Tuesday, October 22, 2013

ಸಂದೇಶ ಬರುತ್ತದೆ

!!ಸಂದೇಶ ಬರುತ್ತದೆ 
ನೋವು ತರುತ್ತದೆ
ಪತ್ರ ಬಂದಾಗ ಯಾವುದೇ
ಅದರಲ್ಲಿ ಮಾತೊಂದೇ
ಮನೆಗ್ಯಾವಾಗ ಬರುವೆ ನೀ
ಬರೆ ಯಾವಾಗ ಬರುವೆ ನೀ
ಅಂದರೆ ನಿನ್ನ ವಿನಾಃ ಈ ಮನೆ ಖಾಲಿ ಖಾಲಿ ಇದೆ !!

!!ಒಂದು ಸೌಂದರ್ಯದ ಸಿರಿ
ಒಂದು ಚೆಲುವೆ ಸುಂದರಿ
ನನಗೆ ಪತ್ರ ಬರೆದಿದ್ದಾಳೆ
ನನ್ನಿಂದ ಕೇಳಿದ್ದಾಳೆ
ಯಾರದ್ದೋ ಉಸಿರು
ಯಾರದ್ದೋ ಮಿಡಿತ
ಯಾರದ್ದೋ ಕೈ ಬಳೆ
ಯಾರದ್ದೋ ಕಡಗ
ಯಾರದ್ದೋ ಕಣ್ಣ ಕಾಡಿಗೆ
ಯಾರದ್ದೋ ಹೂ ಮಲ್ಲಿಗೆ
ಸುಗಂಧಿತ ಹಗಲು
ಮೋಹಕ ರಾತ್ರಿ
ಏಕಾಂತ ರಾತ್ರಿಗಳು
ಅಪೂರ್ಣ ಮಾತುಗಳು
ಹಂಬಲಿಸುವ ಬಾಹುಗಳು
ಮತ್ತೆ ಕೇಳಿದೆ ಈ ಕಂಗಾಲಾದ ಕಣ್ಣೆರಡು!!
ಮನೆಗ್ಯಾವಾಗ ಬರುವೆ ನೀ
ಬರೆ ಯಾವಾಗ ಬರುವೆ ನೀ
ಅಂದರೆ ನಿನ್ನ ವಿನಾಃ ಈ ಹೃದಯ ಖಾಲಿ  ಖಾಲಿ ಇದೆ

!!ಪ್ರೀತಿ ಮಾಡುವವರು
ನನ್ನ ಮಿತ್ರರೆಲ್ಲರೂ
ನನಗೆ ಬರೆದಿದ್ದಾರೆ
ನನ್ನಿಂದ ಕೇಳಿದ್ದಾರೆ
ನಮ್ಮ ಊರಿನವರು
ನೆರಳು ನೀಡುವ ಮಾವಿನ ಮರಗಳು
ಹಳೆ ಪೀಪಲ್ ಮರಗಳು
ಸುರಿಯುವ ಮೇಘಗಳು
ಹೊಲ ಗದ್ದೆಗಳು
ಹಸಿರು ತೋಟಗಳು
ವಿವಿಧ ಜಾತ್ರೆಗಳು
ನೇತಾಡುವ ಲತೆಗಳು
ಪ್ರೇಮದ ಉಯ್ಯಾಲೆಗಳು
ಸುಗಂಧಿತ ಹೂ ಮಾಲೆಗಳು
ಬಿರಿಯುವ ಮೊಗ್ಗುಗಳು
ಮತ್ತೆ ಕೇಳಿದೆ ಈ ಊರಿನ ಗಲ್ಲಿಗಳು!!
ಮನೆಗ್ಯಾವಾಗ ಬರುವೆ ನೀ
ಬರೆ ಯಾವಾಗ ಬರುವೆ ನೀ
ಅಂದರೆ ನಿನ್ನ ವಿನಾಃ ಈ  ಊರೆಲ್ಲ ಖಾಲಿ ಖಾಲಿ ಇದೆ!!

!!ಕೆಲವೊಮ್ಮೆ ಒಂದು ಮಮತೆಯ
ಪ್ರೀತಿಯ ಗಂಗೆಯ
ಪತ್ರ ಬರುತ್ತದೆ
ಒಟ್ಟಿಗೆ ತರುತ್ತದೆ
ನನ್ನ ದಿನ ಬಾಲ್ಯದ
ಆಟ ಆ ಅಂಗಳದ
ಆ ನೆರಳು ಸೆರಗಿನ
ಆ ಬೊಟ್ಟು ಕಾಡಿಗೆಯ
ಆ ಲಾಲಿ ರಾತ್ರಿಯ
ಆ ಮೃದುತ್ವ ಕೈಯ
ಆ ಆರೈಕೆ ಕಣ್ಣಲ್ಲಿ
ಆ ಚಿಂತೆ ಮಾತಲ್ಲಿ
ಮೇಲಿಂದ ಕೋಪ
ಒಳಗಿಂದ ಮೋಹ
ಮಾಡುತ್ತಾಳೆ ಆ ನನ್ನ ದೇವರು ಅಮ್ಮ
ಇದೇ ಕೇಳುತ್ತಾಳೆ ಪ್ರತಿ ಪತ್ರದಲಿ ನನ್ನಮ್ಮ!!
ಮನೆಗ್ಯಾವಾಗ ಬರುವೆ ನೀ
ಬರೆ ಯಾವಾಗ ಬರುವೆ ನೀ
ಅಂದರೆ ನಿನ್ನ ವಿನಾಃ ಈ ಅಂಗಳ ಖಾಲಿ ಖಾಲಿ ಇದೆ 

!!ಹೇ ಬೀಸುವ ತಂಗಾಳಿಯೇ ಹೇಳು
ನನ್ನ ಇಷ್ಟೊಂದು ಕೆಲಸ ಮಾಡುವೇಯಾ
ನನ್ನ ಊರಿಗೆ ಹೋಗು
ನನ್ನ ಗೆಳೆಯರಿಗೆ ವಂದಿಸು
ನನ್ನ ಊರಲ್ಲಿದ್ದ ಆ ಗಲ್ಲಿ
ಆಲ್ಲಿ ಇರುತ್ತಾಳೆ ನನ್ನೊಲವು
ಅವಳಿಗೆ ನನ್ನ ಪ್ರೀತಿಯ ಮುದ್ದು ನೀಡು
ಅಲ್ಲಿ ಸ್ವಲ್ಪ ದೂರದಲ್ಲಿದೆ ನನ್ನ ಮನೆ
ಮನೆಯಲ್ಲಿದ್ದಾಳೆ ನನ್ನ ಮುದಿ ಅಮ್ಮ
ನನ್ನ ಅಮ್ಮನ ಕಾಲನ್ನು ಸ್ಪರ್ಶಿಸು
ಅವಳಿಗೆ ಅವಳ ಮಗನ ಹೆಸರು ಕೊಡು!!

!!ಹೇ ಬೀಸುವ ತಂಗಾಳಿಯೇ ಸ್ವಲ್ಪ
ನನ್ನ ಗೆಳೆಯರಿಗೆ
ನನ್ನ ಒಲವಿಗೆ
ನನ್ನ ತಾಯಿಗೆ ನನ್ನ ಸುದ್ದಿ ಕೊಡು
ಅವರಿಗೆ ಹೋಗಿ ನೀನು ಈ ಸುದ್ದಿ ಕೊಡು
ನಾ ಮರಳಿ ಬರುವೆಯೆಂದು
ನಾ ಮರಳಿ ಬರುವೆಯೆಂದು
ಪುನಃ ನಮ್ಮೂರಿಗೆ
ಅದರ ನೆರಳಿಗೆ
ಅಂದರೆ
ಅಮ್ಮನ ಸೆರಗಿನೊಂದಿಗೆ
ಊರಿನ ಪೀಪಲ್ ಮರದೊಂದಿಗೆ
ಯಾರದ್ದೋ ಕಾಡಿಗೆಯೊಂದಿಗೆ
ಕೊಟ್ಟ ವಚನ ನಾನು ಪೂರ್ಣಗೊಳಿಸುವೆ
ನಾನೊಂದು ದಿನ ಬರುವೆ!!
ನಾನೊಂದು ದಿನ ಬರುವೆ
ನಾನೊಂದು ದಿನ ಬರುವೆ

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಸೋನು ನಿಗಮ್, ರೂಪ್ ಸಿಂಗ್ ರಾಟೋಡ್
ಸಂಗೀತ : ಅನು ಮಲಿಕ್
ಚಿತ್ರ :ಬಾರ್ಡರ್ 


sandese aate hai hame tadapaate hai
jo chitthi aati hai vo puchhe jaati hai
ki ghar kab aa_oge likho kab aa_oge
ki tum bin ye ghar sunaa sunaa hai

kisi dilavaali ne kisi matavaali ne
hame khat likhaa hai ye hamase puchhaa hai
kisi ki saanso ne kisi ki dhadakan ne
kisi ki chudi ne kisi ke kagan ne
kisi ke kajare ne kisi ke gajare ne
mahakati subaho ne machalati shaamo ne
akeli raato me adhuri baato ne
tarasati baaho ne
aur puchhaa hai tarasi nigaaho ne
ki ghar kab aa_oge likho kab aa_oge
ki tum bin ye dil sunaa sunaa hai
sadese aate hai

muhabbat vaalo ne hamaare yaaro ne
hame ye likhaa hai ki hamase puchhaa hai
hamaare gaavo ne aam ki chhaavo ne
puraane pipal ne barasate baadal ne
khet khaliyaano ne hare maidaano ne
basanti melo ne jhumati belo ne
lachakate jhulo ne dahakate phulo ne
chatakati kaliyo ne
aur puchhaa hai gaav ki galiyo ne
ki ghar kab aa_oge likho kab aa_oge
ki tum bin gaav sunaa sunaa hai
sadese aate hai

kabhi ek mamataa ki pyaar ki gagaa ki
jo chitthi aati hai saath vo laati hai
mere din bachapan ke khel vo aagan ke
vo saayaa aachal kaa vo tikaa kaajal kaa vo
lori raato me vo narami haatho me
vo chaahat aankho me ve chitaa baato me
bigadanaa upar se muhabbat adar se
kare vo devi maan
yahi har khet me puchhe meri maan
ki ghar kab aa_oge
ki tum bin aagan sunaa sunaa hai

ai gujarane vaali havaa bataa
meraa itanaa kaam karegi kyaa
mere gaav jaa mere dosto ko salaam de
mere gaav me hai jo vo gali
jahaa rahati hai meri dilarubaa
use mere pyaar kaa jaam de
vahaa thodi dur hai ghar meraa
mere ghar me hai meri budhi maan
meri maan ke pairo ko chhu use usake bete kaa naam de

ai gujarane vaali havaa zaraa
mere dosto meri dilarubaa meri maan ko meraa payaam de
unhe jaa ke tu ye payaam de
mai vaapas aa_ugaa phir apane gaav me
usi ki chhaav me ki maan ke aanchal se
gaav ki pipal se kisi ke kaajal se
kiyaa jo vaadaa hai vo nibhaa_ugaa
mai ek din aa_ugaa
www.youtube.com/watch?v=uMkPweupmBo S

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...