Monday, October 7, 2013

ನನ್ನ ಕಂಗಳಲ್ಲಿ ವರ್ಷ ಪ್ರವಾಹ

!!ನನ್ನ ಕಂಗಳಲ್ಲಿ ವರ್ಷ ಪ್ರವಾಹ
ಆದರೂ ನನ್ನ ಮನಸ್ಸಲ್ಲಿ ದಾಹ!! -೨

!!ಮರುಳು ಹೃದಯವೇ
ಇದೇನು ಆಟವೇ
ನೋವು ತುಂಬಿದ
ಗೀತೆ ಎಲ್ಲಿಂದ
ಈ ಅಧರದಲಿ ಬರುವುದೋ
ದೂರ ಎಲ್ಲಿಯೋ ಕೊಂಡೊಯ್ಯುವುದು
ಮರೆತೇ ನೀನಾದರೂ
ಮರೆತು ಕೂಡ
ನನಗೆ ನೆನಪಿದೆ ಸ್ವಲ್ಪ!!
ಆದರೂ ನನ್ನ ಮನಸ್ಸಲ್ಲಿ ದಾಹ

!!ಹಳೆಯ ಮಾತಿದು
ಒಂದು ಕತೆ ಇದು
ಈಗ ಯೋಚಿಸಿದರೆ ನಿನಗೆ ನೆನಪಿಲ್ಲ
ಈಗ ಯೋಚಿಸಿದರೆ ಮರೆತಿಲ್ಲ
ಆ ಮಳೆಯ ಉಯ್ಯಾಲೆವೆಲ್ಲ
ಋತು ಬರುವುದು
ಋತು ತೆರಳುವುದು ಕೊಟ್ಟು
ಒಂದು ಸುಳ್ಳು ಸಾಂತ್ವನ!!
ಆದರೂ ನನ್ನ ಮನಸ್ಸಲ್ಲಿ ದಾಹ

!!ಎಷ್ಟೋ ವರುಷ ಕಳೆದೋಯಿತು
ನಮಗೆ ಸಿಕ್ಕಿ ಅಗಲಿ
ಮಿಂಚಾಗಿ ಮಿಂಚಿದೆ ಗಗನದಲಿ
ಕಳೆದ ಸಮಯದ ಮನಸ್ಸಿನಂಗಳದಲಿ
ನಾನು ನಿನ್ನನ್ನು ನೋಡಿದೆ ಅಲ್ಲಿ
ಮನಸ್ಸೊಂದಿಗೆ ಕಣ್ಣು ಮುಚ್ಚಾಲೆ ಆಡುತ್ತಿದೆ
ಆಸೆ ಮತ್ತು ನಿರಾಶೆ!!
ಆದರೂ ನನ್ನ ಮನಸ್ಸಲ್ಲಿ ದಾಹ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ .ಡಿ.ಬರ್ಮನ್
ಚಿತ್ರ : ಮೆಹಬೂಬಾ

(मेरे नैना सावन भादों
फिर भी मेरा मन प्यासा ) -2


ऐ दिल दीवाने, खेल है क्या जाने
दर्द भरा ये, गीत कहाँ से
इन होंठों पे आए, दूर कहीं ले जाए
भूल गया क्या, भूल के भी है
मुझको याद ज़रा सा, फिर भी ...

बात पुरानी है, एक कहानी है
अब सोचूँ तुम्हें, याद नहीं है
अब सोचूँ नहीं भूले, वो सावन के झूले
ऋतु आये ऋतु जाये देके
झूठा एक दिलासा, फिर भी...

बरसों बीत गए, हमको मिले बिछड़े
बिजुरी बनकर, गगन पे चमके
बीते समय की रेखा, मैं ने तुम को देखा
मन संग आँख-मिचौली खेले
आशा और निराशा, फिर भी...
http://www.youtube.com/watch?v=enyjSSHdZVA

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...