ಬಾಪು
ಇಂದು ನಿಮ್ಮ ಜನ್ಮ ದಿವಸದಂದು
ನಾನು ಮಾಡುವೆ ತಪ್ಪೊಪ್ಪು
ಅಹಿಂಸೆಯನ್ನು ಎಂದೂ ಪಾಲಿಸಲಿಲ್ಲ
ಒಂದೆರಡು ಸೊಳ್ಳೆಗಳನ್ನು ನಾನು ಕೊಂದಿರಬಹುದು
ಆದರೆ ಹಿಂಸೆಯಿಂದ ದೂರವಿರಲು ಯತ್ನಿಸಿದೆ
ಇದು ಸತ್ಯ
ಸದಾ ಸತ್ಯ ನುಡಿಯಿರಿ ಎಂದು ಹೇಳಿದಿರಿ
ನಿಮ್ಮಾಣೆ ಸತ್ಯವೇ ನುಡಿದೆ
ಆದರೆ ಸುಳ್ಳು ನುಡಿಯಲೇ ಇಲ್ಲವೆಂದು
ಸುಳ್ಳು ಹೇಳಲಾರೆ
ಕೆಟ್ಟದನ್ನು ನೋಡಬೇಡಿ ಎಂದಿರಿ
ಹೆಜ್ಜೆ ಹೆಜ್ಜೆಯಲಿ ಗಲೀಜು
ನೋಡದೆ ನಡೆದರೆ
ನನ್ನ ಅವಸ್ಥೆ ಏನು?
ಮತ್ತೆ ನಡೆಯುವುದು ಹೇಗೆ ?
ಕೆಟ್ಟದನ್ನು ಕೇಳಬೇಡಿ ಎಂದಿರಿ
ದಿನ ಹಾಳು ಸುದ್ಧಿಗಳ ಹಾವಳಿ
ಕಿವಿ ಎಷ್ಟೆಂದು ಮುಚ್ಚುವುದು
ಕೇಳದೆ ಇರಲು ಸಾಧ್ಯವೇ ?
ಕೆಟ್ಟದನ್ನು ನುಡಿಯಬೇಡಿ ಎಂದಿರಿ
ಸತ್ಯ ಹೇಳುವೆ
ನಾನು ನುಡಿಯುವಾಗ
ತುಂಬಾ ಎಚ್ಚರಿಕೆ ವಹಿಸುವೆ
ಆದರೂ ಇತರರಿಗೆ
ಕೆಲವೊಮ್ಮೆ ನಾನು ನುಡಿದದ್ದು ಹಿಡಿಸುವುದಿಲ್ಲ
ಏನು ಮಾಡಲಿ ಹೇಳಿ?
ಬಾಪು
ನೀವೆಲ್ಲಾ ಹೇಳಿದನ್ನು
ಈಗಿನ ಭ್ರಷ್ಟ ಸಮಾಜದಲ್ಲಿ
ಎಷ್ಟು ಪ್ರಯತ್ನಿಸಿದ್ದರು ಪಾಲಿಸಲು ಸಾಧ್ಯವೇ ?
ಬಾಪು ನೀವು ಆದರ್ಶ
ಆದರೆ ಕಾಲ ಬದಲಾಗಿದೆ
ಈಗ ನಿಮ್ಮಷ್ಟು ತಾಳ್ಮೆ ,ಧೈರ್ಯ ಯಾರಲ್ಲೂ ಇಲ್ಲ
ಮತ್ತೆ ಹುಟ್ಟಿ ಬನ್ನಿ ಬಾಪು
by ಹರೀಶ್ ಶೆಟ್ಟಿ,ಶಿರ್ವ
ಇಂದು ನಿಮ್ಮ ಜನ್ಮ ದಿವಸದಂದು
ನಾನು ಮಾಡುವೆ ತಪ್ಪೊಪ್ಪು
ಅಹಿಂಸೆಯನ್ನು ಎಂದೂ ಪಾಲಿಸಲಿಲ್ಲ
ಒಂದೆರಡು ಸೊಳ್ಳೆಗಳನ್ನು ನಾನು ಕೊಂದಿರಬಹುದು
ಆದರೆ ಹಿಂಸೆಯಿಂದ ದೂರವಿರಲು ಯತ್ನಿಸಿದೆ
ಇದು ಸತ್ಯ
ಸದಾ ಸತ್ಯ ನುಡಿಯಿರಿ ಎಂದು ಹೇಳಿದಿರಿ
ನಿಮ್ಮಾಣೆ ಸತ್ಯವೇ ನುಡಿದೆ
ಆದರೆ ಸುಳ್ಳು ನುಡಿಯಲೇ ಇಲ್ಲವೆಂದು
ಸುಳ್ಳು ಹೇಳಲಾರೆ
ಕೆಟ್ಟದನ್ನು ನೋಡಬೇಡಿ ಎಂದಿರಿ
ಹೆಜ್ಜೆ ಹೆಜ್ಜೆಯಲಿ ಗಲೀಜು
ನೋಡದೆ ನಡೆದರೆ
ನನ್ನ ಅವಸ್ಥೆ ಏನು?
ಮತ್ತೆ ನಡೆಯುವುದು ಹೇಗೆ ?
ಕೆಟ್ಟದನ್ನು ಕೇಳಬೇಡಿ ಎಂದಿರಿ
ದಿನ ಹಾಳು ಸುದ್ಧಿಗಳ ಹಾವಳಿ
ಕಿವಿ ಎಷ್ಟೆಂದು ಮುಚ್ಚುವುದು
ಕೇಳದೆ ಇರಲು ಸಾಧ್ಯವೇ ?
ಕೆಟ್ಟದನ್ನು ನುಡಿಯಬೇಡಿ ಎಂದಿರಿ
ಸತ್ಯ ಹೇಳುವೆ
ನಾನು ನುಡಿಯುವಾಗ
ತುಂಬಾ ಎಚ್ಚರಿಕೆ ವಹಿಸುವೆ
ಆದರೂ ಇತರರಿಗೆ
ಕೆಲವೊಮ್ಮೆ ನಾನು ನುಡಿದದ್ದು ಹಿಡಿಸುವುದಿಲ್ಲ
ಏನು ಮಾಡಲಿ ಹೇಳಿ?
ಬಾಪು
ನೀವೆಲ್ಲಾ ಹೇಳಿದನ್ನು
ಈಗಿನ ಭ್ರಷ್ಟ ಸಮಾಜದಲ್ಲಿ
ಎಷ್ಟು ಪ್ರಯತ್ನಿಸಿದ್ದರು ಪಾಲಿಸಲು ಸಾಧ್ಯವೇ ?
ಬಾಪು ನೀವು ಆದರ್ಶ
ಆದರೆ ಕಾಲ ಬದಲಾಗಿದೆ
ಈಗ ನಿಮ್ಮಷ್ಟು ತಾಳ್ಮೆ ,ಧೈರ್ಯ ಯಾರಲ್ಲೂ ಇಲ್ಲ
ಮತ್ತೆ ಹುಟ್ಟಿ ಬನ್ನಿ ಬಾಪು
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment