೊಲದಲ್ಲಿ
ಆದರೆ ಋತು ಬಂದಾಗಲೇ ಬೆಳೆ ಆಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
(ಸಂತ ಕಬೀರ್ ಅವರ ಒಂದು ದೋಹದ ಆದಾರಿತ )

Tuesday, July 24, 2012

ಜೀವನದ ಶರತ್ಕಾಲ

ಮನುಜ..
ಕಷ್ಟದಿಂದ ಹೆದರುವೆ ಯಾಕೆ ?
ಕಷ್ಟ ಬರದೆ ಇಷ್ಟ ಸಿಗುವುದೇ ?
ನಿನ್ನ ಈ ಕಷ್ಟ ತಾತ್ಕಾಲಿಕ
ನಿನಗೆ ಒದಗಿದ ಈ ಹಾಳು ಸಮಯ ಒಂದು ಪರೀಕ್ಷೆ
ನೀನು ಈ ಪರೀಕ್ಷೆಯಲ್ಲಿ ಉತ್ತಿರ್ಣನಾಗು
ನಿನ್ನ ಸಹ ಒಳ್ಳೆ ಸಮಯ ಬರುವುದು
ಜೀವನದ ಶರತ್ಕಾಲ ಮುಗಿದು
ನಿನ್ನ ಒಣಗಿದ ಈ ಬದುಕು ಶಾಖೆಗಳಲ್ಲಿ ಹೊಸ ಮೊಗ್ಗುಗಳು ಬರುವುದು
ಪುನಃ ನಿನ್ನ ಜೀವನದಲಿ ಖುಷಿಯ ಹೂವು ಅರಳುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, July 23, 2012

ಉಡುಪು

ಮನುಜ...
ಕಲ್ಮಶ ತುಂಬಿದ ಈ ದೇಹದ ಮೇಲೆ
ನವ ನವೀನ ಉಡುಪು ಧರಿಸುವೆ
ಧರಿಸಿದ ಬಟ್ಟೆಗಳಲ್ಲಿ ಇಲ್ಲ ನಿನ್ನ ಸಂಸ್ಕೃತಿ
ನೀನು ಮಾಡುವ ಆಡಂಬರದಿಂದ ಸಿಗದು ನಿನಗೆ ಉನ್ನತಿ
ನಿನ್ನ ವ್ಯವಹಾರದಲ್ಲಿ ನಿನ್ನ ಯೋಗ್ಯತೆ ಕಂಡು ಬರಲಿ
ನಿನ್ನ ಒಳ್ಳೆ ಕಾರ್ಯದಿಂದ ಜನರು ನಿನ್ನನ್ನು ಗುರುತಿಸಲಿ
ನಿನ್ನ ಮನಸ್ಸು ನದಿಯ ನೀರಿನಂತೆ ನಿರ್ಮಲವಾಗಿರಲಿ
ನಿನ್ನ ಜೀವನ ದೀಪದಂತೆ ಬೆಳಕಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Sunday, July 22, 2012

ಹಗಲು ಕನಸು

ಮನುಜ
ರಾತ್ರಿ ನಿದ್ದೆಯಲಿ ಕನಸು ಕಂಡದು ಸಾಲದೆ
ಹಗಲಲ್ಲೂ  ಕನಸು ಕಾಣುವೆ
ಕೇವಲ ಕನಸು ಕಂಡು
ಕನಸು ನನಸಾಗುವುದು ಎಂದು
ಹೀಗೆಯೇ ಕೈ ಕಟ್ಟಿ ಕುಳಿತುಕೊಳ್ಳ ಬೇಡ
ನಿನ್ನ ಕನಸಿನ ನೀನೆ ವಾರಸುದಾರ
ನಿನ್ನ ಕನಸನ್ನು ಸಾಕಾರ ಮಾಡಲು ಪರಿಶ್ರಮ ಪಡೆ
ನಿನ್ನ ಕನಸಿನ ಮಾರ್ಗದಲಿ ನೀ ನಡೆ
ಮನಸ್ಸು ಮಾಡಿದರೆ ಏನನ್ನು ಸಾಧಿಸ ಬಹುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, July 21, 2012

ಕರ್ತವ್ಯ

ಮನುಜ...
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Friday, July 20, 2012

ಸ್ವಾಭಾವಿಕ ಪ್ರಕೃತಿ

ಮನುಜ...
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Thursday, July 19, 2012

ಜೀವನ ಮರಣ

ಮನುಜ...
ಜೀವನ ಮರಣ
ಇದರ ಮದ್ಯೆ ಕಾಲಹರಣ
ಜೀವನ ಸುಂದರ ಪ್ರಯಾಣ
ಮಾಡು ಪ್ರಣ
ಆನಂದಿಸು ಜೀವನದ ಕಣ ಕಣ
ಮುಗಿಯದಿರಲಿ ನಿನ್ನ ತ್ರಾಣ
ಪ್ರಯತ್ನಿಸಿದರೆ ಸಿಗುವುದು ನಿನಗೆ ಬೇಕಾದ ತಾಣ
ಜೀವನವನ್ನು ಸಂತೋಷದಿಂದ ಕಳೆ ಶರೀರದಲ್ಲಿ ಇರುವ ತನಕ ಪ್ರಾಣ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ