Saturday, October 26, 2013

ಏಕಾಂಗಿ ಪ್ರಯಾಣ

ಸತತ ನನ್ನ ಪ್ರಯಾಣ 
ಏಕಾಂಗಿ 
ಸಹ ಪಯಣಿಗರ ಕೊರತೆ 
ಹೆಜ್ಜೆ ನಿಲ್ಲುವುದಿಲ್ಲ 
ಸೋತು ಬಿದ್ದಾಗ 
ಕೈ ಕೊಡುವವರು ಯಾರೂ ಇಲ್ಲ 
ಕೆಲವೊಮ್ಮೆ ನನ್ನಿಂದ ಅನಗತ್ಯ ಧೈರ್ಯ 
ಗಾಳಿ ಧೂಳಿನ ವೇಗ 
ಅದರೂ ನಿಲ್ಲಬಾರದೆಂಬ ಹಠ 
ಮುಖವೆಲ್ಲ ಕರಿ 
ಅದರೂ ತನ್ನನ್ನು ಸಾವರಿಸಿ 
ಪುನಃ ಮರು ಪ್ರಯಾಣಕ್ಕೆಸಿದ್ಧ
ಮಧ್ಯದಲ್ಲಿ ಸಿಗುವ 
ಕೆಲವು ಜನರ ಹಿತವಚನ 
ನಿನ್ನಿಂದ ಸಾಧ್ಯವಿಲ್ಲ ಹಿಂತಿರುಗೆಂದು 
ಆದರೆ ಛಲ 
ಗುರಿ ಪಡೆಯಲೇ ಬೇಕೆಂದು 
ತಾಣ ಕಾಣುತ್ತಿಲ್ಲ 
ಎಲ್ಲೆಡೆ ಅಂಧಕಾರ 
ಕೆಲವೊಮ್ಮೆ ಮನಸ್ಸು ವಿಚಲಿತ 
ಆದರೆ ಕಾಲು ಸ್ವಯಂಚಾಲಿತ 
ಮನಸ್ಸಲ್ಲಿ ವಿಶ್ವಾಸ
ಯೋಚಿಸಿದನ್ನು ಪಡೆಯುವೆಯೆಂದು 
ನಿರ್ದಿಷ್ಟ ಸ್ಥಾನಕ್ಕೆ 
ತಲುಪುವೆಯೆಂದು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...