Wednesday, October 30, 2013

ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ

ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ
ನಿನ್ನ ನೆನಪನ್ನು ನಾನು ವಧುವಿನಂತೆ ಸಿಂಗರಿಸಿ 
ನಾನಿಡುವೆ ಹೃದಯದಲ್ಲಿರಿಸಿ 
ಬೇಸರಿಸದಿರು ಪ್ರೇಯಸಿ

ನಾಳೆ ನಿನ್ನ ಈ ಅಂದ ಪರಕೀಯಾಗಬಹುದು 
ಆದರೆ ಆ ನೋಟ ನನ್ನ ಸ್ವಪ್ನದಲ್ಲಿರುವುದು 
ಹೂವಿನ ಪಾಲಕಿಯಲ್ಲಿ ನೀನು ಹೊರಡುವೆ 
ಆದರೆ ಸುಗಂಧ ನನ್ನ ಉಸಿರಲ್ಲಿರುವುದು
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ಈಗಲೂ ನಿನ್ನ ಗುಲಾಬಿ ಅಧರದ ಮೊಗ್ಗು
ನನ್ನ ಕಲ್ಪನೆಯ ಹೂದೋಟದಲಿ ಹೂವಾಗಿ ಅರಳುತ್ತಿದೆ
ಈಗಲೂ ನಿನ್ನ ಕೇಶ ರಾಶಿಯ ನೆರಳು
ವಿರಹದ ಬಿಸಿಲಲ್ಲಿ ಜತೆಗಾರನಾಗಿದೆ
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ನನ್ನ ಪ್ರೀತಿಯನ್ನು ತಿರಸ್ಕರಿಸು ಬೇಕಾದರೆ
ನಾ ನಿನ್ನಿಂದ ಯಾವುದೇ ವಾದ ಮಾಡಲಾರೆ
ಕಣ್ಣಲ್ಲಿರುತ್ತದೆ ಚಿತ್ರ ನಿನ್ನ
ಇಡೀ ಜೀವನ ನಿನ್ನನ್ನು ಪೂಜಿಸುತಲಿರುವೆ
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ಮೂಲ : ಹಸರತ್ ಜೈಪುರಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೋಹಮಮ್ದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಬ್ರಹ್ಮಚಾರಿ 


Dil Ke Jharoke Mein Tujko Bithakar
yadoon Ko Teri Maein Dulhan Banakar
rakhoonga Maein Dil Ke Paas
mat Ho Meri Jaan Udaas,
dil Ke Jharoke...

kal Tere Jalwe Paraye Bhi Honge
lekin Jhalak Mere Khwabon Mein Hogi
phoolon Ki Doli Mein Hogi Tu Rukhsat
lekin Mehak Meri Sanson Mein Hogi,
dil Ke Jharoke...

ab Bhi Tere Surkh Hothon Ke Pyale
mere Tassavur Mein Saki Baney Hain
ab Bhi Teri Zulf Ke Mast Saye
birha Ki Dhoop Mein Sathi Baney Hain,
dil Ke Jharoke...

meri Mohabbat Ko Thukra De Chahe
maein Koi Tujhse Na Shikva Karoonga
aankhon Mein Rehti Hai Tasveer Teri
sari Umar Teri Pooja Karoonga,
dil Ke Jharoke...

www.youtube.com/watch?v=eqVOX171kAs

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...