Showing posts with label ವಿವಿಧ. Show all posts
Showing posts with label ವಿವಿಧ. Show all posts

Wednesday, June 24, 2020

ಲೇಖಕ


ಎಲ್ಲಾ ಕಥೆಯೂ ಅಪೂರ್ಣ, ಬರೆಯುವವರ ಇಚ್ಛೆ, ಓದುಗಾರರು ವ್ಯಾಕುಲ
---- ಕಲ್ಪನೆಯ ಲೋಕ, ಲೇಖಕನ ಕಲ್ಪನೆ, ಹಾಳೆಯಲ್ಲಿ ಭಾವನೆ ----
ಅವನು ಬರೆದ ಕಥೆಯ ಅವನೇ ಓದುಗಾರ, ವಿಷಾದ!! ಕಾದಂಬರಿ ಬಿಕ್ರಿ ಆಗಿಲ್ಲ
----
ಲೇಖನಿ ಹರಿತವಾಗಿದೆ, ಭಾವನೆಯೂ ಮೂಡುತ್ತಿದೆ, ಹೊಸ ಬರಹಗಾರ, ಗದ್ಯ ಪದ್ಯದ ವ್ಯತ್ಯಾಸ ಗೊತ್ತಿಲ್ಲ ಅಷ್ಟೇ
----
ಬಡ ಲೇಖಕ ಪುಸ್ತಕ ಅಂಗಡಿಗೆ ಬಂದು
ಒಂದು ಕಾದಂಬರಿ ತೆರೆದು ನೋಡಿದ,
ಅದು ಅವನು ಬರೆದ ಕಾದಂಬರಿ,
ಕಾದಂಬರಿಯ ಮುಖಪುಟದಲ್ಲಿ
ಪ್ರಸಿದ್ಧ ಲೇಖಕನ ಹೆಸರು. by ಹರೀಶ್ ಶೆಟ್ಟಿ, ಶಿರ್ವ

Photo : Google

ಜೀವನ ಮರಣ


ಬದುಕಿದ್ದಾಗ ಯಾರೂ ಬಂದು
ಅವನ ಯೋಗಕ್ಷೇಮ ವಿಚಾರಿಸಲಿಲ್ಲ,
ಈಗ ಅವನ ಅಕಸ್ಮಾತ ಮರಣದ ನಂತರ
ಎಲ್ಲೆಡೆ ಅವನದ್ದೇ ಚರ್ಚೆ

---

ಇಡೀ ಜೀವನ ಅವನು
ದುರಭ್ಯಾಸದಲ್ಲಿ ಲೀನವಾಗಿದ್ದ,
ಸತ್ತ ನಂತರ
ಕುಟುಂಬದಲ್ಲಿ ನೆಮ್ಮದಿಯ ಉಸಿರು

---

ಕುಟುಂಬದಿಂದ ದೂರ ಅವನು
ಎಷ್ಟೋ ವರುಷದಿಂದ,
ಕುಟುಂಬದ ಪುರಾವೆ ಸಿಗದೇ
ರಸ್ತೆಯಲ್ಲಿ ಬಿದ್ದ ಅವನ ಶವವನ್ನು
ಪುರಸಭೆಯವರು ಅಂತ್ಯಸಂಸ್ಕಾರಕ್ಕೆ ಕಳಿಸಿದರು

----

ಸಂಸಾರ ಬಿಟ್ಟು ಅವನು
ದೈವ ಭಕ್ತಿಯಲ್ಲಿ ಲೀನವಾಗಿದ್ದ,
ಈಹಲೋಕ ತ್ಯಜಿಸಿದ ನಂತರ
ಕುಟುಂಬದವರು ಭಕ್ತಿ ಭಾವದಿಂದ
ಅವನ ಅಂತ್ಯ ಕ್ರಿಯೆ ಮುಗಿಸಿದರು

by ಹರೀಶ್ ಶೆಟ್ಟಿ, ಶಿರ್ವ


Photo : Google 

Tuesday, June 23, 2020

ಹಳೆ


ನಾನು ಬರೆದ ಹಳೆ ಕವಿತೆಯ ಆ ಕಾಗದದ ಹಾಳೆ
ಮಳೆಯ ನೀರಿನಲ್ಲಿ ದೋಣಿಯಾಗಿ ಸಾಗಿ ಹೋಯಿತು
ಒಟ್ಟಿಗೆ ಅದೆಷ್ಟೋ ಭಾವನೆಗಳೂ ಸಾಗಿ ಹೋದವು 
-----
ಕಪಾಟು ತೆರೆದಾಗ
ಬಟ್ಟೆಯ ಅಡಿಯಲ್ಲಿ ಒಂದು ಹಳೆ ಪತ್ರ ಸಿಕ್ಕಿತು,
ತೆರೆದು ನೋಡಿದೆ
ಖಾಲಿ ಹಾಳೆ,
ಅವಳ ಚಹರೆ ಕಣ್ಣ ಮುಂದೆ ಸಾಗಿ ಹೋಯಿತು 
-----
ಅಪ್ಪ ತಂದು ಕೊಟ್ಟಿದ್ದ
ಆ ಹಳೆ ಅಂಗಿ ಧರಿಸಿದೆ,
ಅಮ್ಮನ ಕಣ್ಣಲ್ಲಿ ಕಣ್ಣೀರು ತುಂಬಿ ಬಂತು
-----
ಓದಲೆಂದು ಹಳೆ ಪುಸ್ತಕದ ಧೂಳು ಜಾಡಿಸಿದೆ
ಒಣಗಿದ ಗುಲಾಬಿ ಹೂವು ಕೆಳಗೆ ಬಿತ್ತು,
ನೆನಪಿನ ಯಾತ್ರೆ ಆರಂಭವಾಯಿತು
ಒಂದಕ್ಷರ ಸಹ ಓದಲಾಗಲಿಲ್ಲ
-----
ಬಾಲ್ಯ ಮಿತ್ರನೊಬ್ಬ ಹಳೆ ಫೋಟೋ
ವಾಟ್ಸಪ್ಪಲ್ಲಿ ಕಳಿಸಿದ,
ನನ್ನ ಕಣ್ಣು ಗುಂಪಲ್ಲಿ ಅವಳನ್ನು ಹುಡುಕುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ  

Saturday, May 16, 2020

ಸತ್ಯ

ಸುಳ್ಳರ ಗುಂಪಲ್ಲಿ
ಸತ್ಯವನ್ನು ಹುಡುಕುವುದು ಸುಲಭ
ಸತ್ಯ ಪ್ರಕಾಶಮಯ
ಸುಳ್ಳು ಅಂಧಕಾರ

----------

ಅಂಧಕಾರ ಕೋಣೆಯಲ್ಲಿ
ಬುದ್ಧನ ಮೂರ್ತಿ ಪ್ರಜ್ವಲಿತ

----------

ಅತಿಥಿ ಬಂದಿದ್ದಾರೆ
ಆಧಾರ ಸತ್ಕಾರ
ಅಡುಗೆ ಮನೆಯಲ್ಲಿ
ಸಾಕು ಕೋಳಿಯ ಚೀತ್ಕಾರ

-----------

ಬಂಡಿ ಸಾಗುತ್ತಿದೆ
ತಾಣ ದೂರ
ವಾಹಕ ಹಸಿವೆಯಲ್ಲಿ
ಹಿಂದೆ ಪ್ರಯಾಣಿಕರು ತಿನ್ನುವುದರಲ್ಲಿ ನಿರತ

by ಹರೀಶ್ ಶೆಟ್ಟಿ,  ಶಿರ್ವ 

Thursday, March 5, 2020

ದಂಗೆ ಗಲಭೆ

ಈ ಕ್ಷಣವೂ ಕಳೆದೋಗುವುದು
ಈ ಘಟನೆಯನ್ನು ಮರೆಯಲಾಗುವುದು
ಹಿಂದೂ ಹಿಂದೂಯಾಗಿ ಉಳಿಯುವನು
ಮುಸ್ಲಿಮ  ಮುಸ್ಲಿಮನಾಗಿ ಉಳಿಯುವನು
ಕೇವಲ ಮನುಷ್ಯ ಪ್ರತಿ ಕ್ಷಣವೂ ಸಾಯುತ್ತಲೇ ಇರುವನು

by ಹರೀಶ್ ಶೆಟ್ಟಿ, ಶಿರ್ವ

ये पल भी बीत जायेंगे।
ये घटना भी भूला दिया जायेगा। 
हिन्दू हिन्दू रहेगा।
मुसलमान  मुसलमान रहेगा।
बस इंसान पल पल मरता रहेगा।

by हरीश शेट्टी, शिर्वा 

Tuesday, April 28, 2015

ಪ್ರಕೃತಿ

ನಾಶವಾಯಿತು ನಗರ
ಅಲ್ಲಲ್ಲಿ ನಡೆಯುತ್ತಿದೆ ಶವ ಸಂಸ್ಕಾರ
ಬೆಂಕಿಯ ಜ್ವಾಲೆ ಏರಿದೆ ಆಕಾಶ ಎತ್ತರ
ಭೂಮಿಗೆ ಇಂದು ಬೂದಿ ಸಿಂಗಾರ
---
ಭಾವರಹಿತ ಮುಖ
ಸೋತು ಹೋದ ಕಂಗಳು
ಜೀವರಹಿತ ದೇಹ
ಹೋದರು ನನ್ನವರೆನ್ನುವವರೆಲ್ಲ
ಅಯ್ಯೋ
ಆದರೆ ಬದುಕು ಬಾಕಿ ಇದೆಯಲ್ಲ
---
ಅನಾಥ ನಯನ
ಏನಾಯಿತು ಎಂದು ಅರಿವಿಲ್ಲ
ಅಮ್ಮ ಇಲ್ಲ ಅಪ್ಪನೂ ಇಲ್ಲ
ಅಲ್ಲಲ್ಲಿ ಓಡುತ್ತಿದ್ದಾರೆ ಎಲ್ಲ
ಯಾರಿಗೂ ಮುದ್ದು ಕೂಸಿನ ಗೋಚರವಿಲ್ಲ
---
ಪ್ರಕೃತಿ ಮೌನವಾಗಿದೆ
ಅಲ್ಲೆಲ್ಲೋ ಹಕ್ಕಿಯ ಕಲರವ ಕೇಳುತ್ತಿದೆ
ಗಗನ ಕೆಂಪೇರಿದೆ
ಪುನಃ ಹೊಸ ಸೂರ್ಯ ಮೂಡಿ ಬಂದಿದೆ
by ಹರೀಶ್ ಶೆಟ್ಟಿ, ಶಿರ್ವ

Thursday, November 13, 2014

ಅಮ್ಮ

ದೊಡ್ಡವನಾಗಿದ್ದ ಅವನು,
ಮುದಿ ಅಮ್ಮನ
ಮಾತು
ಅರ್ಥವಾಗಲಿಲ್ಲ
ಆ ಮಗನಿಗೆ
ಅರ್ಥೈಸಲು
ಪ್ರಯತ್ನ ಸಹ ಮಾಡಲಿಲ್ಲ

ಪುಟ್ಟ ಮಗುವಿದ್ದಾಗ
ಅವನ
ತೊದಲು ನುಡಿಗಳನ್ನು
ಸರಿಯಾಗಿ
ಅರ್ಥ ಮಾಡಿಕೊಳ್ಳುತ್ತಿದ್ದಳು
ಆ ಅಮ್ಮ

by ಹರೀಶ್ ಶೆಟ್ಟಿ, ಶಿರ್ವ 

Tuesday, October 21, 2014

ದೀಪಾವಳಿ

ಮನೆಯಲ್ಲಿ ಬೆಳಗುವ 
ದೀಪಗಳಿಂದ 
ಒಂದು ದೀಪವನ್ನು 
ಆ ಕತ್ತಲ ಮನೆಗೆ 
ಸಾಗಿಸಿರಿ 
---
ಹಬ್ಬದ ತಿಂಡಿ ತಿನಿಸು 
ಭಕ್ಷಗಳಿಂದ
ಒಂದು ತುತ್ತು 
ಯಾವುದೇ ಅನಾಥ
ಹಸಿದ ಹೊಟ್ಟೆಗೆ 
ಸೇರಲಿ 
---
ಅತಿ ಹೆಚ್ಚು ಪಟಾಕಿಯ 
ಮೋಜು
ನಿಮ್ಮ 
ಜೀವನದ ಖುಷಿಯನ್ನು
ಕಸಿದುಕೊಳ್ಳದಿರಲಿ
ಜಾಗೃತೆ 
---
ಮಹಾಲಕ್ಷ್ಮಿಯ ಕೃಪೆಯಿಂದ 
ನಿಮ್ಮ ಸಂಪತ್ತು ಏರಲಿ 
ಆದರೆ 
ದಾನ ಧರ್ಮದ
ಕರ್ತವ್ಯ 
ಮರೆಯದಿರಿ 
---
ಮಿತ್ರ ಸಂಬಂಧಿಕರಲ್ಲಿ 
ಮಿಠಾಯಿ 
ಹಂಚಿಕೊಂಡು 
ಬಂಧು ಭಾವದ
ಆನಂದವನ್ನು 
ಕಾಪಾಡಿಕೊಳ್ಳಿ

by ಹರೀಶ್ ಶೆಟ್ಟಿ, ಶಿರ್ವ

Wednesday, October 15, 2014

ಅಪರಿಣತ

ತುಸು ದೂರ ಬಂದು ಬಿಟ್ಟೆ
ಹಿಂತಿರುಗಿ ನೋಡಿದಾಗ
ಹಿಂದೆ ಯಾರೂ ಇರಲಿಲ್ಲ
---
ನಾನು ನಡೆದದ್ದೇ ದಾರಿ ಎನಿಸಿದ್ದೆ
ಸಾಗುತ್ತಲೇ ಹೋದೆ
ತಾಣ ಸಿಗದೇ ಚಡಪಡಿಸಿದೆ
---
ಹೃದಯ ಅಷ್ಟೇನೂ ದೃಡವಾಗಿರಲಿಲ್ಲ
ನಿರಾಸೆ ಬೇಗನೆ ಮೂಡಿತು
ಸೋತೆ
---
ಕಲಿಯುವ ಹಂಬಲ ಇತ್ತು
ಆದರೆ ಕಲಿತವರು/ಕಲಿಸುವವರು ನಿನಗೆ ನೀನೆ ಗುರು ಎಂದರು
ನನ್ನಿಂದ ದೂರವಾದರು
---
ಪ್ರಯತ್ನಿಸಿದೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲು
ಆದರೆ ತುಂಬಾ ತಡವಾಯಿತು
ವ್ಯತ್ಯಾಸ ತಿಳಿಯಲು ಅಸಮರ್ಥನಾದೆ
---
ಮೌನದಿಂದ ಸ್ನೇಹ ಬೆಳೆಸಿದೆ
ಮಿತ್ರರೆಲ್ಲರು ಚಿಂತಿಸಿದರು
ನನ್ನನ್ನು ಗುರು ಎನ್ನುವವರೂ ನನ್ನ ಬಾಗಿಲಿಗೆ ಇಣುಕಿ ನೋಡುತ್ತಿದ್ದರು
by ಹರೀಶ್ ಶೆಟ್ಟಿ, ಶಿರ್ವ

Thursday, September 25, 2014

ಮಲ್ಲಿಗೆ

                                                                  ಚಿತ್ರಕೃಪೆ :ಅಂತರ್ಜಾಲ
ಮಲ್ಲಿಗೆ
-------

ಗಾಳಿಯಲಿ
ಮಲ್ಲಿಗೆಯ ಕಂಪು
ಇದು ಅವಳ ಆಗಮನವೆ?

---

ದಾರದಲಿ ಪೋಣಿಸಿದ
ಮಲ್ಲಿಗೆ ಹೂವು
ಉದುರಿ ಹೋಗಿದೆ
ದಾರ ಈಗಲೂ
ಘಮಘಮಿಸುತ್ತಿದೆ
---

ಮಲ್ಲಿಗೆಯ
ತೋಟದಲಿ
ಅವಳ ಉಪಸ್ಥಿತಿ
ಹೂಗಳು ಪ್ರಸನ್ನ ಅತಿ ಅತಿ
---

ಪುಸ್ತಕ
ತೆರೆದರೆ ಅದರಲಿ
ಅವಲ್ಲಿಟ್ಟಿದ್ದ
ಒಣಗಿದ ಮಲ್ಲಿಗೆ
ಪುಸ್ತಕದಲಿ ಈಗಲೂ
ಅವಳ ಸುವಾಸನೆ
---

ಪೇಟೆಯಲಿ
ತುಂಬಿದೆ
ಮಲ್ಲಿಗೆ ಹೂಗಳು
ಮುತ್ತಿತು ನನ್ನನ್ನು
ಅವಳ ನೆನಪುಗಳು

by ಹರೀಶ್ ಶೆಟ್ಟಿ, ಶಿರ್ವ 

Tuesday, September 23, 2014

ಅನನ್ಯ (ಇತ್ತೀಚಿಗೆ ಕೆಲವು ವಿಶಿಷ್ಟ ವೀಡಿಯೊ ನೋಡಿ ಪ್ರೇರಿತವಾಗಿ )

ಆತ
ಹೋಟೆಲಲ್ಲಿ
ಯಾರೋ
ಬಿಟ್ಟ
ಅನ್ನವನ್ನು
ಶ್ರದ್ಧೆಯಿಂದ ತಿಂದು
ಊಟದ ಹಣವನ್ನು
ದಾನದ ಪೆಟ್ಟಿಗೆಗೆ
ಹಾಕಿದ

---

ಬಲೂನು
ಮಾರುವ
ಮುದಕನಿಂದ
ಆತ
ಒಂದು
೫೦ ಪೈಸೆಯ
ಬಲೂನು
ಖರೀದಿ ಮಾಡಿ
ಮುದುಕನಿಗೆ
ಒಂದು ಸಾವಿರ ರೂಪಾಯಿ ನೀಡಿದ

----

ತನ್ನ ಹುಟ್ಟು ಹಬ್ಬ
ಆಚರಿಸಲು
ಆತ
ವೃದ್ಧಾಶ್ರಮ ಹೋಗಿ
ವೃದ್ಧರಿಗೆ
ಊಟ ಬಟ್ಟೆ ನೀಡಿ
ಅನೇಕ
ಅಮ್ಮ ಅಪ್ಪಂದಿರ
ಆಶೀರ್ವಾದ ಪಡೆದ

---

ಅಜ್ಜಿಯ
ಬಾಗಿಲಲಿ
ದಿನನಿತ್ಯ
ಬಾಳೆಹಣ್ಣು ಇಟ್ಟು
ಹೋಗುತ್ತಿದ್ದವನನ್ನು
ಅಜ್ಜಿ ಒಂದು
ದಿನ ನೋಡಿಯೇ ಬಿಟ್ಟಳು,
ಆಶೀರ್ವಾದದ ಸುರಿಮಳೆ
ಆಯಿತು ಆತನ ಮೇಲೆ

---

ಆತ ಅನಾಥ,
ಹೋಟಲಲ್ಲಿ ದುಡಿದು
ತಿಂಗಳಿಗೊಮ್ಮೆ
ಅನಾಥಾಲಯಕ್ಕೆ
ಅನಾಥ ಮಕ್ಕಳಿಗೋಸ್ಕರ
ತಿಂಡಿ ತಿನಿಸು
ಕೊಂಡು ಹೋಗುತ್ತಿದ್ದ

by ಹರೀಶ್ ಶೆಟ್ಟಿ, ಶಿರ್ವ

Tuesday, September 9, 2014

ಪ್ರಕೃತಿ

ಸೌಂದರ್ಯಕ್ಕೆ
ಸಾವಿಲ್ಲ ಅಂದರು
ಪ್ರಕೃತಿ
ಮುನಿಸಿಕೊಂಡಿತು
---
ಅಲ್ಲಿ ಇಲ್ಲಿ
ನೀರೆ ನೀರು
ಸಾವಿನಿಂದ ಪಾರದ
ಜನರ ಕಣ್ಣುಗಳಲ್ಲಿ
ಮುಗಿಯದ ದಾಹ
---
ಏನೂ ಉಳಿಯಲಿಲ್ಲ
ಅವನು ನೀಡಿದ
ಈ ದೇಹದ ಹೊರತು
ಅವನೇ ಕಾಪಾಡುವನು
ಅಂದಳು
ಆ ವೀರೆ
---
ಹೊಟ್ಟೆಯಲಿ
ಅನ್ನವಿಲ್ಲ
ಆದರೆ ಧೈರ್ಯ
ಕುಸಿಯಲಿಲ್ಲ
ಅಂದಳು
ಎರಡು ಮಕ್ಕಳ
ಆ ತಾಯಿ
---
ನಿಸರ್ಗವೇ
ಪುನಃ
ಚೆಲ್ಲು
ನಿನ್ನ ಸೌಂದರ್ಯವನ್ನ
ಪುನಃ ಅಂದಗೊಳಿಸು
ಈ ಧರೆಯ ಸ್ವರ್ಗವನ್ನ
by ಹರೀಶ್ ಶೆಟ್ಟಿ, ಶಿರ್ವ

Wednesday, August 27, 2014

ಮುಂಜಾನೆಯ ಸಂಜೀವನಿ

ಮುಂಜಾವು ಇಬ್ಬನಿ
ಪುಷ್ಪಗಳ ಮೇಲೆ ಹನಿ ಹನಿ
ಬೀಸುವ ತಂಗಾಳಿ
ತಾಜಾ ಉಸಿರಿನ ಸಂಜೀವನಿ
---
ಹೂವ ಮೇಲೆ ದುಂಬಿ
ಹಿಗ್ಗುತ್ತಿದೆ ತನ್ನೊಳಗೆ
ಬದುಕಿನ ರಸ ತುಂಬಿ
---
ಸೂರ್ಯನ ಕಿರಣ
ತುಂಬುತ್ತಿದೆ ಹೊಸ ಚೈತನ್ಯ
ತೇಜಸ್ಸು ಪಡೆಯುತ್ತಿದೆ ಕಣ ಕಣ
---
ಹಕ್ಕಿಗಳ ಚಿಲಿಪಿಲಿ
ಕೋಗಿಲೆಯ ಗಾನ
ಪ್ರಫುಲ್ಲಿತ ಮನಸ್ಸು
ನಿಸರ್ಗದ ಧ್ಯಾನ

by ಹರೀಶ್ ಶೆಟ್ಟಿ, ಶಿರ್ವ

Tuesday, August 26, 2014

ನಾಸ್ತಿಕ

ನಾಸ್ತಿಕನೆಂದು
ಪ್ರಸಿದ್ಧಿ ಪಡೆದ ಮಗ
ಅಮ್ಮ ಆಸ್ಪತ್ರೆಯಲ್ಲಿದ್ದಾಗ
ದೇವಸ್ಥಾನ ಹೋಗಿ
ದೇವರ ಮುಂದೆ ಅತ್ತು
ತನ್ನ ಮೊರೆ ಇಡುತ್ತಿದ್ದ

---

ಗಂಡ ನಾಸ್ತಿಕ
ಹೆಂಡತಿ ದೈವ ಭಕ್ತೆ,
ಪ್ರಸವ ವೇದನೆಯಲ್ಲಿದ್ದ
ಹೆಂಡತಿಯನ್ನು ನೋಡಿ
ತಳಮಳದಲ್ಲಿದ್ದ
ಗಂಡ ಓಡಿ ಹೋಗಿ
ಗಣಪತಿ ವಿಗ್ರಹದ
ಮುಂದೆ ಬೇಡಲಾರಂಭಿಸಿದ

---

ನಾವು ಅಷ್ಟೊಂದು ದೊಡ್ಡ
ದೈವ ಭಕ್ತರಲ್ಲ ಎಂದು
ಹೇಳುತ್ತಿದ್ದ ಕುಟುಂಬ
ಅವರಿಗೆ
ಸಂಕಟ ಒದಗಿದಾಗ
ನೆರೆಯ ದೈವ ಭಕ್ತ
ಕುಟುಂಬದವರ
ಒಟ್ಟಿಗೆ ಹೋಗಿ
ಧರ್ಮ ಸ್ಥಾನಗಳ ದರ್ಶನ
ಮಾಡಿ ಬಂದರು

by ಹರೀಶ್ ಶೆಟ್ಟಿ, ಶಿರ್ವ 

ಆಧುನಿಕತೆ

ಬೆಳಿಗ್ಗೆ ಎದ್ದಾಗ
ಕಂಡ ಕನಸನ್ನು ನೆನಪಿಸಿದೆ
ಸ್ವಲ್ಪ ಸ್ವಲ್ಪ ನೆನಪಾಯಿತು
ದೂಳು ತುಂಬಿದ ಪುಸ್ತಕಗಳು
ಹಾರುವ ಹಾಳೆಗಳು
ಮುರಿದ ಪೆನ್ನುಗಳು
ನಗುವ ಕಂಪ್ಯೂಟರ್

---
ಕಪಾಟು ತೆರೆದೇ
ಹಳೆ ಪತ್ರಗಳ ಗಂಟು ಬಿತ್ತು
ಸಂಬಂಧಗಳ ಕಟ್ಟು
ಅದೆಷ್ಟೋ ನೆನಪುಗಳು
ಜೋಪಾನವಾಗಿ ಇಟ್ಟೆ,
ಇದ್ದಕಿದ್ದಂತೆ ಮೊಬೈಲ್ ರಿಂಗಾಯಿಸಿತು
ಮಾತಾಯಿತು
ಮರೆತು ಸಹ ಹೋಯಿತು

---
ಫ್ರಿಜ್ ತೆರೆದೇ
ನೀರು ಕುಡಿಯಲೆಂದು,
ಅದರೊಳಗೆ ಮಾವಿನ ಹಣ್ಣುಗಳು
ಎಷ್ಟೋ ದಿನದಿಂದ ಬಿದ್ದಿತ್ತು
ನೆನಪಾಯಿತು
ಊರಿನ ಹಳೆ ಮಾವಿನ ಮರ
ಓಡಾಡುವ ಇಣಚಿ
ಅದು ತಿಂದ ಕೆಲವು ಅರ್ಧ ಹಣ್ಣುಗಳು
ಆ ಅರ್ಧ ಹಣ್ಣಿನ ರುಚಿ

---
ಮನೆಯಲ್ಲಿ
ಅದೆಷ್ಟೋ ಹೊಸ ಹೊಸ
ಕೈ ಗಡಿಯಾರ
ಆದರೆ ಸರಿಯಾದ ಸಮಯ
ನೋಡಬೇಕಾದರೆ
ಗಮನ ಮನೆಯ
ಆ ಹಳೆ ಗಡಿಯಾರದ ಮೇಲೆ

---
ಈಗ ರೇಡಿಯೋ ಅಂದರೆ
ಮೊಬೈಲಲ್ಲಿ
ಅದೆಷ್ಟೋ ಚಾನೆಲ್,
ಆದರೆ ನೆನಪಾಗುತ್ತದೆ
ಅಜ್ಜನ ಆ ಹಳೆ ರೇಡಿಯೋ ಮತ್ತು
ಸಂಜೆ ಬರುವ ಅವರ ಮೆಚ್ಚಿನ
ಆಟದ (ಯಕ್ಷಗಾನ)  ಕಾರ್ಯಕ್ರಮ ಹಾಗು
ಅದನ್ನು ಕೇಳಿ
ಮುಖದಲಿ ಅರಳುವ ಅವರ ನಗು

by ಹರೀಶ್ ಶೆಟ್ಟಿ, ಶಿರ್ವ



Wednesday, July 16, 2014

ಬೇಡಿಕೆ

ದೇವರೇ 
ನೀರಿನಂತೆ ಆಗಲಿ ನನ್ನ ಮನಸ್ಸು 
ಇತರರ ಬೇಡಿಕೆಯ ದಾಹ ತಣಿಸಲಿ
ನನ್ನಲ್ಲಿ ಸಮಾಜದ ಕೊಳಕನ್ನು ಶುಚಿ ಮಾಡುವ ಶಕ್ತಿ ಸಾಮರ್ಥ್ಯವಿರಲಿ
ನನ್ನಿಂದ ನಿರ್ಮಲವಾಗಲಿ ಈ ಜಗತ್ತು
ನೀರಿನಂತೆ ಆಗಲಿ ನನ್ನ ಮನಸ್ಸು 

by ಹರೀಶ್ ಶೆಟ್ಟಿ, ಶಿರ್ವ

---

ದೇವರೇ 
ಒಳ್ಳೆಯದನ್ನು ಕಾಪಾಡುವೆ 
ಕೆಟ್ಟದನ್ನು ನಿರ್ಲಕ್ಷಿಸುವೆ 
ನನ್ನಲ್ಲಿದ್ದ ಕೆಟ್ಟ ನಡೆಯನ್ನು ಪದೇ ಪದೇ ವಿರೋಧಿಸುವೆ 
ನನ್ನಲ್ಲಿದ್ದ ಕೆಟ್ಟತನವನ್ನು ಹೊರ ದೂಡಲು ಪ್ರಯತ್ನಿಸುವೆ 
ಜಗತ್ತಲ್ಲಿದ್ದ ಒಳ್ಳೆತನ ಹುಡುಕುವೆ 
ಒಳ್ಳೆತನದ ಹಾದಿಯಲಿ ನಡೆಯುವೆ
ಈ ಕಲ್ಮಶ ಮನಸ್ಸನ್ನು ದಿನ ಪ್ರತಿ ದಿನ 
ಶುಚಿಗೊಳಿಸಲು ಪ್ರಯತ್ನಿಸುವೆ 
ಒಳ್ಳೆಯವನಾಗಲು ಪ್ರಯತ್ನಿಸುವೆ ದೇವ 

ಒಳ್ಳೆಯವನಾಗಲು ಪ್ರಯತ್ನಿಸುವೆ

by ಹರೀಶ್ ಶೆಟ್ಟಿ, ಶಿರ್ವ


---

ನಾನೇ ದೇವರು
ಎನ್ನುವ ಮಾನವನೇ,
ನೀನು ತಯಾರಿಸಿದ ಭಕ್ಷ
ರುಚಿಸಲಿಲ್ಲ ಪ್ರಭುವೇ
ಅದರಲ್ಲಿ ಸತ್ಯದ ಸಿಹಿ ಪ್ರಮಾಣವಿರಲಿಲ್ಲ
ಸುಳ್ಳಿನ ಮಸಾಲೆ ತುಂಬಿತ್ತು

by ಹರೀಶ್ ಶೆಟ್ಟಿ, ಶಿರ್ವ


---

ಗುರುವೇ,
ನಿನ್ನ ಅನೇಕ ಉಪಕಾರ
ನನ್ನ ಮೇಲೆ
ನನ್ನನ್ನು ರಚಿಸಿದಕ್ಕೆ
ನಿನ್ನ ಚರಣ ತೊಳೆದು
ಚರಣಾಮೃತ ಕುಡಿದೆ
ಆದರೂ ಗುರುವೇ
ಇನ್ನೂ ಅಹಂ ದೂರವಾಗಲಿಲ್ಲ
ಕೋಪ ತಣಿಯಲಿಲ್ಲ
ಆಸೆ ಇಳಿಯಲಿಲ್ಲ 
ಆದರೆ ನಿನ್ನ ಕೃಪೆ ಗುರುವೇ
ಈ ತನಕ ಮನುಷ್ಯನಾಗಿ ಬದುಕುತ್ತಿದ್ದೇನೆ

by ಹರೀಶ್ ಶೆಟ್ಟಿ, ಶಿರ್ವ


Saturday, June 28, 2014

ಜೀವನ ಪಂದ್ಯ

ಹಾರಿತು ಮರಿ ಪಕ್ಷಿ
ಪ್ರಥಮ ಸಲ,
ಹಿಂದೆ ಹಿಂದೆ
ವ್ಯಾಕುಲ ಹಾಗು ಸಂತಸದಿಂದ
ಹಾರುತ್ತಿದೆ
ತಾಯಿ ಪಕ್ಷಿ

-----

ಬಯಲಾದ
ಅವನ ಗುಟ್ಟಿನ
ಒಟ್ಟಿಗೆ
ಅವನ ಪ್ರೀತಿಯ ಗೆಳೆಯನ
ಗೆಳೆತನ
ಬಯಲಾಯಿತು

----

ಹುತಾತ್ಮನಾದ
ಸೈನಿಕನ ಕೈಯಲ್ಲಿ
ಅವಳು ಕೊಟ್ಟ
ತಾಳಿ

----

ಹುಲಿಯಿಂದ
ಹೆದರಿ
ಜಿಂಕೆ ಮರಿ
ಓಡೋಡಿ
ಬಂದು ತನ್ನ
ತಾಯಿಯ ಮಡಿಲಿಗೆ ಸೇರಿತು,
ಅದನ್ನು ನೋಡಿದ
ಹುಲಿಯ ಹಸಿವೆ ಏರಿತು

----

ಅವನು
ಪದೇ ಪದೇ
ಶತ್ರುವಿನ ಶಿಬಿರಕ್ಕೆ
ಹೋಗಿ
ಅವನ ಚಟುವಟಿಕೆ
ಗಮನಿಸುತ್ತ
ಇದ್ದ

by ಹರೀಶ್ ಶೆಟ್ಟಿ,ಶಿರ್ವ 

Sunday, June 22, 2014

ಪರಿಣಾಮ

ಹಾದಿಯಲ್ಲಿರುವ 
ಮುಳ್ಳುಗಳು ಕಾಲಿಗೆ ಚುಚ್ಚುತ್ತಿವೆ 
ದೋಷ ನೀಡಲಾರೆ 
ನಿರ್ಲಕ್ಷಿಸಿದ ಫಲ ಅದು 
---
ಊದುಬತ್ತಿಯ ಸುಗಂಧ 
ಎಲ್ಲೆಡೆ 
ಅದರಡಿಯಲಿ
ಭಸ್ಮದ ರಾಶಿ 
---
ಅವನ
ಬಂಡಿ ವೇಗದಲಿ
ಧೂಳು
ರಸ್ತೆಯಲಿ ನಿಲ್ಲಿದ
ಜನರ ಮುಖದಲಿ
---
ಅವನು ಗಾಯಗೊಂಡ
ರಕ್ತ ಸೋರುತ್ತಿತ್ತು
ಮದ್ದಿನ ಬದಲು
ಸುತ್ತ ಮುತ್ತದ ಜನರೆಲ್ಲಾ
ಉಪದೇಶ ನೀಡುತ್ತಿದ್ದರು
---
ಇಟ್ಟ ಒಂದು ಹೆಜ್ಜೆ
ತಪ್ಪು ಬಿತ್ತೆಂದು
ಗಾಬರಿ ಯಾಕೆ
ಮುಂದೆ
ತಪ್ಪು ಸುಧಾರಿಸುವ
ಅನೇಕ ಅವಸರ ಬರುತ್ತದೆ
---
ರೋಗ ಗುಣವಾಗಬೇಕಾದರೆ
ಕಹಿ ಔಷದಿ
ನೀಡಲೇ ಬೇಕು
ಧೈರ್ಯ ಇಟ್ಟಿರಿ
ಬೇಗನೆ
ರೋಗ ಮುಕ್ತವಾಗುವಿರಿ

by ಹರೀಶ್ ಶೆಟ್ಟಿ, ಶಿರ್ವ

Monday, June 16, 2014

ಮದುಮಗಳು

ಅದೆಷ್ಟೋ ಕನಸುಗಳು 
ಆ ಮದುಮಗಳ ಕಣ್ಣಲಿ,
ತನ್ನ ನೈಜ ಸ್ಥಿತಿ 
ಅರಿತ ಮದುಮಗ 
ಚಿಂತೆಯಲಿ
---
ಮದುಮಗಳ 
ಕಣ್ಣ ಕಾಡಿಗೆ 
ಹರಿದೋಯಿತು
ಒಟ್ಟಿಗೆ ಅಪ್ಪನ
ಜವಾಬ್ದಾರಿಯ ಭಾರ ಸಹ 
---
ಅಮ್ಮನ ಹೃದಯ 
ಅಳುತ್ತಿತ್ತು 
ಚಿಂತಿತ ಕಂಗಳಲಿ 
ಮದುಮಗನ ಪ್ರತಿ 
ಅನುಮಾನ ಕಂಡು ಬರುತ್ತಿತ್ತು 
---
ಅಪ್ಪನ ತಲೆಯಿಂದ 
ಮಗಳ ಜವಾಬ್ದಾರಿಯ 
ಭಾರ ಇಳಿಯಿತು 
ಸಾಲದ ಭಾರ ಏರಿತು 
---
ಒಂದು ಕಡೆ 
ತವರು ಮನೆ 
ಬಿಟ್ಟು ಹೋಗುವ ದುಃಖ,
ಇನ್ನೊಂದು ಕಡೆ 
ಹೊಸ ಸಂಸಾರ
ರಚಿಸುವ ಸುಖ 
ಮನಸ್ಸಲ್ಲಿ ಗುಡುಗು 
ಹೆಜ್ಜೆಯಲಿ ನಡುಗು 
---
ಮಗಳ ಮದುವೆಗೆ 
ಮನೆ ತುಂಬಾ ನೆಂಟರು
ಅಪ್ಪ ಅಮ್ಮನ 
ಹೃದಯ 
ಖಾಲಿ ಖಾಲಿ 
---
ಮದುಮಗಳು 
ತನ್ನ ಕೋಣೆಯಲಿ
ಇದ್ದಕ್ಕಿದಂತೆ 
ಬಾಲ್ಯದ 
ಮುರಿದ ಆಟಿಕೆಗಳನ್ನು
ನೋಡಿ 
ಬಿಕ್ಕಿಬಿಕ್ಕಿ ಅತ್ತಳು
---
ಹೊಸ ಮನೆ
ಹೊಸ ಜನರು 
ಹೊಸ ಕೋಣೆ
ಹೃದಯದಲಿ ಭಯ 
ಎಲ್ಲರ ಬಾಯಿಯಲ್ಲೂ ಚರ್ಚೆ ಮದುಮಗಳ 
ಇನ್ನು ಇಡಿ ಜೀವನ ಇಲ್ಲೇ ಕಳೆಯ ಬೇಕಲ್ಲ 
ಅಯ್ಯೋ ಏಕೆ ಬಿಟ್ಟು ಬಂದೆ ನಾನೆಲ್ಲ 

by ಹರೀಶ್ ಶೆಟ್ಟಿ, ಶಿರ್ವ

Sunday, June 15, 2014

ಬಿಸ್ಕೆಟ್ ಕಟ್ಟು

ಸೋತು ಸುಣ್ಣವಾಗಿ 
ಕೆಲಸದಿಂದ ಮನೆ ಬಂದ
ಅಪ್ಪನ 
ಕೈಯಲ್ಲಿ 
ಸಂತೆಯಿಂದ 
ನನಗಾಗಿ ತಂದ 
ಬಿಸ್ಕೆಟ್ ಕಟ್ಟು ಇತ್ತು 

ಅಪ್ಪಂದಿರ ದಿನದ ಶುಭಾಶಯಗಳು 
Happy Father's Day

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ