Wednesday, October 23, 2013

ಹನಿ ಹನಿ

ದ್ವೇಷದಿಂದ 
ವಿಷ ಹಬ್ಬಿತು ಅವನ ಮೈಯಲ್ಲಿ 
ಯಾರೋ ಪ್ರೀತಿಸು ಎಂದರು 
ಪ್ರೀತಿಯ ಸಾಗರದಲಿ ಹಾರಿದ 
ಹೊರ ಬಂದಾಗ 
ಪ್ರೇಮಾಮೃತ 
ಕುಡಿದು 
ಪಾವನವಾಗಿದ 

by ಹರೀಶ್ ಶೆಟ್ಟಿ,ಶಿರ್ವ
_______________
ಗೂಡಿನಲ್ಲಿದ್ದ 
ಮರಿ ಹಕ್ಕಿಗೆ 
ಮರದ ಕೊಂಬೆಯಲ್ಲಿ ಹೊಸತಾಗಿ 
ಚಿಗುರಿದ ಎಲೆಯ ಗೆಳತನ 
ಕೊಂಬೆಯಿಂದ ಅಗಲಿ 
ಎಲೆ ಬಿದ್ದಾಗ 
ಮರಿ ಹಕ್ಕಿ ವಿಚಲಿತ 

by ಹರೀಶ್ ಶೆಟ್ಟಿ,ಶಿರ್ವ
_______________
ಶೋಚನೀಯ ಅವಸ್ಥೆ 
ಅವಳ,
ಕುಂಕುಮ 
ಕೈಯಿಂದ 
ಜಾರಿ 
ಕೆಳಗೆ ಬಿದ್ದಾಗ

by ಹರೀಶ್ ಶೆಟ್ಟಿ,ಶಿರ್ವ
_______________
ದೀಪಾವಳಿಗೆ 
ಹೊಸತಾಗಿ ಮನೆಗೆ ಬಂದ 
ಕಂದೀಲು ಮತ್ತು ಹಣತೆಗೆ 
ದೇವರ ಮುಂದೆ 
ಬೆಳಗುವ ದೀಪವನ್ನು 
ನೋಡಿ 
ಎಲ್ಲಿಲ್ಲದ ಸಂತೋಷ 
by ಹರೀಶ್ ಶೆಟ್ಟಿ,ಶಿರ್ವ
________________
ಹಬ್ಬ ದೀಪಾವಳಿ, 
ಅವಳು ಬಂದಿದ್ದಳು
ಇನ್ನು 
ಅವಳ ಹೆಜ್ಜೆ ಗುರುತೆ 
ನನ್ನ ಮನೆಯ 
ರಂಗೋಲಿ 
by ಹರೀಶ್ ಶೆಟ್ಟಿ,ಶಿರ್ವ

1 comment:

  1. ವಿವಿದ ದೀಪಗಳ ದೀಪಾವಳಿ ಹನಿ ಇಷ್ಟವಾಯಿತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...