Showing posts with label ಗೆಳತಿ. Show all posts
Showing posts with label ಗೆಳತಿ. Show all posts

Saturday, April 25, 2015

ಅವಶ್ಯಕತೆ

ಗೆಳತಿ,
ಈ ಸಣ್ಣ ಪುಟ್ಟ ವಿಷಯಕ್ಕೆಲ್ಲ
ಮುನಿಸಿ ಕೂತು
ನಮ್ಮಲ್ಲಿ ಅಂತರ ಬೆಳಸದಿರು,
ನನಗೆಷ್ಟು ನಿನ್ನ 
ಅವಶ್ಯಕತೆ ಇದೆಯೋ,
ಅಷ್ಟೇ ನಿನಗೂ ನನ್ನ
ಅವಶ್ಯಕತೆ ಇದೆ ಎಂಬ ಸತ್ಯ ಮರೆಯದಿರು.
by ಹರೀಶ್ ಶೆಟ್ಟಿ, ಶಿರ್ವ

Tuesday, January 13, 2015

ಸಂಕ್ರಾಂತಿ

ಗೆಳತಿ,
ಅದೆಷ್ಟೋ ಸಂಕ್ರಾಂತಿ
ಬಂದೋಯಿತು
ಆದರೆ ಎಷ್ಟೋ ವರ್ಷ ಮುಂಚೆ
ನೀ ಕೊಟ್ಟ
ಸಿಹಿ ಎಳ್ಳಿನ ರುಚಿ ಇನ್ನೂ ಸಿಗಲಿಲ್ಲ

ಹರೀಶ್ ಶೆಟ್ಟಿ, ಶಿರ್ವ  

Wednesday, September 10, 2014

ಬದುಕ ಬಂಡಿ

ಬಂಡಿ
ಸಾಗುವುದಿಲ್ಲ
ಅದರಲ್ಲಿ
ತುಂಬಾ ಭಾರವನ್ನು
ತುಂಬಿದ್ದರೆ
ನಮ್ಮ ಬದುಕು ಸಹ
ಹಾಗೆಯೇ ಗೆಳತಿ
ಸಂಶಯ, ದುರಹಂಕಾರ
ಹಠ, ಮೌನ, ಕ್ರೋಧಗಳ
ಭಾರ ನಮ್ಮ ಬದುಕಲಿ
ತುಂಬಿದರೆ
ಬದುಕ ಬಂಡಿ ಸಾಗದು
ವಿಶ್ವಾಸ ಪ್ರೀತಿ
ಕಾಳಜಿಯ ತೂಕ
ತುಂಬಾ ಹಗುರ
ಅದನ್ನೇ ತುಂಬಿಸಿ
ಸಾಗಿದರೆ
ಜೀವನ ಸುಗಮ

by ಹರೀಶ್ ಶೆಟ್ಟಿ,ಶಿರ್ವ  

ಪ್ರೀತಿ ಎಂಬ ಸಸಿ

ಪ್ರೀತಿ
ಎಂಬ ಸಸಿ
ಯಾವಗಲು
ಮರವಾಗಿಯೇ ಬೆಳೆಯುತ್ತದೆ
ಗೆಳತಿ
ವೈಮನಸ್ಸಿನ
ಬಿರುಗಾಳಿಯಿಂದ
ಅದು ಕಿಂಚಿತ ನಡುಗಬಹುದು
ಆದರೆ
ಅದಕ್ಕೆ ಯಾವ ರೀತಿಯ
ಹಾನಿಯಾಗದು
ಇದು ಖಚಿತ

by ಹರೀಶ್ ಶೆಟ್ಟಿ,ಶಿರ್ವ  

ತಪ್ಪಿಗೆ ಕ್ಷಮೆ ಇಲ್ಲ

ಇಲ್ಲಿ
ತಪ್ಪಿಗೆ ಕ್ಷಮೆ ಇಲ್ಲ
ಗೆಳತಿ
ಕ್ಷಮಿಸಲು ಅವರು
ನಮ್ಮವರಲ್ಲ
ಆದರೆ ನೀನು
ತಪ್ಪಾಗದಂತೆ ನೋಡಿಕೊಳ್ಳು
ತನ್ನನ್ನು ತಾನೇ ಸುಧಾರಿಸಿಕೊಳ್ಳು
ಬಂದವರನ್ನು ಸ್ವಾಗತಿಸು
ಬರದವರನ್ನು ಮನಸ್ಸಿಂದ ಆಚೆ ತಳ್ಳು

by ಹರೀಶ್ ಶೆಟ್ಟಿ,ಶಿರ್ವ 

Saturday, September 6, 2014

ನಿನ್ನ ಕಣ್ಣುಗಳನ್ನೇ

ಗೆಳತಿ,
ಯಾರು ಎಷ್ಟು
ಒಳ್ಳೆ ಬರೆದರೂ
ನಾನು ಓದುವುದು
ನಿನ್ನ ಕಣ್ಣುಗಳನ್ನೇ

by ಹರೀಶ್ ಶೆಟ್ಟಿ, ಶಿರ್ವ 

Monday, August 25, 2014

ಆಸಕ್ತಿ ಇಲ್ಲ ಗೆಳತಿ

ಆಸಕ್ತಿ ಇಲ್ಲ ಗೆಳತಿ ಈಗ 
ನಿನ್ನ ಸುಂದರತೆಯ ಹೊಗಳಲು
ನಿನ್ನ ಅಂದವನ್ನು ಬಣ್ಣಿಸಲು 
ನಿನ್ನ ಮೋಹಕ ರೂಪವನ್ನು ವಿವರಿಸಲು 
ಅದೆಲ್ಲ ಪುನಃ ಕವಿತೆಯಾಗಬಹುದು 
ಆ ಕವಿತೆಯ ಬಗ್ಗೆ ಪುನಃ 
ಚರ್ಚೆಯಾಗಬಹುದು 

by ಹರೀಶ್ ಶೆಟ್ಟಿ,ಶಿರ್ವ

Monday, July 14, 2014

ಮುಖಪುಸ್ತಕ

ಗೆಳತಿ, 
ದೂರವಿದ್ದವರೆಲ್ಲ ನಿನ್ನವರೆಂದು 
ನೀನು ಭಾವಿಸಿರಬಹುದು
ಆದರೆ ಅವರ ಮನಸ್ಸಲ್ಲಿ 
ನೀನ್ಯಾರೆಂದು ಗೊತ್ತಿಲ್ಲವೆಂಬ 
ಭಾವ ಇದ್ದಿರಬೇಕು 

ನೀನೇನೋ ಎಲ್ಲರನ್ನೂ 
ತನ್ನ ಹೃದಯದ ಬಳಿ ಇಟ್ಟಿರುವೆ 
ಆದರೆ ಮುಖಪುಸ್ತಕದವರನ್ನು 
ಎಲ್ಲರೂ ಅಷ್ಟೇನೂ
ಬಳಿ ತರುವುದಿಲ್ಲ

ಆದರೆ ನಿನ್ನಿಂದ ದೂರವಿರುವವರೆಲ್ಲ
ನಿನ್ನನ್ನು ಇಷ್ಟ ಪಡುವುದಿಲ್ಲ ವೆಂದೆನಿಲ್ಲ
ಕೆಲವರಿಗೆ ತೋರಿಕೆಯ ಅಭ್ಯಾಸ ಇರುವುದಿಲ್ಲ
ತೋರದೆ ನಿನ್ನನ್ನು ಇಷ್ಟ ಪಡುವವರೆ
ನಿನ್ನ ನಿಜ ಪ್ರಶಂಸಕರು

ಆದರೆ ನಿನ್ನ ಹೃದಯದ ಪ್ರಪಂಚ
ಹೀಗೆಯ ವ್ಯಾಪಕವಾಗಿರಲಿ
ಅದರಲ್ಲಿ ಇಷ್ಟ ಪಡುವವರ ಜೊತೆ
ನಿನ್ನನ್ನು ಇಷ್ಟ ಪಡದವರಿಗೂ
ನಿನ್ನ ಹೃದಯದಲಿ ವಿಶಿಷ್ಟ ಸ್ಥಾನವಿರಲಿ

by ಹರೀಶ್ ಶೆಟ್ಟಿ,ಶಿರ್ವ

Tuesday, July 1, 2014

ಅನುಬಂಧ

ಗೆಳತಿ,
ಅದೇಕೆ ನೀನು 
ದೂರ ದೂರ ನನ್ನಿಂದ 
ಮನಸ್ಸಲ್ಲಿ ನಿನ್ನ 
ಯಾವ ರೀತಿಯ ನಡೆಯುತ್ತಿದೆ ದ್ವಂದ 
ಅಂತರ ಬೆಳೆಸಿ 
ಮುರಿಯದಿರು ನಮ್ಮ ಈ ಅನುಬಂಧ 
---

ಗೆಳತಿ,
ಸಂಕೋಚ ನಿನ್ನಲ್ಲೂ 
ಸಂಕೋಚ ನನ್ನಲ್ಲೂ 
ಸ್ವಲ್ಪ ಅಹಂ ನಿನ್ನಲ್ಲೂ
ಸ್ವಲ್ಪ ಅಹಂ ನನ್ನಲ್ಲೂ
ಬಹುಶಃ ನಮಗೆ ಇನ್ನೂ ಸಮಯ ಬೇಕು 
ಒಬ್ಬರನೊಬ್ಬರನ್ನು ಅರಿಯಲು 
---

ಗೆಳತಿ,
ಈ ಮೌನ ಮಾತುಗಳೇ 
ಎಷ್ಟು ಚೆನ್ನ 
ನಿನಗೂ ಇಷ್ಟ 
ನನಗೂ ಇಷ್ಟ 
ಆದರೆ ಕೆಲವೊಮ್ಮೆ ಭಾವನೆಗಳನ್ನು
ನಿಯಂತ್ರಿಸುವುದು ಕಷ್ಟ 
---

ಗೆಳತಿ,
ನಿನ್ನ ಕಟು ಮಾತಿನಿಂದ
ನನ್ನ ಹೃದಯಕ್ಕೆ ವೇದನೆ 
ಆದದ್ದು ನಿಜ 
ಆದರೆ ನಿನ್ನ ಮೇಲೆ ಇದ್ದ 
ಪ್ರೀತಿ 
ಕಿಂಚಿತ್ತು ಕಡಿಮೆಯಾಗಲಿಲ್ಲ 
ಅದೂ ನಿಜ 

by ಹರೀಶ್ ಶೆಟ್ಟಿ, ಶಿರ್ವ

Sunday, June 1, 2014

ಒಲವು

ಗೆಳತಿ 

ನೀ ನೀಡುವ ಪ್ರತಿ ನೋವನ್ನು 
ಸಹಿಸುವೆ 
ನೀ ಕೊಡುವ ಪ್ರತಿ ಬೈಗುಳ 
ಸ್ವೀಕರಿಸುವೆ 
ಒಂದು ವೇಳೆ 
ನನ್ನ ಅಗತ್ಯವಿದೆಯೆಂದು ಎನಿಸಿ 
ನೀನು ಕರೆದರೆ 
ಓಡೋಡಿ ಬರುವೆ 
---
ಗೆಳತಿ 

ನಿನ್ನ ನನ್ನ ನಡು 
ಯಾವ ರೀತಿಯ ಪ್ರತಿಸ್ಪರ್ಧೆ 
ನಾನು ನಿನ್ನ ಪ್ರತಿಸ್ಪರ್ಧಿ ಅಲ್ಲ 
ನಾನು ನಿನ್ನ ಹಿತೈಷಿ 
ನಮ್ಮಲ್ಲಿ ಬೇಡ ಸೋಲು ಗೆಲುವು 
ಇರಲಿ ಒಲವು 
---
ಗೆಳತಿ 

ಜೀವನವಿಲ್ಲದ 
ಅನೇಕ ಸಂಬಂಧಗಳನ್ನು ಇಟ್ಟು
ಏನು ಪ್ರಯೋಜನ, 
ಇದ್ದ ಸ್ವಲ್ಪವೇ ಸಂಬಂಧದಲ್ಲಿ 
ಜೀವನ ಇರುವುದು ಅತ್ಯಗತ್ಯ 
---
ಗೆಳತಿ 

ಆ ಮಲ್ಲಿಗೆಯ ತೋಟಕ್ಕೂ 
ನಿನ್ನ ಅಗತ್ಯವಿದೆ ಎನಿಸುತ್ತದೆ 
ಬಹುಶಃ ನಿನ್ನ ಆರೈಕೆಯ ಕೊರತೆ ಉಂಟಾಗಿದೆ 
ಈಗ ಅಲ್ಲಿ ಮೊದಲ 
ಉತ್ಸಾಹಭರಿತ ವಾತಾವರಣ 
ಕಂಡು ಬರುವುದಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

Sunday, May 25, 2014

ಬಂಧಿಸಿಟ್ಟ ಭಾವನೆಗಳು

ಗೆಳತಿ, 
ಹರಿಯ ಬಿಡು 
ಈ ಸಾಗರದಲಿ 
ನಿನ್ನ ಮನಸ್ಸಲ್ಲಿದ ಕಲ್ಮಷಗಳನ್ನು 
ಶುದ್ಧವಾಗಲಿ ಅಂತರಂಗ 
ಪುನಃ ಸ್ಥಾಪಿಸು 
ಮುರಿದ ನಂಟನ್ನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ಮನವೊಲಿಸುವುದು ಕಷ್ಟ 
ಅರಿವಿದೆ ನನಗೆ 
ಆದರೆ 
ಇದರ ಅಗತ್ಯವಿದೆ 
ಇದರ ಸಹ 
ಅರಿವಿದೆ ನನಗೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಬಿಟ್ಟು ಬಿಡುವೆ 
ಈ ಪ್ರಯತ್ನಗಳನ್ನೆಲ್ಲ
ಇನ್ನು ಹೆಚ್ಚು ಸಮಯ
ಈ 
ಹಗೆಯ ಜ್ವಾಲೆಯನ್ನು 
ಸಹಿಸಲಾರೆ ನಾನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಈ ಶರಧಿಯೂ 
ಈಗ ಶಾಂತತೆ ನೀಡುವುದಿಲ್ಲ 
ನನ್ನ ಮನಸ್ಸ ತಳಮಳದಿಂದ 
ಅದಕ್ಕೂ 
ನೆಮ್ಮದಿ ಇಲ್ಲದಾಗಿದೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ನೀ ನನಗೆ ನೀಡುವ 
ಪ್ರತಿಯೊಂದು ನೋವಿನ
ಮದ್ದು ನಿನ್ನ ಹತ್ತಿರವೇ ಇದೆ 
ನನ್ನ ಬಳಿ
ಪಶ್ಚಾತಾಪದ 
ಹೊರತು ಬೇರೇನಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

ಚಿತ್ರ ಕೃಪೆ : ಗೂಗಲ್ 

Sunday, April 20, 2014

ಅಂತರ

ಗೆಳತಿ 
ಸಂಬಂಧದಲ್ಲಿ
ಒಂದು ಸೀಮಿತ ಅಂತರವಿದ್ದರೆ 
ಒಳ್ಳೆಯದು ಅನಿಸುತ್ತದೆ 
ಆದರೆ ಅಂತರ ವ್ಯಾಪಕವಾದಂತೆ
ಏನೋ ತಪ್ಪಾಗಿರಬಹುದೆಂದು ಅನಿಸುತ್ತದೆ 
ಆ ತಪ್ಪನ್ನು ಹುಡುಕುವುದಕ್ಕಿಂತ
ನೇರ ಕೇಳುವುದೇ ಸರಿ ಅನಿಸುತ್ತದೆ 

by ಹರೀಶ್ ಶೆಟ್ಟಿ, ಶಿರ್ವ

ಸ್ನೇಹ ನಿಷ್ಠೆ

ಗೆಳತಿ 
ಅದೇಕೋ ಸಂಶಯ ಮೂಡುತ್ತಿದೆ 
ನಿನ್ನ ಸ್ನೇಹ ನಿಷ್ಠೆಯ ಮೇಲೆ 
ಸುಖದಲ್ಲೂ ನೀನಿಲ್ಲ 
ದುಃಖದಲ್ಲೂ ನೀನಿಲ್ಲ 
ಮನಸ್ಸಲ್ಲಿ ಅನೇಕ ಪ್ರಶ್ನೆಗಳೆಲ್ಲ

by ಹರೀಶ್ ಶೆಟ್ಟಿ, ಶಿರ್ವ

Thursday, October 31, 2013

ವಿಪರ್ಯಾಸ

ಗೆಳತಿ...
ವಿಪರ್ಯಾಸ 
ಏನೆಂದರೆ 
ನಿನ್ನನ್ನು ಮರೆಯಬೇಕೆಂದು 
ನಾನು ಮಾಡುವ 
ಪ್ರತಿ ಪ್ರಯತ್ನದಿಂದ 
ನಿನ್ನ ನೆನಪು 
ದಿನ ಪ್ರತಿದಿನ 
ಏರುತ ಹೋಗುತ್ತಿದೆ 
by ಹರೀಶ್ ಶೆಟ್ಟಿ,ಶಿರ್ವ

ಅಂತರಾತ್ಮ

ಗೆಳತಿ... 
ಪದೇ ಪದೇ 
ನಿನ್ನ ನೆನಪು ಹುಟ್ಟಿಸುವ 
ನಿನ್ನ ಪ್ರೇಮ ಪತ್ರಗಳನ್ನೆಲ್ಲ 
ಸುಟ್ಟು ಬಿಟ್ಟೆ,
ಪತ್ರಗಳು ಬೂದಿಯಾಗಿ 
ಬೆಂಕಿಯೂ ಶಾಂತವಾಯಿತು 
ಆದರೆ 
ನನ್ನ ಅಂತರಾತ್ಮ ಜ್ವಲಿಸುತಿತ್ತು 
by ಹರೀಶ್ ಶೆಟ್ಟಿ,ಶಿರ್ವ

Monday, October 21, 2013

ಆ ಸುಂದರ ಬಾಲ್ಯಕ್ಕೆ

ಗೆಳತಿ.. 
ಬಾ ನಾವು 
ನಮ್ಮ 
ಆ ಸುಂದರ ಬಾಲ್ಯಕ್ಕೆ 
ಹೋಗಿ ಬರೋಣ 
ಸಾಧ್ಯವಾದರೆ 
ಅಲ್ಲಿಂದ 
ಸ್ವಲ್ಪ ನಿನಗೆ 
ಸ್ವಲ್ಪ ನನಗೆ 
ಆನಂದದ ಕ್ಷಣಗಳನ್ನು 
ಕದ್ದು ತರೋಣ 
by ಹರೀಶ್ ಶೆಟ್ಟಿ,ಶಿರ್ವ

Thursday, October 10, 2013

ಕಣ್ಣೀರ ಹನಿ ಹನಿಸು

ಗೆಳತಿ 
ನಿನ್ನ ಕಣ್ರೆಪ್ಪೆಯಲಿ 
ಅಡಗಿಸಿದ 
ಕಣ್ಣೀರ ಹನಿ ಹನಿಸು 

ನಿನ್ನ ಅಧರದಲಿ 
ಕಾಣುವ 
ಮಿಥ್ಯ ನಗುವನ್ನು ಅಳಿಸು 

ನಿನ್ನ ಹೃದಯದಲಿ 
ಹೂಳಿದ 
ಅಜ್ಞಾತ ರಹಸ್ಯವನ್ನು ತಿಳಿಸು

ನಿನ್ನ ತಗ್ಗಿದ 
ಶಿರವನ್ನು 
ಸ್ವಲ್ಪ ಎತ್ತಿ ತನ್ನನ್ನು ನಿವಾರಿಸು 

ನಿನ್ನ ಮನಸ್ಸಿನ 
ವ್ಯಥೆ 
ನನ್ನೊಂದಿಗೆ ಹಂಚಿ ರೋದಿಸು 

ಹರಿಯ ಬಿಡು 
ಈ ಅಶ್ರು ಧಾರೆ 
ಇಲ್ಲಾದರೆ 
ಒಂದು ವೇಳೆ 
ನಿನ್ನ ತಾಳ್ಮೆ ಕುಸಿದರೆ 
ಕಣ್ಣೀರ ಚಂಡಮಾರುತ ಬಂದು 
ಎಲ್ಲವನ್ನೂ ಕಸಿದುಕೊಂಡು ಹೋಗಬಹುದು 

by ಹರೀಶ್ ಶೆಟ್ಟಿ,ಶಿರ್ವ

ಹೋಲಿಕೆ

ಗೆಳತಿ... 
ನಿನ್ನಲ್ಲಿ ನನ್ನಲ್ಲಿ 
ಹೋಲಿಕೆ ಇಲ್ಲ ಎಲ್ಲೂ 
ನೀನೊಂದು ಚಿನ್ನದ ಗಣಿಯಾದರೆ 
ನಾನೊಂದು ಕಪ್ಪು ಕಲ್ಲಿದ್ದಲು
by ಹರೀಶ್ ಶೆಟ್ಟಿ, ಶಿರ್ವ

Tuesday, October 1, 2013

ಮಾತುಕತೆ

ಗೆಳತಿ... 
ಹಲವು ದಿನಗಳಿಂದ 
ನಿನ್ನಿಂದ ಮಾತಿಲ್ಲ,
ಈಗ 
ಸಂಜೆ ಆದಾಗ 
ನಿನ್ನ ನೆನಪೊಂದಿಗೆ
ಕೇವಲ 
ಈ ಸಾಗರದ ಜೊತೆ 
ನನ್ನ ಮಾತುಕತೆ

ಏಕಾಂತದಲಿ
ಮೌನ ಕುಳಿತು
ಹಳೆಯ
ಮಾತನ್ನೆಲ್ಲ ಸ್ಮರಿಸಿ
ಕಣ್ಣಿಂದ
ಕಣ್ಣೀರ ಹನಿ ಬಿದ್ದರೂ
ಕೆಲವೊಮ್ಮೆ
ಹಠಾತ್ತನೆ ನಕ್ಕು ಬಿಡುವೆ

by ಹರೀಶ್ ಶೆಟ್ಟಿ,ಶಿರ್ವ

Wednesday, September 25, 2013

ಉಡುಗೊರೆ

ಗೆಳತಿ...
ತನ್ನ ಜೀವನದ
ಸರ್ವಸ್ವ
ನನಗೆ
ನೀಡಿದ
ನಿನಗೆ
ನಾನೇನು
ಉಡುಗೊರೆ
ನೀಡಲಿ

by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ