Sunday, February 21, 2021

ಮೆಲ್ಲ ಮೆಲ್ಲನೆ ಸಾಗು ಜೀವನ

 


Photo :Google

ಮೆಲ್ಲ ಮೆಲ್ಲನೆ ಸಾಗು ಜೀವನ, 

ಕೆಲವು ಋಣ ತೀರಿಸಲಿದೆ ಬಾಕಿ,

-

ಕೆಲವು ನೋವನ್ನು ಅಳಿಸಲಿದೆ, 

ಕೆಲವು ಕರ್ತವ್ಯ ನಿಭಾಯಸಲಿದೆ,

-

ನಿನ್ನ ಈ ವೇಗದ ನಡೆಯಿಂದ 

ಕೆಲವರು ಮುನಿಸಿಕೊಂಡರು, 

ಕೆಲವರು ದೂರವಾದರು,

-

ಮುನಿಸಿದವರನ್ನು ನಗಿಸಲಿದೆ ಬಾಕಿ, 

ಅಳುವವರನ್ನು ಸಂತೈಸಲಿದೆ ಬಾಕಿ,

-

ಕೆಲವು ಅಪೇಕ್ಷೆ ಅಪೂರ್ಣವಾಗಿದೆ, 

ಕೆಲವು ಕೆಲಸ ಈಗ ಇನ್ನು ಮಹತ್ವಪೂರ್ಣವಾಗಿದೆ,

-

ಹೃದಯದಲ್ಲಿಯೇ ಮಡಿದ ಬಯಕೆಗಳು, 

ಅದನ್ನೆಲ್ಲ ಹೂಳುವುದಿದೆ ಬಾಕಿ,

-

ಕೆಲವು ಸಂಬಂಧ ಕೂಡಿ ಮುರಿಯಿತು, 

ಕೆಲವು ಸಂಬಂಧ ಕೂಡುವ ಮೊದಲೇ ಬಿಟ್ಟೋಯಿತು, 

ಆ ಮುರಿದೋದ, ಬಿಟ್ಟೋದ ಸಂಬಂಧದ ಗಾಯಗಳನ್ನು ಅಳಿಸಲಿದೆ ಬಾಕಿ,

-

ನೀನು ಮುಂದೆ ಸಾಗು, 

ನಾನು ಬರುತ್ತೇನೆ, 

ನಿನ್ನನ್ನು ಬಿಟ್ಟು ಬದುಕಿಕೊಳ್ಳುವೆನೇ?

-

ಈ ಉಸಿರಲಿ ಯಾರ ಹಕ್ಕು ಇದೆಯೋ, 

ಅವರಿಗೆ ವ್ಯಕ್ತಪಡಿಸಲಿದೆ ಬಾಕಿ,

-

ಮೆಲ್ಲ ಮೆಲ್ಲನೆ ಸಾಗು ಜೀವನ, 

ಕೆಲವು ಋಣ ತೀರಿಸಲಿದೆ ಬಾಕಿ!!


ಮೂಲ : ಗುಲ್ಜಾರ್ 

ಅನುವಾದ : ಹರೀಶ್ ಶೆಟ್ಟಿ, ಶಿರ್ವ

Saturday, February 6, 2021

ಬಳೆಗಾರ


Photo: Google


ಬಳೆಗಾರ!

ತೋರಿಸು ನನಗೆ ನವೀನ ನವೀನ ಬಳೆಗಳನ್ನು, 

ತೊಡಿಸು ನನಗೆ ಈ ಸುಂದರ ಸುಂದರ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು,

-

ಕನಸು ಕಟ್ಟುವೆ ನಾನು ಈ ರಂಗು ರಂಗಿನ ಬಳೆಗಳಂತೆ,

 ಮುರಿಯದಿರಲಿ ಇದು ಮಾಮೂಲಿ ಗಾಜಿನಂತೆ, 

ಹೊಸ ಬಾಳು ಶುರುವಾಗಲಿದೆ ಇನ್ನು,

ತೊಡಿಸು ನನಗೆ ಗಟ್ಟಿಮುಟ್ಟಾದ ಬಳೆಗಳನ್ನು,

-

ಆಡುತ್ತಾ ಓಡಾಡುತ್ತಿದ್ದ ಈ ಊರು ಅಪರಿಚಿತ ಆಗಲಿದೆ ಇನ್ನು, 

ಹೊಸ ಊರಲ್ಲಿ ದೊಡ್ಡ ಮನೆಯಲ್ಲಿ ಇರುವೆ ನಾನಿನ್ನು,

ಬಳೆಗಾರ ನಂತರ ಬಾ ನನ್ನ ಹೊಸ ಊರಿಗೆ ನೀನು, 

ಬಂದು ಕೊಡುತ್ತಿರು ನನಗೆ ನನ್ನ ತವರಿನ ಸುದ್ಧಿಯನ್ನು,

-

ಆದರೆ ಬಳೆಗಾರ!! 

ಹೇಗೆ ಮರೆಯಲಿ ನನ್ನ ಹುಟ್ಟೂರನ್ನು, 

ನನ್ನನ್ನು ಕೊಂಡಾಡಿ ಬೆಳೆಸಿದ ಈ ಮಣ್ಣನ್ನು, 

ಹೇಗೆ ಮರೆಯಲಿ ಉಸಿರಲ್ಲಿ ನೆಲೆಸಿದ ಇಲ್ಲಿಯ ಮಲ್ಲಿಗೆಯ ಕಂಪನ್ನು,

ಮರೆಯಲಾರೆ ನಾನು ನನಗೆ ವೇದನೆ ನೀಡಿದ ಇಲ್ಲಿಯ ಕಲ್ಲು ಮುಳ್ಳುಗಳನ್ನೂ,

-

ಬಳೆಗಾರ!! 

ಪರ ಊರಲ್ಲಿ ನೋವಾಗಿ ಅತ್ತರೆ ಸಿಗದು ಅಮ್ಮನ ಸೆರಗು ನನಗೆ, 

ಸೋತು ಹೋದಾಗ ಸಿಗದು ಮಲಗಲು ಅಮ್ಮನ ಮಡಿಲು ನನಗೆ, 

ಕೋಪ ಬಂದಾಗ ನನ್ನ ಕೋಪ ತಣಿಸಲು ಸಿಗದು ಅಪ್ಪನ ವಾತ್ಸಲ್ಯಪೂರ್ಣ ಬಾಹುಗಳ ಆಲಿಂಗನ ನನಗೆ, 

ಅಲ್ಲಿ ಹೇಗೆ ಸಂತೈಸಲಿ ನಾನು ನನ್ನ ಹೃದಯವನ್ನು,

-

ಬಳೆಗಾರ!! 

ಮದುವೆ ಆಗಲೇ ಬೇಕೇನು? 

ಗಂಡನ ಮನೆಗೆ ಹೋಗಲೇಬೇಕೇನು? 

ಅವರ್ಯಾಕೆ ಇಲ್ಲಿ ನನ್ನ ಮನೆಗೆ ಬಂದು ಇರಬಾರದು? 

ಯಾಕೆ ಹೆಣ್ಣು ಮಕ್ಕಳೇ ಈ ನೋವು ಶಿಕ್ಷೆ ಸಹಿಸಬೇಕು?

-

ಬಳೆಗಾರ! 

ನಿನ್ನ ಗಾಜಿನ ಬಳೆ ಮುರಿಯದಿರಲಿ, 

ಈ ಬಳೆಯಲಿ ಸದಾ ನನ್ನ ತವರೂರ ನೆನಪಿರಲಿ, 

ಬಳೆಗಾರ ತೊಡಿಸು ನನಗೆ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು!!!


by ಹರೀಶ್ ಶೆಟ್ಟಿ, ಶಿರ್ವ

Thursday, February 4, 2021

ಇಂದು ಹೋಗುವ ಹಠ ಮಾಡದಿರು



ಇಂದು ಹೋಗುವ ಹಠ ಮಾಡದಿರು, 

ಹೀಗೆಯೇ ಸನಿಹ ಕೂತುಕೊಂಡಿರು,

ಹೀಗೆಯೇ ಸನಿಹ ಕೂತುಕೊಂಡಿರು,

ಇಂದು ಹೋಗುವ ಹಠ ಮಾಡದಿರು, 

-

ಅಯ್ಯೋ ಸತ್ತು ಹೋಗುವೆ, 

ನಾನಂತೂ ಮರೆಯಾಗುವೆ, 

ಇಂತಹ ಮಾತನ್ನು ನುಡಿಯದಿರು, 

ಇಂದು....

-

ನೀನೆ ಯೋಚಿಸು ಸ್ವಲ್ಪ, 

ಯಾಕೆ ನಿನಗೆ ತಡೆಯಬಾರದೆಂದು, 

ಪ್ರಾಣ ಹೋಗುತ್ತದೆ, 

ನೀನೆದ್ದು ಹೋಗುವಾಗ

ಪ್ರಾಣ ಹೋಗುತ್ತದೆ, 

ನೀನೆದ್ದು ಹೋಗುವಾಗ, 

ನಿನಗೆ ನಿನ್ನಾಣೆ ಇನಿಯ, 

ನನ್ನ ಮಾತು ಒಪ್ಪಿಕೊಳ್ಳು, 

ಇಂದು....

-

ಸಮಯದ ಬಂಧನದಲಿ ಜೀವನವಿದೆ ಆದರೆ, 

ಕೆಲವು ಕ್ಷಣಗಳು ಇರುವುದಿದೆ ಬಿಡುವಿನ, 

ಕೆಲವು ಕ್ಷಣಗಳು ಇರುವುದಿದೆ ಬಿಡುವಿನ,

ಇದನ್ನು ಕಳೆದು ನನ್ನ ಇನಿಯ, 

ಜೀವನಪರ್ಯಂತ ಹಾತೊರೆಯದಿರು, 

ಇಂದು....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: : ಫಯ್ಯಾಜ್ ಹಾಶ್ಮಿ

-आज जाने की ज़िद ना करो

यूँ ही पहलु में बैठे रहो

यूँ ही पहलु में बैठे रहो

आज जाने की ज़िद ना कर

हाय मर जाएंगे

हम तो लुट जाएंगे

ऐसी बातें किया ना करो

आज जाने की ज़िद ना करो

तुम ही सोचो ज़रा

क्यूँ ना रोकें तुम्हें

जान जाती है जब

उठ के जाते हो तुम

जान जाती है जब

उठ के जाते हो तुम

तुमको अपनी क़सम जानेजां

बात इतनी मेरी मान लो

आज जाने की ज़िद ना करो

वक़्त की कैद में ज़िन्दगी है मगर

चंद घड़ियां यही हैं जो आज़ाद है

चंद घड़ियां यही हैं जो आज़ाद है

इनको खो कर मेरी जानेजाँ

उम्र भर ना तरसते रहो

आज जाने की ज़िद ना करो

ಏಕಾಂಗಿ ನಾನು

 

Photo:Google

https://youtu.be/IkrLvHqMv4A


ಏಕಾಂಗಿ ನಾನು, ಬಾ ನೀನು,ನೀನೆಲ್ಲಿರುವೆ , 

ಎಲ್ಲಿ ಕೂಗಿ ಕರೆಯಲಿ ನಿನಗೆ, ಎಲ್ಲಿರುವೆ,

-

ನಿನ್ನನ್ನು ನಾ ಹುಡುಕುತ್ತಿರುವೆ, 

ನನ್ನನ್ನು ಹೃದಯ ಹುಡುಕುತ್ತಿದೆ, 

ಈಗ ಯಾವುದೇ ತಾಣವಿಲ್ಲ, 

ಯಾವುದೇ ದಾರಿಯಿಲ್ಲ, 

ಏಕಾಂಗಿ..

-

ಈ ಏಕಾಂತದ ಕ್ಷಣಗಳು, 

ಅದರ ಮೇಲೆ ನಿನ್ನ ಅಳಲು, 

ಬದುಕು ಕಷ್ಟ ಇನ್ನು, 

ಹೇಳು ಏನು ಮಾಡಲಿ ನಾನು, 

ಏಕಾಂಗಿ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಶಮೀಮ್ ಜೈಪುರಿ, 

ಸಂಗೀತ: ಕಲ್ಯಾಣಜಿ ಆನಂದ್ ಜಿ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ : ರಾಜ್

-

अकेले हैं चले आओ जहाँ हो -2
कहाँ आवाज़ दें तुमको कहाँ हो
अकेले हैं चले आओ …

तुम्हें हम ढूँढते हैं हमें दिल ढूँढता है -2
न अब मंज़िल है कोई न कोई रास्ता है
अकेले हैं चले आओ …

ये तन्हाई का आलम और उस पर आपका ग़म -2
न जीते हैं न मरते बताओ क्‌या करें हम
अकेले हैं चले आओ …

Wednesday, February 3, 2021

ನನ್ನೊಲವೆ ಈ ಜಗ ಮುಗಿಯಬಹುದು



Photo: google

ಹಾಡಿನ ಕೊಂಡಿ: https://youtu.be/AnC2Nx9gQWU

ನನ್ನೊಲವೆ ಈ ಜಗ ಮುಗಿಯಬಹುದು, 

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನ ದೃಷ್ಟಿಯಂತೂ ಮೊರೆ ನೀಡುತ್ತಿದೆ,

ನಿನ್ನ ಹೃದಯವೂ ಪ್ರಿಯೇ ನಿನ್ನನ್ನು ದೂರುತ್ತಿರಬಹುದು,

ನನ್ನೊಲವೆ....

-

ನಿನ್ನ ದ್ವಾರಕ್ಕೆ ನಾನು ಬರಬೇಕಿತ್ತು ಪ್ರಿಯೆ, 

ಪ್ರೀತಿಯ ಹಾಡನ್ನು ಹಾಡಬೇಕಿತ್ತು ಪ್ರಿಯೆ, 

ಮುನಿಸಿ ನೀನು ಕೇಳದೆ ಇರುತ್ತಿದ್ದಿ ಪ್ರಿಯೆ,

ಮತ್ತೆ ಬಂದಿರುವೆ ಇಲ್ಲಿಗೆ 

ಹೇಳಲು ನಿನಗೆ  ನಾನು ಮರುಳು ಪ್ರೇಮಿ,

ಇಂದು ಈ ಹುಚ್ಚು ವ್ಯಾಮೋಹ ಮುಗಿಯಬಹುದು, 

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....


ನನ್ನ ಹಾಗೆ ನೀನೂ ದುಃಖಿಸಲಿ, 

ನೀನೂ ಯಾರಿಗೂ ಪ್ರೀತಿಸಲಿ, 

ಹಾಗು ಅವನು ನಿನ್ನನ್ನು ತಿರಸ್ಕರಿಸಲಿ,

ನೀನು ಪ್ರಿಯೇ ಸತಾಯಿಸಿದೆ ನನಗೆ, 

ಇದು ಎಂದೂ ಮರೆಯಬೇಡ, 

ನಿನ್ನ ಮೇಲೂ ಸೌಭಾಗ್ಯ ಒದಗದು,

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....


ನನ್ನೊಲವೆ.... 

ಹೆಸರು ನನ್ನ ಕರೆಯುವೆ ನಿನ್ನ ಈ ತುಟಿಯಿಂದ, 

ಪ್ರಾಣ ಈ ಮುರಿದ ಹೃದಯದಿಂದ ಹೊರಟುಹೋಗುವಾಗ, 

ನನ್ನೊಲವೆ...


ನನ್ನ ಪ್ರಿಯೆಯ ದ್ವಾರದಿಂದ, 

ನಾಳೆಗೆ ನೀನು ಸಾಗುತ್ತಿದ್ದರೆ ಅಲ್ಲಿಂದ, 

ಹೇಳು ಅವಳಿಗೆ ನನ್ನ ವತಿಯಿಂದ, 

ಹೆಸರು ನಿನ್ನ ಕರೆದ, ಬದುಕಿರುವ ತನಕ, 

ಓ ದೀಪವೇ ನಿನ್ನ ಪತಂಗೆ,

ನಿನಗೆ ಅವನಿಂದ ಈಗಲೂ ದ್ವೇಷ ಇರಬಹುದು,

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ : ಆನಂದ್ ಬಕ್ಷಿ 

ಹಾಡಿದವರು: ಕಿಶೋರ್ ಕುಮಾರ್ 

ಸಂಗೀತ: ಲಕ್ಷ್ಮಿಕಾಂತ್ ಪ್ಯಾರೆಲಾಲ 

ಚಿತ್ರ: ಮಿಸ್ಟರ್ ಎಕ್ಷ ಇನ್ ಬಾಂಬೆ

-

मेरे महबूब क़यामत होगी

आज रुसवा तेरी गलियों में मोहब्बत होगी

मेरी नज़रें तो गिला करती हैं

तेरे दिल को भी सनम तुझसे शिकायत होगी


तेरी गली मैं आता सनम

नगमा वफ़ा का गाता सनम

तुझसे सुना ना जाता सनम

फिर आज इधर आया हूँ मगर

ये कहने मैं दीवाना

ख़त्म बस आज ये वहशत होगी

आज रुसवा...


मेरी तरह तू आहें भरे

तू भी किसी से प्यार करे

और रहे वो तुझसे परे

तूने ओ सनम ढायें हैं सितम

तो ये तू भूल न जाना

के ना तुझपे भी इनायत होगी

आज रुसवा...


II

मेरे महबूब...

नाम निकलेगा तेरा ही लब से

जान जब इस दिल-ए-नाकाम से रुखसत होगी

मेरे महबूब...


मेरे सनम के दर से अगर

बाद-ए-सबा हो तेरा गुज़र

कहना सितमगर कुछ है खबर

तेरा नाम लिया जब तक भी जिया

ऐ शमा तेरा परवाना

जिससे अब तक तुझे नफरत होगी

आज रुसवा...


ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...