Saturday, October 19, 2013

ಪರಿವರ್ತನೆ

ತೊರೆದು ಹೋಗುವೆ ಎಲ್ಲಿ 
ಈ ಜೀವವನ್ನು 
ಇರಲಿದೆ ಮಾನವನಾಗಿ ನಿನಗೆ 
ಈ ದುಷ್ಟ ಜಗತ್ತಲ್ಲಿ 

ಕಣ್ಣೀರ ನಿರೀಕ್ಷೆ ಏಕೆ 
ಬಂಡೆ ಕಲ್ಲಲ್ಲಿ 
ತಲೆ ಅಪ್ಪಳಿಸಿದರೆ 
ಮಿಂದುವೆ ನೀನು ರಕ್ತದಲಿ 

ಐದು ಬೆರಳಲಿ 
ಒಂದನ್ನು ದಿಟ್ಟಿಸಿದರೆ ಇತರರಲಿ 
ನಾಲ್ಕು ಬೆರಳ ಗುರಿ 
ಇರುವುದು ಕೇವಲ ನಿನ್ನಲ್ಲಿ

ಸಲ್ಲದು ಮಾತಾಡಿ 
ಪ್ರಯೋಜನವೇನು 
ಸುಧಾರಿಸಿಕೋ ಸ್ವತಃ ನಿನ್ನನ್ನೇ 
ನಿನ್ನಿಂದಲೇ ಪರಿವರ್ತನೆ ಬರಲಿ ಈ ಜಗತ್ತಲ್ಲಿ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...