Showing posts with label ಅವನಿಲ್ಲದೆ. Show all posts
Showing posts with label ಅವನಿಲ್ಲದೆ. Show all posts

Thursday, April 4, 2013

ಹೇ ಪಾತರಗಿತ್ತಿ

ಹೇ ಪಾತರಗಿತ್ತಿ,
ಹದಿನಾಲ್ಕು ದಿವಸ ಬದುಕುವ 
ನಿನ್ನ ಜೀವನದಂತೆ 
ಚೈತನ್ಯ ತುಂಬಿದ 
ನಿನ್ನ 
ಈ ಚಿತ್ರ
ಅವನು
ತುಂಬಾ
ಇಷ್ಟಪಡುತ್ತಿದ್ದ
ಈಗ ಅವನಿಲ್ಲ ಆದರೆ..............


Wednesday, February 29, 2012

ಆಸೆ ಆಕಾಂಕ್ಷೆ

ಅವನಿಲ್ಲದೆ......
ಮನಸ್ಸಲಿಲ್ಲ ಈಗ ಆಸೆ ಆಕಾಂಕ್ಷೆ
ಅವನಿಲ್ಲದೆ ಜೀವನ ಒಂದು ಶಿಕ್ಷೆ
by ಹರೀಶ್ ಶೆಟ್ಟಿ, ಶಿರ್ವ

Tuesday, February 28, 2012

ಅಡುಗೆ ಮನೆಯಲ್ಲಿ

ಅವನಿಲ್ಲದೆ .......
ಈಗ ಊಟ ತಿಂಡಿಯ ನನಗಿಲ್ಲ ಗೋಚರ
ಅವನಿಲ್ಲದೆ ಅಡುಗೆ ಮನೆಯಲ್ಲೂ ಬೇಸರ
by ಹರೀಶ್ ಶೆಟ್ಟಿ ,ಶಿರ್ವ

Monday, February 27, 2012

ಅವನ ಹೆಸರು

ಅವನಿಲ್ಲದೆ....
ಮುಂಜಾನೆಯ ಜಾವದಲೂ ಮನೆಯಲಿ ಪಸರಿದೆ ಶಾಂತಿ
ಹಕ್ಕಿಗಳ ಚಿಲಿಪಿಲಿಯಲ್ಲೂ ಅವನ ಹೆಸರು ಕರೆಯುವ ಭ್ರಾಂತಿ
by ಹರೀಶ್ ಶೆಟ್ಟಿ, ಶಿರ್ವ

Sunday, February 26, 2012

ಅವನಿಲ್ಲದೆ

ಅವನಿಲ್ಲದೆ......
ಈಗ ಹಗಲು ಇರುಳು ನನಗಿಲ್ಲ ಶೃಂಗಾರ
ಅವನಿಲ್ಲದೆ ಮನಸ್ಸು ಹೃದಯ ಭಾರ ಭಾರ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ