Showing posts with label ರೂಮಿ. Show all posts
Showing posts with label ರೂಮಿ. Show all posts

Wednesday, April 10, 2013

ಅತಿಥಿ ಗೃಹ

ಅತಿಥಿ ಗೃಹ -ರೂಮಿ 

!!ಮನುಷ್ಯ ನೀನೊಂದು ಅತಿಥಿ ಗೃಹ 
ಪ್ರತಿ ಮುಂಜಾನೆ ಒಂದು ಹೊಸ ಆಗಮನ!! 

!!ಒಂದು ಆನಂದ, ಒಂದು ಖಿನ್ನತೆ, ಒಂದು ಕೀಳುತನ 
ಕೆಲವು ಕ್ಷಣಿಕ ಜಾಗೃತಿ ಬರುತ್ತದೆ
ಒಂದು ಅನಿರೀಕ್ಷಿತ ಆಗಂತುಕನಂತೆ!! 

!!ಸ್ವಾಗತಿಸು ಅವರನ್ನು, ಮನೋರಂಜನ ಮಾಡು ಅವರೆಲ್ಲರ 
ಒಂದು ವೇಳೆ ಅವರು ದುಃಖದ ಅಲೆಗಳಾಗಲಿ
ನಿನ್ನ ಮನೆಯನ್ನು ಹಿಂಸಾತ್ಮಕವಾಗಿ ತಿರಸ್ಕರಿಸಿ
ನಿನ್ನ ಇದ್ದದ್ದನ್ನೆಲ್ಲ ಕೊಚ್ಚಿ ಹೋದರೂ, 

ನೀನು ಸನ್ಮಾನದಿಂದಲೇ
ಪ್ರತಿ ಅತಿಥಿಯನ್ನು ನೋಡಿಕೋ,
ಅವನು ಶುಚಿಗೊಳಿಸುತ್ತಿರಬೇಕು ನಿನ್ನನ್ನು
ಯಾವುದೇ ಹೊಸ ಖುಷಿಕ್ಕಾಗಿ!!

!!ದುಷ್ಟ ಯೋಚನೆ,ಲಜ್ಜೆ, ದ್ವೇಷ ಏನೇ ಆಗಲಿ
ಬಾಗಿಲಲ್ಲಿ ನಗುತ್ತಲೇ ಅವರನ್ನು ಆಮಂತ್ರಿಸು
ಒಳಗೆ ಕರೆದು ಬಿಡು !!

!!ಯಾರೂ ಬಂದರು ಅವರ ಆಭಾರಿಯಾಗು
ಯಾಕೆಂದರೆ ಪ್ರತಿಯೊಬ್ಬನನ್ನು
ನಿನ್ನ ಮಾರ್ಗದರ್ಶನ ಮಾಡಲು ಕಳುಹಿಸಲಾಗಿದೆ ಆಚೆಯಿಂದ!!
ಅನುವಾದ :ಹರೀಶ್ ಶೆಟ್ಟಿ, ಶಿರ್ವ
The Guest House -Rumi

This being human is a guest house.
Every morning a new arrival.

A joy, a depression, a meanness,
some momentary awareness comes
as an unexpected visitor.

Welcome and entertain them all!
Even if they are a crowd of sorrows,
who violently sweep your house
empty of its furniture,
still, treat each guest honorably.
He may be clearing you out
for some new delight.

The dark thought, the shame, the malice.
meet them at the door laughing and invite them in.

Be grateful for whatever comes.
because each has been sent
as a guide from beyond

ಕಂಬಳಿಯ ಧೂಳು

ರೂಮಿ
"ಕಂಬಳಿಯ ಮೇಲೆ ಹೊಡೆತ ಜೋರು ಜೋರ 
ಆ ಹೊಡೆತ ಅಲ್ಲ ಕಂಬಳಿ ಗೋಸ್ಕರ
ಅದು ಆಗಿದೆ ಅದರ ಮೇಲಿದ್ದ ಧೂಳು ತೆಗೆಯು ಗೋಸ್ಕರ."
ಅನುವಾದ : ಹರೀಶ್ ಶೆಟ್ಟಿ, ಶಿರ್ವ
Rumi
“When someone beats a rug,
the blows are not against the rug, 
but against the dust in it.” 

Monday, April 8, 2013

ಪುನಃ ನಿದ್ದೆಗೆ ಹೋಗದಿರು!

ರೂಮಿ
!!ಮುಂಜಾನೆಯ ಗಾಳಿಗೆ ನಿನಗೆ ಹೇಳಲು ರಹಸ್ಯ ಇದೆ 
ಪುನಃ ನಿದ್ದೆಗೆ ಹೋಗದಿರು!
ನೀನು ಕೇಳಬೇಕು ವಾಸ್ತವದಲ್ಲಿ ನಿನಗೆ ಏನು ಬೇಕೆಂದು 
ಪುನಃ ನಿದ್ದೆಗೆ ಹೋಗದಿರು!
ಜನರು ಹಿಂದಕ್ಕೆ ಹಾಗು ಮುಂದಕ್ಕೆ ಹೋಗುತ್ತಿದ್ದಾರೆ 
ಬಾಗಿಲ ಹಲಗೆ ಅಡ್ಡಲಾಗಿ ಎರಡು ಪ್ರಪಂಚ ಸೇರುವಲ್ಲಿ 
ಬಾಗಿಲು ಗೋಲಾಕಾರವಾಗಿದೆ ಹಾಗು ತೆರೆದಿದೆ 
ಪುನಃ ನಿದ್ದೆಗೆ ಹೋಗದಿರು!
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
Rumi
"The breezes at dawn have secrets to tell you
Don't go back to sleep!
You must ask for what you really want.
Don't go back to sleep!
People are going back and forth
across the doorsill where the two worlds touch,
The door is round and open
Don't go back to sleep!"

Saturday, April 6, 2013

ನಿನ್ನ ಈ ರೆಕ್ಕೆಗಳು

ರೂಮಿ 
"ಮಾಡು ನಿನ್ನ ಅಂತಿಮ ಯಾತ್ರೆ 
ಈ ವಿಚಿತ್ರ ಜಗತ್ತಿನಿಂದ 
ಹಾರು ಎತ್ತರಕ್ಕೆ 
ಅಲ್ಲಿ ಉಳಿಯದಿರಲಿ ನಿನ್ನ ಹಾಗು ನಿನ್ನ ಮನೆಯ ಅಗಲಿಕೆ

ದೇವರು ಸೃಷ್ಟಿಸಿದ್ದು 
ನಿನ್ನ ಈ ರೆಕ್ಕೆಗಳು ನಿಷ್ಕ್ರಿಯ ಮಾಡಲಿಕ್ಕೆ ಅಲ್ಲ 
ನೀನು ಬದುಕಿರುವರಗೆ 
ನೀನು ಹೆಚ್ಚು ಹೆಚ್ಚು ಪ್ರಯತ್ನಿಸುತ್ತಿರ ಬೇಕು 
ನಿನ್ನ ರೆಕ್ಕೆಯನ್ನು ಉಪಯೋಗಿಸಲು
ನೀನು ಜೀವಂತ ಇರುವೆ ಎಂದು ತೋರಿಸಲು."
ಅನುವಾದ : ಹರೀಶ್ ಶೆಟ್ಟಿ, ಶಿರ್ವ
Rumi
“make your last journey
from this strange world
soar for the heights
where there is no more
separation of you and your home

God has created
your wings not to be dormant
as long as you are alive
you must try more and more
to use your wings to show you're alive”

ನಗುತ್ತಿದ್ದೇನೆ ನಾನಿಂದು

ರೂಮಿ 
"ನಗುತ್ತಿದ್ದೇನೆ ನಾನಿಂದು ನನ್ನ ಮೇಲೆಯೇ 
ಹೃದಯದಲಿ ಯಾವುದೇ ಆಸೆ ಉಳಿಯಲಿಲ್ಲ 
ಬಹುಶಃ ಹೃದಯವೇ ಉಳಿಯಲಿಲ್ಲ 
ಮುಕ್ತ ಬಯಕೆಗಳಿಂದ ಎಲ್ಲ 
ಪೃಥ್ವಿಯಂತೆ ಕುಳಿತ್ತಿದ್ದೇನೆ ಮೌನದಲಿ 
ನನ್ನ ಮೌನ ಅಳು ಪ್ರತಿಧ್ವನಿಸುತ್ತಿದೆ ಗುಡುಗಿನಂತೆ ಈ ಬ್ರಹ್ಮಾಂಡದಲ್ಲೆಲ್ಲ 
ಇದರ ಬಗ್ಗೆ ನಾನು ಚಿಂತಿಸುವುದಿಲ್ಲ 
ನನಗೆ ಗೊತ್ತು ಇದು ಯಾರಿಗೂ ಕೇಳಿ ಬರುವುದಿಲ್ಲ 
ನನ್ನ ಹೊರತಾಗಿ." 
ಅನುವಾದ : ಹರೀಶ್ ಶೆಟ್ಟಿ, ಶಿರ್ವ
Rumi
“I am smiling at myself today
There's no wish left in this heart
Or perhaps there is no heart left
Free from all desire
I sit quietly like Earth
My silent cry echoes like thunder
Throughout the universe
I am not worried about it
I know it will be heard by no one
Except me.”

Thursday, April 4, 2013

ನಿಮ್ಮನ್ನು ಯಾರಾದರು ಟೀಕಿಸುವಾಗ

Rumi
“When someone critises or disagrees with you, a small ant of hatred and antagonism is born in your heart. 
If you do not squash that ant at once, it might grow into a snake, or even a dragon.” 
ರೂಮಿ 
ನಿಮ್ಮನ್ನು ಯಾರಾದರು ಟೀಕಿಸುವಾಗ ಅಥವಾ ನಿಮ್ಮಿಂದ ಅಸಮ್ಮತ ಇರುವಾಗ, ದ್ವೇಷ ಹಾಗು ವೈಷಮ್ಯದ ಇರುವೆ ನಿಮ್ಮ ಹೃದಯದಲಿ ಜನಿಸುತ್ತದೆ. 
ನೀವು ಆ ಇರುವೆಯನ್ನು ಒಮ್ಮೆಯೇ ಜಜ್ಜಿ ಹಾಕದೆ ಬಿಟ್ಟರೆ, ಅದು ಒಂದು ಸರ್ಪವಾಗಿ ಬೆಳೆಯಬಹುದು ಅಥವಾ ರಾಕ್ಷಸ ರೂಪ ತಾಳಬಹುದು .
ಅನುವಾದ :ಹರೀಶ್ ಶೆಟ್ಟಿ, ಶಿರ್ವ

Wednesday, April 3, 2013

ನಾನೇನು ?

ರೂಮಿ 
ನಾನೇನು ಮಾಡಲಿ ಗೆಳೆಯರೇ, ಒಂದು ವೇಳೆ ನನಗೆ ಗೊತ್ತಿಲ್ಲವೆಂದರೆ ?
ನಾನು ಕ್ರೈಸ್ತ ಅಥವಾ ಯಹೂದಿ ಅಥವಾ ಮುಸ್ಲಿಂ ಅಥವಾ ಹಿಂದೂ ಅಲ್ಲ
ನಾನೇನು ಮಾಡಲಿ ? ನಾನೇನು ಮಾಡಲಿ ?

ಪೂರ್ವದವನಲ್ಲ ,ಅಲ್ಲದೇ ಪಶ್ಚಿಮದವನಲ್ಲ,
ಭೂಮಿದವನಲ್ಲ ,ಅಲ್ಲದೇ ಸಾಗರದವನಲ್ಲ
ಪ್ರಕೃತಿಯ ಸಾರ ಅಲ್ಲ ,ಅಲ್ಲದೇ ಸುತ್ತವರಿದ ದೇವಲೋಕದವನಲ್ಲ
ಹಾಗಾದರೆ ನಾನೇನು ಇರಬಹುದು ?
ಅನುವಾದ :ಹರೀಶ್ ಶೆಟ್ಟಿ, ಶಿರ್ವ

Rumi
“What can I do my friends, if I do not know?
I am neither Christian nor Jew, nor Muslim nor Hindu.
What can I do? What can I do?

Not of the East, nor of the West,
Nor of the land, nor of the sea,
Not of nature's essence, nor of circling heavens.
What could I be?” 

ನೀನು ಪ್ರತಿಯೊಬ್ಬನಾಗು

ರೂಮಿ 
" ನೀನಿರುವಾಗ ಎಲ್ಲರೊಂದಿಗೆ 
ಆದರೆ ನನಗೆ, ನೀನಿಲ್ಲ ಯಾರೊಂದಿಗೂ 
ನೀನಿರದಾಗ ಯಾರೊಂದಿಗೂ
ಆದರೆ ನನಗೆ, ನೀನಿರುವೆ ಎಲ್ಲರೊಂದಿಗೆ 
ನೀನಿಷ್ಟು ಸಮರ್ಪಿತನಾಗಿರುವುದಕ್ಕಿಂತ ಎಲ್ಲರೊಂದಿಗೆ 
ನೀನು ಪ್ರತಿಯೊಬ್ಬನಾಗು 
ನೀನು ಅನೇಕನಾದಾಗ
ನೀನು ಏನೂ ಇಲ್ಲ, ಖಾಲಿ" 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
Rumi
“When you are with everyone
but me,you're with no one.
When you are with no one but me,
you're with everyone.
Instead of being so bound up with everyone,
be everyone. When you
become that many, you're nothing. Empty.”

Monday, April 1, 2013

ಒಹ್ ನನ್ನ ಆಯ್ಕೆಯ ಸುಂದರಿಯೇ

Rumi
“O my choice beauty
You've gone
But your love remains in my heart
Your image in my eye
O guide on my winding road
I keep turning round and round in the hopes of
Finding you” 
ರೂಮಿ 
ಒಹ್ ನನ್ನ ಆಯ್ಕೆಯ ಸುಂದರಿಯೇ 
ನೀನು ಹೋದೆ
ಆದರೆ ನಿನ್ನ ಪ್ರೀತಿ ನನ್ನ ಹೃದಯದಲಿ ಉಳಿದಿದೆ
ನಿನ್ನ ಚಿತ್ರ ನನ್ನ ಕಣ್ಣಿನಲ್ಲಿದೆ
ಒಹ್ 
ಮಾರ್ಗದರ್ಶನ ನೀಡಿ ನನ್ನ ಅಂಕುಡೊಂಕಾದ ಹಾದಿಯಲಿ 
ನಾನು ನಿನ್ನನ್ನು ಕಂಡುಹಿಡಿಯುವ ಭರವಸೆಯಲಿ ಸುತ್ತು ಸುತ್ತು ತಿರುಗುತ್ತಿದ್ದೇನೆ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Friday, March 29, 2013

ಹಿಂತಿರುಗಿ ಹೋಗು

ರೂಮಿ

ಹಿಂತಿರುಗಿ ಹೋಗು
ಹಿಂತಿರುಗಿ ಹೋಗು ನಿದ್ರಿಸಲು

ಹೌದು ,ನಿನಗೆ ನೀಡಲಾಗಿದೆ ಅನುಮತಿ
ನಿನ್ನ ಹೃದಯದಲಿ ಇಲ್ಲ ಪ್ರೀತಿ
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು

ಪವಿತ್ರ ಪ್ರೇಮದ ಶಕ್ತಿ
ವಿಶಿಷ್ಟವಾಗಿ ಕೇವಲ ನಮಗೆ ಲಭ್ಯವಾಗಿದೆ
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು

ನಾನು ಸುಟ್ಟು ಹೋಗಿದ್ದೇನೆ
ಈ ಪ್ರೀತಿಯ ಅಗ್ನಿಯಿಂದ
ನಿನ್ನ ಹೃದಯದಲಿ ಅಂತಹದು ಯಾವುದೇ ಹಂಬಲ ಇಲ್ಲ
ಹಿಂತಿರುಗಿ ಹೋಗು ನಿದ್ರಿಸಲು

ಪ್ರೀತಿಯ ಪಥಗಳ
ಎಪ್ಪತ್ತೆರಡು ಮಡಿಕೆ ಹಾಗು ಅಸಂಖ್ಯಾತ ಭಾಗಗಳಿವೆ
ನಿನ್ನ ಪ್ರೀತಿ ಮತ್ತು ಧರ್ಮ
ಎಲ್ಲಾ ವಂಚನೆ, ಆಡಳಿತೆ ಹಾಗು ಕಾಪಟ್ಯ ಹೊಂದಿವೆ

ನಾನು ನನ್ನ ಮಾತಿನ ನಿಲುವಂಗಿಯನ್ನು ತುಣುಕು ತುಣುಕು ಮಾಡಿದೆ
ಹಾಗು ತನ್ನ ಬಯಕೆಗಳಿಗೆ ಮಾತನಾಡಲು ಅವಕಾಶ ನೀಡಿದೆ
ನೀನು ಇನ್ನೂ ಬತ್ತಲೆಯಾಗದವನು
ನೀನು ಹಿಂತಿರುಗಿ ಹೋಗಬಹುದು ನಿದ್ರಿಸಲು
ಅನುವಾದ by ಹರೀಶ್ ಶೆಟ್ಟಿ, ಶಿರ್ವ
Rumi
“Go back,
go back to sleep.

Yes, you are allowed.
You who have no Love in your heart,
you can go back to sleep.

The power of Love
is exclusive to us,
you can go back to sleep.

I have been burnt
by the fire of Love.
You who have no such yearning in your heart,
go back to sleep.

The path of Love,
has seventy-two folds and countless facets.
Your love and religion
is all about deceit, control and hypocrisy,
go back to sleep.

I have torn to pieces my robe of speech,
and have let go of the desire to converse.
You who are not naked yet,
you can go back to sleep.”

Thursday, March 28, 2013

ಹೆದರಿಕೆ ಓಡಿಸು

Rumi
Challenge Fear
"Run from what’s comfortable. 
Forget safety. 
Live where you fear to live. 
Destroy your reputation. 
Be notorious."
ರೂಮಿ 
ಹೆದರಿಕೆ ಓಡಿಸು 
"ಆರಾಮದಾಯಕ ಇದ್ದಲ್ಲಿ ನಿಲ್ಲದಿರು.
ಸುರಕ್ಷೆ ಮರೆತುಬಿಡು.
ಎಲ್ಲಿರಲು ಭಯ ಪಡುವೆ ನೀನು ಅಲ್ಲೇ ವಾಸಿಸು.
ನಿನ್ನ ಪ್ರಸಿದ್ಧಿಯನ್ನು ನಾಶಗೊಳಿಸು.
ಕುಖ್ಯಾತನಾಗು."

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಪ್ರಾರ್ಥನೆ

Rumi
When I am with you, everything is prayer.
ರೂಮಿ 
ನಾನು ನಿನ್ನೊಂದಿಗೆ ಇರುವಾಗ ,ಎಲ್ಲವೂ ಪ್ರಾರ್ಥನೆ .
 ಅನುವಾದ : ಹರೀಶ್ ಶೆಟ್ಟಿ, ಶಿರ್ವ 

Tuesday, March 26, 2013

ಕರಗುವ ಮಂಜಾಗು

Rumi
Be melting snow. Wash yourself of yourself.
ರೂಮಿ
ಕರಗುವ ಮಂಜಾಗು, ನಿನ್ನಲ್ಲಿದ್ದ ನಿನ್ನನ್ನು ತೊಳೆದುಕೊಳ್ಳು.
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

Monday, March 25, 2013

ಬೆಳಕು

Rumi
“The wound is the place where the Light enters you.” 
ರೂಮಿ 
"ಗಾಯ ಇರುವ ಸ್ಥಾನದಿಂದಲೇ ನಿಮ್ಮಲ್ಲಿ ಬೆಳಕು ಪ್ರವೇಶಿಸುತ್ತದೆ".
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

ಬಲವಾದ ಹಗ್ಗ

Rumi
“Why should I stay at the bottom of a well, when a strong rope is in my hand?”
ರೂಮಿ 
"ಯಾಕೆ ನಾನು ಬಾವಿಯ ತಳದಲ್ಲಿ ಇರಬೇಕು, ನನ್ನ ಕೈಯಲ್ಲಿ ಬಲವಾದ ಹಗ್ಗ ಇರುವಾಗ?"
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

Saturday, March 23, 2013

ಹುರುಪು

Rumi
Passion makes the old medicine new:
Passion lops off the bough of weariness.
Passion is the elixir that renews:
how can there be weariness
when passion is present?
Oh, don't sigh heavily from fatigue:
seek passion, seek passion, seek passion 
ರೂಮಿ 
ಹುರುಪು ಹಳೆ ಔಷದಿಯನ್ನು ಹೊಸತಾಗಿ ಮಾಡುವುದು. 
ಹುರುಪು ಆಲಸ್ಯದ ಶಾಖೆಯನ್ನು ಕಡಿದು ಹಾಕುವುದು.
ಹುರುಪು ಸಂಜೀವನಿ, ಶುದ್ಧಗೊಳಿಸುವುದು
ಹೇಗೆ ಇಲ್ಲಿ ಆಲಸ್ಯ ಉಳಿಯುವುದು
ಹುರುಪು ಇರುವಾಗ ?
ಒಹ್, ಆಯಾಸಗೊಂಡು ಬಹಳವಾಗಿ ನಿಟ್ಟುಸಿರು ತೆಗೆದುಕೊಳ್ಳದಿರು
ಹುರುಪು ಅರಸು , ಹುರುಪು ಅರಸು , ಹುರುಪು ಅರಸು
ಅನುವಾದ : ಹರೀಶ್ ಶೆಟ್ಟಿ, ಶಿರ್ವ

Thursday, March 21, 2013

ಮೂಕ ರೀತಿ

Rumi
“I closed my mouth and spoke to you in a hundred silent ways.” 
ರೂಮಿ 
"ನಾನು ನನ್ನ ಬಾಯಿ ಮುಚ್ಚಿ ನಿನ್ನಿಂದ ನೂರು ಮೂಕ ರೀತಿಯಲ್ಲಿ ಮಾತನಾಡಿದೆ."
ಅನುವಾದ : ಹರೀಶ್ ಶೆಟ್ಟಿ,ಶಿರ್ವ 

Wednesday, March 20, 2013

ಮೌನದಲಿ ವಾಕ್ಸಂಪತ್ತು

Rumi
“In Silence there is eloquence. Stop weaving and see how the pattern improves.”
ರೂಮಿ 
"ಮೌನದಲಿ ವಾಕ್ಸಂಪತ್ತು ಇರುತ್ತದೆ. ನೇಯುವುದನ್ನು ನಿಲ್ಲಿಸಿ ಹಾಗು ನೋಡಿ ಹೇಗೆ ಸ್ವರೂಪ ಸುಧಾರಿಸುತ್ತದೆ ಎಂದು" .
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

Tuesday, March 19, 2013

ಅದೃಷ್ಟಶಾಲಿ

Rumi
"Who could be so lucky? Who comes to a lake for water and sees the reflection of moon.” 
― Rumi
ರೂಮಿ 
ಯಾರು ಹೆಚ್ಚು ಅದೃಷ್ಟಶಾಲಿ ಆಗಿರಬಹುದು ?
ಅವನು ,
ಸರೋವರದಲಿ ನೀರಿಗಾಗಿ ಬಂದವನು, ಚಂದ್ರನ ಪ್ರತಿಬಿಂಬವನ್ನು ಕಾಣುವವನು.
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

ಏಕೆ ಒಂದೇ ಜೀವನಕ್ಕೆ ಅಂಟಿಕೊಳ್ಳುವುದು

WHY CLING
Rumi
Why cling to one life
till it is soiled and ragged?

The sun dies and dies
squandering a hundred lived
every instant

God has decreed life for you
and He will give
another and another and another

ರೂಮಿ
ಏಕೆ ಒಂದೇ ಜೀವನಕ್ಕೆ ಅಂಟಿಕೊಳ್ಳುವುದು
ಇದು ಮಣ್ಣು ಹಾಗು ಚಿಂದಿ ಚಿಂದಿಯಾದ ಮೇಲೆ ?

ಸೂರ್ಯ ಸಾಯುತ್ತಾನೆ ಹಾಗು ಸಾಯುತ್ತಾನೆ
ಪ್ರತಿ ಕ್ಷಣ ನೂರಾರು ಜೀವನ ವ್ಯರ್ಥಗೊಳಿಸಿ

ದೇವರು ನಿನಗೆ ಜೀವನ ನೀಡಲು ನಿರ್ಧಾರಿಸಿದ್ದಾನೆ
ಹಾಗು ಅವನು ನೀಡುವನು
ಇನ್ನೊಂದು ಮತ್ತು ಇನ್ನೊಂದು ಮತ್ತು ಇನ್ನೊಂದು
ಅನುವಾದ : ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ