Monday, June 16, 2014

ಮದುಮಗಳು

ಅದೆಷ್ಟೋ ಕನಸುಗಳು 
ಆ ಮದುಮಗಳ ಕಣ್ಣಲಿ,
ತನ್ನ ನೈಜ ಸ್ಥಿತಿ 
ಅರಿತ ಮದುಮಗ 
ಚಿಂತೆಯಲಿ
---
ಮದುಮಗಳ 
ಕಣ್ಣ ಕಾಡಿಗೆ 
ಹರಿದೋಯಿತು
ಒಟ್ಟಿಗೆ ಅಪ್ಪನ
ಜವಾಬ್ದಾರಿಯ ಭಾರ ಸಹ 
---
ಅಮ್ಮನ ಹೃದಯ 
ಅಳುತ್ತಿತ್ತು 
ಚಿಂತಿತ ಕಂಗಳಲಿ 
ಮದುಮಗನ ಪ್ರತಿ 
ಅನುಮಾನ ಕಂಡು ಬರುತ್ತಿತ್ತು 
---
ಅಪ್ಪನ ತಲೆಯಿಂದ 
ಮಗಳ ಜವಾಬ್ದಾರಿಯ 
ಭಾರ ಇಳಿಯಿತು 
ಸಾಲದ ಭಾರ ಏರಿತು 
---
ಒಂದು ಕಡೆ 
ತವರು ಮನೆ 
ಬಿಟ್ಟು ಹೋಗುವ ದುಃಖ,
ಇನ್ನೊಂದು ಕಡೆ 
ಹೊಸ ಸಂಸಾರ
ರಚಿಸುವ ಸುಖ 
ಮನಸ್ಸಲ್ಲಿ ಗುಡುಗು 
ಹೆಜ್ಜೆಯಲಿ ನಡುಗು 
---
ಮಗಳ ಮದುವೆಗೆ 
ಮನೆ ತುಂಬಾ ನೆಂಟರು
ಅಪ್ಪ ಅಮ್ಮನ 
ಹೃದಯ 
ಖಾಲಿ ಖಾಲಿ 
---
ಮದುಮಗಳು 
ತನ್ನ ಕೋಣೆಯಲಿ
ಇದ್ದಕ್ಕಿದಂತೆ 
ಬಾಲ್ಯದ 
ಮುರಿದ ಆಟಿಕೆಗಳನ್ನು
ನೋಡಿ 
ಬಿಕ್ಕಿಬಿಕ್ಕಿ ಅತ್ತಳು
---
ಹೊಸ ಮನೆ
ಹೊಸ ಜನರು 
ಹೊಸ ಕೋಣೆ
ಹೃದಯದಲಿ ಭಯ 
ಎಲ್ಲರ ಬಾಯಿಯಲ್ಲೂ ಚರ್ಚೆ ಮದುಮಗಳ 
ಇನ್ನು ಇಡಿ ಜೀವನ ಇಲ್ಲೇ ಕಳೆಯ ಬೇಕಲ್ಲ 
ಅಯ್ಯೋ ಏಕೆ ಬಿಟ್ಟು ಬಂದೆ ನಾನೆಲ್ಲ 

by ಹರೀಶ್ ಶೆಟ್ಟಿ, ಶಿರ್ವ

2 comments:

  1. ನನಗೆ ನನ್ನ ನಾದಿನಿಯ ಮದುವೆಯ ನೆನಪನ್ನು ತರಿಸಿಬಿಟ್ಟಿರಿ.
    ಒಳ್ಳೆಯ ಸಂವೇದನಾಶೀಲ ಕವಿ ನೀವು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್,ನಿಮ್ಮ ಮೆಚ್ಚುಗೆಗೆ ನಮನಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...