Monday, October 21, 2013

ವಾಸ್ತವ

ವಾಸ್ತವ
________

ಪ್ರೇಮ ಕವಿಯೊಬ್ಬ
ಗೃಹ ಕಲಹದ ಆರೋಪದಲ್ಲಿ
ಜೈಲು ಸೇರಿದ
_________

ಅವನು ದಿನ
ಮಂದಿರಕ್ಕೆ ತಪ್ಪದೆ ಹೋಗುತ್ತಿದ್ದ,
ಆದರೆ
ದಿನ ಮಂದಿರದ ಹೊರಗೆ
ಬೇಡುವ ಅಂಗವಿಕಲ ಭಿಕ್ಷುಕನಿಗೆ
ಅವನು ಎಂದೂ ಒಂದು ಪೈಸೆ ಸಹ ಭಿಕ್ಷೆ ನೀಡಲಿಲ್ಲ.
__________

ಅವಳು ವೇಶ್ಯೆ,
ಪ್ರತಿ ತಿಂಗಳು
ಮಕ್ಕಳ ಅನಾಥಾಲಯಕ್ಕೆ
ಅವಳ ಭೇಟಿ,
ಆ ದಿನ
ಮಕ್ಕಳಿಗೆಲ್ಲ ಉತ್ಸವ
____________

ಅವರು ತುಂಬಾ ಪ್ರಾಮಾಣಿಕ
ಪ್ರಸಿದ್ಧ ಡಾಕ್ಟರ್
ದಿನ ಅವರ ಬಳಿ ಬಡ ರೋಗಿಗಳ ಸಾಲು,
ಅವರ ಫೀಸ್ ಸಹ ತುಂಬಾ ಕಡಿಮೆ,
ಆದರೆ ಶ್ರೀಮಂತರಿಗೆ
ಅವರಿಂದ ಚಿಕತ್ಸೆ
ಪಡೆಯಲು ನಾಚಿಗೆ

by ಹರೀಶ್ ಶೆಟ್ಟಿ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...