Tuesday, April 1, 2014

ನೀಲ ಗಗನದ ನೆರಳಲಿ

ನೀಲ ಗಗನದ ನೆರಳಲಿ
ದಿನ ರಾತ್ರಿಯ ಮಿಲನವಾಗುತ್ತದೆ
ಹೃದಯ ಹಕ್ಕಿಯಾಗಿ ಹಾರುತ್ತದೆ
ನಾನೆಲ್ಲಿಯೋ ಕಳೆದೋಗುತ್ತೇನೆ
ನೀಲ ಗಗನದ....

ಯಾವುದೇ ಹೂವು ನಗುವಾಗ
ಇನಿಯನ ಸುಗಂಧ ಬರುತ್ತದೆ
ಅಂಗ ಅಂಗದಲಿ ಸುಳಿಯಂತೆ ಓಡುತ್ತದೆ
ನಿರ್ಮಲ ಹರಿತ ಜಲ ತಳ ಎಲ್ಲಿ ಪಡೆಯುತ್ತದೆ
ನೆನಪ ನದಿ ಉದ್ಭವಿಸುತ್ತದೆ
ಪ್ರತಿಯೊಂದು ತರಂಗದಲಿ
ನಾನು ತೇಲಿ ಹೋಗುತ್ತೇನೆ
ನೀಲ ಗಗನದ....

ಹೇಳುತ್ತದೆ ಸಮಯದ ಬೆಳಕ ಕಿರಣ
ಒಂದು ಚಂದ್ರ ಸಹ ಬರಲ್ಲಿದ್ದಾನೆ
ಈ ಜ್ಯೋತಿಯ ದಾಹದಲ್ಲಿದ ಕಂಗಳಿಗೆ
ಕಣ್ಣಿಂದ ಕುಡಿಸಲ್ಲಿದ್ದಾನೆ
ಎಲೆಗಳು ಗಾಳಿಯಲಿ ಚಲಿಸುವಾಗ
ನಾನು ವಿಸ್ಮಯಗೊಂಡು ದಾರಿ ಕಾಣುತ್ತೇನೆ
ನೀಲ ಗಗನದ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅಮ್ರಪಾಲಿ

नील गगन की छाँव में दिन रैन गले से मिलते हैं
दिल पंछी बन उड़ जाता हैं, हम खोये खोये रहते हैं

जब फूल कोई मुस्काता हैं, प्रीतम की सुगंध आ जाती हैं
नस नस में भँवर सा चलता हैं, मदमाती जल न तल पाती हैं
यादों की नदी घिर आती हैं, हर मौज में हम तो बहते हैं

कहता हैं समय का उजीयारा एक चन्द्र भी आनेवाला हैं
इन ज्योत की प्यासी अखियन को अंखियों से पिलानेवाला हैं
जब पात हवा से बजते हैं, हम चौंक के राहें तकते हैं
http://www.youtube.com/watch?v=LOaTT1McMPw

2 comments:

  1. ಶೈಲೇಂದ್ರ ಅವರ ಅತ್ಯುತ್ತಮ ಸಾಹಿತ್ಯ. ದ್ವಾರಕಾ ದಿವಾಚಾ ಅವರ ಛಾಯಾಗ್ರಹಣ. ಅಮೋಘ ಅಮ್ರಪಾಲಿ.

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್, ತಮ್ಮ ದಿನನಿತ್ಯದ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...