Showing posts with label ಲೇಖನ. Show all posts
Showing posts with label ಲೇಖನ. Show all posts

Sunday, January 11, 2015

ಬೆಂಗಳೂರು

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಅನುಭವ.
೧. ಹೆಚ್ಚು ಆಂಧ್ರ, ತಮಿಳ್ನಾಡಿನ ಜನರೇ ಸಿಕ್ಕಿದ್ದು, ಕನ್ನಡಿಗರು ಸಿಕ್ಕಿದ್ದು ಕಡಿಮೆ.
೨. ಬಸ್ಸಲ್ಲಿ ಯಾತ್ರೆ ಮಾಡುವುದು ಸುಲಭ ಅಲ್ಲ ಎಂದು ಮೊದಲೇ ದಿನ ತಿಳಿಯಿತು, ಜನರ ಗುಂಪು ಗುಂಪು, ಒಬ್ಬಾತನಿಗೆ ನನ್ನ ಬ್ಯಾಗ್ ತಾಗಿದಕ್ಕೆ, ಅವನು ಬ್ಯಾಗ್ ಸಮೇತ ನನ್ನನ್ನು ಆಚೆಗೆ ದೂಡಿ ಬಿಟ್ಟ, ಬಸ್ಸಿನ ಕಂಡಕ್ಟರ್ ಜೊತೆ ನಾನು ಕನ್ನಡ ಮಾತನಾಡಿದಾಗ, ಟೋಪಿ,ಸನ್ ಗ್ಲಾಸ್ ಧರಿಸಿದ ನನ್ನನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡಿ ನನಗೆ ಉತ್ತರ ನೀಡಿದ್ದು ಹಿಂದಿಯಲ್ಲಿ.
೩. ಬಸ್ಸಲ್ಲಿ ಹಚ್ಚಿದ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೪. ರೈಲ್ವೆ ನಿಲ್ದಾಣದಲ್ಲಿಯೂ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೫. ಬೆಂಗಳೂರಿನ ಹವಾಮಾನ, ದಿನಾಲೂ ಮಳೆಗಾಲದ ಹಾಗೆ, ಮೋಡ ಕವಿದ ವಾತಾವರಣ.
೬. ದಿನನಿತ್ಯ ಹೋಟೆಲಲ್ಲಿ ದೋಸೆ, ವಡ ಸಾಂಭಾರ್ ತಿಂದು ಬೋರು.
೭. ಮಾಲ್'ಗಳಲ್ಲಿ ಜನಜಂಗುಳಿ, ಗುಂಪು ಗುಂಪು ಜನರ ಸಮೂಹ, ಆದರೆ ಕನ್ನಡ ಮಾತನಾಡಿದರೆ ಜನರು ಉತ್ತರ ನೀಡುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ.
೮. ಕನ್ನಡ ಚಲನಚಿತ್ರಗಳ ಜಾಹಿರಾತು ಹಾಗು ಹೆಸರು ನೋಡಿ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ, ವಿಚಿತ್ರ ವಿಚಿತ್ರ ಹೆಸರು.
೯. ರಿಕ್ಷಾ ಅಂದರೆ ಅವರಿಗೆ ಸಣ್ಣ ಲೆಕ್ಕ ಗೊತ್ತೇ ಇಲ್ಲ, ೧೦೦/೨೦೦/೨೫೦ ಬಾಡಿಗೆ,ಕನಿಷ್ಠ ಬಾಡಿಗೆ ಅಂದರೆ ನಾನು ನೀಡಿದ್ದು ೩೦ ರೂಪಾಯಿ,ಆದರೆ ನಂತರ ನನಗೆ ತಿಳಿದದ್ದು ಆ ಸ್ಥಾನ ಅಲ್ಲಿಯೇ ಇತ್ತು, ಕ್ರಾಸ್ ಮಾಡಿ ಹೋಗಬಹುದಿತ್ತು.
೧೦. ಒಟ್ಟಾರೆ ಸಿಹಿ ಕಹಿ ಅನುಭವ, ಕೇವಲ ದೂರುವುದೇ ಸರಿಯಲ್ಲ, ಕೆಲವು ಒಳ್ಳೆಯ ಜನರೂ ಸಿಕ್ಕಿದರು ಹಾಗು ತನ್ನ ಸಹಾಯ ಹಸ್ತವನ್ನು ನೀಡಿದರು.
ಹರೀಶ್ ಶೆಟ್ಟಿ, ಶಿರ್ವ.

Monday, December 3, 2012

ವಿವಿಧ ಪ್ರತಿಕ್ರಿಯೆಗಳು

ವಿವಿಧ ಪ್ರತಿಕ್ರಿಯೆಗಳು
__________________ 
ಎಲ್ಲೆಡೆ ಪ್ರಳಯ ಪ್ರಳಯ ಎಂಬ ಭಯ 
ನನಗೆ ವಿಸ್ಮಯ 
ಈ ಜೀವನದ ಜಂಜಾಟಕ್ಕಿಂತ ಹೆಚ್ಚು ಭಯಾನಕವೆ ಈ ಪ್ರಳಯ ?
ದಿನ ನಿತ್ಯ ಸತ್ತು ಬದುಕುವ ಜೀವನಕ್ಕಿಂತ ಒಳ್ಳೆಯದಲ್ಲವೇ ಈ ಪ್ರಳಯ 
____________
ಎಲ್ಲೆಡೆ ಪ್ರಳಯ ಪ್ರಳಯ ಎಂಬ ಭಯ 
ನನಗೂ ಹೆದರಿಕೆ 
ಈ ಸುಂದರ ಜೀವನವನ್ನು ಮುಗಿಸಲು ಬರುತ್ತಿದೆ ಅಲ್ಲವೇ ಈ ಪ್ರಳಯ 
ದಿನ ನಿತ್ಯ ಜೀವನ ಆನಂದಿಸುವ ನನಗೆ ಪ್ರಳಯ ಆಗಲಿಕ್ಕಿಲ್ಲ ಎಂಬ ಆಶಯ 
_____________
ಎಲ್ಲೆಡೆ ಪ್ರಳಯ ಪ್ರಳಯ ಎಂಬ ಭಯ 
ನನಗೆ ಚಿಂತೆಯಿಲ್ಲ 
ಬಂದರೆ ಬರಲಿ ಪ್ರಳಯ 
ನನ್ನದೇನು ಹೋಗುವುದು , ನಾನು ಜೀವನ ಮರಣ ಎರಡಕ್ಕೂ ಸಿದ್ದ ಕಣಯ್ಯಾ 
_____________
ಎಲ್ಲೆಡೆ ಪ್ರಳಯ ಪ್ರಳಯ ಎಂಬ ಭಯ 
ನನಗೆ ಉದ್ವೇಗ 
ನಾನು ಗಳಿಸಿದ ಸಂಪತ್ತು ಮುಳುಗುವುದೆಂದು 
ಒಂದು ವೇಳೆ ನಿಜವಾಗಿ ಈ ಪ್ರಳಯ ಬಂದರೆ ನಾನು ಇಲ್ಲ ನನ್ನ ಸಂಪತ್ತು ಇಲ್ಲವಲ್ಲ 
by ಹರೀಶ್ ಶೆಟ್ಟಿ, ಶಿರ್ವ

Thursday, October 4, 2012

ಪ್ರೊ.ಡಾ. ಬಿ .ಎ.ವಿವೇಕ ರೈಯವರೊಂದಿಗೆ ಭೇಟಿ



(ಮೇಲಿನ ಚಿತ್ರದಲ್ಲಿ : ನಂದೀಶ್ ಶೇರೆಗಾರ್ ,ಪದ್ಯಾಣ ರಾಮಚಂದ್ರ, ಪ್ರೊ.ಡಾ. ಬಿ. ಎ. ವಿವೇಕ ರೈ, ಹರೀಶ್ ಶೆಟ್ಟಿ ಶಿರ್ವ,ಬಿ.ಕೆ. ಗಣೇಶ ರೈ ಮತ್ತು ಬಿ. ಜಿ. ಮೋಹನದಾಸ್ )                                                        
                                                           ( ಚಿತ್ರ ಕೃಪೆ : ಗಲ್ಫ್ ಕನ್ನಡಿಗ )
ತುಳುನಾಡಿನ ಪ್ರಖ್ಯಾತ ಸಾಹಿತಿ ಸಂಶೋಧಕರಾದ ಪ್ರೊ.ಡಾ. ಬಿ .ಎ.ವಿವೇಕ ರೈಯವರಂತ ಮಹಾನ ವ್ಯಕ್ತಿ ದುಬೈಗೆ ಬಂದದ್ದು ನಮ್ಮ ಭಾಗ್ಯ. ಪ್ರೊ.ಡಾ. ಬಿ .ಎ.ವಿವೇಕ ರೈಯವರನ್ನು ಭೇಟಿ ಆಗುವ ಸುಯೋಗ ನನ್ನ ಮಿತ್ರರಾದ ಶ್ರೀ ಪದ್ಯಾಣ ರಾಮಚಂದ್ರ ಅವರ ಮೂಲಕ ಆಯಿತು.  ಮಾನ್ಯ ಶ್ರೀ.ಪದ್ಯಾಣ ರಾಮಚಂದ್ರರವರು ಇಟ್ಟಿದ ಸಣ್ಣ ಪರಿಚಯ ಕೂಟದಲ್ಲಿ ಅವರನ್ನು ಭೇಟಿ ಆದ ನಂತರ ಕೆಲವೇ ಕ್ಷಣದಲ್ಲಿ ಅವರು ನಮ್ಮಲ್ಲಿ ಬೆರೆತು ಹೋದರು. ಒಂದು ಕ್ಷಣಕ್ಕೂ ನನಗೆ ಅವರನ್ನು ನಾನು ಮೊದಲ ಸರಿ ಭೇಟಿ ಆಗುತ್ತಿದ್ದೇನೆ ಎಂದು ಎನಿಸಲಿಲ್ಲ. ಅತ್ಯಂತ ಸರಳ, ನಮ್ರ  ವ್ಯಕ್ತಿತ್ವ  ಪ್ರೊ.ಡಾ. ಬಿ. ಎ.ವಿವೇಕ ರೈಯವರು ನನ್ನ ಆಹ್ವಾನಕ್ಕೆ ಗಲ್ಫ್ ಕನ್ನಡಿಗ ಸ್ಥಾಪಕ ಮತ್ತು ಮುಖ್ಯಸ್ಥ  ಮಾನ್ಯ ಶ್ರೀ .ಬಿ. ಜಿ. ಮೋಹನದಾಸ್ ಅವರೊಟ್ಟಿಗೆ ನನ್ನ ಮನೆಗೆ ಔತಣಕ್ಕೆ ಬಂದು ನಮ್ಮೊಟ್ಟಿಗೆ ಕೆಲವು ಗಂಟೆಯ ಕಾಲ ಇದ್ದು ನನಗೆ ಹಾಗು ನನ್ನ ಪರಿವಾರದವರಿಗೆ ಆಶಿರ್ವಾದ ನೀಡಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣ. ಮನೆಯಲ್ಲಿ ಮಾಡಿದ ಪಾರಂಪರಿಕ ಅಡುಗೆಯನ್ನು ಕಂಡು ಅವರಿಗೆ ಅತ್ಯಂತ ಸಂತೋಷವಾಯಿತು. ಸ್ವಲ್ಪ ಸಮಯದ ಅವಧಿಯಲ್ಲಿಯೇ ಅವರು ನಮಗೆ ನಮ್ಮ ತುಂಬಾ ಹತ್ತಿರದವರಂತೆ ಕಂಡರು. ಹೋಗುವಾಗ ಅವರು ನನ್ನ ಪರಿವಾರದವರಿಗೆ ಅತಿ ನಮ್ರತೆಯಿಂದ ಧನ್ಯವಾದ ನೀಡಿ, ಮನೆಯಲ್ಲಿದ್ದ ಮಕ್ಕಳನ್ನು ಪ್ರೋತ್ಸಾಹಿಸಿ ಕೊನೆಗೆ ನನ್ನನ್ನು ಅಪ್ಪಿ ನನ್ನನ್ನು ಆಶಿರ್ವಾದಿಸಿದ್ದರು. ಆದರೆ ಈ ಸಂತೋಷದ ಮಧ್ಯೆದಲ್ಲಿ ನನ್ನಿಂದ ಆದ ಒಂದು ದೊಡ್ಡ ಪ್ರಮಾದ ಏನೆಂದರೆ ನಾನು ಫೋಟೋ ತೆಗೆಯುವುದನ್ನು ಮರೆತದ್ದು, ಫೋಟೋಕ್ಕಾಗಿ ತೆಗೆದಿಟ್ಟ ಕ್ಯಾಮೆರಾ ಅವರು ಹೋದ ನಂತರ ನನಗೆ ಚುಡಾಯಿಸುತಿತ್ತು.  ಅವರೊಟ್ಟಿಗೆ ಕಳೆದ ಸಮಯ ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದು.
ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ