Wednesday, April 16, 2014

ಎರಡು ಕಂಗಳು ಮತ್ತು ಕತೆವೊಂದು

ಎರಡು ಕಂಗಳು ಮತ್ತು ಕತೆವೊಂದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು

ಸಣ್ಣದು ಎರಡು ಝರಿಯಲಿ
ಅದು ಹರಿಯುತ್ತಿರುತ್ತದೆ-೨
ಯಾರು ಕೇಳಲಿ ಕೇಳದಿರಲಿ
ಹೇಳುತ್ತಿರುತ್ತದೆ
ಕೆಲವೊಂದನ್ನು ಬರೆದು
ಕೆಲವೊಂದನ್ನು ನುಡಿದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಹಲವೊಂದು ತಿಳಿದದ್ದು
ಹಲವೊಂದು ಹೊಸತು-೨
ಎಲ್ಲಿ ಕಣ್ಣೀರು ನಿಲ್ಲುತ್ತದೋ
ಅಲ್ಲೇ ಪೂರ್ಣವಾಗುವುದು
ಹೊಸತಾಗಿದೆ ಆದರೂ ಹಳೆದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಒಂದು ಮುಗಿದರೆ
ಇನ್ನೊಂದು ನೆನಪಾಗುತ್ತದೆ
ತುಟಿಯಲಿ ಮತ್ತೆ ಮರೆತ
ಮಾತು ಬರುತ್ತದೆ
ಎರಡು ಕಂಗಳ ಕತೆ ಇದು
ಸ್ವಲ್ಪವೇ ಮುಗಿಲು
ಸ್ವಲ್ಪವೇ ನೀರು
ಮತ್ತು ಕತೆವೊಂದು
ಎರಡು ಕಂಗಳು ಮತ್ತು ಕತೆವೊಂದು

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆರತಿ ಮುಖರ್ಜೀ
ಸಂಗೀತ : ಆರ್ . ಡೀ . ಬರ್ಮನ್
ಚಿತ್ರ : ಮಾಸೂಮ್

do naina aur ek kahanee
thoda sa badal, thoda sa panee aur yek kahanee

chhotee see do jilon me, woh bahatee rahatee hai
koi sune ya na sune kahatee rahatee hai
kuchh likh ke aur kuchh jubanee

thodee sai hain janee hui, thodee see nayee
jaha ruke aansu, wahee puree ho gayee
hai toh nayee fir bhee hain puranee

yek khatm ho toh, dusaree yad aa jatee hai
hothhon pe fir bhulee hui, bat aa jatee hai
do naino kee hain yeh kahanee
http://www.youtube.com/watch?v=glWOVwU3uss#aid=P9QQ7E3B0MQ

1 comment:

  1. ಗುಲ್ಜಾರರ ಆಣಿ ಮುತ್ತು.
    ತಮ್ಮ ಭಾವಾನುವಾದವು ಜೈ.
    ಮಸೂಮ್ ಚಿತ್ರಕ್ಕೆ ಪ್ರವೀಣ್ ಭಟ್ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...