Sunday, October 6, 2013

ನಮ್ಮಂತೆ ಪ್ರೀತಿಯಲಿ ಉರಿಯುವವರಿಗೆ

!!ನಮ್ಮಂತೆ ಪ್ರೀತಿಯಲಿ ಉರಿಯುವವರಿಗೆ
ನೆಮ್ಮದಿ ಎಲ್ಲಿ
ಆರಾಮ ಎಲ್ಲಿ!!
ನಮ್ಮಂತೆ ಪ್ರೀತಿಯಲಿ.....

!!ಪ್ರೀತಿಯ ಕತ್ತಲ ಗಮ್ಯದಲಿ
ತಮಸ್ಸು ನಾಲ್ಕೂ ದಿಶೆಯಲಿ
ಅರ್ಧ ರಸ್ತೆಯಲ್ಲಿಯೇ ನಿಲ್ಲಬೇಕಾಗಬಹುದು
ಪಯಣಿಗನಿಗೆ ಈ ಗಮ್ಯದಲಿ
ಮುಳ್ಳ ಮೇಲೆ ನಡೆಯುವವನಿಗೆ
ನೆಮ್ಮದಿ ಎಲ್ಲಿ
ಆರಾಮ ಎಲ್ಲಿ!!
ನಮ್ಮಂತೆ ಪ್ರೀತಿಯಲಿ…

!!ಪುಸಲಾಯಿಸಿಯೂ
ಒಪ್ಪದಾಗ ಹೃದಯ
ಹೀಗೆ ಪುಸಲಾಯಿಸಲಾಗುವುದು
ನೋವೆ ಸಂಪತ್ತು ಪ್ರೀತಿಯ
ಎಂದೇಳಿ ಒಪ್ಪಿಸಲಾಗುವುದು
ತನ್ನ ಮನಸ್ಸನ್ನು ವಂಚಿಸುವವರಿಗೆ
ನೆಮ್ಮದಿ ಎಲ್ಲಿ
ಆರಾಮ ಎಲ್ಲಿ!!
ನಮ್ಮಂತೆ ಪ್ರೀತಿಯಲಿ…

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಜೈಲರ್
Ham Pyar Me Jalanevalo Ko, Chain Kaha Ha Aaram Kaha
Ham Pyar Me Jalanevalo ko

Prit Kee Andhiyaree Manjil Me, Charon Or Siyahee
Aadhee Rah Me Hee Ruk Jaye, Iss Manjil Kaa Rahee
Kanto Par Chalanevalo Ko, Chain Kaha Ha Aaram Kaha
Ham Pyar Me Jalanevalo Ko

Bahalaye Jab Dil Na Bahale, Toh Aise Bahalaye
Gam Hee Toh Hai Pyar Kee Daulat, Yeh Kahakar Samajhaye
Apana Man Chhalanevalo Ko, Chain Kaha Ha Aaram Kaha
Ham Pyar Me Jalanevalo KoHam Pyar Me Jalanevalo Ko, Chain Kaha Ha Aaram Kaha
Ham Pyar Me Jalanevalo Ko
www.youtube.com/watch?v=YiPb5mWl3Xo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...