Sunday, October 6, 2013

ಅದೇಕೆ?

ಅದೇಕೆ ನಗೆ
ನಿನ್ನ ಈ ಚಹರೆಯಲ್ಲಿ
ಎಲ್ಲ ಅರ್ಥ ಅಡಗಿದೆ
ನಿನ್ನ ಕಣ್ಣಲ್ಲಿ

ಅದೇಕೆ ನುಡಿಯುವೆ
ನೀನಿಷ್ಟೆಲ್ಲ ಮಾತುಗಳನ್ನು
ಎಲ್ಲ ಅರ್ಥ ಅಡಗಿದೆ
ನಿನ್ನ ಒಂದು ಕ್ಷಣದ ಮೌನದಲಿ

ಅದೇಕೆ ನಿಟ್ಟುಸಿರು ಬಿಡುವೆ
ನೀನು ಪದೇ ಪದೇ
ಎಲ್ಲ ಅರ್ಥ ಅಡಗಿದೆ
ನಿನ್ನ ವ್ಯಾಕುಲತೆಯಲಿ

ಅದೇಕೆ ಬದಲಾವಣೆ
ನಿನ್ನ ನಡುವಳಿಕೆಯಲ್ಲಿ
ಎಲ್ಲ ಅರ್ಥ ಅಡಗಿದೆ
ನಿನ್ನ ಚಡಪಡಿಕೆಯಲ್ಲಿ

by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...