Wednesday, April 16, 2014

ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ

ಹೌದು
ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ
ಅದೆಷ್ಟೋ ಅಡಚಣೆ 
ಅದೆಷ್ಟೋ ಕಿರಿಕಿರಿ 
ಪಯಣಿಗರ ಓಟ 
ವಾಹನಗಳ ಅರ್ಭಟ 
ಪಯಣ ದೀರ್ಘ
ಕಲ್ಲು ಮುಳ್ಳಿನ ಮಾರ್ಗ 
ಸಾಕೆನಿಸುತ್ತದೆ

ಆದರೆ ಬದುಕು
ಆಶ್ಚರ್ಯ ಭರಿತ
ಇಂದಿನ ಕಣ್ಣೀರೆ
ನಾಳೆಯ ಸುಖದ ಸಂಕೇತ
ಪ್ರಸ್ತುತ ಕಷ್ಟದ ಬೆವರು
ಮುಂದಿನ ಸುದಿನದ
ಸುಗಂಧಿತ ಪನ್ನೀರು
ಸತತ ಪ್ರಯತ್ನವೇ ಜೀವನ
ನಿಲ್ಲುವುದು ಸೋಲಿನ ಲಕ್ಷಣ

ಆದರೆ, ಹೌದು
ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ

by ಹರೀಶ್ ಶೆಟ್ಟಿ,ಶಿರ್ವ

1 comment:

  1. ಆದರೂ ಸೂತ್ರಧಾರ ನಡೆಸಿದಂತೆ ನಮ್ಮ ನಟನಾ ಚಾತುರ್ಯ!

    ReplyDelete

ಸಿದ್ಧಿದಾತ್ರಿ