Showing posts with label ಮುತ್ತಿನಂತ ಮಾತುಗಳು. Show all posts
Showing posts with label ಮುತ್ತಿನಂತ ಮಾತುಗಳು. Show all posts

Thursday, April 4, 2013

ಶ್ರೇಷ್ಟನಾಗಲು

ಕೆಲವರು ಹೊಗಳಿ ಶ್ರೇಷ್ಟನಾಗಲು ಪ್ರಯತ್ನಿಸುತ್ತಾರೆ, ಕೆಲವರು ತೆಗಳಿ ಶ್ರೇಷ್ಟನಾಗಲು ಪ್ರಯತ್ನಿಸುತ್ತಾರೆ. ಒಟ್ಟಾರೆ ಬಹುತೇಕ ಜನರಲ್ಲಿ ನಾನೇ ಎಂಬ ಅಹಂ ಭಾವ.
by ಹರೀಶ್ ಶೆಟ್ಟಿ, ಶಿರ್ವ

Thursday, January 17, 2013

ಅಪ್ಪ

ಇಂದು 
ಸಾವಿರಾರು ತರಹದ 
ಬಿಸ್ಕೆಟ್ ಇದೆ ಮಾರ್ಕೆಟಲ್ಲಿ 
ಆದರೆ ಬಾಲ್ಯದಲ್ಲಿ 
ಅಪ್ಪ ಸಂತೆಯಿಂದ ಬರುವಾಗ 
ಪೇಪರಲ್ಲಿ ಮಡಚಿ ತರುವ 
ಆ ಎರಡು ತುಂಡು 
ಬಿಸ್ಕೆಟಿನ ರುಚಿ 
ಜಗದ ಯಾವ ಬಿಸ್ಕೆಟ್ ತಿಂದರು ಸಿಗದು 
by ಹರೀಶ್ ಶೆಟ್ಟಿ, ಶಿರ್ವ

Thursday, November 29, 2012

ನಮಗೆ ನಾವೇ ಪ್ರೇರಣೆ

ನಮಗೆ ನಾವೇ ಪ್ರೇರಣೆ
ನಮ್ಮ ತಪ್ಪುಗಳೆ ನಮ್ಮ ಮಾರ್ಗದರ್ಶಕ
ನಮ್ಮ ಆತ್ಮ ಸಂತುಷ್ಟಿಯೆ ನಮ್ಮ ಪ್ರಶಂಸೆ 
ನಮ್ಮ ಕೈಗಳೆ ನಮ್ಮ ಸೊತ್ತು 
ನಮ್ಮ ದೇಹವೆ ನಮ್ಮ ಸಾಮ್ರಾಜ್ಯ
ನಮ್ಮ ನಾಲಗೆ ನಮ್ಮ ಶಸ್ತ್ರ 
ನಮ್ಮ ಹೃದಯದ ನುಡಿಯೆ ಸತ್ಯ ನುಡಿ 
ನಮ್ಮ ಕಣ್ಣೀರು ನಮ್ಮ ನೋವು 
ನಮ್ಮ ಭಯ ನಮ್ಮ ರೋಗ 
ನಮ್ಮ ಧೈರ್ಯವೆ ನಮ್ಮ ಔಷದಿ 
ನಮ್ಮ ಛಲ ನಮ್ಮ ಗೆಲುವು
ನಮ್ಮ ಆಲಸ್ಯ ನಮ್ಮ ಸೋಲು 
ನಮ್ಮ ಹಠ, ಕೋಪ ನಮ್ಮ ಶತ್ರು 
ನಮ್ಮ ತಾಳ್ಮೆ ನಮ್ಮ ಮಿತ್ರ 
by ಹರೀಶ್ ಶೆಟ್ಟಿ, ಶಿರ್ವ

Sunday, November 25, 2012

ನಿನ್ನ ಉತ್ಸಾಹ

ಒಹ್ ಮನವೆ
ಅವಸರಿಸದಿರು 
ನಿನ್ನ ಉತ್ಸಾಹ 
ನಿನ್ನ ವೈರಿ 
ಆಗದಿರಲಿ 
ನಿನ್ನ ಕಾರ್ಯದಕ್ಷತೆಯ ಮೇಲೆ 
ಶಂಕೆ ಮೂಡದಿರಲಿ 
by ಹರೀಶ್ ಶೆಟ್ಟಿ, ಶಿರ್ವ

Monday, November 19, 2012

ದುಷ್ಟತೆ

ಸರ್ಪ ಕಾರುವುದು ವಿಷ ವಿನಃ ಅಮೃತವಲ್ಲ 
ಕಹಿ ಬೇವು ಸಿಹಿ ರುಚಿ ನೀಡದು 
ಕಲ್ಮಶ ತುಂಬಿದ ಹೃದಯದಿಂದ ಪ್ರೀತಿ ಒಸರದು 
ಕಾಗೆ ಕೋಗಿಲ ಸ್ವರದಲಿ ಹಾಡಲಾರದು
ಪಾಳು ಬಾವಿಯಿಂದ ನೀರು ಸಿಗದು 
ನಂಜು ಬಸಿರು ಮಾಡಿದಲ್ಲಿ ಸಹೃದಯತೆ ಹುಟ್ಟದು
by ಹರೀಶ್ ಶೆಟ್ಟಿ, ಶಿರ್ವ

Monday, November 12, 2012

ಚಿಂತೆ

ಚಿಂತೆಯುಕ್ತ ಜೀವನ ವಿಷದ ಪೊಟ್ಟಣ , ಚಿಂತೆಮುಕ್ತ ಜೀವನ ಸಿಹಿ ಅಮೃತ ಸಮಾನ...

Sunday, November 11, 2012

ಧನ ತೇರಸ್

ಚಿನ್ನ ಖರೀದಿ ಮಾಡುವುದಕ್ಕಿಂತ ಚಿನ್ನದಂತ ಮುದ್ದು ಅನಾಥ ಮಕ್ಕಳಿಗೆ ವಸ್ತ್ರ, ಆಹಾರ ನೀಡುವುದು ಇಂದಿನ ಪವಿತ್ರವಾದ ದಿನ "ಧನ ತೇರಸ್" ದಿವಸದ ಉತ್ತಮ ಸದುಪಯೋಗ

Thursday, November 1, 2012

ಗೆಳೆತನ

ಗೆಳೆತನಕ್ಕೆ 
ಜಾತಿ ಇಲ್ಲ 
ಧರ್ಮ ಇಲ್ಲ 
ಗೆಳೆತನ ಒಂದು ಪವಿತ್ರ ಸಂಬಂಧ 
ಅದಕ್ಕೆ ಬೇಡ ಯಾವುದೇ ಜಾತಿ ಧರ್ಮದ ಬಂಧ 
by ಹರೀಶ್ ಶೆಟ್ಟಿ, ಶಿರ್ವ 


Thursday, July 28, 2011

ಮುತ್ತಿನಂತ ಮಾತುಗಳು


ಕಪ್ಪೆಯ ಬೆಟ್ಟದ ತುದಿಗೆ ತಲುಪುವ ಸ್ಪರ್ಧೆ ಜರಗಿತು.
ಎಲ್ಲಾ ಕಪ್ಪೆಗಳು, ಇದು ಅಸಾಧ್ಯ ಎಂದು ಕೂಗಿದರು, ಆದರೆ ಒಂದು ಕಪ್ಪೆ ಬೆಟ್ಟದ ತುದಿಗೆ ತಲುಪಿತು.
ಹೇಗೆ?
ಅ ಕಪ್ಪೆ ಕಿವುಡ ಆಗಿತ್ತು.
*ನಕಾರಾತ್ಮಕ ಟೀಕೆ ಟೀಕೆ ಟಿಪ್ಪಣಿಗಳಿಗೆ ಕಿವುಡರಾಗಿ".
-------------------------------------------------
 
ಅಳಿಲು ಬೀಜವನ್ನು ಹೆಕ್ಕಿ ಮಣ್ಣಲ್ಲಿ ಮುಚ್ಚಿಟ್ಟು ನಂತರ ಮರೆತು ಹೋಗುವುದರಿಂದ ಈ ವಿಶ್ವದಲ್ಲಿ ಲಕ್ಷಾಂತರ ಮರಗಳು ಆಕಸ್ಮಿಕವಾಗಿ ಬೆಳೆಯುತ್ತದೆ,
"ಒಳ್ಳೆಯ ಕಾರ್ಯ ಮಾಡಿ ಹಾಗು ಮರೆತು ಬಿಡಿ" .
________________________________________________
ಅದು ನನ್ನ ,ಇದು ನಿನ್ನ , ನಮ್ಮದೇನೂ ಇಲ್ಲಿ ಇಲ್ಲ ಚಿನ್ನ
ಹೋದ ನಂತರ, ಉಳಿಯುವುದಿಲ್ಲ ಏನೂ ,ಎಲ್ಲವೂ ಸೇರುವುದು ಮಣ್ಣ

Thursday, July 14, 2011

ಪ್ರೀತಿ ವಿಶ್ವಾಸ

ಪ್ರೀತಿ ವಿಶ್ವಾಸ ಇಲ್ಲದ ಸಂಬಂಧ.........ತೂತು ಇದ್ದ ನೀರಿನ  ಮಡಕೆಯಂತೆ ....
by  ಹರೀಶ್ ಶೆಟ್ಟಿ, ಶಿರ್ವ 

ಸಿದ್ಧಿದಾತ್ರಿ