Showing posts with label ಧಾರಾವಾಹಿ ಕಥೆಗಳು. Show all posts
Showing posts with label ಧಾರಾವಾಹಿ ಕಥೆಗಳು. Show all posts

Sunday, March 15, 2020

ವೃದ್ಧಾಶ್ರಮ ೨೫


ರಜೆಯಲ್ಲಿ ಅಲ್ಲಿ ಇಲ್ಲಿ ಅಂತ ರಮೇಶನವರ ರಜೆ ಮುಗಿಯುತ್ತ ಬಂತು, ಅಮ್ಮನ ಆರೋಗ್ಯ ಅವಸ್ಥೆ ಈಗಲೂ ಹಾಗೆಯೇ ಇತ್ತು, ಹೇಚ್ಛೆನು ಬದಲಾವಣೆ ಕಂಡು ಬರಲಿಲ್ಲ, ಕೇವಲ ಹೇಳಿದರೆ  ಸ್ವಲ್ಪ ಸ್ವಲ್ಪ ನಡೆಯುತ್ತಿದ್ದರು, ಇಲ್ಲಾದರೆ ಉದಾಸೀನದಿಂದ ಹಾಸಿಗೆಯಿಂದ ಏಳುತ್ತಿರಲಿಲ್ಲ, ಯಾವುದೇ ಹೋಮ್ ನರ್ಸ್ ಸಹ ಹೆಚ್ಚು ದಿನ ಇರುತ್ತಿರಲಿಲ್ಲ, ಒಂದೆರಡು ತಿಂಗಳು ಇದ್ದು ಹೋದ ನಂತರ ಬರುತ್ತಿರಲಿಲ್ಲ, ಆಗ ಮನೆಯ ಕೆಲಸದ ಮಧ್ಯೆ ವಿಜಯ ಮಾಮ ಹಾಗು ಅಮ್ಮನ ಕೆಲಸ ಮಾಡಲು ಚಿಕ್ಕಮನವರಿಗೆ ತುಂಬಾ ಕಷ್ಟವಾಗುತ್ತಿತ್ತು, ಸ್ವಾಭಾವಿಕವಾಗಿ ಅವರ ತಾಳ್ಮೆ ಕುಸಿದು ಅವರು ಕಿರಿಕಿರಿ ಮಾಡುತ್ತಿದ್ದರು, ಇದರ ಬಗ್ಗೆ ಅವರು ರಮೇಶನಿಗೆ ಏನಾದರೂ ಅಮ್ಮನ ಕಾಯಂ ವ್ಯವಸ್ಥೆ ಮಾಡಲು ಹೇಳುತ್ತಿದ್ದರು, ರಮೇಶನಿಗೆ ಇದೆಲ್ಲ ಸಹಜ ಅನಿಸಿದರೂ ಏನು ಮಾಡುವುದು ಎಂದು ಅರ್ಥವಾಗುತ್ತಿರಲಿಲ್ಲ.

ಹೇಗೋ ರಮೇಶನ ರಜೆ ಮುಗಿದು ವಿದೇಶ ಹೋಗುವ ಸಮಯ ಬಂತು, ಚಿಕ್ಕಮನವರು ಆಗ ಸಹ ರಮೇಶನಿಗೆ ಏನಾದರೂ ಅಮ್ಮನ ವ್ಯವಸ್ಥೆ ಮಾಡಲು ಹೇಳಿದರು, ಕಡೆಗೆ ರಮೇಶ ಸುಮಾ ಜೊತೆ ಚರ್ಚೆ ಮಾಡಿ ಅಮ್ಮನನ್ನು ಸ್ವಲ್ಪ ದಿವಸದ ನಂತರ ವಿದೇಶ ಕರೆದು ಕೊಂಡು ಹೋಗುವ ನಿರ್ಣಯ ಮಾಡಿದ, ಅದಕ್ಕೆ ರಮೇಶ ದಿರೇಶನಿಗೆ ಹಣ ಕೊಟ್ಟು ಅಮ್ಮನ ಬೇಗನೆ ಪಾಸ್ ಪೋರ್ಟ್ ಮಾಡಲು ಹೇಳಿದ ಹಾಗು ಪಾಸ್ ಪೋರ್ಟ್ ಮಾಡಿದ ನಂತರ ತಿಳಿಸಲಿಕ್ಕೆ ಹೇಳಿದ, ರಮೇಶ ಚಿಕ್ಕಮ್ಮನವರಿಗೆ ಸಹ ಈ ಬಗ್ಗೆ ತಿಳಿಸಿ ಸ್ವಲ್ಪ ಸಮಯ ಅಮ್ಮನನ್ನು ನೋಡಲು ಹಾಗು ಧೈರ್ಯ ಇಡಲು ಹೇಳಿದ.

ರಜೆ ಮುಗಿಯುತ್ತಲೇ ರಮೇಶ, ಸುಮಾ ಆತೀಶನ ಜೊತೆ ವಿದೇಶ ಹಿಂತಿರುಗಿದರು ಹಾಗು ರಮೇಶ ತನ್ನ ಕೆಲಸ ಕಾರ್ಯದಲ್ಲಿ ಹಾಗು ಸುಮಾ ತನ್ನ ಗೃಹಸ್ಥಿಯಲ್ಲಿ ಮುಳುಗಿದಳು. 

ಸ್ವಲ್ಪ ದಿವಸದ ನಂತರ ರಮೇಶ ಊರಿಗೆ ಫೋನ್ ಮಾಡಿದಾಗ ಆಶಾ ಚಿಕ್ಕಮ ಅಮ್ಮನನ್ನು ನೋಡಲು ಕೆಲವು ದಿವಸದಿಂದ ಹೋಮ್ ನರ್ಸ್ ಇಲ್ಲವೆಂದು  ಹಾಗು ಅವರಿಗೆ ತುಂಬಾ ಕಷ್ಟ ಆಗುತ್ತಿದೆ ಎಂದು ತಿಳಿಸಿದರು, ರಮೇಶ ದಿರೇಶನ ಬಗ್ಗೆ ಕೇಳಿದಾಗ ಅವರು ದಿರೇಶನನ್ನು ದೂರಿ "ಅವನೆಲ್ಲಿ ಬರುತ್ತಾನೆ, ಕೆಲವು ದಿನದಿಂದ ಅವನ ಸುದ್ದಿಯೇ  ಇಲ್ಲ" ಎಂದು  ಅವನ ಬಗ್ಗೆ ಕೆಲವು ದೂರು ನೀಡಿದ್ದರು. 

ರಮೇಶ ಕೂಡಲೇ ದಿರೇಶನಿಗೆ ಫೋನ್ ಮಾಡಿದ "ಏನು ಏನಾಯಿತು ಅಮ್ಮನ ಪಾಸ್ ಪೋರ್ಟ್"?

ದಿರೇಶ  "ಏಜೆಂಟನಿಗೆ ಪೇಪರ್ ಎಲ್ಲ ಕೊಟ್ಟಿದ್ದೇನೆ, ಇನ್ನು ಕೆಲವು ದಾಖಲೆ ಮಾಡಿಸ ಬೇಕಂತ ಹೇಳಿದ್ದಾನೆ, ನೋಡುವ ನಾನು ಅವನ ಹಿಂದೆ ಬಿದ್ದಿದ್ದೇನೆ".

ರಮೇಶ "ನೀನೇನು ಮನೆಗೆ ಹೋಗಲೇ ಇಲ್ಲವ ಅಮ್ಮನನ್ನು ನೋಡಲು"?

ದಿರೇಶ "ಕಳೆದ ತಿಂಗಳು ಹೋಗಿದ್ದೆ, ಏನು ಏನಾಯಿತು"?

ರಮೇಶ "ಅಲ್ಲ ಚಿಕ್ಕಮ್ಮ ಹೋಮ್ ನರ್ಸ್ ಇಲ್ಲ ಅಂತ ಕಿರಿಕಿರಿ ಮಾಡುತ್ತಿದ್ದರು, ನೀನು ಪ್ರತಿ ವಾರ ಹೋಗಿ ಸ್ವಲ್ಪ ನೋಡಲ್ಲ, ಇಲ್ಲಾದರೆ ಹೋಮ್ ವ್ಯವಸ್ಥೆಯಾದರೂ  ಮಾಡು".

ದಿರೇಶ ಸಿಡುಕಿನಿಂದ "ಪ್ರತಿ ವಾರ ಹೋಗಲು ಇಲ್ಲಿ ಕೆಲಸದಲ್ಲಿ ನನಗೆ ರಜೆ ಯಾರು ಕೊಡುತ್ತಾರೆ ಮತ್ತೆ ಹೋಮ್ ನರ್ಸ್ ಸಿಕ್ಕಿದರು ಅವರಿಗೆ  ಹೆಚ್ಚು ದಿವಸ ನಮ್ಮ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಅಲ್ಲಿ ಅಮ್ಮನ ಕೆಲಸದಿಂದ ಹೆಚ್ಚು ಚಿಕ್ಕಮನವರು ಮನೆ ಕೆಲಸ ಹೆಚ್ಚು ಮಾಡಿಸುತ್ತಾರೆ, ಯಾರು ಮಾಡುತ್ತಾರೆ ಕೆಲಸ ಹಾಗೆ, ಅದಕ್ಕೆ ಓಡಿ ಹೋಗುತ್ತಾರೆ".

ರಮೇಶ "ಹಾಗಾದರೆ ಹೀಗೆ ಮಾಡು ಇನ್ನು ಸ್ವಲ್ಪ ದಿವಸ ತಾನೇ, ಹೇಗೂ ನಾನು ಅಮ್ಮನನ್ನು ವಿದೇಶ ಕರೆದು ಕೊಂಡು ಹೋಗುತ್ತಿದ್ದೇನೆ, ನಿನಗೆ ಸಹ ಅವರ ಪಾಸ್ ಪೋರ್ಟ್ ಮಾಡಲು ಕೆಲಸ ಇದೆ, ನೀನು ಸ್ವಲ್ಪ ದಿವಸ ಕೆಲಸಕ್ಕೆ  ರಜೆ ಮಾಡಿ  ಅಮ್ಮನನ್ನು ನೋಡು, ಹೋಮ್ ನರ್ಸಿಗೆ ಕೊಡುವ ಸಂಬಳ ನೀನು ತೆಗೆದುಕೊಳ್ಳು, ಇಲ್ಲಿ ಸಹ ನಿನಗೆ ಎಷ್ಟು ಸಂಬಳ,  ಅಷ್ಟೇ ತಾನೇ ಸಿಗುವುದು".

ದಿರೇಶ ಸ್ವಲ್ಪ ಯೋಚಿಸಿ "ಹಾಗೆ ಹೇಳುತ್ತೀಯಾ".

ರಮೇಶ "ನೋಡು, ಇದರ ನಂತರ  ಚಿಕ್ಕಮ್ಮನವರ ಕಿರಿಕಿರಿ ಸಹ ಇರುವುದಿಲ್ಲ".

ದಿರೇಶ "ಓ ಕೆ ಹಾಗಾದರೆ, ನಾನು ಇವತ್ತು ಸೇಠ್ ಬಂದ ನಂತರ ಅವರತ್ತಿರ ರಜೆ ಕೇಳಿ ಮನೆಗೆ ಹೋಗುತ್ತೇನೆ, ಆದರೆ ನೀನು ಆಶಾ ಚಿಕ್ಕಮನಿಗೆ ಹೇಳು ಹೋಮ್ ನರ್ಸಿನ ಹಣ ನನಗೆ ಕೊಡುಬೇಕಾಂತ".

ರಮೇಶ "ಅದು ಹೇಳುತ್ತೇನೆ, ನೀನು ಆದಷ್ಟು ಬೇಗ  ಹೋಗು". 

ದಿರೇಶ : ಓ ಕೆ "ಎಂದು ಫೋನ್ ಇಟ್ಟ.

ಅಮ್ಮನ ಪಾಸ್ ಪೋರ್ಟ್ ಮಾಡಲು  ದಿರೇಶ ತುಂಬಾ ಓಡಾಡಿದ, ಆದರೆ ಆ ಪೇಪರ್ ಈ ದಾಖಲೆ ಎಂದು ತುಂಬಾ ಸಮಯ ಕಳೆದೋಯ್ತು, ಮೇಲಿಂದ ಈ ಮಧ್ಯೆ ವಿಕ್ರಮ ಮಾಮ ಹಾಗು ದಿನಕರ ಮಾಮ ಊರಿನ ಮನೆ ದುರಸ್ತಿ ಮಾಡುವ ನಿರ್ಣಯ ತೆಗೆದುಕೊಂಡರು ಹಾಗು ಕುಟುಂಬದ ಎಲ್ಲ ಸದಸ್ಯರಿಂದ ಹಣ ಒಟ್ಟು ಮಾಡಿ ದುರಸ್ತಿ ಕಾರ್ಯ ಶುರು ಮಾಡಿದರು, ರಮೇಶ ಸಹ ಈ ಕಾರ್ಯಕ್ಕೆ ತನ್ನ ಕೊಡುಗೆ ನೀಡಿ ಸಹಕರಿಸಿದ, ದುರಸ್ತಿ ಕಾರ್ಯ ನಡೆಯುವಾಗ ಅಮ್ಮನಿಗೆ ಹಾಗು ವಿಕ್ರಮ ಮಾಮನವರಿಗೆ ತುಂಬಾ ಕಷ್ಟ ಎದುರಿಸ ಬೇಕಾಯಿತು, ಅವರ ಕೋಣೆ ದುರಸ್ತಿ ಆಗುವ ತನಕ ಅವರ ಮಂಚ ಅಂಗಳದಲ್ಲಿ ಹಾಕಲಾಯಿತು, ಈಗ ಅಮ್ಮನನ್ನು ನೋಡಲು ಹೋಮ್ ನರ್ಸ್ ಇರಲಿಲ್ಲ, ದಿರೇಶ ಅವರ ಚಾಕರಿ ಮಾಡುತ್ತಿದ್ದ, ಆದರೆ ಕೇವಲ ಹೆಸರಿಗೆ ಮಾತ್ರ,  ಹೆಚ್ಚು ಕೆಲಸ ಚಿಕ್ಕಮ್ಮನವರಿಗೆ ಆಗುತ್ತಿತ್ತು ಹಾಗು ಈ ಬಗ್ಗೆ ಚಿಕ್ಕಮ್ಮನವರು ರಮೇಶನತ್ತಿರ ದಿರೇಶನ ದೂರು ಮಾಡುತ್ತಲೇ ಇದ್ದರು. 

ಸಮಯ ತನ್ನದೇ ವೇಗದಿಂದ ಓಡುತ್ತಿತ್ತು, ಸಮಯ  ದೊಡ್ಡ ವ್ಯಾಪಾರಿ, ಇದು ಪ್ರತಿ ಕ್ಷಣ ನಮ್ಮ ಜೀವನದೊಂದಿಗೆ ಆಡುತ್ತಿರುತ್ತದೆ, ಸಮಯ ಸಮಯದಲ್ಲಿ ನಮಗೆ ಸಿಗುವ ಮೋಸದಿಂದಲೇ ಹಾಗು ನಮ್ಮನ್ನು ಮುಗ್ಗರಿಸಿ ಬೀಳಿಸುವುದರಿಂದಲೇ  ಯಾರು ನಮ್ಮವರು, ಯಾರು ಬೇರಯವರು, ಯಾರು ಒಳ್ಳೆಯವರು, ಯಾರು ಕೆಟ್ಟವರೆಂದು  ತಿಳಿಯುತ್ತದೆ, ಸಮಯ ನಮಗೆ ಕಾಣುವುದಿಲ್ಲ ಆದರೆ ನಮಗೆ ಬಹಳಷ್ಟು ತೋರಿಸಿ ಕೊಡುತ್ತದೆ.  

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ 

ಚಿತ್ರ ಕೃಪೆ : ಗೂಗಲ್ 

Saturday, March 14, 2020

ವೃದ್ಧಾಶ್ರಮ ೨೪

ದಿರೇಶ ಅಮ್ಮನಿಗೆ ಸಿಕ್ಕಿದ ಹಣದ ಪಾಲಿಗಾಗಿ ರಮೇಶನ ಹಿಂದೆ ಬಿದ್ದಿದ್ದ, ರಮೇಶ ಅವನಿಗೆ ನೇಮ ಪೂಜೆ ಆಗುವ ತನಕ ಸ್ವಲ್ಪ ತಾಳ್ಮೆ ಇಡಲು ಹೇಳಿದ.

ಮನೆಯಲ್ಲಿ ನೇಮ ಪೂಜೆ ಮುಗಿದ ನಂತರ ಕ್ರಮೇಣ ಪರಿವಾರದ ಹೆಚ್ಚಿನಂಶ ಜನ ಹಿಂತಿರುಗಿದರು. 

ಮೋನು ಅಮ್ಮನಿಂದ ಒಂದೂವರೆ ಲಕ್ಷ ತೆಗೊಂಡ ವಿಷಯ ರಮೇಶನಿಗೆ ಈಗಲೂ ಪೀಡಿಸುತ್ತಿತ್ತು, ಅವನಿಂದ ಕೇಳಿಯೇ ಬಿಡೋಣಯೆಂದು ರಮೇಶ ಮೋನುನಿಗೆ ಕರೆದು "ಮೋನು ನೀನು ಅಮ್ಮನಿಂದ ಹಣ ತೆಗೊಂಡಿದ್ದೀಯ"? ಎಂದು ಕೇಳಿದ

ಮೋನು "ಹೌದು".

ರಮೇಶ "ನಿನಗೆ ತಿಳಿದಿದೆಯಲ್ಲ ಅವರಿಗೆ ಸೌಖ್ಯವಿಲ್ಲ ಅಂತ, ಅವರಿಂದ ಹಣ ತೆಗೊಂಡದ್ದು ಸರಿಯ"?

ಮೋನು "ಸರಿ ತಪ್ಪು ನನಗೆ ತಿಳಿದಿಲ್ಲ, ಅವರತ್ತಿರ ಹಣ ಇತ್ತು,  ನನಗೆ ಅರ್ಜೆಂಟ್ ಹಣ ಬೇಕಿತ್ತು, ನಾನು ತೆಗೊಂಡೆ".

ರಮೇಶ "ಆದರೆ ನೀನೊಂದು ಸಲ ನನ್ನತ್ರ ಕೇಳಬೇಕಿತ್ತೇ".  

ಮೋನು "ಇದರಲ್ಲಿ ನಿಮ್ಮತ್ತಿರ ಏನು ಕೇಳುವುದು, ನಾನು ನನ್ನ ದೊಡ್ಡಮ್ಮನಿಂದ ಅವರ  ಹಣ ತೆಗೊಂಡದ್ದು, ನಿಮ್ಮಿಂದ ನಿಮ್ಮ ಹಣ ತೆಗೊಂಡದ್ದು ಅಲ್ಲ, ಮತ್ತೆ ಹೇಗೆ ತೆಗೊಂಡಿದ್ದೆನೋ ಹಾಗೆಯೇ ಅವರಿಗೆ  ವಾಪಾಸ್ ಕೊಡುವೆ" ಎಂದು ಕೋಪದಿಂದ ಉತ್ತರಿಸಿ ಅಲ್ಲಿಂದ ಹೊರಟುಹೋದ.

ಇದಕ್ಕೆ ರಮೇಶ ಏನು ಉತ್ತರಿಸಲಿಲ್ಲ, ಮೋನುನ ಕುಪಿತ ಸ್ವಭಾವ ಅರಿತ  ರಮೇಶ  ಇನ್ನು ಇವನಿಗೆ ಏನು ಕೇಳಿ ಪ್ರಯೋಜನವಿಲ್ಲವೆಂದು ತಿಳಿದು ಮೌನ ಧರಿಸಿದ, ಅಲ್ಲೇ ಇದ್ದ ಉಷಾ ಚಿಕ್ಕಮ್ಮ "ಅವನು ಹಿಂತಿರುಗಿ ಕೊಡುತ್ತಾನೆ ರಮೇಶ, ನೀನು ಚಿಂತಿಸ ಬೇಡ"ಎಂದು ಹೇಳಿದರು.   

ರಮೇಶ ಅವರನ್ನು ನೋಡಿ ನಿಟ್ಟುಸಿರು ಎಳೆದ, ಅವನಿಗೆ ಮೋನು ಸೌಖ್ಯವಿಲ್ಲದ ಅಮ್ಮನಿಂದ ಹಣ ತೆಗೊಂಡದ್ದು ಸರಿ ಅನಿಸಲಿಲ್ಲ, ಆದರೆ ಮಾತನ್ನು ಬೆಳೆಸಿ ಏನು ಪ್ರಯೋಜನ ಎಂದು ಸುಮ್ಮನಾಗಿದ್ದ. 

ರಮೇಶನಿಗೆ ಹಣ ಅಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತು ಸುಳ್ಳಲ್ಲ ಎಂದು ಅನಿಸಿತು, ಈ ಜಗತ್ತಿನಲ್ಲಿ ಎಲ್ಲದರಲ್ಲೂ ಪ್ರಕೃತಿಯ ಸಮತೋಲನವಿದೆ, ರಾತ್ರಿಯ ನಂತರ ಹಗಲು, ಬೇಸಿಗೆಯ ನಂತರ ಶೀತ, ಸೂರ್ಯನ ನೆರಳು, ಮರದ ಸಸ್ಯಗಳು, ನದಿ ಕೊಳಗಳು, ಪ್ರಾಣಿ,  ಪರ್ವತಗಳು, ಎಲ್ಲದರಲ್ಲೂ ಪ್ರಕೃತಿ ತನ್ನ ಸಮತೋಲನವನ್ನು ಉಳಿಸಿಕೊಳ್ಳುತ್ತದೆ, ಆದರೆ  ಮನುಷ್ಯ ಮಾತ್ರ ಎಲ್ಲವನ್ನೂ ಹಣದ ಆಧಾರದ ಮೇಲೆ ಪಡೆಯಲು ಬಯಸುತ್ತಾನೆ, ಅದನ್ನು ಹೇಗೆ ಪಡೆಯಬೇಕು, ಎಲ್ಲಿಂದ ಪಡೆಯಬೇಕು, ಯಾರಿಂದ ಪಡೆಯಬೇಕು ಎಂಬ ಗೋಚರ ಅವನಿಗೆ ಇರುವುದಿಲ್ಲ, ಒಟ್ಟಾರೆ ಅವನ ಕೆಲಸ ಆಗಬೇಕು, ಆದರೆ  ಹಣದಿಂದ ನಾವು ನಮಗೆ ಬೇಕಾದುದನ್ನೆಲ್ಲ ಖರೀದಿಸಬಹುದು, ಆದರೆ ಈ ಹಣದಿಂದ ನಾವು ಎಂದಿಗೂ ಮನಸ್ಸಿನ ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಮಾತು ಸಹ ಸತ್ಯವೆಂದು ಮರೆಯಬಾರದು.  

ಮಾರನೇ ದಿನ ಬೆಳಿಗ್ಗೆ ದಿರೇಶನಿಗೆ ಅವನ ಪಾಲಿನ ಹಣ ತೆಗೆಯಲು ರಮೇಶ ಮತ್ತು ದಿರೇಶ ಅಮ್ಮನ ಬ್ಯಾಂಕ್ ಪಾಸ್ ಬುಕ್ ಹಾಗು ಚೆಕ್ಕು ಬುಕ್ ತೆಗೆದು  ಚೇಕಲ್ಲಿ ಅಮ್ಮನಿಗೆ ಸಹಿ ಮಾಡಲು ಆಗದ ಕಾರಣ ಅಮ್ಮನ ಹೆಬ್ಬೆಟ್ಟು ಹಾಕಿಸಿ ಬ್ಯಾಂಕಿಂಗೆ ಹೋದರು ಆದರೆ ಅಲ್ಲಿ ಅಕೌಂಟಲ್ಲಿ ಅವರ ಸಹಿ ಇದ್ದ ಕಾರಣ ಬ್ಯಾಂಕಲ್ಲಿ ಆ ಚೆಕ್ಕು ಸ್ವೀಕರಿಸಲು ಅವರು ನಿರಾಕರಿಸಿದರು, ಅವರಿಂದ ಸಹಿ ಮಾಡಲು ಸಾಧ್ಯವಿಲ್ಲ ಅದಕ್ಕೆ ಹೆಬ್ಬೆಟ್ಟು ತೆಗೊಂಡದ್ದು ಎಂದು ರಮೇಶ ಮತ್ತು ದಿರೇಶ ಎಷ್ಟು ಹೇಳಿದರೂ ಅವರು ಕೇಳಲಿಲ್ಲ, ಕೊನೆಗೆ ಅಮ್ಮ ಬ್ಯಾಂಕಿಗೆ ಬಂದು ಅವರ ಎದುರು ಹೆಬ್ಬೆಟ್ಟು ಹಾಕಿದರೆ ಸ್ವೀಕರಿಸುತ್ತೇವೆ ಮತ್ತು ಡಾಕ್ಟರ್ ರಿಪೋರ್ಟ್ ಕಾಪಿ ಸಹ ಕೊಡ ಬೇಕೆಂದು  ಹೇಳಿದರು.  

ಬ್ಯಾಂಕಿಂದ ಹೊರಗೆ ಬಂದು ರಮೇಶ ದಿರೇಶನನ್ನು ಮನೆಗೆ ಹೋಗಿ ಅಮ್ಮನನ್ನು ರಿಕ್ಷಾದಲ್ಲಿ ಕರೆದುಕೊಂಡು ಬರಲು ಹಾಗು ಡಾಕ್ಟರ್ ರಿಪೋರ್ಟ್ ಸಹ ತರಲು ಹೇಳಿದ, ಸ್ವಲ್ಪ ಹೊತ್ತು ನಂತರ ದಿರೇಶ ಅಮ್ಮನನ್ನು ರಿಕ್ಷಾದಲ್ಲಿ ಬ್ಯಾಂಕಿಂಗೆ ಕರೆದು ಕೊಂಡು ಬಂದ, ಆದರೆ ಬ್ಯಾಂಕ್ ಮೆಟ್ಟಿಲು ಹತ್ತಲು ಅಮ್ಮನಿಂದ ಸಾಧ್ಯವಾಗದ ಕಾರಣ ರಮೇಶ ಬ್ಯಾಂಕ್  ಮ್ಯಾನೇಜರಿಗೆ ವಿನಂತಿ ಮಾಡಿ ಬ್ಯಾಂಕ್ ಆಫೀಸರ್ ಜೊತೆ ಹೊರಗೆ ರಿಕ್ಷಾದಲ್ಲಿಗೆ ಬಂದು ಅವರ ಹೆಬ್ಬೆಟ್ಟು ತೆಗೊಂಡರು ಹಾಗು ಡಾಕ್ಟರ್ ರಿಪೋರ್ಟ್ ಕಾಪಿ ಮಾಡಿ ತರಲು ಹೇಳಿದರು, ದಿರೇಶ ಜೆರಾಕ್ಸ್ ಅಂಗಡಿ ಹೋಗಿ ಡಾಕ್ಟರ್ ರಿಪೋರ್ಟ್ ಕಾಪಿ  ತಂದು ಕೊಟ್ಟ ನಂತರ ಅವರಿಗೆ ಹಣ ಸಿಕ್ಕಿತು.  

ಹಣ ಸಿಕ್ಕಿದ ನಂತರ ರಮೇಶ ಮ್ಯಾನೇಜರ್ ಕ್ಯಾಬಿನಿಗೆ ಹೋಗಿ ಅವರಿಗೆ ಧನ್ಯವಾದ ಸಲ್ಲಿಸಿದ, ಅಮ್ಮನ ಕಷ್ಟ ಅರಿತ ಮ್ಯಾನೇಜರ್ ಇನ್ನು ಮುಂದೆ ಸಹ ನಿಮಗೆ ಬ್ಯಾಂಕ್ ವ್ಯವಹಾರ ಮಾಡಲು ಅಮ್ಮನಿಗೆ ಕರೆದುಕೊಂಡು ಬರುವುದುದಕ್ಕೆ ಕಷ್ಟ ಆಗಬಹುದು ಅದಕ್ಕೆ ಮುಂದೆ ವ್ಯವಹಾರ ಮಾಡಲು ಈ ಖಾತೆಯಲ್ಲಿ ನೀವು ನಿಮ್ಮ ಹೆಸರು ನೋಂದಿಸಿಕೊಳ್ಳಿ ಹಾಗು ನಿಮ್ಮ ಡಾಕ್ಯುಮೆಂಟ್ಸ್ ಕೊಡಿ ಎಂದು ಒಂದು ಫಾರಂ ತೆಗೆದು ಕೊಟ್ಟರು, ರಮೇಶ ಅದಕ್ಕೆ ಒಪ್ಪಿಗೆ ನೀಡಿ ಫಾರಂ ತುಂಬಿಸಿ ಅದರಲ್ಲಿ ತನ್ನ ಫೋಟೋ ಅಂಟಿಸಿ  ಸಹಿ ಮಾಡಿ ಕೊಟ್ಟ, ಬ್ಯಾಂಕ್ ಮ್ಯಾನೇಜರ್ ಆಫೀಸರನ್ನು ಕರೆದು ಆ ಫಾರಂ ಕೊಟ್ಟು ಅದರಲ್ಲಿ  ಅಮ್ಮನ ಹೆಬ್ಬೆಟ್ಟು ಹಾಕಿ ತರಲು ಹೇಳಿದರು, ಆಫೀಸರ್ ದಿರೇಶನೊಟ್ಟಿಗೆ ರಿಕ್ಷಾದಲ್ಲಿದ್ದ ಅಮ್ಮನಲ್ಲಿಗೆ ಹೋಗಿ ಹೆಬ್ಬೆಟ್ಟು ಹಾಕಿ ತಂದರು, ರಮೇಶ ದಿರೇಶನಿಗೆ ಅವನ ಪಾನ್ ಕಾರ್ಡ ಕಾಪಿ ತರಲು ಹೇಳಿದ, ಎಲ್ಲ ಕಾರ್ಯ ವಿಧಾನ ಮುಗಿದ ನಂತರ ಅವರು ಇನ್ನೊಂದು ಸಲ ಮ್ಯಾನೇಜರಿಗೆ  ಧನ್ಯವಾದ ಸಲ್ಲಿಸಿ ಅಲ್ಲಿಂದ ತೆರಳಿದರು. 

ಹಿಂತಿರುಗಿ ಮನೆಗೆ ಬಂದು ತೆಗೆದ ಹಣದಿಂದ  ರಮೇಶ ಅದರಿಂದ ೭೫ ಸಾವಿರ ದಿರೇಶನಿಗೆ ಕೊಟ್ಟು ಮಿಕ್ಕಿದ ೭೫ ಸಾವಿರ ಸುನೀತಾಳಿಗೆ ಕೊಡಲು ಹೋದ,  ಸುನೀತಾ  ಅವಳಿಗೆ ಅವಳ ಪಾಲು ಬೇಡ ಅದನ್ನು ಅಮ್ಮನ ಚಿಕಿತ್ಸೆಗೆ ಉಪಯೋಗಿಸು ಎಂದು ರಮೇಶನಿಗೆ ಹೇಳಿದಳು, ರಮೇಶ ಮರು ಮಾತನಾಡದೆ ಅದನ್ನು ಇಟ್ಟುಕೊಂಡ.

ಪ್ರತಿ ತಿಂಗಳು ಸಾವಿರಾರು ರೂಪಾಯಿ ಅಮ್ಮಗೋಸ್ಕರ ಊರಿಗೆ ಕಳುಹಿಸುವ ರಮೇಶನಿಗೆ ಹಣದ ಅಗತ್ಯವಿತ್ತು, ಜೀವನದಲ್ಲಿ ಕೇವಲ ಹಣವೇ ಎಲ್ಲ ಅಲ್ಲವೆಂದು ಅವನಿಗೆ ಗೊತ್ತಿತ್ತು, ಆದರೆ ಹಣವಿಲ್ಲದೆ ಏನೂ ಆಗುವುದಿಲ್ಲ ಎಂದೂ ರಮೇಶನಿಗೆ ತಿಳಿದಿತ್ತು, ಅಮ್ಮನ ಕಾಯಿಲೆಯಿಂದ  ಮುಂದೆ ಸಹ ಎಷ್ಟೋ ಅಡಚಣೆ ವಿಪ್ಪತ್ತುಗಳು ಬರಬಹುದು ಹಾಗು ಆ ಸಮಯ ಹಣ ಬೇಕಾಗಬಹುದೆಂಬ ಚಿಂತೆ ಅವನನ್ನು ಸದಾ ಕಾಡುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

Thursday, March 5, 2020

ವೃದ್ಧಾಶ್ರಮ ೨೩

ರಮೇಶ ತನ್ನ ಕಚೇರಿಯಿಂದ ಸಾಲ ಪಡೆದು ದಿರೇಶ ಹೇಳಿದ ಹಾಗೆ ಆಶಾ ಚಿಕ್ಕಮ್ಮನ ಬ್ಯಾಂಕ್ ಅಕೌಂಟಿಗೆ ೫೦ ಸಾವಿರ ಕಳುಹಿಸಿದ ಹಾಗು ಫೋನ್ ಮಾಡಿ ದಿರೇಶನಿಗೆ ತಿಳಿಸಿದ. 

ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದಾಯಿತು, ದಿರೇಶ ಹೋಮ್ ನರ್ಸನ ವ್ಯವಸ್ಥೆ ಮಾಡಿದ್ದ, ಹೇಗೋ ಸಮಯ ಕಳೆಯುತ್ತಾ ಹೋಯಿತು, ದಿವಸ ತಿಂಗಳಲ್ಲಿ ಹಾಗು ತಿಂಗಳು ವರ್ಷದಲ್ಲಿ, ರಮೇಶ ಪ್ರತಿ ತಿಂಗಳು ಹೋಮ್ ನರ್ಸಿನ ಸಂಬಳ ಹಾಗು ಮನೆ ಖರ್ಚಿಗೆ ನಿಯಮಿತವಾಗಿ ಆಶಾ ಚಿಕ್ಕಮನ ಅಕೌಂಟಿಗೆ ಹಣ ಕಳುಹಿಸುತ್ತಿದ್ದ, ಈ ಮಧ್ಯೆ ಹಲವು ಸರಿ ಹೋಮ್  ನರ್ಸ್ ಬದಲಾದರು, ಕೆಲವು ಸಮಯ ಹೋಮ್ ನರ್ಸ್ ಇಲ್ಲದೆ ಸಹ ಚಿಕ್ಕಮ್ಮನವರಿಗೆ ಅಮ್ಮನನ್ನು ನೋಡಬೇಕಾಯಿತು, ಅದಕ್ಕೆ ರಮೇಶನಿಗೆ ಚಿಕ್ಕಮ್ಮನವರ  ತುಂಬಾ ಮಾತು ಸಹ ಕೇಳಬೇಕಾಯಿತು, ರಮೇಶನ ಆ ಸಮಯ   ಚಡಪಡಿಕೆ ಹಾಗು ಒತ್ತಡದಲ್ಲಿ ಕಳೆಯಿತು, ರಮೇಶನಿಗೆ ದಿರೇಶನಿಗೆ ಫೋನ್ ಮಾಡಿ  ಹೋಮ್ ನರ್ಸ್ ಹುಡುಕಲು ಬೇಡಬೇಕಾಯಿತು ಮತ್ತು ದಿರೇಶನ ಬೇಡಿಕೆಯಂತೆ ಅವನ ಖರ್ಚಿಗೂ ಹಣ ಕಳುಹಿಸಬೇಕಾಯಿತು, ಅಮ್ಮಗೋಸ್ಕರ ಎಲ್ಲರ ಅಪಮಾನ, ಹಿಯ್ಯಾಳಿಕೆ ಸಹಿಸಿ ರಮೇಶನಿಗೆ ಹೇಗೋ ಚಿಕ್ಕಮನವರೊಟ್ಟಿಗೆ ಹಾಗು ದಿರೇಶನೊಟ್ಟಿಗೆ  ಹೊಂದಿಸಿಕೊಂಡು ಹೋಗಬೇಕಾಯಿತು.     

ನೋಡ್ತಾ ನೋಡ್ತಾ ೨ ವರ್ಷ ಕಳೆದೋಯಿತು, ರಮೇಶ ಪರಿವಾರ ಜತೆ ರಜೆಯಲ್ಲಿ ಭಾರತ ಬಂದ,  ಮುಂಬೈಯಲ್ಲಿ ಮನೆ ಇಲ್ಲದ ಕಾರಣ ಅವರು ಸುಮಾಳ ತಂಗಿಯ ಮನೆಯಲ್ಲಿ ಬಂದು ತಂಗಿದರು, ಎರಡು ದಿನ ಅಲ್ಲಿದ್ದು ರೈಲುಗಾಡಿಯಲ್ಲಿ ಊರಿಗೆ ಬಂದರು. 

ಊರಿನ ಮನೆಯಲ್ಲಿ ಪುನಃ ಕೋಲ ಇತ್ತು, ಈ ಕೋಲ  ರಮೇಶನ ನಾಲ್ಕು ವರುಷ ಮುಂಚೆ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದ ಸೌಮ್ಯ ಚಿಕ್ಕಮ್ಮನವರ ಗಂಡ ಹಾಗು ಅವರ ಮಕ್ಕಳ ಪರವಾಗಿತ್ತು, ಮನೆಯಲ್ಲಿ ಕುಟುಂಬದ ಹೆಚ್ಚಾಗಿ ಎಲ್ಲ ಸದಸ್ಯರು ಬಂದಿದ್ದರು, ರಮೇಶನ ತಂಗಿ ಸುನೀತಾ ಸಹ ಬಂದಿದ್ದಳು, ರಮೇಶ ಬಂದು ಅಮ್ಮನಿಗೆ ಸಿಕ್ಕಿದಾಗ, ಅಮ್ಮ ಸ್ವಾಭಾವಿಕವಾಗಿ ರಮೇಶನನ್ನು ನೋಡಿ ಅತ್ತರು, ಈಗ ಒಂದು ಹೋಮ್ ನರ್ಸ್ ಇದ್ದಳು ಅಮ್ಮನ ಚಾಕರಿ ಮಾಡಲಿಕ್ಕೆ,ಅಮ್ಮ ಈಗಲೂ ಮಾತಾಡುವಾಗ ತೊದಲುತ್ತಿದ್ದರು.  

ಊರಿನ ಸ್ವಲ್ಪ ಜಮೀನು ಮಾರಿದ ಕಾರಣ ಎಲ್ಲರ ಪಾಲಿಗೆ ಮೂರು ಮೂರು ಲಕ್ಷ ರೂಪಾಯಿ ಬಂದಿತ್ತು, ಅಮ್ಮನ ಪಾಲಿಗೆ ಸಹ ಮೂರು ಲಕ್ಷ ರೂಪಾಯಿ ಬಂದಿತ್ತು, ಆದರೆ ಈ ವಿಷಯ ದಿನಕರ ಮಾಮನಿಂದ ರಮೇಶನಿಗೆ ತಿಳಿಯಿತು,ವಿಕ್ರಮ ಮಾವನವರು ಅಮ್ಮನ ಪಾಲು ಅವರ ಅಕೌಂಟಿಗೆ ಹಾಕಿದ್ದರು, ಇದರ ಬಗ್ಗೆ ಯಾಕೋ ಅಮ್ಮ ರಮೇಶನಿಗೆ ಹೇಳಿರಲಿಲ್ಲ, ರಮೇಶನಿಗೆ ಸ್ವಲ್ಪ ಬೇಜಾರವೂ ಆಯಿತು, ಆದರೆ ಅಮ್ಮನಿಗೆ ಸ್ವತಹದ್ದು ಸಹ ಗೋಚಾರವಿರುವುದಿಲ್ಲ, ಇದರ ಎಲ್ಲಿ ಅವರಿಗೆ ನೆನಪಿರಬಹುದೆಂದು ಎನಿಸಿ ಅವನು ಹೆಚ್ಚು ಯೋಚಿಸಲಿಕ್ಕೆ ಹೋಗಲಿಲ್ಲ, ಆದರೆ ಇದರ ಬಗ್ಗೆ ಅವನು ಅಮ್ಮನಿಗೆ ಕೇಳಿದಾಗ ಅಮ್ಮ "ಹೌದು ಬ್ಯಾಂಕಿಗೆ ಹಾಕಿದ್ದಾರೆ, ಅದರಲ್ಲಿ ಒಂದೂವರೆ ಲಕ್ಷ ನಾನು ಮೋನುನಿಗೆ (ಉಷಾ ಚಿಕ್ಕಮ್ಮನ ಮಗ ) ಕೊಟ್ಟಿದ್ದೇನೆ". 

ರಮೇಶ ಆಶ್ಚರ್ಯದಿಂದ "ಯಾಕೆ"?

ಅಮ್ಮ "ಅವನು ಕೇಳಿದ ನಾನೇಗೆ ಇಲ್ಲ ಹೇಳಲಿ, ಅವನಿಗೆ ಅರ್ಜೆಂಟ್ ಬೇಕಿತ್ತು, ವಾಪಾಸ್ ಕೊಡುತ್ತಾನೆ"

ರಮೇಶನಿಗೆ ಅಮ್ಮನಿಗೆ ಏನು ಹೇಳಬೇಕಂತ ಅರ್ಥವಾಗಲಿಲ್ಲ. 

ಅಮ್ಮ ತೊದಲುತ್ತ "ದಿರೇಶ ಸಹ ಹಣ ಕೇಳುತ್ತಿದ್ದ,ಅವನಿಗೆ ಅವನ ಪಾಲು ಕೊಡು, ಸುನೀತಾನ  ಪಾಲೂ ಕೊಟ್ಟು ಬಿಡು, ಮೋನು ಹಣ ವಾಪಾಸ್ ಕೊಟ್ಟ ನಂತರ ನೀನು ನೋಡು ಏನು ಮಾಡಬೇಕಂತ, ನೀನು ವಿದೇಶದಲ್ಲಿದ್ದಿ ನಿನಗೇನೂ ಅಷ್ಟು ಹಣದ ಅಗತ್ಯವಿರಲಿಕ್ಕಿಲ್ಲ, ಅರ್ಜುನನನ್ನು ನೀನೆ ನೋಡಬೇಕಲ್ಲ ಅದಕ್ಕೆ ಅವನ ಯೋಚಿಸು". 

ರಮೇಶ ಅಮ್ಮನನ್ನು ನೋಡುತ್ತಾ ಯೋಚಿಸಿದ "ವಿದೇಶ ಅಂದರೆ ಜನರು ಏನು ಅನಿಸುತ್ತಾರೋ ಏನೋ?  ಅಲ್ಲಿ ಹಣ ಮರದಲ್ಲಿ ಸಿಗುತ್ತದೆ ಎಂದು ಅನಿಸುತ್ತಾರೋ ಏನೋ? ಈಗ ಅಮ್ಮನನ್ನೆ ನೋಡಿ ಅವರಿಗೆ ಎಲ್ಲರ ಚಿಂತೆ ಇದೆ, ಕೇವಲ ನನ್ನದ್ದೇ ಚಿಂತೆಯಿಲ್ಲ, ವಿದೇಶದಲ್ಲಿ ನಾವು ಯಾವ ಪರಿಸ್ಥಿತಿಯಲ್ಲಿ ಇರುತ್ತೇವೆ ಅವರಿಗೇನು ತಿಳಿದಿದೆ, ತನ್ನ ದೇಶದಿಂದ ದೂರ ಅಲ್ಲಿ ದುಡಿದು ಬದುಕುವುದು ಎಷ್ಟು ಕಷ್ಟ ಎಂದು ಅವರಿಗೇನು ಗೊತ್ತು,  ನಾನೆಷ್ಟು ಕಷ್ಟಪಟ್ಟು ಇಲ್ಲಿ ಹಣ ಕಳುಹಿಸುತ್ತೇನೆಂದು ಅವರಿಗೇನು ಗೊತ್ತು, ಸುಲಭವಾಗಿ ಸಿಗುವ ಹಣಕ್ಕೆ ಎಲ್ಲಿ ಮೌಲ್ಯವಿದೆ, ಆದರೆ ಇದ್ದಕ್ಕೆಲ್ಲ ಅಮ್ಮನಿಗೆ ದೂರುವ ಹಾಗೆ ಇರಲಿಲ್ಲ, ಅವರ ಯೋಚಿಸುವ ಶಕ್ತಿ ಸೀಮಿತವಾಗಿತ್ತು, ಅವರಲ್ಲಿ  ಅಷ್ಟೆಲ್ಲ ಯೋಚನೆ ಮಾಡುವ ಶಕ್ತಿ ಉಳಿದಿರಲಿಲ್ಲ".  

ಇನ್ನು ಮೋನು ಹಣ ವಾಪಸ್ ಯಾವಾಗ ಕೊಡುತ್ತಾನೋ? ಇಷ್ಟು ದೊಡ್ಡ ಮೊತ್ತ ತೆಗೊಂಡವರು ಅಷ್ಟು ಬೇಗ ಹಿಂತಿರುಗಿಸುವುದು ಕಷ್ಟನೇ ಎಂದು ರಮೇಶನಿಗೆ ಅನಿಸಿತು. 

ರಮೇಶ "ಮೋನು ಯಾವಾಗ ಹಣ ವಾಪಸ ಕೊಡುತ್ತಾನೆ"?

ಅಮ್ಮ "ಕೊಡುತ್ತಾನೆ, ಬೇಗ ಕೊಡುತ್ತಾನೆ". 

ರಮೇಶ ಆಶ್ಚರ್ಯದಿಂದ ಅಮ್ಮನನ್ನು ನೋಡುತ್ತಿದ್ದ, ಅಮ್ಮನಿಂದ ನಡೆದ ಈ ಕರಾಮತ್ತು ಅವನಿಗೆ ಅರ್ಥವಾಗಲಿಲ್ಲ, ಇದಕ್ಕೆ ನಗಬೇಕೋ ಅಳಬೇಕೋ  ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. 



(ಮುಂದುವರಿಯುತ್ತದೆ )


by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

Tuesday, March 3, 2020

ವೃದ್ಧಾಶ್ರಮ ೨೨

ಎರಡು ದಿವಸ ಬಿಟ್ಟು ರಮೇಶನಿಗೆ ದಿರೇಶನ ಮಿಸ್ ಕಾಲ್ ಬಂತು, ರಮೇಶ ಕೂಡಲೇ ದಿರೇಶನಿಗೆ ಕಾಲ್ ಮಾಡಿದ. 

ದಿರೇಶ "ಕೇಳು, ಒಂದು ಹುಡುಗಿ ಸಿಕ್ಕಿದ್ದಾಳೆ, ಆದರೆ ಅವಳು ಹನ್ನೆರಡು ಸಾವಿರ ಸಂಬಳ ಕೇಳುತ್ತಿದ್ದಾಳೆ ಮತ್ತು ತಿಂಗಳಿಗೆ ೩ ದಿವಸ ರಜೆ ಸಹ ಬೇಕಂತೆ ಅವಳ ಮನೆಗೆ ಹೋಗಿ ಬರಲಿಕ್ಕೆ, ಘಟ್ಟದಾಚೆಯವಳು, ಏನು ಹೇಳುವೆ". 

ರಮೇಶ "ಹನ್ನೆರಡು ಸಾವಿರ ತುಂಬಾ ಹೆಚ್ಚಲ್ಲ"???

ದಿರೇಶ "ಹೆಚ್ಚು ಹೌದು, ಆದರೆ ಏನು ಮಾಡುವುದು, ಇಲ್ಲಿ ಬೇರೆ ಯಾರೂ ಅಷ್ಟು ದೂರ ಮನೆಗೆ ಬರಲಿಕ್ಕೆ ರೆಡಿ ಇಲ್ಲ". 

ರಮೇಶ "ಹ್ಮ್ಮ್"

ದಿರೇಶ "ಮತ್ತೆ ಆಸ್ಪತ್ರೆಯ ಬಿಲ್ ನಿನ್ನೆ ತನಕ ಇಪ್ಪತೇಳು ಸಾವಿರ ಆಗಿತ್ತು". 

ರಮೇಶ "ಅಷ್ಟು ಹೇಗೆ !!!"?

ದಿರೇಶ "ಅಷ್ಟು ಹೇಗೆಂದರೆ  ...... ಆಸ್ಪತ್ರೆ ಚಾರ್ಜ್, ಡಾಕ್ಟರ್ ಚಾರ್ಜ್, ಮದ್ದಿನ , ಹೋಮ್  ನರ್ಸ್ ಎಲ್ಲ ಸೇರಿಸಿ". 

ರಮೇಶ "ಹ್ಮ್ಮ್.... ". 

ರಮೇಶನಿಗೆ ಈಗ ಹಣದ ಚಿಂತೆ ಶುರುವಾಯಿತು, ಅವನ ಹತ್ತಿರ ಅಷ್ಟೇನೂ ಉಳಿತಾಯ ಇರಲಿಲ್ಲ, ವಿದೇಶದಿಂದ ಪ್ರತಿ ತಿಂಗಳು ಸುಮಾಳ ಖರ್ಚಿಗೆ  ಮತ್ತು ಅಮ್ಮನ ಖರ್ಚಿಗೆ ತಂಗಿ ಸುನೀತಾಳಿಗೆ ಹಣ ಕಳಿಹಿಸುತ್ತಿದ್ದ, ಮಿಕ್ಕಿದ್ದು ಅವನ ಖರ್ಚು ತೆಗೆದು ಅಷ್ಟೇನೂ ಉಳಿತಾಯ ಆಗುತ್ತಿರಲಿಲ್ಲ,  ಇದ್ದದೆಲ್ಲ ಈಗ ಊರಿಗೆ ಹೋಗಿ ಬರುವಾಗ ಮುಗಿದೋಗಿತ್ತು, ಅವನ ಲೆಕ್ಕಾಚಾರದ ಪ್ರಕಾರ ಈ ತಿಂಗಳು ಒಂದು ಅದಿನೈದು ಸಾವಿರ ಬಿಲ್ ಬರಬಹುದೆಂದಿತ್ತು ಹಾಗು ಅದು ದಿರೇಶನಿಗೆ ಕೊಟ್ಟು ಬಂದ  ಮೂವತ್ತು ಸಾವಿರದಲ್ಲಿ  ಸರಿಹೊಂದಿಸಿ ಹೋಗಬಹುದೆಂದು ತಿಳಿದಿದ್ದ, ಆದರೆ  ಆ ಮೂವತ್ತು ಸಾವಿರದಲ್ಲಿ ಏನು ಉಳಿದಿರಲಿಲ್ಲ ಎಂದು ದಿರೇಶನಿಂದ ತಿಳಿದ ನಂತರ ಮತ್ತು ಆಸ್ಪತ್ರೆಯ ಇಪ್ಪತೇಳು ಸಾವಿರದ  ಬಿಲ್  ಕೇಳಿ ಇನ್ನೇನು ಮಾಡುವುದು ಎಂಬ  ಚಿಂತೆ ಅವನಲ್ಲಿ ಆವಾರಿಸಿತು.   

ರಮೇಶ ಮೌನ ಇರುವುದನ್ನು ನೋಡಿ  ದಿರೇಶ "ಏನು ಮಾಡುವುದು ಈಗ"?

ರಮೇಶ "ಓ ಕೆ, ಬೇರೆ ದಾರಿ ಇಲ್ಲ ಆ ಹುಡುಗಿಗೆ ಫೈನಲ್ ಮಾಡು ಮತ್ತು ಎರಡು ಮೂರು ದಿವಸ ನಂತರ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಆಸ್ಪತ್ರೆಯಲ್ಲಿ ಹೇಳಿಡು". 

"ಓ ಕೆ , ಹಣ ಸ್ವಲ್ಪ ಹೆಚ್ಚಿಯೇ ಕಳುಹಿಸು, ಎರಡು ಮೂರು ದಿವಸದಲ್ಲಿ ಬಿಲ್ ಇನ್ನು ಹೆಚ್ಚಾಗಬಹುದು ಮತ್ತು ಬೇರೆ ಸಹ ಖರ್ಚು ಇದೆಯಲ್ಲ" ಎಂದು ದಿರೇಶ ಹೇಳಿದ. 

ರಮೇಶ "ಬೇರೇನು ಖರ್ಚು"?

ದಿರೇಶ ಆವೇಶದಿಂದ " ಬೇರೆ ಖರ್ಚು ಇಲ್ಲವ, ಅಮ್ಮನನ್ನು ಕರೆದುಕೊಂಡು ಹೋಗುವಾಗ ಕಾರ್ ಮಾಡಬೇಕು, ಹೋಗಲಿಕ್ಕೆ ಬರಲಿಕ್ಕೆ, ಮತ್ತೆ ನೀನು ಕೊಟ್ಟು ಹೋದ ಹಣ ಮುಗಿದು ಈಗ ನಾನು ಸಾಲ ಮಾಡಿ ಖರ್ಚು ಮಾಡುತ್ತಿದ್ದೇನೆ". 

ರಮೇಶ "ಆಯಿತಾಯಿತು, ನಾನು ಹಣದ ಬಂದೋಬಸ್ತ್ ಮಾಡಿ ಕಳುಹಿಸುತ್ತೇನೆ"

ದಿರೇಶ "ಚಿಕ್ಕಮ್ಮನ ಅಕೌಂಟಿಗೆ ಕಳುಹಿಸು, ಅವರು ಬ್ಯಾಂಕಿನಿಂದ ತೆಗೆದು ನನಗೆ ಕೊಡುತ್ತಾರೆ". 

ರಮೇಶ "ಓ ಕೆ" ಎಂದು ಮಾತು ಮುಗಿಸಿ ಮುಂದಿನ ಚಿಂತೆಯಲ್ಲಿ ಮುಳುಗಿದ. 

ರಮೇಶನ ಜೀವನ ಬಹುತೇಕ ಹೀಗೆ ಕಷ್ಟವನ್ನು ಎದುರಿಸುವುದರಲ್ಲೇ ಕಳೆದಿತ್ತು, ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅವನು ಹಿಂಜರಿಯಲಿಲ್ಲ, ತುಂಬಾ ಕಷ್ಟ ಎದುರಿಸಿದ ನಂತರ ಈಗ ತಾನೇ ಅವನ ಜೀವನದಲ್ಲಿ ಸ್ವಲ್ಪ ಸುಖದ ಸೂರ್ಯ ಪ್ರಭೆ ಬಿದ್ದಿತ್ತು, ಆದರೆ ಕಷ್ಟದ ಕಾರ್ಮೋಡ  ಈಗಲೂ ಪದೇ ಪದೇ ಅವನ ಜೀವನದಲ್ಲಿ ಹಬ್ಬುತಿತ್ತು, ಅಂತಹ ಯಾವುದೇ ಪರಿಸ್ಥಿಯಲ್ಲಿ ರಮೇಶನ ದೇವರ ಪ್ರತಿ ಭಕ್ತಿ ಶ್ರದ್ಧೆಕಡಿಮೆಯಾಗಿಲ್ಲ, ಅವನು  ಯಾವುದಕ್ಕೂ ಮೊದಲು ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದ, ಶಾಂತವಾಗಿರುತ್ತಿದ್ದ, ಒಂದು ನಿಟ್ಟುಸಿರು ಎಳೆಯುತ್ತಿದ್ದ ಹಾಗು ಧನಾತ್ಮಕವಾಗಿ  ಮುಂದೆ ಸಾಗುತ್ತಿದ್ದ


(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

Monday, March 2, 2020

ವೃದ್ಧಾಶ್ರಮ ೨೧

ಊರಿಗೆ ಬಂದವರೆಲ್ಲ ಒಬ್ಬೊಬ್ಬರಾಗಿ ಹಿಂತಿರುಗಿದ ನಂತರ ಮನೆ ಪುನಃ ಖಾಲಿ ಖಾಲಿಯಾಯಿತು, ರಮೇಶ ಸಹ ಅಮ್ಮನನ್ನು ಆಸ್ಪತ್ರೆ ಸೇರಿಸಿ ದಿರೇಶನಿಗೆ ಅಮ್ಮನ ಜವಾಬ್ದಾರಿ ನೀಡಿ, ಅವನ ಖರ್ಚಿಗಾಗಿ, ಅಮ್ಮನ ಆಸ್ಪತ್ರೆ ಖರ್ಚಿಗಾಗಿ ಹಾಗು  ಹುಡುಗಿಯ ಸಂಬಳ ಇದಕ್ಕೆಲ್ಲ ೩೦ ಸಾವಿರ ರೂಪಾಯಿ  ಕೊಟ್ಟು  ಮುಂಬೈ  ಬಂದು ಸಹ ಪರಿವಾರ ವಿದೇಶ ತೆರಳಿದ, ಊರಿಂದ ಬರುವ ಮುಂಚೆ ಅಮ್ಮನಿಗೆ ಸಿಕ್ಕಿದಾಗ ಅಮ್ಮ ಗೊಳೋ ಎಂದು ಅತ್ತರು, ಅವರಿಗೆ ಸಮಾಧಾನ ಹೇಳಿ ಹೇಗೋ ಆಸ್ಪತೆಯಿಂದ ಬಂದಿದ್ದ, ಮನೆಗೆ ಬಂದು ಚಿಕ್ಕಮ್ಮನವರಿಗೆ ಅಮ್ಮನ ಸ್ವಲ್ಪ ಧ್ಯಾನ ಇಡಬೇಕೆಂದು ಬೇಡಿ ಹಾಗು ಮನೆ ಮತ್ತು ಅಮ್ಮನ ಖರ್ಚಿಗೆ ಪ್ರತಿ ತಿಂಗಳು ಹಣ ಚಿಕ್ಕಮನ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡುತ್ತೇನೆಂದು ಸಹ ಹೇಳಿ ಬಂದಿದ್ದ.

ವಿದೇಶ ಬಂದು ರಮೇಶ ಪುನಃ ಅಲ್ಲಿಯ ಕೆಲಸ ಕಾರ್ಯದಲ್ಲಿ ನಿರತನಾದ, ಆದರೆ ಎರಡು ದಿನಕ್ಕೆ ಒಂದು ಸಾಲ ಫೋನ್ ಮಾಡಿ ಅಮ್ಮನ ಬಗ್ಗೆ ವಿಚಾರಿಸುತ್ತಿರುತ್ತಿದ್ದ. 

ಅಮ್ಮನಿಗೆ ಆಸ್ಪತ್ರೆ ಸೇರಿಸಿ ೨೦ ದಿವಸ ಆಗಿತ್ತು, ಆದರೆ ಅಷ್ಟೇನೂ ಸುಧಾರಣೆ ಕಂಡು ಬರುವುದಿಲ್ಲ, ಅದರ ಕಾರಣ  ಅಮ್ಮ ಆಸ್ಪತ್ರೆಯಲ್ಲಿ ಸ್ವಲ್ಪ ಸಹ ಸಹಯೋಗ ಮಾಡುವುದಿಲ್ಲ, ಏನೂ ಹೇಳಿದರೂ  ಕೇಳುವುದಿಲ್ಲ, ಎಲ್ಲದಕ್ಕೂ ಅವರಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ  ಎಂದು ದಿರೇಶ ತಿಳಿಸಿದ. 

ದಿರೇಶನಿಂದ ಕೆಲಸದ ಹುಡುಗಿ ಸುಮ್ಮಿಯ ಕಥೆ ಕೇಳಿ  ರಮೇಶ ಇನ್ನು ಚಿಂತಿತನಾದ, ಅವಳು ಇಡೀ ದಿನ ಮೊಬೈಲಲ್ಲಿ ಬಾಯ್ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು ಅಂತೇ, ಅಮ್ಮನ ಚಾಕರಿ ಸಹ ಸರಿ ಮಾಡುತ್ತಿರಲಿಲ್ಲ, ಅದಕ್ಕೆ ದಿರೇಶ ಅವಳಿಗೆ ಬೈದಕ್ಕೆ ಅಮ್ಮನನ್ನು ಬಿಟ್ಟು ಹೇಳದೆ ಕೇಳದೆ ಆಸ್ಪತ್ರೆಯಿಂದ ಹೋಗಿದ್ದಳು, ಅವಳ ತಂದೆ ಮೊದಲೇ ದಿರೇಶನಿಂದ  ಸಂಬಳದಿಂದ ಹೆಚ್ಚು ಹಣ ತೆಗೆದುಕೊಂಡು ಹೋಗಿದ್ದ, ಇನ್ನು ಅವಳು ಬರುವ ಹಾಗೇನು ಇರಲಿಲ್ಲ,  ಆಸ್ಪತ್ರೆಯಿಂದ ದಿರೇಶನಿಗೆ ಫೋನ್ ಬಂದು ಅವಳು ಇಲ್ಲವೆಂಬ ವಿಷಯ  ತಿಳಿದ ನಂತರ ದಿರೇಶ ಬಂದು ಆಸ್ಪತ್ರೆಯ ಹೋಮ್ ನರ್ಸ್ ಇಟ್ಟಿದ್ದ. 

ದಿರೇಶನಿಗೂ ಕೆಲಸದಿಂದ ದಿನ ಆಸ್ಪತ್ರೆ ಬರಲು ಸಾದ್ಯವಿರಲಿಲ್ಲ ಅದಕ್ಕೆ ಇಲ್ಲಿಂದ ಡಿಸ್ಚಾರ್ಜ್ ಮಾಡುವುದೇ ಒಳ್ಳೆಯದೆಂದು ಹೇಳಿದ, ಆದರೆ ರಮೇಶನಿಗೆ ಮನೆಯಲ್ಲಿ ಇನ್ನು ಯಾರೂ ನೋಡುವುದು ಎಂಬ ಚಿಂತೆ ಶುರುವಾಯಿತು.

ರಮೇಶ ದಿರೇಶನಿಗೆ ಫೋನ್ ಮಾಡಿ ಕೇಳಿದ "ಏನು ಡಿಸ್ಚಾರ್ಜ್ ಮಾಡುತ್ತೀಯಾ"?

ದಿರೇಶ "ಅದೇ ಒಳ್ಳೆಯದು, ಇಲ್ಲಿ ಸುಮ್ಮನೆ......  ಏನೂ ಪ್ರಯೋಜನ ಕಾಣುವುದಿಲ್ಲ".

ರಮೇಶ "ಹಾಗಾದರೆ ಇನ್ನು ಅಮ್ಮನ ಚಾಕರಿಗೆ ಯಾರೂ"?

ದಿರೇಶ "ಈಗ ಇದ್ದ ಹೋಮ್ ನರ್ಸನಿಗೆ ಕೇಳಿದೆ, ಅವಳು ಜನ ಸಿಗಬಹುದು ಆದರೆ ಮನೆಗೆ ಬರಬೇಕೆಂದರೆ ತುಂಬಾ  ಹಣ ಕೇಳಬಹುದೆಂದು ಹೇಳಿದ್ದಳು"

ರಮೇಶ "ಅವಳೇ ಬರುವುದಿಲ್ಲವ"?

ದಿರೇಶ "ಇಲ್ಲ,  ಅವಳಿಗೆ ಕೇಳಿದೆ, ಅವಳು ಆಗುವುದಿಲ್ಲ ಹೇಳಿದಳು, ಇಲ್ಲೇ ಸಮೀಪ ಅವಳ ಮನೆ, ಒಂಬತ್ತು ಸಾವಿರ ಸಂಬಳ, ಅವಳ್ಯಾಕೆ ಬರುತ್ತಾಳೆ ".  

ರಮೇಶ "ಹ್ಮ್ಮ್.... ಹೋಮ್ ನರ್ಸ್ ಇಲ್ಲದೆ ಮನೆಗೆ ಕರೆದುಕೊಂಡು ಹೋಗುವ ಹಾಗೆ ಇಲ್ಲ, ಮೊದಲು ಹೋಮ್ ನರ್ಸ್ ಹುಡುಕು" ಎಂದು ಹೇಳಿದ.

ದಿರೇಶ "ಹ್ಮ್ಮ್, ಮತ್ತೆ ನೀನು ಕೊಟ್ಟ ಹಣಯೆಲ್ಲ ಮುಗಿದಿದೆ"

ರಮೇಶ ಆಶ್ಚರ್ಯದಿಂದ "ಏನು!! ೩೦ ಸಾವಿರ ಮುಗಿಯಿತಾ"?

ದಿರೇಶ ಸ್ವಲ್ಪ ಆವೇಶದಿಂದ "ಮತ್ತೇನು ಇಲ್ಲಿ ಖರ್ಚು ಎಷ್ಟಿದೆ ಗೊತ್ತುಂಟಾ ನಿನಗೆ? ಆರು ಸಾವಿರ ಸುಮ್ಮಿಯ ತಂದೆಗೆ ಕೊಟ್ಟಿದ್ದೆ, ಹತ್ತು ಸಾವಿರ ನೀನು ನನಗೆಂದು ಕೊಟ್ಟದ್ದು ಅದು ನಾನು ಹೆಂಡತಿ ಮಕ್ಕಳಿಗೆ ಕಳಿಸಿದೆ, ಬೇರೆ ಹದಿನಾಲ್ಕು ಸಾವಿರದಲ್ಲಿ ಅಮ್ಮನ ಊಟ, ಉಪಹಾರ ಬೇರೆಲ್ಲ ಖರ್ಚು".

ಇದನ್ನು ಕೇಳಿ ರಮೇಶ  ನಿಟ್ಟುಸಿರೆಳೆದ, ಅವನಿಗೆ ಗೊತ್ತಿತ್ತು ಈಗ ಹೆಚ್ಚೇನು ದಿರೇಶನಿಗೆ ಹೇಳಿದರೆ, ಹಾಗಾದರೆ ನೀನೆ ಬಂದು ಮಾಡೆಂದು ಹೇಳಬಹುದು, ಅದಕ್ಕೆ ಅವನು ಶಾಂತಿಯಿಂದ "ಓ ಕೆ, ನೀನು ಹೋಮ್ ನರ್ಸ್ ಹುಡುಕು ನಂತರ ಆಸ್ಪತ್ರೆ ಬಿಲ್ ಎಷ್ಟು ಆಗುತ್ತದೆ ನೋಡಿ ಹೇಳು"

ದಿರೇಶ "ಓ ಕೆ, ಬಿಲ್ ತುಂಬಾ ಆಗಬಹುದು, ಹುಡುಗಿ ಸಿಕ್ಕಿದ ನಂತರ ಫೋನ್ ಮಾಡುತ್ತೇನೆ"ಎಂದು ಹೇಳಿ ಫೋನ್ ಇಟ್ಟ.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ :ಗೂಗಲ್ 

Sunday, March 1, 2020

ವೃದ್ಧಾಶ್ರಮ ೨೦

ರಾತ್ರಿ ತಂಬಿಲದ ಔತಣಕೂಟ ಗೌಜಿಯಿಂದ ನಡೆಯಿತು ಹಾಗು ಮನೆಯಲ್ಲಿ ಎಲ್ಲರು ಸೋತು ಹೋದ ಕಾರಣ ಊಟದ ನಂತರ ಎಲ್ಲರು ಬೇಗ ಮಲಗಿದರು.  

ಮಾರನೇ ದಿನ ಬೆಳ್ಳಿಗೆ ರಮೇಶ ಮತ್ತು ದಿರೇಶ ಸುಮ್ಮಿಯೊಟ್ಟಿಗೆ ಅಮ್ಮನನ್ನು ಕರೆದುಕೊಂಡು ಊರಿನ ಸಮೀಪ ಇದ್ದ ಪ್ರಸಿದ್ಧ ಆಯುರ್ವೇದಿಕ್  ಆಸ್ಪತ್ರೆಗೆ ಹೋದರು,  ಅಲ್ಲಿ ಡಾಕ್ಟರಿಗೆ ತೋರಿಸಿದ ನಂತರ ಡಾಕ್ಟರ್ "ನೋಡಿ ಇವರನ್ನು ಸ್ವಲ್ಪ ಸಮಯ ಇಲ್ಲಿ ಅಡ್ಮಿಟ್ ಮಾಡಿ, ಇಲ್ಲಿ ಇದ್ದರೆ ನಮ್ಮ ಚಿಕೆತ್ಸೆಯ ನಂತರ  ಇವರಲ್ಲಿ ಬದಲಾವಣೆ ಕಂಡು ಬರಬಹುದು, ಯಾಕೆಂದರೆ ನಾವು ಇಂತಹ ರೋಗಿಗೆ ವ್ಯಾಯಾಮ ಎಲ್ಲ ಮಾಡಿಸಿ ಮತ್ತೆ ಆ ಪ್ರಕಾರ ಕೆಲವು ಆಯುರ್ವೇದಿಕ್ ಮದ್ದು ಕೊಟ್ಟು ಅವರ ಚಿಕೆತ್ಸೆ ಮಾಡುತ್ತೇವೆ, ಎಷ್ಟೋ ಜನರಿಗೆ  ಇದರಿಂದ ತುಂಬಾ ಲಾಭ ಆಗಿದೆ, ಅವರಲ್ಲಿ ಸುಧಾರಣೆ ಕಂಡು ಬಂದಿದೆ, ನೀವು ಸಹ ಒಂದೆರಡು ತಿಂಗಳು ಇಟ್ಟು ನೋಡಿ" ಎಂದು ಹೇಳಿದರು.

ರಮೇಶ "ಡಾಕ್ಟ್ರೇ, ನಿಮಗೇನನಿಸುತ್ತದೆ ಅಮ್ಮನಿಗೆ ಸರಿ ನಡೆಯಲು ಆಗಬಹುದ"?

ಡಾಕ್ಟರ್ "ನೋಡಿ, ಇದರಲ್ಲಿ ನಮಗೆ ಅವರ ಸಹಯೋಗ ಎಷ್ಟು ಸಿಗುತ್ತದೆ ಅದರ ಮೇಲೆ ಇದು ಅವಲಂಭಿಸುತ್ತಿರುತ್ತದೆ, ಕೆಲವು ರೋಗಿಗಳು ಸ್ವತಃ ತುಂಬಾ ಸಹಯೋಗ ಮಾಡುತ್ತಾರೆ, ಪ್ರಯತ್ನ ಮಾಡುತ್ತಾರೆ ಆದ್ದರಿಂದ ಅವರಲ್ಲಿ ತುಂಬಾ ಸುಧಾರಣೆ ಕಂಡು ಬರುತ್ತದೆ ಆದರೆ ಕೆಲವು ರೋಗಿಗಳು ಸ್ವಲ್ಪ ಸಹ ಪ್ರಯತ್ನ ಮಾಡಲು ಸಿದ್ಧ ಇರುವುದಿಲ್ಲ, ಇವರು ಸಹಯೋಗಿಸಿದರೆ  ಖಂಡಿತ ಸ್ವಲ್ಪಾದರೂ ಸುಧಾರಣೆ ಕಂಡು ಬರಬಹುದು, ನೋಡಿ ನೀವು ವಿಚಾರ ಮಾಡಿ ತಿಳಿಸಿ, ಒಪ್ಪಿಗೆ ಆದರೆ ಕೌಂಟರಿಗೆ ಹೋಗಿ ಈ ಚೀಟಿ ತೋರಿಸಿ ಹಣ ತುಂಬಿಸಿ ಅವರನ್ನು ಅಡ್ಮಿಟ್ ಮಾಡಿ" ಎಂದು ಹೇಳಿ ಚೀಟಿ ಬರೆದು ಕೊಟ್ಟರು.

ಆದರೆ ರಮೇಶನಿಗೆ ಚಿಂತೆಯಂದರೆ ಅವನು ಕೇವಲ ಇನ್ನು ಮೂರು ದಿವಸ ಇಲ್ಲಿ ಊರಲ್ಲಿದ್ದ ನಂತರ ಅವರಿಗೆ ಮುಂಬೈ ಹೋಗಿ ವಿದೇಶ ಹೋಗಲಿಕ್ಕಿತ್ತು, ಆದರೆ ದಿರೇಶ ಅವನಿಗೆ "ನೀನು  ಚಿಂತೆ ಮಾಡಬೇಡ ನಾನು ವಾರಕ್ಕೆ ಎರಡು ಸಲ ಬಂದು ಅಮ್ಮನನ್ನು ನೋಡುತ್ತೇನೆ ಹಾಗು ಡಿಸ್ಚಾರ್ಜ್ ಆದ ನಂತರ ಸಹ ಮನೆಗೆ ಹೋಗಿ ನೋಡುತ್ತಾ ಇರುತ್ತೇನೆ, ನೀನು ಕೇವಲ ಹಣದ ವ್ಯವಸ್ಥೆ ಮಾಡು"  ಎಂದು ಹೇಳಿದ,  ಸುಮ್ಮಿಗೆ ಸಹ ಕೇಳಲಾಯಿತು, ಅವಳು ಅಮ್ಮನೊಟ್ಟಿಗೆ ಆಸ್ಪತ್ರೆಯಲ್ಲಿ  ಇರಲು ಸಾಧ್ಯನಾ ಎಂದು,  ಸುಮ್ಮಿ ಅವರೊಟ್ಟಿಗೆ ಅಲ್ಲಿಯೇ ಇದ್ದು ಕೆಲಸ ಮಾಡಲು  ಸಿದ್ಧವಾದಳು, ರಮೇಶ ದಿರೇಶನೊಟ್ಟಿಗೆ ತುಂಬಾ ವಿಚಾರ ವಿಮರ್ಶೆ ಮಾಡಿ ನಂತರ ಅಮ್ಮನನ್ನು ಸ್ವಲ್ಪ ದಿವಸ ಅಲ್ಲಿ ಅಡ್ಮಿಟ್ ಮಾಡುವ ನಿರ್ಧಾರ ತೆಗೆದುಕೊಂಡ.

ರಮೇಶ ಕೌಂಟರಿಗೆ ಹೋಗಿ ಡಾಕ್ಟರ್ ಕೊಟ್ಟ ಚೀಟಿ ತೋರಿಸಿದ, ಕೌಂಟರಲ್ಲಿ ಕುಳಿತ ಹುಡುಗಿ "ಯಾರು ನಿಮ್ಮ ಅಮ್ಮನ ಪೇಷಂಟ್? ನಿಮಗೆ ಹೋಮ್ ನರ್ಸ್ ಸಹ ಬೇಕೇ"? ಎಂದು ಕೇಳಿದಳು. 

ರಮೇಶ " ಹೌದು ನನ್ನಮ್ಮ, ನಾವು ಒಂದು ಹುಡುಗಿಗೆ ಮೊದಲೇ ಇಟ್ಟಿದ್ದೇವೆ, ಅದಕ್ಕೆ ಸದ್ಯ ಹೋಮ್  ನರ್ಸ್ ಬೇಡ " ಎಂದ.

ಅದಕ್ಕೆ ಅವಳು " ಓ ಕೆ, ಹಾಗಾದರೆ ನೀವು ೧೫೦೦೦ ಡೆಪಾಸಿಟ್ ಕೊಡಿ, ಬೆಡ್ ಚಾರ್ಜ್ ದಿನಕ್ಕೆ ಸಿಂಗಲ್ ಸಪರೇಟ್  ರೂಮ್ ಆದರೆ ೨೫೦, ಜನರಲ್ ಆದರೆ ೧೫೦ ಮತ್ತೆ ಮದ್ದಿನ ಹಾಗು  ಡಾಕ್ಟರ್ ಫೀಸ್ ಬೇರೆ ಮತ್ತೆ ಒಂದುವೇಳೆ ಹೋಂ ನರ್ಸ್ ಬೇಕಾದರೆ ಅವಳ ಚಾರ್ಜ್ ಸಹ ಬೇರೆ ಆಗುತ್ತದೆ, ಡಿಸ್ಚಾರ್ಜ್ ಮಾಡುವಾಗ ನಿಮಗೆ ಲೆಕ್ಕ ಕೊಡುತ್ತೇವೆ"

ರಮೇಶ "ಜನರಲ್ ವಾರ್ಡಲ್ಲಿ ಎಷ್ಟು ಪೇಷಂಟ್ ಇರುತ್ತಾರೆ"?

ಅವಳು " ಆರು".

"ಒಹ್!!!ಹಾಗಾದರೆ ಸಪರೇಟ್ ರೂಮ್ ಇರಲಿ" ಎಂದು  ರಮೇಶ ೧೫೦೦೦ ಕೊಟ್ಟು ರಸೀದಿ ತೆಗೊಂಡ.  
ಅವಳು ಒಂದು ವಾರ್ಡ್ ಬಾಯನ್ನು ಕರೆದು "ಇವರೊಟ್ಟಿಗೆ ಹೋಗಿ ಇವರ ಅಮ್ಮನನ್ನು ೧೦೮ ನಂಬರ್ ವಾರ್ಡಿಗೆ ಸೇರಿಸು". 

ಅಮ್ಮ ಆಸ್ಪತ್ರೆಯಲ್ಲಿ ಸೇರಿಸುವುದು ಬೇಡನೆ ಅಂದರು, ತುಂಬಾ ಹಠ ಮಾಡಿದರು ಅದಕ್ಕೆ ದಿರೇಶ ಅವರಿಗೆ ತುಂಬಾ ಬೈದ, ಆದರೆ ಅದರ ನಂತರ ಸಹ ಅವರ ಹಠಯೇನು ಕಡಿಮೆಯಾಗಲಿಲ್ಲ ಮತ್ತೆ ಹೇಗೋ  ರಮೇಶ ತುಂಬಾ ಧೈರ್ಯದಿಂದ ಅವರಿಗೆ ಸಾಂತ್ವನ ನೀಡಿ ರಾಜಿ ಮಾಡಿದ.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

Thursday, February 27, 2020

ವೃದ್ಧಾಶ್ರಮ ೧೯


ಸಂಜೆ ಮನೆಯಲ್ಲಿ ಕೋಲಕ್ಕಾಗಿ ಸೇರಿದ ಅತಿಥಿಗಳ ಊಟ ಉಪಚಾರ ಆದ ನಂತರ ಸುಮಾರು ರಾತ್ರಿ ೮ ಗಂಟೆಗೆ ಕೋಲ ಶುರುವಾಯಿತು, ತುಳು ನಾಡಿನ ಸಂಸ್ಕೃತಿ ವಿಶಾಲವಾದದ್ದು, ದೈವಾರಾಧನೆ ತುಳು ನಾಡಿನ ಮೂಲ ಸಂಸ್ಕೃತಿ, ಈಗಲೂ ತುಳು ನಾಡಿನ ಜನರು ಈ ಸಂಸ್ಕೃತಿಯನ್ನು  ಉಳಿಸಿ ಕಾಪಾಡಿದ್ದಾರೆ ಅಂದರೆ ತುಳುನಾಡಿನ ಜನರಲ್ಲಿ ಇದರ  ಮಹತ್ವ ಎಷ್ಟಿದೆಯೆಂದು ತಿಳಿಯಬಹುದು, ತುಂಬಾ ಭಕ್ತಿ ಭಾವದಿಂದ ತುಳು ನಾಡಿನ ಜನರು ಇದನ್ನು ಏರ್ಪಡಿಸುತ್ತಾರೆ. 

ತುಂಬಾ ವರುಷದ ನಂತರ ರಮೇಶ ಕೋಲ ನೋಡುತ್ತಿದ್ದ, ಸುಂದರ ವೇಷಭೂಷಣ, ಅದ್ಭುತ ನೃತ್ಯ, ಸಂವಾದ, ವಿವಿಧ ಭೂತಗಳ ವಿವಿಧ ಶೈಲಿ, ಭೂತ ವೇಷಧಾರಿಯರ ಮನಮೋಹಕ ನೃತ್ಯದ   ಸೊಬಗು ಕಣ್ಣಿಗೆ ತಂಪು ನೀಡುತ್ತಿತ್ತು, ಸಮ್ಮೋಹನಗೊಳಿಸುವಂತ್ತಿತ್ತು, ಅಮ್ಮ ಒಳಗೆ ಕಿಟಕಿಯಿಂದ ಸ್ವಲ್ಪ ಹೊತ್ತು ಕೋಲ ನೋಡಿ ನಿದ್ದೆಗೆ ಹೋಗಿದ್ದರು, ತಡರಾತ್ರಿ ದೈವಗಳ ದರ್ಶನ, ಮಧ್ಯದಲ್ಲಿ ಸ್ವಲ್ಪ ವಿರಾಮ, ಅದ್ಭುತ ಶಹನಾಯಿ ವಾದನ,  ಈ ಕೋಲದ ಸೊಬಗನ್ನು ನೋಡುವುದೇ ಒಂದು ಭಾಗ್ಯ ಎಂದು ರಮೇಶನಿಗೆ ಅನಿಸಿತು,  ಮುಂಜಾನೆ ೫ ಗಂಟೆ ತನಕ ಕೋಲ ನಡೆಯಿತು. 

ಕೋಲದ ನಂತರ  ಮನೆಯಿಂದ ಎಲ್ಲರು ಹೋದ ನಂತರ ಹೆಚ್ಚಿನಂಶ ಎಲ್ಲರು ನಿದ್ದೆ ಮಾಡಲು ಹೋದರು, ಮಕ್ಕಳೆಲ್ಲ ಮತ್ತು ಕೆಲವರು ಕೋಲದ ನಡೆಯುತ್ತಿದ್ದಂತೆ ಅರ್ಧದಲ್ಲೇ  ಮಧ್ಯೆಗೆ  ಬಂದು ಮಲಗಿದ್ದರು, ಸುಮಾ ಹಾಗು ಆತೀಶ ಸಹ ಮಧ್ಯ ರಾತ್ರಿ ತನಕ ಕೋಲಾ ನೋಡಿ ನಿದ್ದೆ ತಡೆಯಲಾರದೆ ಬಂದು ಮಲಗಿದ್ದರು. 

ರಮೇಶ ಒಂದೆರಡು ಗಂಟೆ ನಿದ್ದೆ ಮಾಡಿ ಎಚ್ಚರವಾದಾಗ ಎಲ್ಲರು ಮಲಗಿದ್ದನ್ನು ನೋಡಿ ಪೇಟೆಗೆ ಹೋಗಿ ಏನಾದರೂ ಬೆಳಿಗ್ಗೆಯ ಉಪಹಾರಕ್ಕೆ ತರುವಯೆಂದು ಪೇಟೆಗೆ ಹೋದ. 

ಪೇಟೆಯ ಭಟ್ರು ಹೋಟೆಲಲ್ಲಿ ದೋಸೆ, ವಡೆ ತಿಂದು ಚಹಾ ಕುಡಿದು ನಂತರ ಅವನು ಮನೆಗೋಸ್ಕರ ಬಿಸಿ ಬಿಸಿ ಬಟಾಟೆ ವಡೆ, ಗೋಲಿ ಬಜೆ ಕಟ್ಟಿಸಿಕೊಂಡು ಮನೆಗೆ ಬಂದ. 

ವಡೆ, ಗೋಲಿ ಬಜೆಯ ಪರಿಮಳ ಮನೆಯವರನ್ನು ಎಬ್ಬಿಸಿತು ಹಾಗು ವಡೆ, ಗೋಲಿ ಬಜೆ ತಂದಿದಕ್ಕೆ ಎಲ್ಲರು ರಮೇಶನನ್ನು ಕೊಂಡಾಡಿದರು, ಪರ ಊರಿನಿಂದ ಊರಿಗೆ ಬಂದವರಿಗೆ ಗೋಲಿ ಬಜೆ ತಿನ್ನದೆ ಊರಿಗೆ ಬಂದ ಹಾಗೆ ಅನಿಸುವುದಿಲ್ಲ, ಅಷ್ಟು ರುಚಿಕಾರವಾಗಿರುತ್ತದೆ ಈ ಗೋಲಿ ಬಜೆ, ಎಲ್ಲರ ಬಾಯಿ ಚಪ್ಪರಿಸುವ ರುಚಿಕಾರ ಗೋಲಿ ಬಜೆಗೆ  ಈ ತುಳು ನಾಡಿನ  ಜನರ  ಹೃದಯದಲ್ಲಿ ಒಂದು ವಿಶೇಷ ಸ್ಥಾನ ಒದಗಿದೆ.  

ಉಪಹಾರ ಎಲ್ಲ ಆದ ನಂತರ ಕೆಲಸದ ಹುಡುಗಿ ಸುಮ್ಮಿ ರಮೆಶನಲ್ಲಿಗೆ ಬಂದು "ಅಣ್ಣ, ನನ್ನ ಮೊಬೈಳಿಗೆ ೧೦೦ ರೂಪಾಯಿ ರಿಚಾರ್ಜ್  ಮಾಡಿ ಪ್ಲೀಸ್, ನನ್ನ ರಿಚಾರ್ಜ್ ಮುಗಿದಿದೆ" ಎಂದಳು.  

ರಮೇಶ "ಓ. ಕೆ, ಈಗ ತಾನೇ ಪೇಟೆಯಿಂದ ಬಂದೆ, ಮೊದಲು ಹೇಳಬೇಕಿತ್ತು, ಈಗ ಪುನಃ ಪೇಟೆಗೆ  ಹೋದರೆ ಮಾಡುತ್ತೇನೆ, ನಿನ್ನ ನಂಬರ್ ಕೊಟ್ಟಿಡು" ಎಂದ. 

"ಇನ್ನು ಯಾವಾಗ ಹೋಗುವಿರಿ ಅಣ್ಣ, ನನಗೆ ಸ್ವಲ್ಪ ಅರ್ಜೆಂಟ್ ಮಾತಾಡಲಿಕ್ಕಿತ್ತು" ಎಂದು ಕೇಳಿದಳು  ಸುಮ್ಮಿ. 

"ನಾನಿಲ್ಲದಿದ್ದರೆ ಬೇರೆ ಯಾರಾದರೂ ಹೋಗಬಹುದು, ಅಷ್ಟು ಅರ್ಜೆಂಟ್ ಮಾತಾಡಲಿಕಿದ್ದರೆ ನನ್ನ ಮೊಬೈಲಿಂದ ಮಾಡು" ಎಂದ ರಮೇಶ. 

"ಓ ಕೆ " ಎಂದು ಸುಮ್ಮಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೋದಳು. 

ಇದನ್ನು ನೋಡಿ ಊರ್ವಶಿ ಚಿಕ್ಕಮ್ಮ ರಮೇಶನಿಗೆ  "ಇವಳಿಗೆ ಏನಷ್ಟು ಅರ್ಜೆಂಟ್? ಯಾರ ಹತ್ತಿರ ಮಾತಾಡಲಿಕ್ಕೆ, ನೀನಷ್ಟು ತಲೆಗೆ ಇಡಬೇಡ ಇವಳನ್ನು"

ರಮೇಶ "ನಮಗೇನು ಮಾತಾಡಲಿ, ಸಂಬಳದಿಂದ ಕಡಿತ ಮಾಡಿ ಕೊಟ್ಟರಾಯಿತು"

ಸಂಜೆ ಮನೆಯಲ್ಲಿ ತಂಬಿಲ ಇತ್ತು,ತಂಬಿಲ ಅಂದರೆ ಇದನ್ನು ಭೂತಾರಾಧನೆಯ ನಂತರ ಭೂತಗಳಿಗೆ ಕೊಡುವ  ನೈವೇದ್ಯ ಎನ್ನಬಹುದು, ತುಳುನಾಡಿನ ಸಂಸ್ಕೃತಿ  ಪ್ರಕಾರ  ಕೋಲ ಆದ ನಂತರ ಈ ಭವ್ಯ ಔತಣಕೂಟ ಏರ್ಪಡಿಸುತ್ತಾರೆ ಹಾಗು ಮೊದಲು ಭೂತಗಳಿಗೆ ಊಟ ಬಡಿಸಿದ  ನಂತರವೇ  ಬಂದ  ನೆಂಟರಿಷ್ಟರಿಗೆ  ಊಟ ಬಡಿಸುತ್ತಾರೆ.   

ವಿಕ್ರಮ ಮಾವ ರಮೇಶ ಹಾಗು ಅವನ ಕಸಿನ್ ಆನಂದನನ್ನು ಕರೆದು ಒಂದು ಪಟ್ಟಿ ಕೊಟ್ಟು "ರಮೇಶ ನೀವಿಬ್ಬರು ಪೇಟೆಗೆ ಹೋಗಿ ಈ ಸಾಮಾನು ಖರೀದಿ ಮಾಡಿಕೊಂಡು ಬನ್ನಿ, ನಾನು ಇಲ್ಲಿಯ ಬೇರೆ ಕೆಲಸ ನೋಡುತ್ತೇನೆ " ಎಂದರು. 

ರಮೇಶ "ಓ ಕೆ " ಎಂದು ಅವರಿಂದ ಸಾಮಾನಿನ ಪಟ್ಟಿ ತೆಗೆದುಕೊಂಡ. 

ಸ್ನಾನ ಎಲ್ಲ ಮುಗಿಸಿ ರಮೇಶ ಮತ್ತು ಆನಂದ ಪೇಟೆಗೆ ತೆರಳಿದರು. 


(ಮುಂದುವರಿಯುತ್ತದೆ)


By ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 25, 2020

ವೃದ್ಧಾಶ್ರಮ ೧೮


ಸಂಜೆ ಕೋಲ ಇದ್ದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ ಇತ್ತು, ಎಲ್ಲರು ಏನಾದರೊಂದು ಕೆಲಸದಲ್ಲಿದ್ದರು, ರಮೇಶ ಅಮ್ಮನ ಚಾಕರಿಗೆ ಬಂದ ಹುಡುಗಿ ಸುಮ್ಮಿಗೆ  ಅಮ್ಮನ ಏನೇನು ಕೆಲಸ ಇದೆ ಅದನ್ನು ಅವಳಿಗೆ ತಿಳಿಸಿದ ಹಾಗು ಅವಳ ಸಹಾಯದಿಂದ ಅಮ್ಮನ ಸ್ನಾನ ಸಹ ಮುಗಿಸಿದ.   

ಮಧ್ಯಾಹ್ನದ ನಂತರ ಮನೆಗೆ ನೆಂಟರಿಷ್ಟರೆಲ್ಲರ ಆಗಮನ ಶುರುವಾಯಿತು, ಎಲ್ಲರು ಅವರವರ ಸಂಬಂಧಿಕರನ್ನು ಗೌರವದಿಂದ ಸ್ವಾಗತಿಸಿ ಅವರೊಟ್ಟಿಗೆ ಮಾತಾಡುವುದರಲ್ಲಿ ನಿರತರಾದರು. 

ಕೋಲ ಇದ್ದ ಕಾರಣ ಸುಮಾ ಆತೀಶನೊಟ್ಟಿಗೆ ತವರು ಮನೆಯಿಂದ ಹಿಂತಿರುಗಿ  ಮನೆಗೆ ಬಂದಿದ್ದಳು ಒಟ್ಟಿಗೆ ಅವಳ ತಂದೆ ಸಹ ಬಂದಿದ್ದರು, ಕೋಲಕ್ಕೆ  ನೆಂಟರಿಷ್ಟರನ್ನೆಲ್ಲ ಕರೆಯುವುದು ಊರಿನ ಹಳೆ ಪದ್ಧತಿ, ಇದರಿಂದ ಸಂಬಂಧ ಬೆಳೆದು ಸಧೃಡವಾಗುತ್ತಿತ್ತು.  

ಮನೆಗೆ ಬಂದವರೆಲ್ಲ ಅಮ್ಮನನ್ನು ನೋಡಲು ಅವರ ಕೋಣೆಗೆ ಹೋಗುತ್ತಿದ್ದರು, ಅಮ್ಮನ ಮುಖದಲ್ಲಿ ಯಾವುದೇ ಭಾವನೆ ಮೂಡುತ್ತಿರಲಿಲ್ಲ, ಅವರ ಮುಖದಲ್ಲಿ ಒಂತರಹ ಹತಾಶೆ ಕಾಣುತ್ತಿತ್ತು,  ಅವರಿಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ, ಸಂತೋಷದಲ್ಲಿರುವುದನ್ನು ಅವರು ಮರೆತು ಹೋಗಿದ್ದರು, ರಮೇಶನಿಗೆ ತಿಳಿದಿತ್ತು ಅಮ್ಮನ ಮನಸ್ಥಿತಿ ಆದ್ದರಿಂದ ಅವನು ಅವರಿಗೆ ಏನೂ ಹೇಳಲು ಹೋಗುತ್ತಿರಲಿಲ್ಲ.   

ಅಮ್ಮನಿಗೆ ಸ್ಪಷ್ಟ ಹಾಗು ಹೆಚ್ಚು ಮಾತಾಡಲು ಆಗುತ್ತಿರಲಿಲ್ಲ, ತೊದಲುತ್ತ ಉತ್ತರ ಕೊಡುತ್ತಿದ್ದರು, ಬಂದವರು ಹೆಚ್ಚು ಪ್ರಶ್ನೆ ಕೇಳಿದರೂ ಅವರಿಗೆ ಕಿರಿಕಿರಿ ಆಗುತಿತ್ತು. 

ಆರೋಗ್ಯ ಸರಿ ಇರದಿದ್ದಾಗ, ನೋವಿನಿಂದ ದೇಹ ಬಳಲುತ್ತಿದ್ದಾಗ, ಮನಸ್ಸಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತದೆ, ಆ ನೋವಿನಿಂದ ಹೊರ ಬರಲು ಹಾಗು ಆರೋಗ್ಯಕರ ಮತ್ತು ಸುರಕ್ಷಿತವಾಗಿದ್ದೇನೆ ಎಂದು ಅನುಭವಿಸಲು ಸಮಯ ಬೇಕಾಗುತ್ತದೆ, ಈ ಒತ್ತಡದಿಂದ  ಸುರಕ್ಷತೆಯ ಪ್ರಜ್ಞೆ ಚೂರುಚೂರಾಗುತ್ತದೆ, ಈ  ಅಸಹಾಯಕತೆಯ  ಅನುಭವದಿಂದ ಮನಸ್ಸಲ್ಲಿ ಅಸಮಾಧಾನ, ನಿರಾಸೆ, ಆತಂಕ  ಮನೆ ಮಾಡಿಕೊಳ್ಳುತ್ತದೆ, ನೆನಪು ಶಕ್ತಿಯೂ ಕ್ಷೀಣವಾಗುತ್ತದೆ, ಜೀವ ಜಡವೆನಿಸುತ್ತದೆ, ಸಂಬಂಧದಲ್ಲಿ ವಿಶ್ವಾಸ ಉಳಿಯುವುದಿಲ್ಲ.

ಅಮ್ಮ ಈಗ ಇದೇ  ಪರಿಸ್ಥಿತಿಯಲ್ಲಿದ್ದರು, ಅವರಿಗೆ ಯಾವುದು ಬೇಡ ಅನಿಸುತ್ತಿತ್ತು, ಜೀವನ ಕಠಿಣವೆನಿಸುತ್ತಿತ್ತು.     

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Monday, February 24, 2020

ವೃದ್ಧಾಶ್ರಮ ೧೭


ಮಾರನೇ ದಿನ ಬೆಳಿಗ್ಗೆ ಮನೆಯಲ್ಲಿ ಒಟ್ಟಿಗೆ ಎಲ್ಲರು ಕೂತು ಚಹಾ ಉಪಹಾರ ಮಾಡುವಾಗ  ಮನೆಗೆ ದಿರೇಶನನ್ನು ಕೇಳಿ ಒಬ್ಬ ವಯಸ್ಕ ಮನುಷ್ಯ ಒಂದು ಚಿಕ್ಕ ಹುಡುಗಿಯ ಜತೆ ಬಂದ, ಹುಡುಗಿಗೆ  ಸಾಧಾರಣ ೧೬, ೧೭ ವಯಸ್ಸಾಗಿರಬೇಕು ಅವಳೊಟ್ಟಿಗೆ ಒಂದು ಹ್ಯಾಂಡ್ ಬ್ಯಾಗ್ ಸಹ ಇತ್ತು, ಎಲ್ಲರಿಗೆ ಅಂದಾಜಾಯಿತು ಇದು ಅಮ್ಮಗೋಸ್ಕರ ಕೆಲಸಕ್ಕೆ ಹೇಳಿದ ಹುಡುಗಿಯೇ ಇರಬೇಕೆಂದು, ದಿರೇಶ ಅವರನ್ನು ನೋಡಿ ಅವರಿಗೆ ಒಳಗೆ ಬರಲು ಹೇಳಿ ರಮೇಶನನ್ನು ಕರೆದು "ರಮೇಶ ಇವರೇ, ಈ ಹುಡುಗಿಯೇ ಅಮ್ಮಗೋಸ್ಕರ ಹೇಳಿದ್ದು".

ರಮೇಶ ಅವಳನ್ನು ನೋಡಿ "ಆದರೆ ಇವಳು ತೀರಾ ಚಿಕ್ಕ ಹುಡುಗಿ ಇವಳಿಂದ ಅಮ್ಮನ ಕೆಲಸ ಆಗಬಹುದ"?

ಹುಡುಗಿಯ ತಂದೆ "ಚಿಕ್ಕ ಏನಿಲ್ಲ ಸಾರ್, ೧೯ ವರುಷ ಆಗಿದೆ ಇವಳಿಗೆ, ಮೈ ಬೆಳೆಯಲಿಲ್ಲ ಅಷ್ಟೇ  ಎಲ್ಲ ಕೆಲಸ ಮಾಡುತ್ತಾಳೆ ಸಾರ್,  ಈ ತರಹದ ಕೆಲಸ ಮಾಡಿದ್ದಾಳೆ, ನಿಮಗೆ ಏನೂ ತೊಂದರೆ ಆಗದು".

ಅದಕ್ಕೆ ಆಶಾ ಚಿಕ್ಕಮ "ನೀವು ನಮ್ಮ ಅಕ್ಕನವರನ್ನು ನೋಡಿದ್ದೀರಾ, ಅವರನ್ನು ಎತ್ತಲು ಎರಡು ಮೂರು ಜನ ಬೇಕು, ಇವಳಿಂದ ಅದೆಲ್ಲ ಹೇಗೆ ಸಾಧ್ಯ".

ಆಗ ಆ ಹುಡುಗಿ "ಇಲ್ಲಕ್ಕ, ನನಗೆ ಗೊತ್ತು ಕೆಲಸ,ನಾನು ಮಾಡಿದ್ದೇನೆ ವಯಸ್ಕರ ಸೇವೆ ಜೊತೆಗೆ ನಾನು ಮನೆಯ ಕೆಲಸದಲ್ಲೂ ನಿಮ್ಮ ಸಹಾಯ  ಮಾಡುತ್ತೇನೆ" ಎಂದಳು.

ಆಶಾ ಚಿಕ್ಕಮ್ಮ "ನಂತರ ನೀನು ಅದಾಗುದಿಲ್ಲ, ಇದಾಗುದಿಲ್ಲ ಎಂದು ಹೇಳ ಬಾರದು".

ಹುಡುಗಿಯ ತಂದೆ "ಇಲ್ಲಮ್ಮ, ನೀವು ಏನೂ ಚಿಂತೆ ಮಾಡಬೇಡಿ, ಇವಳೆಲ್ಲ ಮಾಡುತ್ತಾಳೆ ಮತ್ತೆ ಇಲ್ಲೆ ಇರುತ್ತಾಳೆ, ಅವಳ ಬಟ್ಟೆ ಎಲ್ಲ ತಂದಿದ್ದೇನೆ, ಕೇವಲ ತಿಂಗಳಿಗೊಮ್ಮೆ ಮನೆಗೆ ಹೋಗಿ ಬರುತ್ತಾಳೆ ಅಷ್ಟೇ".

ರಮೇಶ ಎಲ್ಲರೊಟ್ಟಿಗೆ ವಿಚಾರ ವಿಮರ್ಶೆ ಮಾಡಿದ ನಂತರ ಆ ಹುಡಿಗಿಯನ್ನು ಕೆಲಸಕ್ಕೆ ಇಡಬೇಕೆಂದು ನಿರ್ಧಾರ ಆಯಿತು.

ರಮೇಶ ದಿರೇಶನಿಗೆ "ಸಂಬಳ ಎಷ್ಟು ಎಂಟು ಸಾವಿರನೇನ"?

ದಿರೇಶ "ಹೌದು, ಇವರು ಕಡಿಮೆ ಆಗಲ್ಲ ಅಂತ ಹೇಳಿದ್ದಾರೆ"

ಹುಡುಗಿಯ ತಂದೆ " ಸಾರ್, ಇದು ಕಡಿಮೇನೆ, ಎಲ್ಲೂ ಕೇಳಿ ನೋಡಿ"

ರಮೇಶ "ಓ ಕೆ, ಹಾಗಾದರೆ, ಬ್ಯಾಗ್ ತಂದಿದ್ದಿ ತಾನೇ, ಹೋಗು ಒಳಗೆ "ಎಂದು ಹುಡುಗಿಗೆ ಅಮ್ಮನ ಕೋಣೆ ತೋರಿಸಿದ. 

ಹುಡುಗಿಯ ತಂದೆ "ಸಾರ್, ನನ್ನ ಒಂದು ಕಂಡೀಶನ್ ಸಾರ್, ಸಂಬಳ ವಾರೊಕ್ಕೊಮ್ಮೆ ಕೊಡಬೇಕೆಂದು, ಮತ್ತೆ ಈಗ ಸ್ವಲ್ಪ  ಅಡ್ವಾನ್ಸ್ ಸಿಕ್ಕಿದರೆ ಒಳ್ಳೆಯದಿತ್ತು"

ಇದನ್ನು ಕೇಳಿ ರಮೇಶ ದಿರೇಶನ ಮುಖ ನೋಡಿದ.

ದಿರೇಶ ಹುಡುಗಿಯ ತಂದೆಗೆ "ಏನು ನೀವು ಇದನೆಲ್ಲ ಮೊದಲು ಹೇಳಬೇಕಲ್ಲ, ರಮೇಶ ಕೊಡು ಇವರಿಗೆ ಒಂದು ಸಾವಿರ"

ಹುಡುಗಿಯ ತಂದೆ "ಅಷ್ಟು ಕಡಿಮೇನಾ, ಒಂದು ಎರಡು ಸಾವಿರ ಆದರೂ ಕೊಡಿ"

ಆಗ ಉಷಾ ಚಿಕ್ಕಮ್ಮ " ನಿಮ್ಮದು ಒಳ್ಳೆಯದು ಇನ್ನು ಕೆಲಸ ಶುರುವಾಗಲಿಲ್ಲ ನಿಮಗೆ ಅಡ್ವಾನ್ಸ್ ಬೇಕಾ, ಯಾವ ಊರು ನಿಮ್ಮದು".

ಹುಡುಗಿಯ ತಂದೆ "ನಮ್ಮದ್ದು ಹಳೆ ಊರು ಅಲ್ಲಿಯ ದೇವಸ್ಥಾನದ ಬದಿಯಲ್ಲಿ ಗೂಡು ಮನೆ ಇದೆಯಲ್ಲ, ಅದೇ ನಮ್ಮ ಮನೆ".

ಉಷಾ ಚಿಕ್ಕಮ್ಮ "ಓಹ್, ಅದು ಮನೆಯ!!! ಹಾಗಾದರೆ, ಇವಳೇ ಸುಮ್ಮಿಯ , ನಿಮ್ಮ ಮಗಳ ಹೆಸರು ಸುಮ್ಮಿ ತಾನೇ"

ಊರಿನಲ್ಲಿದ್ದವರಿಗೆ ವಿಶೇಷವಾಗಿ ಹೆಂಗಸರಿಗೆ ಹೀಗೆ ದೂರ ದೂರದವರ ಪರಿಚಯ ಇರುವುದು ಸಾಮಾನ್ಯ ಸಂಗತಿ, ಊರಿನಲ್ಲಿ ಹೆಂಗಸರ ಗುಂಪು  ಅಲ್ಲಿ ಇಲ್ಲಿಯ ಮಾತಾಡಿ ಹೀಗೆ ಎಲ್ಲೆಲ್ಲಿಯ ಸುದ್ಧಿ ಗೊತ್ತು ಮಾಡುತ್ತಾರೆ ಹಾಗು ಈ ಎಲ್ಲ ಸುದ್ಧಿ ಬಿ. ಬಿ. ಸಿ ದವರ ಸುದ್ದಿಕ್ಕಿಂತಲೂ ಹೆಚ್ಚು ಬೇಗ ಇಡೀ ಊರಲ್ಲಿ ಹರಡುತ್ತದೆ. 

ಹುಡುಗಿಯ ತಂದೆ "ಹೌದು, ನಿಮಗೆ ಪರಿಚಯ ಇದೆಯಾ ನಮ್ಮ".

ಉಷಾ ಚಿಕ್ಕಮ್ಮ "ಹ್ಮ್ಮ್, ಕೇಳಿದ್ದೇನೆ ನಿಮ್ಮ ಬಗ್ಗೆ"

ದಿರೇಶ " ಇರಲಿ ಚಿಕ್ಕಮ್ಮ, ಬಿಡಿ ......ರಮೇಶ  ಎರಡು ಸಾವಿರ ಕೊಡು ಇವರಿಗೆ" ಎಂದು ಹೇಳಿದ.

ರಮೇಶ ಒಳಗಿನಿಂದ ತಂದು ಅವನಿಗೆ ಎರಡು ಸಾವಿರ ಕೊಟ್ಟ.

ಹುಡುಗಿಯ ತಂದೆ ಹೋದ ನಂತರ ಹುಡುಗಿ ಅಮ್ಮನ ಕೋಣೆಗೆ ಹೋದಳು.

ಉಷಾ ಚಿಕ್ಕಮ್ಮ ರಮೇಶನಿಗೆ" ಅಡ್ವಾನ್ಸ್ ಕೊಡಬಾರದಿತ್ತು ರಮೇಶ, ನಿನಗೆ ಗೊತ್ತಿಲ್ಲ ಇಲ್ಲಿ ಎಂತ ಎಂತ ತರಹದ ಜನರಿದ್ದಾರೆಂದು, ನಾನು ಇವನ ಬಗ್ಗೆ ಕೇಳಿದ್ದೇನೆ ಇವನು ದೊಡ್ಡ ಕುಡುಕನಂತೆ,  ಇಷ್ಟು ಚಿಕ್ಕ ಹುಡುಗಿ ಕೆಲಸ ಮಾಡಿ ಇವನು ಅವಳ ಸಂಬಳ ತಿನ್ನುವುದ?, ಈ ದಿರೇಶನಿಗೆ ಅವಸರ ಇಲ್ಲಾದರೆ ಈಗಲೇ ಅವನಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೆ"

ದಿರೇಶ "ನಮಗೇನು ಮಾಡಲಿಕ್ಕಿದೆ ಚಿಕ್ಕಮ್ಮ, ಹುಡುಗಿ ಕೆಲಸ ಮಾಡಿದರೆ ಸಾಕು, ಇವನು ಹೀಗೆಯೇ ಹಣ ಸಿಕ್ಕಿದ ಕೂಡಲೇ ಗಡಂಗಿಗೆ ಹೋಗಿ ಕುಡಿಯುತ್ತಾನೆ, ಈಗ ಇಲ್ಲಿಂದ ಸೀದಾ ಗಡಂಗಿಗೆ ಕುಡಿಲಿಕ್ಕೆ ಹೋಗುತ್ತಾನೆ " ಎಂದು ನಕ್ಕ. 

ಉಷಾ ಚಿಕ್ಕಮ್ಮ ದಿರೇಶನಿಗೆ "ಮತ್ತೇನು, ನಿನಗೆ ನಗು ಬರಬಹುದು, ನಿನಗೆ ಕುಡುಕನಲ್ಲದೆ ಬೇರೆ ದೋಸ್ತಿ ಇಲ್ಲವ" ಎಂದು ಬೈದರು.   

ದಿರೇಶ "ಅವನು ಕುಡುಕನಾದರೆ ನಮಗೇನು, ನಮ್ಮ ಕೆಲಸ ಆಯಿತಲ್ಲ".

ಉಷಾ ಚಿಕ್ಕಮ್ಮ "ಇನ್ನು ಎರಡು ದಿವಸಕ್ಕೊಮ್ಮೆ ಹಣಕ್ಕಾಗಿ ಬರುತ್ತಾನೆ ಇಲ್ಲವ ನೋಡು ಅವನು ಇಲ್ಲಿಗೆ".

ದಿರೇಶ "ಹಾಗೆ ಬಂದರೆ, ಅವನನ್ನು ಒದೆದು ಹೊರಗೆ ಹಾಕಿದರೆ ಸಾಕು" ಎಂದು ಹೇಳಿ ನಕ್ಕು ಒಳಗೆ ಹೋದ.

ಉಷಾ ಚಿಕ್ಕಮ ದಿರೇಶನ ಈ ಕಚ್ಚಾಟದಿಂದ ಮನೆಯಲ್ಲಿ ಎಲ್ಲರ ಮುಖದಲ್ಲೂ ನಗು ಹರಿದು ಬಂತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Sunday, February 23, 2020

ವೃದ್ಧಾಶ್ರಮ ೧೬

ಸಂಜೆಗೆ  ರಮೇಶ ಚಹಾ ಕುಡಿಯುತ್ತ ಹೊರಗೆ ಅಂಗಳಕ್ಕೆ ಬಂದಾಗ, ಅಲ್ಲಿ ವಿಕ್ರಮ ಮಾಮ ಗಂಭೀರ ಮುದ್ರೆಯಲ್ಲಿ ಕೂತು ಚಹಾ ಕುಡಿಯುತ್ತಿದ್ದರು, ರಮೇಶನನ್ನು ನೋಡಿ ಅವರು "ರಮೇಶ ಇಲ್ಲಿ ಬಾ" ಎಂದು ಕರೆದರು.

ರಮೇಶ ಅವರತ್ತಿರ ಹೋಗಿ ಒಂದು ಚೇರ್ ಎಳೆದು ಕೂತುಕೊಂಡ.

ವಿಕ್ರಮ ಮಾಮ ರಮೇಶನಿಗೆ "ನೋಡು ರಮೇಶ, ನನ್ನ ಮಾತಿಗೆ ಬೇಸರಿಸಬೇಡ, ಆದರೆ ಈ ಹೆಂಗಸರು ಕಿರಿಕಿರಿ ಮಾಡಿ ಕೆಲಸ ಮಾಡುವುದನ್ನು ನೋಡಿ ನನಗೆ ಕೋಪ ಏರಿ ಹೋಯಿತು, ಇವರಿಗೆ ಈಗ ಯಾರೂ ಬೇಡವಾಗಿದ್ದಾರೆ, ಅವರಿಗೆ ಅವರ ಶರೀರವೇ ಭಾರವಾಗಿದೆ,  ಮೇಲಿಂದ ಮನೆ ಕೆಲಸ ಅದು ಇದು, ಅವರಿಗೆ ಈ ಸಮಯ ಏನು ಹೇಳಿದರೆ ಮತ್ತೆ ಇನ್ನು ಸ್ಥಿತಿ ಇಲ್ಲಿ ಹಾಳಾಗಬಹುದು ಆದ್ದರಿಂದ  ನಾನು ಬೇಕಂತೆ ನಿನ್ನ ಮೇಲೆ ರೋಷ ತೋರಿಸಿದೆ, ಅಕ್ಕನ ಚಿಂತೆ ನನಗೂ ಇದೆ ಹಾಗು ನಿನ್ನ ಅಸಹಾಯಕತೆ ಬಗ್ಗೆಯೂ ನನಗೆ ಅರಿವಿದೆ,  ಆದರೆ ನೀನು ದಯಮಾಡಿ ಅವರ ಕಾಳಜಿ  ಇಡಲು ಯಾರನ್ನಾದರೂ ಇಟ್ಟು ಹೋಗು, ಇಲ್ಲಾದರೆ ಇವರು ನನ್ನ ಜೀವ ತಿಂದು ಬಿಡುತ್ತಾರೆ, ಹೇಗೂ ವಿಜಯನ ಕಾರಣ ಇವರಿಗೆ ಎಲ್ಲೂ ಹೋಗಲಿಕ್ಕೆ ಬರಲಿಕ್ಕೆ ಇಲ್ಲ".

ರಮೇಶ " ಓ ಕೆ ಮಾಮ, ನನಗೆ ಇದರೆಲ್ಲದರ ಅರಿವಿದೆ, ನಾನು ದಿರೇಶನಿಗೆ ಹೇಳಿದ್ದೇನೆ, ನಾಳೆ ಒಂದು ಹುಡುಗಿ ಬರುತ್ತಾಳೆ ಮತ್ತೆ ನಿಮ್ಮ ಬೈಗುಳದಿಂದ ನನಗೇನು ಬೇಜಾರವಾಗಿಲ್ಲ, ಈ ಮನೆಯ ಗುರಿಕಾರ ಆಗಿದ್ದರಿಂದ ಎಲ್ಲ ನಿಮಗೆ ಕೇಳಬೇಕಾಗುತ್ತದೆ, ಬಿಡಿ...........ಅವರವರ ಸ್ವಭಾವ, ಅವರಿಗೂ ಕಷ್ಟವಾಗುತ್ತಿರಬೇಕು, ಇಲ್ಲಾದರೆ  ಅವರೇನು ಅಷ್ಟು ಕಠೋರ ಮನಸ್ಸಿನವರಲ್ಲ". 

ವಿಕ್ರಮ ಮಾಮ ಪುನಃ "ಬೇಸರಿಸಬೇಡ ಪ್ಲೀಸ್, ಕೋಲದ್ದು ತುಂಬಾ ಕೆಲಸವಿದೆ, ನಾನು ಸ್ವಲ್ಪ ತಯಾರಿ ನೋಡಿ ಬರುತ್ತೇನೆ" ಎಂದೇಳಿ ಅಲ್ಲಿಂದ ಎದ್ದು ಹೋದರು. 

ದಕ್ಷಿಣ ಕನ್ನಡದ  ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ "ಭೂತ ಕೋಲ" ಅಂದರೆ ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ, ಕೋಲ ಹೆಚ್ಚಾಗಿ ರಾತ್ರಿ  ಶುರುವಾಗಿ ಪ್ರಾತಃ  ೫ ಗಂಟೆ ತನಕ  ನಡೆಯುತ್ತದೆ,  ಮನೆಯ ಅಂಗಳದಲ್ಲಿ ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸುತ್ತಾರೆ, ರಾತ್ರಿಗೆ  ನೆಂಟ ಮಿತ್ರರ  ಹಾಗು ಊರವರೆಲ್ಲರ ಆಗಮನದ ನಂತರ ಮನೆಯ ಯಜಮಾನ ಹಾಗು ಮನೆಯ ಸದಸ್ಯರು ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರ ಜೊತೆ  ವಾದ್ಯ ವೃಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ.
ಕೋಲ ಅಂದರೆ  ಭೂತಾರಾಧನೆ  ಶುರುವಾಗುವ ಸಮಯದಲ್ಲಿ ಭೂತದ ವೇಷ ಹಾಕುವ ಪಾತ್ರದಾರಿ  ತನ್ನ ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ಧರಿಸುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ, ಎಲ್ಲ ಭೂತಕ್ಕೆ ಒಂದೇ ರೀತಿಯ ವೇಷಭೂಷಣಗಳು ಇರುವುದಿಲ್ಲ, ಪ್ರತ್ಯೇಕ ದೈವಗಳ ವೇಷ ವಿಭಿನ್ನವಾಗಿರುತ್ತದೆ ಅದರಲ್ಲಿ ಪಾತ್ರದಾರಿಗಳು  ತೆಂಗಿನ ಗರಿಯಿಂದ ಮಾಡಿದ ಹೊದಿಕೆ ಹಾಗು ರಂಗು ರಂಗಿನ ವಸ್ತ್ರಗಳುನ್ನು ಧರಿಸುತ್ತಾರೆ ಹಾಗು ಮುಖಕ್ಕೆ ಸಿಂಗಾರ ಮಾಡುವಾಗ ಕೇವಲ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ.   ಭೂತಾರಾಧನೆಯಲ್ಲಿ ವಾದ್ಯಗಳ ತುಂಬಾ ಮಹತ್ವವಿರುತ್ತದೆ, ಭೂತಾರಾಧನೆಯಲ್ಲಿ ವಾದ್ಯಗಳ ಉಚ್ಚ ಸ್ವರದ ಧ್ವನಿಯಿಂದ ಪಾತ್ರದಾರಿಯ ಮೈಮೇಲೆ ದೈವ ಬಂದಾಗ  ಅವರ   ಸುಂದರ ನೃತ್ಯದ ಮೂಲಕ  ದೈವದ  ಕಾರ್ಣಿಕ ತೋರಿಸುತ್ತದೆ. 

ಹಲವು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು  ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬಂದಿದುದರಿಂದ  ತುಳುನಾಡಿನ ಸಂಸ್ಕೃತಿಗಳು, ಆಚರಣೆಗಳು ಇಂದು ಜೀವಂತವಾಗಿದೆ.

(ಭೂತ ಕೋಲದ ಬಗ್ಗೆ ಹೆಚ್ಚು ಮಾಹಿತಿಗಾಗಿ  ಇಲ್ಲಿ ಕ್ಲಿಕ್ಕಿಸಿ https://kn.wikipedia.org/s/16oj )

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Wednesday, February 19, 2020

ವೃದ್ಧಾಶ್ರಮ ೧೫


ಮನೆಯಲ್ಲಿ ರಮೇಶನ ಇಡೀ ಕುಟುಂಬ ಒಟ್ಟಾಗಿದ್ದ ಕಾರಣ ಮನೆಯಲ್ಲಿ ಪರಸ್ಪರ  ಹಾಸ್ಯ, ಗಮ್ಮತ್ತು, ವಿಚಾರ ವಿಮರ್ಶೆ ನಡೆಯುತ್ತಲೇ ಇತ್ತು, ತುಂಬಾ ದಿವಸದ ನಂತರ ಒಬ್ಬರನೊಬ್ಬರು ಭೇಟಿಯಾದ ನಂತರ ಆಗುವ ಖುಷಿಯೇ ಬೇರೆ, ಪರಸ್ಪರ ಮನಸ್ಸಲ್ಲಿ ಎಷ್ಟೇ ಭಿನ್ನಾಭಿಪ್ರಾಯ, ಕ್ಲೇಶ, ಕಲ್ಮಶ ಇದ್ದರೂ ಹೀಗೆ  ಎಲ್ಲರು  ಒಟ್ಟಿಗೆ ಸೇರಿದಾಗ ಮನಸ್ಸು ನಿರ್ಮಲವಾಗುತ್ತದೆ ಹಾಗು ಮನಸ್ಸಿನಲ್ಲಿದ್ದ  ಭಾರ ಮನೋಭಾವ ಹಗುರವಾಗುತ್ತ ಹೋಗುತ್ತದೆ,   ಕುಟುಂಬ ಅಂದರೆ ಹೀಗೆಯೇ ಇರುತ್ತದೆ.  

ಹಿಂದಿನ ಕಾಲದಲ್ಲಿ ಜಂಟಿ ಕುಟುಂಬ ಅಸ್ತಿತ್ವದಲ್ಲಿತ್ತು, ಅದರಲ್ಲಿ ಹಲವಾರು ತಲೆಮಾರುಗಳ ಸದಸ್ಯರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಅವರ ಅಡುಗೆಮನೆ, ಪೂಜೆ ಮತ್ತು ಆಸ್ತಿ ಎಲ್ಲ ಸಾಮೂಹಿಕವಾಗಿರುತ್ತಿತ್ತು, ಜಂಟಿ ಕುಟುಂಬದಲ್ಲಿ ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ಪ್ರೇಮ ಹೆಚ್ಚು ಕಂಡು ಬರುತಿತ್ತು, ಅವರು ತಮ್ಮನ್ನು ತುಂಬಾ ಸುರಕ್ಷಿತವಾಗಿದ್ದಂತೆ ಭಾವಿಸುತ್ತಿದ್ದರು, ಅವರಿಗೆ  ಉತ್ತಮ ಮೌಲ್ಯಗಳು  ಪಾರಂಪಾರಿಕವಾಗಿ ಸಿಗುತ್ತಿತ್ತು,  ಮೆಲ್ಲ ಮೆಲ್ಲ ಸಮಯ ಬದಲಾದಂತೆ  ಕುಟುಂಬದ ಸದಸ್ಯರು ದೂರ ದೂರ ಕೆಲಸ ಕಾರ್ಯಕ್ಕೆ ಹೋದಂತೆ ಅಲ್ಲಿಯೇ ಪ್ರತ್ಯೇಕ  ಪರಿವಾರ ಹೂಡಿ ಇರಲಾರಂಭಿಸಿದರು ಹಾಗು ಈ ಚಲನೆ ಮುಂದೆ ನಡೆಯುತ್ತಲೇ ಹೋಯಿತು, ಕ್ರಮೇಣ ಈ  ಜಂಟಿ ಕುಟುಂಬದ ಪದ್ಧತಿ ಮುಗಿಯುತ್ತ ಹೋಯಿತು ಹಾಗು ಒಂದೇ ಕುಟುಂಬ ಅಂದರೆ ಮೂಲ ಕುಟುಂಬದ ಪದ್ಧತಿ ಸ್ಥಾಪಿತವಾಯಿತು, ಇಂದಿನ ಕಾಲದಲ್ಲಿ ಎಲ್ಲಿ ನೋಡಿದರೂ ಇದೇ ಪದ್ಧತಿ  ಕಂಡು ಬರುತ್ತದೆ. 

ಮಧ್ಯಾಹ್ನ ಊಟ ಮುಗಿದ ನಂತರ ಸುಮಾ ಅತೀಶನ ಜೊತೆ ತನ್ನ ತವರು ಮನೆಗೆ ಹೋದಳು, ರಮೇಶ ಹಾಗು ಅವನ ಸೋದರಸಂಬಂಧಿಗಳು ಹಾಗು ಎಲ್ಲ ಮಕ್ಕಳು  ಸೇರಿ ಊರಲ್ಲಿದ್ದ ನದಿಗೆ ಈಜಲೂ ಹೋದರು, ಒಂದೆರಡು ಗಂಟೆ ಅಲ್ಲಿ ಮೋಜು, ಗಮ್ಮತ್ತು ಮಾಡಿ ಮನೆಗೆ ಬಂದಾಗ ರಮೇಶನ ದೊಡ್ಡ ಮಾವ ವಿಕ್ರಮ ಬೊಬ್ಬೆ ಹಾಕುವುದು ಕೇಳಿ ಬಂತು. 

ರಮೇಶ ಮತ್ತು ಎಲ್ಲರು ಮನೆಗೆ ಕಾಲು ಇಟ್ಟಾಗಲೇ ಕೋಪದಲ್ಲಿ ಪ್ರಸಿದ್ಧವಾಗಿದ್ದ ವಿಕ್ರಮ ಮಾಮ ರಮೇಶನಿಗೆ "ನೀನೆಲ್ಲಿಗೆ ಹೋಗಿದ್ದಿಯ?, ಇಲ್ಲಿ ನಿನ್ನ ಅಮ್ಮ ಮಲ ಮೂತ್ರಕ್ಕೆ  ಕರೆಯುವಾಗ ನೀನಿಲ್ಲ ಇಲ್ಲಿ, ನಿನ್ನ ಹೆಂಡತಿಯು ಇಲ್ಲ, ಇಲ್ಲಿದ್ದವರಿಗೆ ಮೊದಲೇ  ತುಂಬಾ ಕೆಲಸ ಇದೆ, ನಾಳೆ *ಭೂತ ಕೋಲ ಇದೆ, ಅದರ ಕೆಲಸ ಬೇರೆ ಇದೆ, ಇನ್ನು ನಿನ್ನಮ್ಮನ ಚಾಕರಿ ಸಹ ಇವರು ಮಾಡುವುದ"? ಎಂದು ಜೋರಿನಿಂದ ಕೇಳಿದರು. 

*ಭೂತ ಕೋಲ (ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ)

ರಮೇಶ "ಸಾರೀ, ಅವರು ಊಟ ಮಾಡಿ ಮಲಗಿದ್ದರು ಅದಕ್ಕೆ ನಾನಸಿದೆ ಇನ್ನು ಅವರು ಬೇಗ ಏಳುವುದಿಲ್ಲ ಮತ್ತೆ ಮನೆಯಲ್ಲಿ ಎಲ್ಲರಿದ್ದರಲ್ಲ  ಅದಕ್ಕೆ ನಾವೆಲ್ಲಾ ನದಿಗೆ ಹೋದದ್ದು". 

ವಿಕ್ರಮ ಮಾಮ "ನೀನು ಮೊದಲು ಅವರ ಚಾಕರಿಗೋಸ್ಕರ ವ್ಯವಸ್ಥೆ ಮಾಡು ಮತ್ತೆ ಎಲ್ಲಿ  ಹೋಗಲಿಕ್ಕಿದೆ ಹೋಗು, ಇಲ್ಲಿ ಅವರ ಕೆಲಸ ಮಾಡಲಿಕ್ಕೆ ಬೇರೆ ಯಾರ ಹತ್ತಿರ ಸಮಯವಿಲ್ಲ" ಎಂದು ಕೋಪದಿಂದ  ಹೇಳಿದರು. 

ಆಗ ಅಲ್ಲೇ ಇದ್ದ ಗುಡ್ಡಿ  ಚಿಕ್ಕಮನವರು"ಇರಲಿ ಆಯಿತಲ್ಲ ಇನ್ನು, ನೀನ್ಯಾಕೆ ಅಷ್ಟು ರೇಗಾಡುತ್ತಿದ್ದಿ" ಎಂದು ವಿಕ್ರಮ ಮಾಮನಿಗೆ ಬೈದರು. 

ರಮೇಶನಿಗೆ ಬೇಜಾರಾಗುತ್ತದೆ ಎಂದು ಉಷಾ ಚಿಕ್ಕಮ್ಮ ಸಹ ವಿಕ್ರಮ ಮಾಮನಿಗೆ "ಅಣ್ಣ, ನಿಮಗೆ ಸುಮ್ಮನೆ ಇರಲಾಗುದಿಲ್ಲವೇ, ನಾವು ಅವರಿಗೆ ಟಾಯ್ಲೆಟ್ ಮಾಡಿಸಿ ಆಗಿದೆಯಲ್ಲ, ಈಗ ಯಾಕೆ ಸುಮ್ಮನೆ ಬೊಬ್ಬೆ ಹಾಕುತ್ತಿದ್ದೀರಿ". 

ವಿಕ್ರಮ ಕೈಕಾಲು ಬಡಿದು ಮನೆಯಿಂದ ಹೊರಗೆ ಹೋದರು. 

ರಮೇಶ ಸುಮ್ಮನೆ ಏನು ಹೇಳದೆ ಒಳಗೆ ಅಮ್ಮನ ಕೋಣೆಗೆ ಹೋದ, ಅಮ್ಮ ಎಚ್ಚರದಲ್ಲಿದ್ದರು. ರಮೇಶ ಅವರಿಗೆ "ಏನು ಟಾಯ್ಲೆಟ್ ಬಂದಿತ್ತಾ"?

ಅಮ್ಮ ಬೇಜಾರದಿಂದ "ಹೌದು, ನನಗೆ ಗೊತ್ತಿರಲಿಲ್ಲ ನೀನಿಲ್ಲ ಅಂತ"

ರಮೇಶ "ದಿರೇಶ  ಎಲ್ಲಿಗೆ ಹೋದ"? 

"ಅವನೆಲ್ಲಿ ನಿಲ್ಲುತ್ತಾನೆ, ಪೇಟೆಗೆ ಹೋಗಿರಬೇಕು ಅಲೆಯಲು" ಎಂದು ದಿರೇಶನ ಕುಡಿಯುವ ಚಟ  ಅರಿತ ಅಮ್ಮ ಕೋಪದಿಂದ ಹೇಳಿದರು. 

ರಮೇಶ ಕೋಣೆಯಿಂದ ಹೊರಗೆ ಬಂದ, ಅವನಿಗೆ ಮನೆಯಲ್ಲಿದ್ದ ಎಲ್ಲರ ಮನಸ್ಥಿತಿ ಅರ್ಥವಾಗುತ್ತಿತ್ತು, ಎಲ್ಲರೂ ಅವರವರ ಜೀವನದಲ್ಲಿ ವ್ಯಸ್ತವಾಗಿರುವಾಗ, ಯಾರು ಯಾಕೆ ಬೇರೆಯವರ ಕೆಲಸ ಮಾಡಲು ಸಿದ್ಧರಿದ್ದಾರೆ, ವಿಕ್ರಮ ಮಾಮನ ಉದ್ದೇಶ ಅವನಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು, ಯಾವಾಗಲೂ ಅವರ ಕೋಪ ಅವರ ಮೂಗಿನಲ್ಲಿ ಇರುತ್ತಿತ್ತು ಮತ್ತೆ ಅದರಿಂದ ಮನೆಯ ವಾತಾವರಣ ಹಾಳಾಗುತ್ತದೆ ಇದೆಲ್ಲದ್ದರ ಬಗ್ಗೆ ಯೋಚನೆ ಮಾಡುವ ಶಕ್ತಿ ಅವರಲ್ಲಿ ಇರಲಿಲ್ಲ, ಅವರ ಸ್ವಭಾವ ಅರಿತು ರಮೇಶ ಅವರಿಂದ ಹೆಚ್ಚು ವಾದ ಮಾಡಲು ಹೋಗಿರಲಿಲ್ಲ, ಮೌನವಾಗಿ ಇರುವುದಲ್ಲದೆ  ಈಗ ಅವನಲ್ಲಿ ಬೇರೆ ಏನು ಊಪಯವಿರಲಿಲ್ಲ. 

ಅವನು ದಿರೇಶನಿಗೆ ಫೋನ್ ಮಾಡಿದ " ಎಲ್ಲಿದ್ದೀಯ"?

ದಿರೇಶ "ಪೇಟೆಯಲ್ಲಿ, ಏನು ಏನಾಯಿತು"?

ರಮೇಶ "ಏನಾಯಿತು ಆ ಹುಡುಗಿಯ, ಹೇಳಿದ್ದೀಯಾ ಬರಲಿಕ್ಕೆ"?

ದಿರೇಶ "ಅವಳ ತಂದೆಗೆ ಫೋನ್ ಮಾಡಿದೆ, ನಾಳೆ ಅವನು ಅವಳನ್ನು ಕರೆದುಕೊಂಡು ಬರುತ್ತಾನೆ"

ರಮೇಶ "ಓ. ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)


by ಹರೀಶ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 18, 2020

ವೃದ್ಧಾಶ್ರಮ ೧೪


ರಮೇಶ  ಕಾರಿನಿಂದ  ಹೊರಗೆ ತನ್ನ ಊರಿನ ಸುಂದರ ದೃಶ್ಯ  ನೋಡುತ್ತಿದ್ದ, ಸುತ್ತಲೂ ಗದ್ದೆ, ತೋಟ , ಮಧ್ಯದಲ್ಲಿ ಕಾಡು, ಹಸಿರು ಬೆಟ್ಟ, ಹಸಿರು ಹಸಿರು ಗಿಡಮರಗಳು, ಪ್ರಕೃತಿಯ ಸುಂದರ ವಾತಾವರಣ ಮನಮೋಹಕವಾಗಿತ್ತು, ಊರಿನ ಸೊಬಗನ್ನು ನೋಡಿ ರಮೇಶನ ಮನಸ್ಸು  ಪ್ರಫುಲ್ಲಿತವಾಯಿತು,  ಕೆಲವು ನಿಮಿಷದ ನಂತರ ಕಾರ್ ರಮೇಶನ ಹಳ್ಳಿ ಮನೆ ದುರ್ಗಾಮಂದಿರಕ್ಕೆ ಮುಟ್ಟಿತು. 

ಕಾರ್ ನೋಡಿ ಮನೆಯವರೆಲ್ಲ ಹೊರಗೆ ಬಂದರು, ಮನೆಯಲ್ಲಿ ದೇವರ ಕೆಲಸ ಇದ್ದ ಕಾರಣ ಪರ ಊರಿನಲ್ಲಿದ್ದ ಕುಟುಂಬದ ಹಲುವು ಸದಸ್ಯರು ಬಂದಿದ್ದರು, ಎಲ್ಲರು ಒಟ್ಟು ಕೂಡಿ ಅಮ್ಮನನ್ನು ಕಾರಿನಿಂದ ಇಳಿಸಿ ಮನೆಯ ಒಂದು ಕೋಣೆಗೆ ಸೇರಿಸಿದರು. ಸಾಮಾನೆಲ್ಲ ತೆಗೆದ ನಂತರ ರಮೇಶ ಡ್ರೈವರ್ ಗೆ ಬಾಡಿಗೆ ಎಷ್ಟೆಂದು ಕೇಳಿದ, ಡ್ರೈವರ್ ಸಜ್ಜನನಾಗಿದ್ದ, ಸರಿಯಾದ ಬಾಡಿಗೆನೇ ಹೇಳಿದ, ರಮೇಶ ಹೇಳಿದಷ್ಟು ಬಾಡಿಗೆ ಕೊಟ್ಟು ಅವನಿಗೆ ಧನ್ಯವಾದ  ಸಲ್ಲಿಸಿದ. ರಮೇಶ ಸ್ಟೇಷನಲ್ಲಿ ಬಾಡಿಗೆ ಕೇಳದಕ್ಕೆ  ಸುಮಾ ಅಸಮಾಧಾನದಲ್ಲಿದ್ದಳು, ಈಗ ಡ್ರೈವರ್ ತುಂಬಾ ಹೆಚ್ಚು ಹೇಳುತ್ತಾನೆಂದು ಸುಮಾ ಡ್ರೈವರ್ ಗೆ ಬಾಡಿಗೆ ಕೊಡುವ ತನಕ ಕಾದು ಅವರನ್ನೇ ನೋಡುತ್ತಿದ್ದಳು, ಡ್ರೈವರ್  ಸರಿಯಾದ ಕಡಿಮೆ ಬಾಡಿಗೆ  ಹೇಳಿದ ಕೂಡಲೇ  ರಮೇಶ ಖುಷಿಯಿಂದ ಅವಳನ್ನು ನೋಡಿ ನಗೆ ಬೀರಿದ, ಸುಮಾ ನಗುತ ಅವನಿಗೆ "ಹ್ಮ್ಮ್" ಎಂದು ತೆಪ್ಪಗೆ  ಅಲ್ಲಿಂದ ಮನೆಕಡೆ ಹೋದಳು, ಹೆಂಡತಿ  ಗಂಡನಿಗೆ ಬೈಯುವ ಒಂದು ಅವಕಾಶ ಸಹ ಬಿಡುವುದಿಲ್ಲ, ಆದರೆ ಇಲ್ಲಿ ಸುಮಾಳಿಗೆ ನಿರಾಸೆ ಆಯಿತು, ಡ್ರೈವರ್ ಪ್ರಾಮಾಣಿಕನಾಗಿದ್ದ ಹಾಗು ನಿಯತ್ತಿನ ಬಾಡಿಗೆ ಕೇಳಿದ್ದ.  

ಪ್ರಪಂಚದಲ್ಲಿ ಎಲ್ಲರು ಒಂದೇ ತರಹ ಇರುವುದಿಲ್ಲ,  ಎಲ್ಲರನ್ನು ಒಂದೇ ಮಾನದಂಡದಲ್ಲಿ ಹೋಲಿಸುವುದು ಸರಿಯಲ್ಲ.  ನಾವು  ಜೀವನಕ್ಕೆ ಬರುವಾಗ ಒಂದು ಖಾಲಿ ಪುಸ್ತಕದ ಹಾಗೆ ಇರುತ್ತೇವೆ, ಕ್ರಮೇಣ ಆ ಪುಸ್ತಕ ನಾವು ಮಾಡಿದ ಕರ್ಮದಿಂದ ತುಂಬುತ್ತಲೇ ಹೋಗುತ್ತದೆ, ಅದರ ಕೆಲವು ಪುಟ ನಾವು ಪುನಃ ಪುನಃ ಓದ ಬಯಸುತ್ತೇವೆ, ಕೆಲವು ಪುಟಗಳನ್ನು ನಾವು ಹರಿದು ಬಿಸಾಕ ಬಯಸುತ್ತೇವೆ, ಎಲ್ಲರು ತನ್ನ ಈ ಪುಸ್ತಕವನ್ನು ತನ್ನೊಟ್ಟಿಗೆ ಇಟ್ಟು ತಿರುಗುತ್ತಾರೆ ಹಾಗು ಇತರರೂ ಅದನ್ನು ಓದಬೇಕೆಂದು ಬಯಸುತ್ತಾರೆ, ಆದರೆ ಎಲ್ಲ ಪುಟ ಒಂದೇ ಸಮಾನ ಇರುವುದಿಲ್ಲ, ಕೆಲವು ದಪ್ಪ ಅಕ್ಷರದಲ್ಲಿ  ಬರೆದದ್ದಿರುತ್ತದೆ, ಕೆಲವು  ನಾಜೂಕು ಅಕ್ಷರದಲ್ಲಿ ಬರೆದದ್ದು, ಕೆಲವು ಕಣ್ಣೀರಿನಿಂದ  ಮರೆಯಾಗುತ್ತವೆ, ಕೆಲವು ನಗುವಿನಲ್ಲಿ ಅರಳುತ್ತವೆ, ಕೆಲವು ಕಥೆಗಳನ್ನು ನಾವು  ನೆನಪಿಡಲು ಬಯಸುತ್ತೇವೆ, ಕೆಲವು ಘಟನೆಗಳನ್ನು ನಾವು ಅಳಿಸಬಯಸುತ್ತೇವೆ, ಈ ಪುಸ್ತಕದ ಪ್ರಥಮ ಓದುಗಾರ ನಮ್ಮ ಮನಸ್ಸೇ, ಅದರ ನಂತರ ಕೇವಲ ಕೆಲವೇ ಜನರು ಇದರ ಓದುಗಾರರು ಹಾಗು ನಮ್ಮನ್ನು ಅರ್ಥೈಸುವವರು, ಈ ಪುಸ್ತಕವೇ  ನಮ್ಮ ಜೀವನದ ಕನ್ನಡಿ. 

ಡ್ರೈವರ್ ಹೋದ ನಂತರ ರಮೇಶ ಮನೆಯೊಳಗೇ ಬಂದ, ರಮೇಶನ ಅಮ್ಮನ ಕುಟುಂಬ ಬಹಳ ದೊಡ್ಡದು,ಅದರಲ್ಲಿ ಹೆಚ್ಚಿನವರು ಊರಿನಿಂದ ದೂರ ಪರ ಊರಲ್ಲಿಯೇ ಇರುತ್ತಿದ್ದರು, ಕೆಲವರು ಮುಂಬೈ, ಬೆಂಗಳೂರ್ ಹಾಗು ಕೆಲವರು ವಿದೇಶದಲ್ಲಿದ್ದರು, ಊರಿನಲ್ಲಿ ಕೇವಲ ರಮೇಶನ ಆಶಾ ಮತ್ತು ಉಷಾ ಚಿಕ್ಕಮ, ರಮೇಶನ ಅಣ್ಣನ ಮಗ ಅರ್ಜುನ ಹಾಗು ವಿಜಯ ಮಾಮ ಇರುತ್ತಿದ್ದರು. ಊರಲ್ಲಿ ಏನಾದರೊಂದು ಉತ್ಸವ, ಸಮಾರಂಭ, ಮದುವೆ  ಹಾಗು ದೇವರ ಕಾರ್ಯ ಇದ್ದರೇನೇ ಎಲ್ಲ ಕುಟುಂಬದವರು ಒಟ್ಟಾಗುತ್ತಿದ್ದರು. ಮುಂಬೈಯಿಂದ ರಮೇಶನ ಅಮ್ಮನಿಂದ ಚಿಕ್ಕವರು ಗುಡ್ಡಿ ಚಿಕ್ಕಮ ಅವರ ಮಕ್ಕಳು , ಊರ್ವಶಿ ಚಿಕ್ಕಮ ಮತ್ತು ರಮೇಶನ ದೊಡ್ಡ ಮಾವ ವಿಕ್ರಮ ಬಂದಿದ್ದರು, ರಮೇಶನ ವಿದೇಶದಲ್ಲಿದ್ದ ಚಿಕ್ಕ ಮಾವ ದಿನಕರ ಸಹ ಪರಿವಾರ ಸಹಿತ ಬಂದಿದ್ದರು, ಎಲ್ಲರು ಬಂದಿದ್ದ ಕಾರಣ ಮನೆಯಲ್ಲಿ ಗೌಜಿ ಗಲಾಟೆ ನಡೆಯುತ್ತಿತ್ತು, ಮಕ್ಕಳು ಅಲ್ಲಿಂದಿಲ್ಲಿ ಓಡಾಡುತ್ತಿದ್ದರು.

ಚಾ, ತಿಂಡಿ ಆದ ನಂತರ ಎಲ್ಲರೂ ತನ್ನ ತನ್ನ ಸ್ನಾನ ಮುಗಿಸಿ ತನ್ನ ತನ್ನ ಕೆಲಸದಲ್ಲಿ ನಿರತರಾದರು, ಕೆಲವರು ಪೇಟೆಗೆ ಹೋದರು. ಸುಮಾ ಚಿಕ್ಕಮನವರೊಟ್ಟಿಗೆ ಅಮ್ಮನನ್ನು ಸ್ನಾನ ಮಾಡಿಸಿ, ಅವರಿಗೆ ತಿಂಡಿ, ಚಾ ಕೊಟ್ಟು ನಂತರ ಅವರಿಗೆ ಆರಾಮ ಮಾಡಲು ಹೇಳಿದ್ದಳು,  ಪ್ರಯಾಣದಲ್ಲಿ ಸೋತು ಹೋದ ಕಾರಣ ಅಮ್ಮ ಬೇಗನೆ ನಿದ್ದೆಗೆ ಹೋದರು.

ಮಧ್ಯಾಹ್ನ ರಮೇಶನ ಅಣ್ಣ ದಿರೇಶ ಬಂದ ಕೂಡಲೇ ರಮೇಶ ಅವನಿಂದ ಹೋಮ್ ನರ್ಸ್ ಬಗ್ಗೆ ಕೇಳಿದ, ಅದಕ್ಕೆ ಅವನು "ನಾನು ಕೆಲವರಿಗೆ ಕೇಳಿದೆ ಆದರೆ ಯಾರೂ ಇಷ್ಟು ದೂರ ಒಳಗೆ ಹಳ್ಳಿಗೆ ಬರಲು ಕೇಳುವುದಿಲ್ಲ, ಆದರೆ ನನ್ನ ಪರಿಚಯದವರು ಒಬ್ಬರಿದ್ದಾರೆ, ತುಂಬಾ ಬಡವರು,ಅವರು  ಅವರ ಮಗಳನ್ನು ಕಳಿಸಲು ರೆಡಿ ಇದ್ದಾರೆ, ಅವಳು ನರ್ಸ್ ಅಲ್ಲ, ಆದರೆ ಮನೆಯಲ್ಲಿ ಈ ತರಹ ಕೆಲಸ ಮಾಡಿದ್ದಾಳೆ, ಅಮ್ಮನ ಚಾಕರಿ ಎಲ್ಲ ಮಾಡುತ್ತಾಳೆ, ಊಟ ತಿಂಡಿ ಕೊಟ್ಟು ಸಂಬಳ ೮೦೦೦ ಕೊಡಬೇಕಂತೆ,  ಈಗ ನೀನು ಹೇಳು ಏನು ಮಾಡಬೇಕು, ಒಪ್ಪಿಗೆ ಇದ್ದರೆ ಈಗಲೇ ಫೋನ್ ಮಾಡಿ ಕರೆಸುತ್ತೇನೆ".

ರಮೇಶ "ಎಂಟು ಸಾವಿರ ಹೆಚ್ಚಲ್ಲವೇ"?

ಅದಕ್ಕೆ ದಿರೇಶ "ಅರೆ... ನಿನಗೆ ಈ ಊರಿನ ಕಥೆ ಗೊತ್ತಿಲ್ಲ, ಇಲ್ಲಿ ಯಾರೂ ಕೆಲಸಕ್ಕೆ ಸಿಗುವುದಿಲ್ಲ, ಇದು ನಮ್ಮ ಅದೃಷ್ಟ ಒಳ್ಳೆದಿದೆ ಅದಕ್ಕೆ ಅವರು ಅವರ ಮಗಳನ್ನು ಕಳುಹಿಸುತ್ತಿದ್ದಾರೆ, ಮತ್ತೆ ನೀನೆ ಯೋಚಿಸು" ಎಂದು ಹೇಳಿದ.

ಅದಕ್ಕೆ ಅಲ್ಲೇ ಇದ್ದ ಉಷಾ ಚಿಕ್ಕಮ್ಮನವರು "ಹೌದು ರಮೇಶ, ದಿರೇಶ ಹೇಳುವುದು ಸರಿ, ಇಲ್ಲಿ ಕೆಲಸಕ್ಕೆ ಜನನೇ ಸಿಗುವುದಿಲ್ಲ, ತುಂಬಾ ಕಷ್ಟ, ಅವಳನ್ನೇ ಕರೆಸು ಇಲ್ಲಾದರೆ ಬೇರೆ ಯಾರೂ ನಂತರ ಸಿಗದಿದ್ದರೆ ಕಷ್ಟ ಆಗುತ್ತದೆ".

ಈ ಬಗ್ಗೆ ತುಂಬಾ ಚರ್ಚೆ ಮಾಡಿದ ನಂತರ ರಮೇಶನಿಗೆ ಬೇರೆ ಯಾವುದೇ ಮಾರ್ಗ ಕಾಣದೆ  ಅಮ್ಮನ ಚಾಕರಿ ಮಾಡಲು ದಿರೇಶ ಹೇಳಿದ ಹುಡುಗಿಯನ್ನೇ ಕರೆಯಲು ನಿರ್ಧಾರ ಮಾಡಿದ.

(ಮುಂದುವರಿಯುತ್ತದೆ)


by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

Sunday, February 16, 2020

ವೃದ್ಧಾಶ್ರಮ ೧೩


ಸುಮಾ ಮತ್ತು ಕೂಲಿ ತಳ್ಳಿ ಬರುತ್ತಿದ್ದ ಬಂಡಿಯನ್ನು ನೋಡಿ ರಮೇಶ ಆಶ್ಚರ್ಯದಿಂದ "ಇದೇನು"?

ಸುಮಾ "ಇಲ್ಲಿಯ ಸ್ಟೇಷನಲ್ಲಿ ವೀಲ್ ಚೇರ್ ಇಲ್ಲ, ಅದಕ್ಕೆ ಬೇರೆ ದಾರಿ ಇಲ್ಲದೆ ಈ ಕೂಲಿಗೆ  ಬಂಡಿ  ತರಲಿಕ್ಕೆ ಹೇಳಿದೆ, ಇದರಲ್ಲಿ ಅಮ್ಮನನ್ನು ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಹೋಗುವ"

ರಮೇಶ "ಒಹ್!!!....ಆದರೆ ಇದರಲ್ಲಿ ಹೇಗೆ"?

ಸುಮಾ "ಮತ್ತೇನು ಮಾಡುವುದು, ಹೇಗೂ ಅಮ್ಮನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕಲ್ಲ".

ರಮೇಶ "ಓ.ಕೆ.. ಕೆ".

ತುಂಬಾ ಪ್ರಯತ್ನದ ನಂತರ ಅಮ್ಮನನ್ನು ಆ ಬಂಡಿಯ ಮೇಲೆ ಕೂರಿಸಲಾಯಿತು ಹಾಗು ಅದೇ ಬಂಡಿಯಲ್ಲಿ ಸಾಮಾನು ಸಹ ಇಟ್ಟಾಯಿತು. ರಮೇಶ ಬಂಡಿಯಲ್ಲಿ ಕೂತಿದ ಅಮ್ಮನನ್ನು ಹಿಡಿದಿಟ್ಟಿದ್ದ ಹಾಗು ಸುಮಾ ನಿದ್ದೆಯಲ್ಲಿದ್ದ ಆತೀಶನನ್ನು ಎತ್ತಿ ಹಿಡಿದುಕೊಂಡಳು.

ಕೂಲಿ ನಿಧಾನವಾಗಿ ಬಂಡಿ ತಳ್ಳಿಕೊಂಡು ಹೋದ, ಆದರೂ ಅಮ್ಮ ಅಲ್ಲಾಡುತ್ತಿದ್ದರು, ರಮೇಶ ಬೀಳಬಾರದೆಂದು ಅವರನ್ನು ಹಿಡಿದಿಟ್ಟಿದ್ದ, ಹೇಗೋ ಅವರು ರಿಕ್ಷಾ ಸ್ಟಾಂಡ್ ತನಕ ಮುಟ್ಟಿದರು. 

ಅಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯದಿಂದ ಅವರನ್ನು ನೋಡಲಾರಂಭಿಸಿದರು, ರಿಕ್ಷಾದವರು "ರಿಕ್ಷಾ ಬೇಕಾ, ರಿಕ್ಷಾ ಬೇಕಾ" ಎಂದು ಹಿಂದೆ ಬಿದ್ದರು, ರಮೇಶ ಅವರಿಗೆ "ಇಲ್ಲ ರಿಕ್ಷಾದಲ್ಲಿ ಇವರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಕಾರ್ ಬೇಕು" ಎಂದ. ಆಗ ಒಬ್ಬಾತ "ಸಾರ್, ನನ್ನ ಹತ್ತಿರ ಕಾರ್ ಇದೆ, ಈಗ ತರುತ್ತೇನೆ" ಎಂದ.

ರಮೇಶ್ ಸಮಯದ ಅವಶ್ಯಕತೆ ಅರಿತು ಏನೂ ಚರ್ಚೆ ಮಾಡದೆ  ಅವನಿಗೆ  "ಹ್ಮ್ಮ್" ಎಂದ.

ಆಗ ಸುಮಾ ರಮೇಶನಿಗೆ "ಕೇಳಿತಾ, ಇವರ ಒಂದು ಸಾವಿರ ಕೊಡಿ".

ರಮೇಶ  "ಯಾರದ್ದು"?

ಸುಮಾ "ಈ ಕೂಲಿಯ ಬಂಡಿಯ ಬಾಡಿಗೆ".

ಅದಕ್ಕೆ ರಮೇಶ "ಏನು, ಒಂದು ಸಾವಿರನ".

ಸುಮಾ ಮುಖ ಚಿಕ್ಕ ಮಾಡಿ "ಕೊಡಿ, ನಾನು ಒಪ್ಪಿಕೊಂಡಿದ್ದೇನೆ" ಎಂದಳು.

ರಮೇಶ ಆ ಕೂಲಿಗೆ "ಏನಣ್ಣ, ಇಷ್ಟೊಂದು ಹಣನ"?

ಕೂಲಿ " ನಾನು ಮೊದಲೇ ಹೇಳಿದ್ದೇನೆ ಸಾರ್" ಎಂದ.

ಉಪಾಯವಿಲ್ಲದೆ ರಮೇಶ ಅವನಿಗೆ ಒಂದು ಸಾವಿರ ರೂಪಾಯಿ ಕೊಟ್ಟ ಮತ್ತು ಕಾರ್ ಬರುವ ತನಕ ಕಾಯಲಿಕ್ಕೆ ಹೇಳಿದ.

ಸುಮಾ ರಮೇಶನಿಗೆ "ಕಾರ್ ಬಾಡಿಗೆ ಎಷ್ಟು ಕೇಳಿದ್ದೀರಾ?, ಇಲ್ಲಾದರೆ ಅವನು ಸಹ ಇವನಂತೆ ಬಾಯಿಗೆ ಬಂದ ಬಾಡಿಗೆ ಹೇಳಬಹುದು" 

ರಮೇಶ ಸೋತು ಹೋಗಿದ್ದ ಹಾಗೆ "ಇರಲಿ.....  ನೀನು ಮೊದಲು ಕೇಳಿ ಸಹ ಏನಾಯಿತು, ಕಡೆಗೆ ಒಂದು ಸಾವಿರ ಕೊಡಬೇಕಾಯಿತಲ್ಲ". 

ಸುಮಾ ಕೋಪದಿಂದ ರಮೇಶನನ್ನು ದುರುಗುಟ್ಟಿ ನೋಡಿದಳು, ಅದನ್ನು ನೋಡಿ  ರಮೇಶ ಆಚೆ ಈಚೆ ನೋಡಲಾರಂಭಿಸಿದ. 

ಕಾರ್ ಬಂದ ಕೂಡಲೇ ಎಲ್ಲರು ಸೇರಿ ಅಮ್ಮನನ್ನು ಬಂಡಿಯಿಂದ ಮೆಲ್ಲನೇ ಇಳಿಸಿ ಕಾರಲ್ಲಿ ಕೂರಿಸಿದರು, ನಂತರ ಸುಮಾ ಅತೀಶನೊಟ್ಟಿಗೆ ಅಮ್ಮನ ಬದಿಯಲ್ಲಿ ಕುಳಿತಳು,  ರಮೇಶ  ಕಾರಲ್ಲಿ ಸಾಮಾನು ಇಟ್ಟು ಸ್ವತಃ ಕುಳಿತ ನಂತರ ರಮೇಶ್ ಡ್ರೈವರ್ ನಿಗೆ ತನ್ನ ಹಳ್ಳಿಯ ಹೆಸರೇಳಿದ ಹಾಗು  ಕಾರ್ ರಮೇಶ ಹಳ್ಳಿಯ ಮನೆಯತ್ತ ಸಾಗಿತು.

ಜೀವನ ಅಂದರೆ ಹೀಗೆಯೇ ಸುಖ ದುಃಖ, ಕಷ್ಟ ನಷ್ಟ, ಹತಾಶೆ  ನಿರಾಶೆ, ನೋವು ನಲಿವು......., ಕತ್ತಲೆ ಕವಿದು ಬೆಳಕಾಗುತ ಬಂದಿತು, ಸೂರ್ಯ ಉದಯಿಸಿ ತನ್ನ ಬೆಳಕು ಹೊರಸೂಸುತ್ತಿದ್ದ, ಕಾರಿನ ರೇಡಿಯೋದಲ್ಲಿ ಹಿಂದಿ ಹಾಡು ಬರುತ್ತಿತ್ತು "ಯೇ  ಜೀವನ್ ಹೈ , ಇಸ್  ಜೀವನ್ ಕ ಯಹಿ ಹೈ.... ಯಹಿ ಹೈ ರಂಗ್ ರೂಪ್ , ಥೊಡೆ  ಘಮ್ ಹೈ.....  ಥೊಡೆ  ಖುಷಿಯಾ...... ಯಹಿ ಹೈ....  ಯಹಿ ಹೈ ಚಾವ್ ಧೂಪ್....... ".  

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

Saturday, February 15, 2020

ವೃದ್ಧಾಶ್ರಮ ೧೨


ಪ್ರಾತಃಕಾಲ ೪.೩೦ ಕ್ಕೆ  ಟ್ರೈನ್ ರಮೇಶನ ಊರು ದುರ್ಗಾಪುರಕ್ಕೆ ತಲುಪಿತು, ಸೂರ್ಯೋದಯ ಆಗಲು ಇನ್ನು ಸ್ವಲ್ಪ ಸಮಯ ಬಾಕಿ ಇತ್ತು, ರಾತ್ರಿಯ ಕತ್ತಲೆ ಇನ್ನೂ ಮುಸುಕು ಸರಿಸಿರಲಿಲ್ಲ.  

ಟ್ರೈನ್ ದುರ್ಗಾಪುರ ನಿಲ್ದಾಣದಲ್ಲಿ ಐದೇ ನಿಮಿಷ ನಿಲ್ಲುವ ಕಾರಣ ಎಲ್ಲರು ಗಡಿಬಿಡಿಯಿಂದ ಇಳಿಯುತ್ತಿದ್ದರು, ರಮೇಶ ಸಹ ಅವಸರ ಮಾಡಿ ತುಂಬಾ ಕಷ್ಟದಿಂದ ಅಮ್ಮನನ್ನು ಮೆಲ್ಲ ಮೆಲ್ಲನೇ  ಇಳಿಸಿದ, ಸುಮಾ ಅತೀಶನನ್ನು ಇಳಿಸಿ ಬೇಗ ಬೇಗ ಸಾಮಾನು ಇಳಿಸಿ ಕೆಳಗಿಟ್ಟಳು. 

ದುರ್ಗಾಪುರ ರೈಲ್ವೆ ನಿಲ್ದಾಣ ಚಿಕ್ಕ ನಿಲ್ದಾಣವಾಗಿದ್ದರಿಂದ ಬೆಳಿಗ್ಗೆಯ ಸಮಯ ಅಲ್ಲಿ ಹೆಚ್ಚು ಜನರಿರಲಿಲ್ಲ, ಎಲ್ಲರಿಂದ ನಂತರ  ಇಳಿದ ಕಾರಣ ಕೂಲಿಯವರು ಸಹ ಕಾಣುತ್ತಿರಲಿಲ್ಲ, ಬಹುಶಃ ಮೊದಲು ಇಳಿದವರೆಲ್ಲ ಕೂಲಿ ಮಾಡಿ ಅವಸರದಿಂದ  ಹೋಗಿಬಿಟ್ಟಿದ್ದರು.   

ರಮೇಶ ಅಮ್ಮನನ್ನು ಇಳಿಸಿ ಎರಡೇ ಹೆಜ್ಜೆ ಹಾಕಿರಬೇಕು ಅಮ್ಮ ಅಲ್ಲಿಯೇ ನಿಂತು ಬಿಟ್ಟರು, ಎಷ್ಟು ಪ್ರಯತ್ನ ಮಾಡಿದ್ದರೂ ಅವರಿಂದ ಮುಂದೆ ಹೆಜ್ಜೆ ಇಡಲಾಗಲಿಲ್ಲ, ಬಹುಶಃ ರಾತ್ರಿಯೆಲ್ಲ ರೈಲುಗಾಡಿಯ ಸೀಟಲ್ಲಿ ಮಲಗಿ ಅವರ ಜೀವ ಜಡವಾಗಿತ್ತು.  ರಮೇಶನಿಗೆ ಈಗ ಏನು ಮಾಡುವುದು,  ಹೇಗೆ ಇಲ್ಲಿಂದ ಹೋಗುವುದು ಎಂದು ಅರ್ಥನೇ ಆಗುತ್ತಿರಲಿಲ್ಲ. ಅಮ್ಮನನ್ನು ಹಿಡಿದು ನಿಂತ  ಚಿಂತಿತ  ರಮೇಶ ಸುಮಾಳಿಗೆ "ಸುಮಾ..... ನೀನು  ಸ್ಟೇಷನ್ ಮಾಸ್ಟರ್ ರೂಮಿಗೆ ಹೋಗಿ ಅವರ ಹತ್ತಿರ ವೀಲ್ ಚೇರ್ ಇದ್ದರೆ ಕೊಂಡು ಬಾ ಮತ್ತೆ ಅಲ್ಲಿ ಕೂಲಿ ಸಹ ಸಿಕ್ಕಿದರೆ ಅವನನ್ನು ಕರೆದುಕೊಂಡು ಬಾ" ಎಂದ. 

ಅವರು ಬಂದಿದ್ದ ಟ್ರೈನ್ ಹೊರಟಾಗಿತ್ತು, ಸ್ಟೇಷನಲ್ಲಿ ಅಲ್ಲಿ ಇಲ್ಲಿ ಒಂದೆರಡೇ ಜನ ಕಾಣುತ್ತಿದ್ದರು.  ಸುಮಾ ಅಲ್ಲಿದ್ದ ಒಂದು ಸೀಟಲ್ಲಿ ಆತೀಶನನ್ನು ಕುಳಿಸಿ, ಬ್ರಿಜ್ ಹತ್ತಿ ಬೇರೆ  ಪ್ಲಾಟ್ಫಾರ್ಮ್ ನಲ್ಲಿದ್ದ ಸ್ಟೇಷನ್ ಮಾಸ್ಟರ್ ರೂಮಿಗೆ ಹೋದಳು, ಅಲ್ಲಿ ಯಾರೂ ಇರಲಿಲ್ಲ, ಹೊರಗೆ ಬಂದು ಅವಳು ಆಚೆ ಈಚೆ ನೋಡುವಾಗ ಸ್ಟೇಷನ್ ಮಾಸ್ಟರ್ ಅಲ್ಲಿಂದ ಹೋಗುತ್ತಿದ್ದರು.

ಅವಳು ಅವರನ್ನು ನಿಲ್ಲಿಸಿ "ಸರ್, ಇಲ್ಲಿ ವೀಲ್ ಚೇರ್ ವ್ಯವಸ್ಥೆ ಇದೆಯಾ? ನಮ್ಮ ಅಮ್ಮನಿಗೆ ಪಕ್ಷವಾತ ಆಗಿದ್ದ ಕಾರಣ ಅವರಿಗೆ ಸರಿ ನಡೆಯಲಾಗುವುದಿಲ್ಲ, ಅದಕ್ಕೆ......."

ಅವಳ ಮಾತು ಕಡಿದು ಸ್ಟೇಷನ್ ಮಾಸ್ಟರ್ "ಇಲ್ಲಮ್ಮ, ನಾವು ಅರ್ಜಿ ಕೊಟ್ಟಿದ್ದೇವೆ, ಆದರೆ ಇನ್ನು ಸರಕಾರ ಅದರ ವ್ಯವಸ್ಥೆ ಏನು ಮಾಡಿ ಕೊಡಲಿಲ್ಲ , ಸಾರೀ".

ಸುಮಾ"ಒಹ್ !!!!, ಸರ್ ಇಲ್ಲಿ ಕೂಲಿಯವರು ಎಲ್ಲಿ ಸಿಗುತ್ತಾರೆ".

ಸ್ಟೇಷನ್ ಮಾಸ್ಟರ್ " ಕೂಲಿ ತುಂಬಾ ಇದ್ದಾರೆ, ನೀವು ಅಲ್ಲಿ ಟಿಕೆಟ್ ಕೌಂಟರ್ ಇದೆ ಅಲ್ಲಿಗೆ ಹೋಗಿ, ಅಲ್ಲಿ ಅವರ ಗುಂಪು ಇದೆ".

ಸುಮಾ ಅವರಿಗೆ "ಥ್ಯಾಂಕ್ಸ್ ಸರ್"ಎಂದು ಹೇಳಿ ಅಲ್ಲಿಂದ ಟಿಕೆಟ್ ಕೌಂಟರ್ ಬಂದಳು, ನಿಜವಾಗಿಯೂ ಅಲ್ಲಿ ತುಂಬಾ ಕೂಲಿಯವರು ಇದ್ದರು.

ಸುಮಾ ಆಚೆ ಈಚೆ ನೋಡುವಾಗ ಅವಳಿಗೆ ಅಲ್ಲಿ ಕೂಲಿಯವರು ಸಾಮಾನು ಹೊರೆಯುವ ಬಂಡಿ ಕಂಡು ಬಂತು, ಆಗ ಒಬ್ಬ ಕೂಲಿ ಅವಳಲ್ಲಿ ಬಂದು "ಹೇಳಿ ಮೇಡಂ".

ಅವಳು ಅವನಿಗೆ ಆ ಬಂಡಿ ತೋರಿಸಿ "ನೋಡಿ, ಈ ಬಂಡಿ ಸ್ವಲ್ಪ ಆ ಪ್ಲಾಟ್ಫಾರ್ಮ್ ಗೆ ತರಬಹುದ"?

ಅವನು "ಯಾಕೆ ಈ ಬಂಡಿ ಮೇಡಂ, ಇದು ಸಾಮಾನ್ಯ ಉಪಯೋಗಕ್ಕೆ ಅಲ್ಲ, ಈ ಬಂಡಿ ಕೇವಲ ಮಾಲು ಗಾಡಿಯಿಂದ ಬರುವ ಸಾಮಾನುಗೋಸ್ಕರ, ಇದಕ್ಕೆ ಸ್ಟೇಷನ ಮಾಸ್ಟರ್ ಪರ್ಮಿಷನ್ ಬೇಕು, ಆದರೆ ನೀವು ಚಿಂತಿಸಬೇಡಿ..... ನಾನಿದ್ದೇನಲ್ಲ ಎಲ್ಲ ಸಾಮಾನು ಎತ್ತಲಿಕ್ಕೆ, ಹೆಚ್ಚು ಸಾಮಾನಿದ್ದರೆ ಎರಡು ಕೂಲಿ ಮಾಡಿ".

ಸುಮಾ "ಹಾಗೇನಿಲ್ಲ, ನಮ್ಮ ಅಮ್ಮನಿಗೆ ನಡೆಯಲಿಕ್ಕೆ ಸರಿ  ಆಗುವುದಿಲ್ಲ, ಇಲ್ಲಿ ವೀಲ್ ಚೇರ್ ಸಹ ಇಲ್ಲ, ಅದಕ್ಕೆ ಅವರನ್ನು ಇದರಲ್ಲಿ ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಬಿಟ್ಟರೆ.....".

ಕೂಲಿ "ಅದು ಆಗಲಿಕ್ಕಿಲ್ಲ ಮೇಡಂ, ಸ್ಟೇಷನ್ ಮಾಸ್ಟರ್ ನಮಗೆ ತಾಕಿದು ಮಾಡಿದ್ದಾರೆ, ಈ ಬಂಡಿ ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸಬಾರದೆಂದು".   

ಅದಕ್ಕೆ ಸುಮಾ "ನಾನು ಸ್ಟೇಷನ್ ಮಾಸ್ಟರ್ ಹತ್ತಿರ  ಹೋಗಿ ಪರ್ಮಿಷನ್ ತೆಕೊಳುತ್ತೇನೆ".

ಕೂಲಿ ಇವಳಿಂದ ಹಣ ಗಳಿಸುವ ಇದು ಒಳ್ಳೆ ಅವಕಾಶ ಎಂದು "ಬೇಡ ಮೇಡಂ, ಅವರೇನು ಪರ್ಮಿಷನ್ ಕೊಡಲಿಕ್ಕಿಲ್ಲ, ಮೇಲಿಂದ ಈ ಟ್ರೈನ್ ಹೋದ ನಂತರ ಅವರ ಡ್ಯೂಟಿ ಮುಗಿದು ಅವರು ಹೋಗಿ ಬಿಟ್ಟಿರಬಹುದು, ಬೇರೆ ಸ್ಟೇಷನ್ ಮಾಸ್ಟರ್ ನವರು ಬರುವುದಕ್ಕೆ ಇನ್ನೊಂದು ಗಂಟೆ  ಇದೆ,  ನೀವು  ಒಂದು ಸಾವಿರ ಕೊಟ್ಟರೆ ನಾನು ಇಂತದೊಂದು ಬೇರೆ ಬಂಡಿ ನನ್ನ ಜೊತೆಗಾರನತ್ತಿರ ಇದೆ, ನಿಮ್ಮ ಒಪ್ಪಿಗೆ ಇದ್ದರೆ ತರುತ್ತೇನೆ"

ಆಶ್ಚರ್ಯದಿಂದ ಸುಮಾ "ಒಂದು ಸಾವಿರನ!!!, ಸ್ಟೇಷನ್ ಮಾಸ್ಟರ್ ಈಗ ತಾನೇ ಇದ್ದರು, ಅವರೇ ನನ್ನನ್ನು ಇಲ್ಲಿ ಕಳಿಸಿದ್ದು, ಇಷ್ಟು ಬೇಗ ಹೋಗಿ ಆಯಿತಾ"? ಸುಮಾಳಿಗೆ ಕೂಲಿಯ ಹಕ್ಕಿನ ಹಣ ಕೊಡಲು ಯಾವುದೇ ಅಭ್ಯಂತರವಿರಲಿಲ್ಲ, ಆದರೆ ಈ ಕೂಲಿ ಹತ್ತು ಪಾಲು ಹೆಚ್ಚು ಹಣ ಕೇಳುವುದನ್ನು ನೋಡಿ ಅವಳಿಗೆ ಸ್ವಲ್ಪ ಕೋಪ ಸಹ ಬಂತು. 

ಈ ಜಗತ್ತಿನಲ್ಲಿ ವಿವಿಧ ವಿವಿಧ  ತರಹದ ಜನರಿದ್ದಾರೆ, ಅಲ್ಲಿ ಮುಂಬೈಯಲ್ಲಿ ರಮೇಶನವರಿಗೆ ಸಿಕ್ಕಿದ್ದ ಕೂಲಿ ಎಷ್ಟು ಪಾವನ ಹೃದಯದವನಾಗಿದ್ದ, ಆದರೆ ಇಲ್ಲಿ ಈ ಕೂಲಿ ಅವನಿಂದ ವಿಪರೀತ ಜನರ ಅಸಹಾಯಕತೆಯ ಲಾಭ ತೆಗೊಂಡು ಅವರಿಂದ ಹಣ ದೋಚುವ  ಕಪಟನಾಗಿದ್ದ, ಜನರ  ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದು ನಿಜಕ್ಕೂ ಬಹಳ ದೊಡ್ಡ ತಪ್ಪು ಹಾಗು ಇದು ನೈತಿಕತೆಗೆ ವಿರುದ್ಧವಾಗಿದೆ, ಯಾರಿಗೂ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಮಾಡಬೇಡಿ, ಆದರೆ  ಅವರ ಅಸಹಾಯಕತೆಯಿಂದ  ನಿಮ್ಮ ಸೌಲಭ್ಯ  ಪಡೆದುಕೊಳ್ಳಬೇಡಿ. 

ಕೂಲಿ "ಈ ಟ್ರೈನ್ ತೆರಳಿದ ನಂತರವೇ ಸ್ಟೇಷನ ಮಾಸ್ಟರ್  ಹೋಗಿ ಬಿಡುತ್ತಾರೆ ಮೇಡಂ, ಬೇರೆ ಸ್ಟೇಷನ ಮಾಸ್ಟರ್ ಡ್ಯೂಟಿಗೆ ಬರುವ ತನಕ ಏನಾದರು ತುರ್ತುಪರಿಸ್ಥತಿ ಒದಗಿದರೆ ಇಲ್ಲಿಯ ಟಿಕೆಟ್ ಕೌಂಟರಲ್ಲಿದ್ದವರು ನೋಡಿಕೊಳ್ಳುತ್ತಾರೆ, ಆದರೆ ಬೆಳಿಗ್ಗೆ ಹಾಗೇನು ಪರಿಸ್ಥಿತಿ ಒದಗುವುದಿಲ್ಲ ಮತ್ತೆ ಈ ಬಂಡಿ ತರುವುದರಲ್ಲಿ  ನನಗೇನು ಸಿಗುದಿಲ್ಲ ಮೇಡಂ, ನೀವು ಕಷ್ಟದಲ್ಲಿದ್ದೀರಿ ಎಂದು ಹೇಳಿದೆ ಅಷ್ಟೇ, ಆದರೆ ನನ್ನ ಜೊತೆಗಾರನಿಗೆ  ಬಂಡಿಯ ಹಣ ಕೊಡಬೇಕಲ್ಲ, ಬೇಕಾದರೆ ಹೇಳಿ ಬಂಡಿ ತರುತ್ತೇನೆ, ಇಲ್ಲಾದರೆ ನನಗೇನು".

ಅವನ ಮಾತು ಕೇಳಿ ಸುಮಾ "ಆದರೆ ಇಷ್ಟು ಹಣ, ಕೇವಲ ಅಲ್ಲಿಂದ ರಿಕ್ಷಾ ಸ್ಟಾಂಡ್ ತನಕ ಹೋಗಲು, ಇಷ್ಟು ಹಣ  ನಮ್ಮ ಹಳ್ಳಿಗೆ ಹೋಗಲು ಸಹ ಆಗುವುದಿಲ್ಲ, ನಾನು ಟಿಕೆಟ್ ಕೌಂಟರಲ್ಲಿ ಹೋಗಿ ಕೇಳಿ ನೋಡಲೇ"?

ಕೂಲಿ ಹಣ ಗಳಿಸುವ ಅವಸರ ಹೋಗುವುದನ್ನು ನೋಡಿ  "ನೋಡಿ ಮೇಡಂ, ಸುಮ್ಮನೆ  ಟೈಮ್ ವೇಸ್ಟ್ ಆಗುತ್ತದೆ, ಮತ್ತೆ ನನ್ನ ಜೊತೆಗಾರ ಹೋದರೆ ಬಂಡಿ ಸಹ ಸಿಗಲಿಕ್ಕಿಲ್ಲ, ಬೇಕಾದರೆ ಹೇಳಿ, ಇಲ್ಲಾದರೆ ನಾನು ಹೊರಟೆ".

ಸುಮಾ ಏನೂ ತೋಚದೆ ದಿಕ್ಕಿಲ್ಲದೆ "ಓ.ಕೆ, ನೀವು ಆ ಬಂಡಿ ತನ್ನಿ".

ಕೂಲಿ "ಈಗ ಬರುತ್ತೇನೆ ಮೇಡಂ" ಎಂದು ಕೆಲವು ನಿಮಿಷದಲ್ಲಿ ಎಲ್ಲಿಂದಲೋ ನಾಲ್ಕು ಚಕ್ರದ ಸಾಮಾನು ಹೊರೆಯುವ ಬಂಡಿ ತಂದ "ಬನ್ನಿ ಮೇಡಂ ಹೋಗುವ, ಎಲ್ಲಿಗೆ ಹೋಗಬೇಕು"  ಎಂದು ಕೇಳಿದ,  ಸುಮಾ ದಾರಿ ತೋರಿಸಲು ಮುಂದೆ ನಡೆದಳು,  ಅವನು ಸುಮಾಳ ಹಿಂದೆ ಹಿಂದೆ ಬಂಡಿ ಎಳೆಯುತ್ತ ಹೋದ.

ಅಲ್ಲಿ ರಮೇಶ ಎಷ್ಟು ಪ್ರಯತ್ನ ಮಾಡಿದರೂ ಅವನಿಂದ ಅಮ್ಮನನ್ನು ಒಂದು ಹೆಜ್ಜೆ ಸಹ ಸರಿಸಲಾಗಲಿಲ್ಲ, ಮೇಲಿಂದ ಸುಮಾ ಎಲ್ಲಿಗೆ ಹೋದಳು ಎಂಬ ಚಿಂತೆಯಲ್ಲಿಯೂ ಇದ್ದ, ಆತೀಶ ಕೂತುಕೊಂಡಲ್ಲಿಯೇ ಮಲಗಿದ್ದ, ಆಚೆ ಈಚೆ ಹೋಗುವರು ಅವನು ಅಮ್ಮನನ್ನು ಹಿಡಿದು ನಿಂತಿದ್ದನ್ನು ಕೇವಲ ಆಶ್ಚರ್ಯದಿಂದ ನೋಡಿ  ಅವರ ಪಾಡಿಗೆ ಹೋಗುತ್ತಿದ್ದರು, ಯಾರಿಗೂ ಅವನ ಸಹಾಯ ಮಾಡಬೇಕೆಂಬ ವಿಚಾರ ಬರಲಿಲ್ಲ, ರಮೇಶನಿಗೆ  ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ, ಅವನನ್ನು ನೋಡಿ ಅಮ್ಮನ ಕಣ್ಣೀರು ಹರಿಯುತ್ತಿತ್ತು, ಅಮ್ಮನ ಅಸಹಾಯಕತೆ ನೋಡಿ ಅವನ ಕಣ್ಣಿನಿಂದಲೂ ಕಣ್ಣೀರು ಹರಿಯಲಾರಂಭಿಸಿತು.

ಸ್ವಲ್ಪ ಹೊತ್ತಲ್ಲಿ ಅವನಿಗೆ ಸುಮಾ ಬರುವುದು  ಹಾಗು ಅವಳ ಹಿಂದೆ ಒಬ್ಬ ಕೂಲಿ ನಾಲ್ಕು ಚಕ್ರದ ಬಂಡಿ ತಳ್ಳಿ ಬರುವುದು ಕಂಡು ಬಂತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 11, 2020

ವೃದ್ಧಾಶ್ರಮ ೧೧


ರಮೇಶನ ಅಣ್ಣ ದಿರೇಶ   ಊರಲ್ಲಿಯೇ  ಒಂದು ಹೋಟೆಲಲ್ಲಿ ಕೆಲಸ ಮಾಡುತ್ತಿದ್ದ ಹಾಗು ಹೋಟೆಲ್  ಮನೆಯಿಂದ  ದೂರ ಇದ್ದ ಕಾರಣ ಅವನು ಹೊಟೇಲಲ್ಲಿಯೇ  ಇರುತ್ತಿದ್ದ, ಅವನ ಹೆಂಡತಿ ಮತ್ತು ಎರಡು ಮಕ್ಕಳು ಕುಂದಾಪುರದಲ್ಲಿ  ಅವಳ ಊರ ಮನೆಯಲ್ಲಿರುತ್ತಿದ್ದರು, ಅವರ ಖರ್ಚಿಗೆಲ್ಲ ಅವನು ಹಣ ಕಳಿಹಿಸುತ್ತಿದ್ದ ಹಾಗು ಯಾವಾಗಲೊಮ್ಮೆ ಅಲ್ಲಿ ಹೋಗಿ ಒಂದು ವಾರ ಇದ್ದು ಬರುತ್ತಿದ್ದ. ಅಮ್ಮ ಊರಲ್ಲಿರುವಾಗ ಅವನು ವಾರಕೊಮ್ಮೆ ಮನೆಗೆ ಬರುತ್ತಿದ್ದ ಆದರೆ ಅಮ್ಮ ಮುಂಬೈ ಹೋದ ನಂತರ  ಯಾವಾಗಲೊಮ್ಮೆ ಮನೆಗೆ  ಬಂದು  ಎರಡು ಮೂರು ದಿನ ಇದ್ದು ಹೋಗುತ್ತಿದ್ದ. ಅವನು ಎಲ್ಲಿಯೂ ಒಂದು ಸ್ಥಾನದಲ್ಲಿ ಹೆಚ್ಚು ಸಮಯ ಕೆಲಸ ಮಾಡುತ್ತಿರಲಿಲ್ಲ, ಸತತ ಕೆಲಸ ಬದಲಾಯಿಸುತ್ತಿರುತ್ತಿದ್ದ, ಸಂಬಳ ಸಹ ಅಷ್ಟೇನೂ ಇರಲಿಲ್ಲ ಅದಕ್ಕೆ  ಯಾವಾಗ ನೋಡಿದರು ಅವನು ಹಣದ ಬಿಕ್ಕಟ್ಟಿನಲ್ಲಿರುತ್ತಿದ್ದ. ಮೂರು ನಾಲ್ಕು ತಿಂಗಳಿಗೊಮ್ಮೆ ಅವನು ಹಣಕ್ಕಾಗಿ ರಮೇಶನ ಹಿಂದೆ  ಬೀಳುತ್ತಿದ್ದ ಹಾಗು ಹೇಗಾದರೂ ಅವನಿಂದ ಹಣ ಪಡೆಯುತ್ತಿದ್ದ ಹಾಗು ಇದು ಅವನ ರೂಢಿ ಆಗಿ ಹೋಗಿತ್ತು, ರಮೇಶ ಅವನಿಗೆ ಹಣ ಕೊಟ್ಟು ಕೊಟ್ಟು ಸೋತುಹೋಗಿದ, ಆದರೆ ಉಪಕಾರಬುದ್ಧಿಯುಳ್ಳ ರಮೇಶ ದಯೆ, ದಾಕ್ಷಿಣ್ಯಯಿಂದ ಅವನಿಗೆ ಅಂತು ಇಂತು ಹಣ ಕೊಟ್ಟು ಸಹಾಯ ಮಾಡುತ್ತಿದ್ದ. 

ಟ್ರೈನಲ್ಲಿ ಸುಮಾ ರಮೇಶನಿಗೆ "ಕೇಳಿತ, ಅಮ್ಮನನ್ನು ನೋಡಲು ಹೋಮ್ ನರ್ಸ್ ಬೇಕಲ್ಲವೇ"?

ರಮೇಶ "ಒಹ್!! ಹೌದು ನಾನು ಮರೆತೇ ಹೋಗಿದೆ" ಎಂದು ಅವನು ಅವನ ಅಣ್ಣ ದಿರೇಶನಿಗೆ ಮೊಬೈಲ್ನಿಂದ ಫೋನ್ ಮಾಡಿದ.

ಅಲ್ಲಿಂದ ದಿರೇಶ್ " ಹಲೋ"

ರಮೇಶ "ಎಲ್ಲಿದ್ದೀಯಾ"?

ದಿರೇಶ "ಇಲ್ಲೇ,... ಹೋಟೆಲಲ್ಲಿ ಹೇಳು".

ರಮೇಶ "ಅಮ್ಮನನ್ನು ಊರಿಗೆ ಕರೆದುಕೊಂಡು ಬರತ್ತಾ ಇದ್ದೇನೆ".

ದಿರೇಶ "ಹೌದ, ಯಾವಾಗ? ಹೇಗಿದ್ದಾರೆ ಅಮ್ಮ ಈಗ, ನೀನು ಯಾವಾಗ ಬಂದೆ"? ತನ್ನನೆ ಜಗತ್ತಲ್ಲಿರುವ ದಿರೇಶ ಅವನದ್ದೇ ಗುಂಗಿನಲ್ಲಿ ಕೆಲವು ಪ್ರಶ್ನೆ ಕೇಳಿದ.

ರಮೇಶ "ನಾನು ಬಂದು ಕೆಲವು  ದಿನ ಆಯಿತು, ಈಗ ನಾವು ಟ್ರೈನಲ್ಲಿ ಇದ್ದೇವೆ, ಅಮ್ಮನನ್ನು ಕರೆದುಕೊಂಡು ಬರತ್ತಾ ಇದ್ದೇವೆ, ನೀನೊಂದು ಕೆಲಸ ಮಾಡು, ಅಮ್ಮಗೋಸ್ಕರ ಒಂದು ಹೋಮ್ ನರ್ಸ್ ಹುಡುಕು, ನಾಳೆ ನಾವು ಊರಿಗೆ ತಲುಪುತ್ತೇವೆ".

ಅದಕ್ಕೆ ದಿರೇಶ "ಇಲ್ಲಿ ಒಂದು ಊರಿನಲ್ಲಿ ಒಂದು ಆಯುರ್ವೇದಿಕ್ ಆಸ್ಪತ್ರೆ ಇದೆಯಂತೆ, ತುಂಬಾ ಫೇಮಸ್, ಅಲ್ಲಿ ಅಮ್ಮನ ಹಾಗೆ ಕಾಯಿಲೆದವರೇ ಇರುವುದು, ಅಲ್ಲಿ ಕೆಲವು ಪಕ್ಷವಾತ ಆದ ರೋಗಿಗಳು ಕೆಲವು ದಿನ ಅಲ್ಲಿ ಚಿಕೆತ್ಸೆ ಪಡೆದು ಈಗ ಓಡ್ತಾ ಇದ್ದರಂತೆ" ದೊಡ್ಡ ದೊಡ್ಡ ಮಾತಾಡುವುದರಲ್ಲಿ ನಿಸ್ಸಿಮ ದಿರೇಶ  ರಮೇಶನಿಗೆ ಹೇಳಿದ.

ರಮೇಶ " ಯಾವ ಆಸ್ಪತ್ರೆ "?

ದಿರೇಶ "ಇಲ್ಲೇ ಸಮೀಪ ಇದೆ, ನೀವು ಬಂದ ನಂತರ ಅಮ್ಮನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಮತ್ತೆ ಅಲ್ಲಿಂದಲೇ ಹೋಮ್ ನರ್ಸ್ ನ ವ್ಯವಸ್ಥೆ ಮಾಡುವ".

ರಮೇಶ "ಓ. ಕೆ , ಆದರೆ ನೀನು ಬೇರೆ ಕಡೆ ಸಹ ಹೇಳಿ ಇಡು".

ದಿರೇಶ "ಅದೆಲ್ಲ ನೀನು ಟೆನ್ಶನ್ ಮಾಡಬೇಡ, ಅದರ ವ್ಯವಸ್ಥೆ ನಾನು ಮಾಡುತ್ತೇನೆ, ಆದರೆ ಅವರಿಗೆ ಸಂಬಳ ಎಷ್ಟು ಹೇಳುವುದು"?

ರಮೇಶ "ಸಂಬಳ.....ನೋಡು........ಎಷ್ಟು ಕೇಳುತ್ತಾರೆ, ಮತ್ತೆ ಅಲ್ಲಿ ನಮ್ಮ ಹಳ್ಳಿಯ ಮನೆಗೆ ಬರಬೇಕಾಗುತ್ತದೆಯಲ್ಲ , ಸ್ವಲ್ಪ ಹೆಚ್ಚು ಕೇಳಬಹುದು, ಕೇಳಿ ನೋಡು".
  
ದಿರೇಶ "ಓ. ಕೆ, ನಾನು ಎಲ್ಲ ವಿವರವಾಗಿ ಕೇಳಿ ನಾಳೆ ಮನೆಗೆ ಬರುತ್ತೇನೆ"

ರಮೇಶ "ಓ. ಕೆ, ಬೈ".

ದಿರೇಶ "ಓ.ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

Monday, February 10, 2020

ವೃದ್ಧಾಶ್ರಮ ೧೦

ಮಾರನೇ ದಿನ ಬೆಳಿಗ್ಗೆ ಊರಿಗೆ ಹೊರಡಲು ಸುಮಾ ಮತ್ತು ರಮೇಶ ಅಮ್ಮನ ಸ್ನಾನ ಮುಗಿಸಿ ಅವರಿಗೆ ಡೈಪರ್ ಧರಿಸಲು ಹೋದಾಗ ಅಮ್ಮ ಆಶ್ಚರ್ಯದಿಂದ "ಇದೇನು"? 

ರಮೇಶ "ಅಮ್ಮ ಪ್ರಯಾಣ ಮಾಡುವಾಗ ನಿಮಗೆ ಮಲ ಮೂತ್ರ ಬಂದರೆ, ಅಲ್ಲಿ ಟ್ರೈನಲ್ಲಿ ನಿಮಗೆ ಬೆಡ್ ಪ್ಯಾನ್ ಕೊಡಲು ಸಾಧ್ಯವಿಲ್ಲವಲ್ಲ, ಅದಕ್ಕೆ ಈ ಡೈಪರ್  ಧರಿಸಿದರೆ ನಿಮಗೆ ಟೆನ್ಶನ್ ಫ್ರೀ ಇರಬಹುದು".

ಅದಕ್ಕೆ ಅಮ್ಮ "ಶಿ ... ಅದಕ್ಕೆ ಮಾಡಿ ನಂತರ ಆ ಕೊಳಕಲ್ಲಿ ಕೂತು ಕೊಳ್ಳುವುದು ಹೇಗೆ, ನನ್ನಿಂದ ಆಗದು" ಎಂದು ತೊದಲುತ್ತಾ ಹೇಳಿದರು.

ರಮೇಶ "ಅರೆ...... ಅಮ್ಮ, ಏನಾಗುವುಲ್ಲ ನಾಳೆ ಬೆಳಿಗ್ಗೆ ತನಕ ಅಷ್ಟೇ, ಊರ ಮನೆ ಮುಟ್ಟಿದ ನಂತರ ತೆಗೆದು ಬಿಡುತ್ತೇವೆ, ಆ ತನಕ ಪ್ಲೀಸ್ ಧರಿಸಿ"  ಎಂದು ಅಮ್ಮನನ್ನು ಒತ್ತಾಯಿಸಿದ.

ರಮೇಶ ಮತ್ತು ಸುಮಾಳ ಒತ್ತಾಯಕ್ಕೆ ಅಮ್ಮನಿಗೆ  ತುಂಬಾ ಕಷ್ಟದಿಂದ ಆ ಡೈಪರ್ ಧರಿಸಲಾಯಿತು.

ಅಮ್ಮನಿಗೆ ರೆಡಿ ಮಾಡಿಸಿದ  ನಂತರ ಸುಮಾ ಅತೀಶನನ್ನು ಸ್ನಾನ ಮಾಡಿಸಿ ರೆಡಿ ಮಾಡಿದಳು ಹಾಗು ಸ್ವತಃ ಸ್ನಾನ ಮಾಡಲು ಹೋದಳು.

ರಮೇಶ ಸಾಮಾನಿನ ಬ್ಯಾಗ್ ಎಲ್ಲ ಸಿದ್ಧ ಮಾಡಿದ ಹಾಗು ಸ್ವತಃ ತಯಾರಾದ.

ಎಲ್ಲರು ತಯಾರಾದ ನಂತರ ಅಮ್ಮನನ್ನು ತುಂಬಾ ಕಷ್ಟದಿಂದ ಲಿಫ್ಟ್ ನಿಂದ  ಗ್ರೌಂಡ್ ಫ್ಲೋರ್ ತನಕ ಕರೆದು ಕೊಂಡು ಬಂದರು, ರಮೇಶ ಮೊದಲೇ ಕಾರ್ ಹೇಳಿ ಇಟ್ಟಿದ, ಅಮ್ಮನನ್ನು ಕಾರಲ್ಲಿ ಕೂರಿಸಲು ಸಹ ರಮೇಶ ಮತ್ತು ಸುಮಾಳಿಗೆ ತುಂಬಾ ಕಷ್ಟವಾಯಿತು, ಹೇಗೋ ಎಲ್ಲ ನಿಭಾಯಿಸಿ ಕಾರ್ ರೈಲ್ವೆ ಸ್ಟೇಷನ್ ಗೆ ಹೊರಡಿತು. 

ಸ್ಟೇಷನ್ ತಲುಪಿದ ನಂತರ ಅಮ್ಮನನ್ನು ಕಾರಿನಿಂದ  ಇಳಿಸಿ ಒಬ್ಬ ಕೂಲಿಯ ಸಹಾಯದಿಂದ ಅಮ್ಮನನ್ನು ಪ್ಲಾಟ್ಫಾರ್ಮ್ ಕರೆದು ಕೊಂಡು ಬರುವ ತನಕ ರಮೇಶ ಮತ್ತು ಸುಮಾಳಿಗೆ ಸಾಕು ಸಾಕಾಯಿತು.

ಊರಿಗೆ ಹೋಗುವ ಟ್ರೈನ್ ಬಂದು ನಿಲ್ಲಿದ ಕ್ಷಣ ಜನರೆಲ್ಲಾ ಗಡಿಬಿಡಿಯಿಂದ ಟ್ರೈನ್ ಹತ್ತಲು ಶುರು ಮಾಡಿದರು, ಎಲ್ಲರೂ ಊರಿಗೆ ಹೋಗುವವರು ಸ್ವಾಭಾವಿಕವಾಗಿ ಅವರತ್ತಿರ ಸಾಮಾನು ಸಹ ತುಂಬಾ ಇತ್ತು. ರಮೇಶ ಮತ್ತು ಸುಮಾ ಎಲ್ಲರು ಹತ್ತುವ ತನಕ ಕಾದು ನಂತರ ನಿಧಾನವಾಗಿ ಅಮ್ಮನನ್ನು ಹತ್ತಿಸಿ ಅವರಿಗೆ ರಮೇಶ್ ಮೀಸಲಾತಿ ಮಾಡಿದ ಸೀಟಲ್ಲಿ ಕೂರಿಸಿದ. 

ಈ ಎಲ್ಲ ಪ್ರಕ್ರಿಯೆಯಲ್ಲಿ ಆ ಕೂಲಿ ಅವರ ತುಂಬಾ ಸಹಾಯ ಮಾಡಿದ ಹಾಗು ಅವರ ಸಾಮಾನುಗಳನ್ನು ಸರಿಯಾಗಿ ತಂದು ಇಟ್ಟಿದ. ರಮೇಶ ಮತ್ತು ಸುಮಾಳಿಗೆ ಆ ಸಮಯ ಆ ಕೂಲಿ ದೇವರಂತೆ ಕಂಡು ಬಂದ ಹಾಗು ಖುಷಿಯಿಂದ ರಮೇಶ ಅವನಿಗೆ ೫೦೦ ರೂಪಾಯಿ ಕೊಟ್ಟು ಅವನಿಗೆ ಧನ್ಯವಾದ ಸಲ್ಲಿಸಿದ. 

ನಮ್ಮ ಕಷ್ಟದಲ್ಲಿ ಅಕಸ್ಮಾತ್ ಯಾರಾದರೂ ನಮಗೆ  ಸಹಾಯ ಮಾಡಲು ಬಂದಾಗ, ಆ ಕ್ಷಣದಲ್ಲಿ ನಾವು ಅವರಲ್ಲಿ ದೇವರನ್ನು ನೋಡುತ್ತೇವೆ ಹಾಗು  ತೊಂದರೆಯಲ್ಲಿರುವ ವ್ಯಕ್ತಿಗೆ ನಾವು ಸಹಾಯ ಮಾಡಿದಾಗಲೆಲ್ಲಾ, ಆ ವ್ಯಕ್ತಿಗೆ ನಾವು ಆ ಕ್ಷಣದಲ್ಲಿ ಆತನ ದೇವರಾಗುತ್ತೇವೆ ಹಾಗೆಯೇ  ನಮ್ಮ ಪ್ರತಿ ಸೌಹಾರ್ದತೆ ತೋರಿಸುವ ವ್ಯಕ್ತಿಯಲ್ಲಿ ನಮಗೆ ದೇವರು ಕಂಡು ಬರುತ್ತಾನೆ, ಬಹುಶಃ ಅದಕ್ಕೆ ಪ್ರೀತಿ ದೇವರ ಮತ್ತೊಂದು ರೂಪ ಎಂದು ಹೇಳಲಾಗುತ್ತದೆ.

ಕೂಲಿ ಹೋದ ನಂತರ ಎಲ್ಲರು ತನ್ನ ತನ್ನ ಸೀಟಲ್ಲಿ ಕುಳಿತುಕೊಂಡರು. 

ಅಮ್ಮ ಪಡುತ್ತಿರುವ ಕಷ್ಟ ಹಾಗು ಅಮ್ಮನಿಗೋಸ್ಕರ ರಮೇಶ ಪಡುತ್ತಿರುವ ಕಷ್ಟ ನೋಡಿ ಯಾಕೋ ಕಿಟಕಿಯ ಬದಿಯಲ್ಲಿ ಕುಳಿತ ಸುಮಾಳ ಕಣ್ಣಿಂದ ಕಣ್ಣೀರು ಹರಿದು ಬಿತ್ತು, ಎದುರು ಸೀಟಲ್ಲಿ ಸುಖದಿಂದ ಮಲಗಿದ ಅಮ್ಮನನ್ನು ನೋಡಿ ರಮೇಶ ಒಂದು ಶಾಂತಿಯ ನಿಟ್ಟುಸಿರು ಬಿಟ್ಟ. 

ಕೆಲವೇ ನಿಮಿಷದ ನಂತರ ಟ್ರೈನ್ ಊರಿಗೆ ಹೊರಟಿತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Sunday, February 9, 2020

ವೃದ್ಧಾಶ್ರಮ ೯

ಅಮ್ಮನ  ಮಲ ಮೂತ್ರಕ್ಕೆಲ್ಲ ಹಾಸಿಗೆಯಲ್ಲಿಯೇ ಬೆಡ್ ಪ್ಯಾನ್  ಕೊಡಬೇಕಾಗುತ್ತಿತ್ತು, ರಮೇಶ ಮತ್ತು ಸುಮಾ ಎಷ್ಟು ಪ್ರಯತ್ನ ಮಾಡಿದ್ದರು ಶೌಚಾಲಯ ಹೋಗುವಷ್ಟು ಅವರ ಶರೀರ ಜಡವಾಗುತ್ತಿತ್ತು, ನಿಂತಲ್ಲಿಯೇ  ನಿಲ್ಲುತ್ತಿದ್ದರು ಹಾಗು ಉದ್ದ ದಪ್ಪ ಇದ್ದ ಅಮ್ಮನ ಭಾರ ಅವರಿಂದ ನಿಯಂತ್ರಿಸಲಾಗುತ್ತಿರಲಿಲ್ಲ. ಅಮ್ಮ ಮಲ ಮೂತ್ರಕ್ಕೆ ಹಾಸಿಗೆಯಿಂದಲೇ ಕರೆಯುತ್ತಿದ್ದರು, ನಂತರ  ರಮೇಶ ಅಲ್ಲದೆ  ಸುಮಾ  ಅವರಿಗೆ ಬೆಡ್ ಪ್ಯಾನ್ ಇಟ್ಟು ಮಲ ಮೂತ್ರ ಮಾಡಿಸಿ ಸ್ವಚ್ಛ ಮಾಡುತ್ತಿದ್ದರು.  

ಒಳ್ಳೆ ಸೌಖ್ಯ ಇದ್ದವರು ಅಮ್ಮ ಈಗ ಹೇಗೆ ವೇದನೆಯಿಂದ ಹೊರಳಾಡುತ್ತಿದ್ದಾರೆ, ಅಮ್ಮನನ್ನು  ಈಗ ಈ ಸ್ಥಿತಿಯಲ್ಲಿ ನೋಡಿ ರಮೇಶನಿಗೆ ದುಃಖ ಉಕ್ಕಿ ಬರುತಿತ್ತು, ಜನ್ಮ ನೀಡಿ ಸಾಕಿದ ಅಮ್ಮನಿಗೆ ಇಂದು ಹೀಗೆ  ನರಳುವುದನ್ನು  ನೋಡಿ ಅವನ ಕಣ್ಣೀರು ನಿಲ್ಲುತ್ತಿರಲಿಲ್ಲ, ಒಂದೊಂದು ಸಲ ಅವನಿಗೆ ವಿದೇಶದ ಕೆಲಸ ಬಿಟ್ಟು ಬಿಡಬೇಕೆಂದು ಅನಿಸುತ್ತಿತ್ತು, ಆದರೆ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡುವಾಗ ಅವನ ತೀರ್ಮಾನ ಬದಲಾಗುತ್ತಿತ್ತು, ರಮೇಶ ಈಗ ತಾನೇ ಸ್ವಲ್ಪ ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡಿದ್ದ, ಅಷ್ಟೇನು ಹಣಕಾಸಿನ ಉಳಿತಾಯ ಸಹ ಇರಲಿಲ್ಲ ಅವನ ಹತ್ತಿರ, ಸ್ವತಃ ಮನೆ ಸಹ ಇರಲಿಲ್ಲ, ಇದೆಲ್ಲ ಯೋಚಿಸಿದಾಗ ಅವನಿಗೆ ವಿದೇಶದ  ಕೆಲಸ ಅವನ ಮುಂದಿನ ಜೀವನಕ್ಕೆ ಎಷ್ಟು ಮಹತ್ವಪೂರ್ಣವೆಂದು ತಿಳಿಯುತ್ತಿತ್ತು, ಈಗ ಅಸಹಾಯಕನಾದ ಅವನಿಗೆ ಅಮ್ಮನನ್ನು ಊರಿಗೆ ಕರೆದೆಕೊಂಡು ಹೋಗದೆ ಇತರ ಯಾವುದೇ ದಾರಿ ಕಾಣುತ್ತಿರಲಿಲ್ಲ. 

ಮಾನವ ಜೀವನವನ್ನು ಸೃಷ್ಟಿಸಲು ದೇವರು ಮಹಿಳೆಯನ್ನು ಸೃಷ್ಟಿಸಿದನು, ಮಹಿಳೆ ತನ್ನ ಶಕ್ತಿಯನ್ನು ಜೀವವನ್ನು ಸೃಷ್ಟಿಸಲು ಬಳಸಿದಾಗ ಅವಳನ್ನು ತಾಯಿ ಎಂದು ಕರೆಯಲಾಯಿತು, ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ಮತ್ತು ಸಹಾನುಭೂತಿಯ ಅಸ್ತಿತ್ವ ಅಂದರೆ ತಾಯಿಯೇ. 

ಈಗ ಟ್ರೈನ್ನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಏನು ಮಾಡುವುದೆಂದು ಸುಮಾಳಿಗೆ ಅರ್ಥವಾಗುತ್ತಿರಲಿಲ್ಲ, ಆಗ ಅಕಸ್ಮಾತ್ ಅವಳಿಗೆ ಮಕ್ಕಳು ಉಪಯೋಗಿಸುವ ಡೈಪರ್ ಬಗ್ಗೆ ಹೊಳೆಯಿತು.

ಸುಮಾ ರಮೇಶನನ್ನು ಕರೆದು "ಕೇಳಿತಾ, ಈಗ ಟ್ರೈನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಸಮಸ್ಯೆ ಆಗುತ್ತದೆ, ಅದಕ್ಕೆ ನಾನೇನು ಹೇಳುವುದು ನೀವು ಮೆಡಿಕಲ್ ಹೋಗಿ ಹಿರಿಯರು ಬಳಸುವ ಡೈಪರ್ ಸಿಗುತ್ತದೆಯೇ ನೋಡಿ, ಸಿಕ್ಕಿದರೆ ಒಂದು ಪ್ಯಾಕೆಟ್ ತೆಗೆದುಕೊಂಡು ಬನ್ನಿ, ಇದು ಸಿಕ್ಕಿದರೆ ಅಮ್ಮನಿಗೆ ಪ್ರಯಾಣಿಸುವಾಗ ಮಲ ಮೂತ್ರದ ಸಮಸ್ಯೆ ಆಗುವುದಿಲ್ಲ. 

ರಮೇಶ "ವಾವ್, ಇದು ಒಳ್ಳೆ ಐಡಿಯಾ, ಡೈಪರ್ ಸಿಕ್ಕಿದರೆ ನಮಗೆ ಅಮ್ಮನ ಮಲಮೂತ್ರದ ಟೆನ್ಶನ್ ಇರುವುದಿಲ್ಲ, ನಾನು ಈಗ ಮೆಡಿಕಲ್ ಹೋಗಿ ಬರುತ್ತೇನೆ" ಎಂದು ರಮೇಶ ಮೆಡಿಕಲ್ ಹೋಗಲು ಸಿದ್ಧನಾದ.

ಮಾರ್ಕೆಟಲ್ಲಿ ತುಂಬಾ ಸಮಯ ಅಲೆದ ನಂತರ ಹಾಗು ಕೆಲವು ಮೆಡಿಕಲಲ್ಲಿ ವಿಚಾರಿಸಿದ ನಂತರ ಅವನಿಗೆ ಒಂದು ಮೆಡಿಕಲಲ್ಲಿ ಹಿರಿಯರು ಬಳಸುವ ದೊಡ್ಡ ಡೈಪರ್ ಪ್ಯಾಕೆಟ್ ಸಿಕ್ಕಿತು, ಕೂಡಲೇ ಅವನು ಅದನ್ನು ಖರೀದಿ ಮಾಡಿಕೊಂಡು ಬಂದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Saturday, February 8, 2020

ವೃದ್ಧಾಶ್ರಮ ೮

ಆಶಾ ಚಿಕ್ಕಮ್ಮನಿಗೆ ಫೋನ್ ಮಾಡಿದ ನಂತರ ಚಿಂತಿತನಾದ ರಮೇಶ ಸುಮಾಳ ಬಳಿ ಬಂದು ಅವಳಿಗೆ ಎಲ್ಲ ಮಾತು ತಿಳಿಸಿದ. 

ಈ ಕಳವಳದಲ್ಲಿ ರಮೇಶ  "ನರ್ಸ್ ಇಟ್ಟ ಮೇಲೆ ಅವರಿಗೇನು ಅಷ್ಟು ಕಷ್ಟ ಯಾರಿಗೊತ್ತು?  ನನಗನಿಸುವುದಿಲ್ಲ ನರ್ಸ್ ಇಟ್ಟ ಮೇಲೆ ಅವರಿಗೆ ಅಮ್ಮನ ಕೆಲಸ ಮಾಡಬೇಕಾಗಬಹುದೆಂದು, ಕೇವಲ ಅಡುಗೆ, ಅದರಲ್ಲಿಯೂ ಏನಷ್ಟು? ಬಹುಶಃ ಅಮ್ಮ ಊರಿಗೆ ಬರುಹುದೇ ಅವರಿಗೆ ಇಷ್ಟವಿಲ್ಲ ಕಾಣುತ್ತದೆ, ಈಗ ವಿಜಯ ಮಾಮ ಇಲ್ಲವೇ ಅಲ್ಲಿ, ವಿಜಯ ಮಾಮ ಇಡೀ ದಿನ ಎಷ್ಟು ಬೊಬ್ಬೆ ಹಾಕುತ್ತಿರುತ್ತಾರೆ,  ಎಷ್ಟು ಅವರಿಗೆ ಉಪದ್ರ ಕೊಡುತ್ತಾರೆ, ಆದರೂ ಅವರ ಎಲ್ಲ ಕೆಲಸ ಮಾಡುತ್ತಾರೆ, ಅಮ್ಮ ಅಂದರೆ ಅಷ್ಟೇನು ಸಸಾರ, ನಮ್ಮ ಪ್ರಾಬ್ಲಮ್ ಇದೆಯೆಂದು ನಾವು ಹೇಳುವುದಲ್ಲವೇ, ಇಲ್ಲಾದರೆ ಯಾರು ಅವರಿಗೆ ಕಷ್ಟ ಕೊಡುತ್ತಾರೆ, ಸ್ವಲ್ಪ ಸಹ ಕರುಣೆ ಇಲ್ಲವೇ" ಎಂದು ಸುಮಾಳೊಂದಿಗೆ ಗೊಣಗಿದ.

ರಮೇಶನ ಮಾತು ಕೇಳಿ ಸುಮಾ "ನೀವು ಶಾಂತವಾಗಿರಿ, ವಿಜಯ ಮಾಮ ಮೊದಲಿನಿಂದ ಅವರೊಟ್ಟಿಗೆ ಇದ್ದವರು, ಆದರಿಂದ  ಅವರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ,  ಮೇಲಿಂದ ಅವರತ್ತಿರ ಅವರನ್ನು ನೋಡಿಕೊಳ್ಳದೆ ಬೇರೆ ಉಪಾಯ ಸಹ ಇಲ್ಲ, ವಿಜಯ ಮಾಮನ ಹೆಂಡತಿ ಮಕ್ಕಳು ಅವರಿಂದ ದೂರವಾಗಿದ್ದಾರೆ, ಅವರನ್ನು ನೋಡಲು ಸಹ ಬರುವುದಿಲ್ಲ, ಅಮ್ಮ ಅಂದರೆ ಹೇಗೆ, ಮದುವೆ ಆದ ನಂತರ ಮುಂಬೈಯಲ್ಲಿ ಇದ್ದವರು, ಅಮ್ಮನ ಮೇಲೆ ಅವರಿಗೆ ಅಷ್ಟೇನೂ ಅಟ್ಯಾಚ್ಮೆಂಟ್ ಸಹ ಇಲ್ಲದಿರಬಹುದು, ಮೇಲಿಂದ  ಅವರ ಮಕ್ಕಳಿರುವಾಗ ನಾವು ಯಾಕೆ ಮಾಡಬೇಕು ಎಂಬ ವಿಚಾರ ಸಹ  ಅವರ ಮನಸ್ಸಲ್ಲಿರಬೇಕು, ಈಗ ಅವರಿಗೆ ಏನೂ ಹೇಳುವುದು ಸರಿಯಲ್ಲ, ಅವರ ಮನಸ್ಥಿತಿಯ ಮೇಲೆ ನಮ್ಮ ನಿಯಂತ್ರಣವಿಲ್ಲ, ನೀವು ಹೆಚ್ಚು ವಿಚಾರ ಮಾಡಬೇಡಿ,  ಊರಿನ ಟ್ರೈನ್ ಟಿಕೆಟ್ ಮಾಡಿ ಬಿಡಿ, ಬಸ್ಸಲ್ಲಿ ಅಮ್ಮನಿಗೆ ಆಗಲಿಕ್ಕಿಲ್ಲ ಮೇಲಿಂದ ಬಸ್ಸಲ್ಲಿ ಅವರನ್ನು ಕರೆದುಕೊಂಡೋಗುವುದು ಸಹ ತುಂಬಾ ಕಷ್ಟ, ಅದಕ್ಕೆ ಟ್ರೈನ್ ಟಿಕೆಟ್ ಮಾಡಿ,  ಹೆಚ್ಚು ವಿಚಾರ ಮಾಡಿ ಸಹ ಪ್ರಯೋಜನವಿಲ್ಲ,  ದೇವರು ಒಳ್ಳೆಯದ್ದೇ ಮಾಡುತ್ತಾರೆ ".

ಸುಮಾಳ ಇಷ್ಟೆಲ್ಲ ಮಾತು ಕೇಳಿ ಸಹ  ಈಗಲೂ ಸ್ವಲ್ಪ ಸಂದಿಗ್ಧತೆದಲ್ಲಿದ್ದ ರಮೇಶ, ಆದರೆ ಅದೇ ಸಮಯದಲ್ಲಿ ಅವನ ಮನಸ್ಸಲ್ಲಿ ಕೆಲವು ದಾರ್ಶನಿಕ ವಿಚಾರಗಳು ಬಂತು.

ಜೀವನದ ಸಂಕಷ್ಟಗಳು ನಮ್ಮನ್ನು ಇನ್ನು ಸಶಕ್ತ ಮಾಡುತ್ತವೆ, ಒಂದು ವೇಳೆ ಜೀವನದಲ್ಲಿ ಕೇವಲ ಸುಖ ಇದ್ದರೆ ಜೀವನ ಸಹ ನೀರಸವಾಗುವುದು, ಆದ್ದರಿಂದ ವ್ಯಕ್ತಿಗೆ ಬಂದ ಕಷ್ಟಗಳನ್ನು  ಧೈರ್ಯದಿಂದ ಸ್ವೀಕರಿಸಿ ಅದನ್ನು ಎದುರಿಸಬೇಕು. ಒಂದು  ವೇಳೆ  ಜೀವನದಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೆ,  ಜೀವನದ  ಲೌಕಿಕತೆಯನ್ನು  ಸಹ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಈ ಕಠಿಣ ಸಮಯದಲ್ಲಿಯೇ ಯಾರು ನಮ್ಮವರು ಯಾರು ಪರಕೀಯರು ಎಂದು ನಮಗೆ ತಿಳಿಯುವುದು.

ಈಯೆಲ್ಲ ಉತ್ತಮ ವಿಚಾರದಿಂದ ರಮೇಶನ ಮನಸ್ಸಲ್ಲಿ ಒಂದು ಹೊಸ ಭರವಸೆಯ  ನಿರ್ಮಾಣವಾಯಿತು ಹಾಗು ಮನಸ್ಸು ಗಟ್ಟಿ ಮಾಡಿ  ರಮೇಶ ಊರಿಗೆ ಹೋಗಲು ಎಲ್ಲರದ್ದು ತತ್ಕಾಲಲ್ಲಿ ಆನ್ಲೈನ್ ಟ್ರೈನ್ ಟಿಕೆಟ್ ಬುಕ್ ಮಾಡಿದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ. ಶಿರ್ವ
ಚಿತ್ರ ಕೃಪೆ : ಗೂಗಲ್

ಸಿದ್ಧಿದಾತ್ರಿ