Tuesday, October 1, 2013

ಮಾತುಕತೆ

ಗೆಳತಿ... 
ಹಲವು ದಿನಗಳಿಂದ 
ನಿನ್ನಿಂದ ಮಾತಿಲ್ಲ,
ಈಗ 
ಸಂಜೆ ಆದಾಗ 
ನಿನ್ನ ನೆನಪೊಂದಿಗೆ
ಕೇವಲ 
ಈ ಸಾಗರದ ಜೊತೆ 
ನನ್ನ ಮಾತುಕತೆ

ಏಕಾಂತದಲಿ
ಮೌನ ಕುಳಿತು
ಹಳೆಯ
ಮಾತನ್ನೆಲ್ಲ ಸ್ಮರಿಸಿ
ಕಣ್ಣಿಂದ
ಕಣ್ಣೀರ ಹನಿ ಬಿದ್ದರೂ
ಕೆಲವೊಮ್ಮೆ
ಹಠಾತ್ತನೆ ನಕ್ಕು ಬಿಡುವೆ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಸಾಗರವದೇಕೆ ಉಪ್ಪುಪ್ಪು, ಎನ್ನುವುದು ಈಗ ಅರಿವಾಯಿತು. ಕಣ್ಣೀರು ಬೆರೆತಾಯಿತಲ್ಲ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...