Wednesday, October 9, 2013

ಹೃದಯವೆ ಮುರಿದಾಗ

ಹೃದಯವೆ  ಮುರಿದಾಗ
ಹೃದಯವೆ ಮುರಿದಾಗ
ನಾನು ಬದುಕಿ ಪ್ರಯೋಜನವೇನು
ನಾನು ಬದುಕಿ ಪ್ರಯೋಜನವೇನು
ಹೃದಯವೆ ಮುರಿದಾಗ

ಒಲವ ದೀಪ ನಾನು
ಈ ಹೃದಯದಲಿ ಹಚ್ಚಿದ್ದೆ
ನಿರೀಕ್ಷೆಯ ಹೂಗಳಿಂದ
ಈ ಮನೆಯನ್ನು ಅಲಂಕರಿಸಿದ್ದೆ
ದೋಚಿ ಹೋದ ಒಬ್ಬ ದೂರಿಗ
ದೋಚಿ ಹೋದ ಒಬ್ಬ ದೂರಿಗ
ನಾನು ಬದುಕಿ ಪ್ರಯೋಜನವೇನು
ನಾನು ಬದುಕಿ ಪ್ರಯೋಜನವೇನು
ಹೃದಯವೆ ಮುರಿದಾಗ

ಗೊತ್ತಿರಲಿಲ್ಲ ನನ್ನ ಹಾದಿ
ಇಷ್ಟು ಕಷ್ಟಕರವಾಗಿದೆಯೆಂದು
ಹರಿಯಿತು ಬಯಕೆಯ ಕಣ್ಣೀರು
ಸೋಲಿನ ನಿಟ್ಟುಸಿರು
ಪ್ರತಿಯೊಂದು ಜತೆಗಾರ ಬಿಟ್ಟೋದ 
ಪ್ರತಿಯೊಂದು ಜತೆಗಾರ ಬಿಟ್ಟೋದ
ನಾನು ಬದುಕಿ ಪ್ರಯೋಜನವೇನು
ನಾನು ಬದುಕಿ ಪ್ರಯೋಜನವೇನು
ಹೃದಯವೆ ಮುರಿದಾಗ

ಮೂಲ : ಮಜರೂಹ್ ಸುಲ್ತಾನ್ ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕೆ .ಎಲ್ .ಸೈಗಲ್
ಸಂಗೀತ : ನೌಶಾದ್
ಚಿತ್ರ : ಶಹಜಹಾನ್

जब दिल ही तूट गया, जब दिल ही तूट गया
हम जी के क्या करेंगे, हम जी के क्या करेंगे
जब दिल ही तूट गया - २

उलफ़त का दिया हमने, इस दिल में जलाया था - २
उम्मीद के फूलों से, इस घर को सजाया था - २
इक भेदी लूट गया, इक भेदी लूट गया
हम जी के क्या करेंगे, हम जी के क्या करेंगे
जब दिल ही तूट गया

(मालूम ना था इतनी, मुश्किल हैं मेरी राहें
मुश्किल हैं मेरी राहें ) - २
अरमां के बहे आँसू, हसरत ने भरीं आहें - २
हर साथी छूट गया, हर साथी छूट गया
हम जी के क्या करेंगे, हम जी के क्या करेंगे
जब दिल ही तूट गया
www.youtube.com/watch?v=nQQPV-DtY3s

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...