Tuesday, June 17, 2014

ಸಂಜೆ ವರ್ಣಮಯವಾಗಿದೆ

ಸುರೇಶ್ :
ಸಂಜೆ ವರ್ಣಮಯವಾಗಿದೆ
ನಿನ್ನ ಸೆರಗಿನ ಹಾಗೆ
ಶ್ಯಾಮಲ ರಂಗೇರಿದೆ
ನಿನ್ನ ಕಾಡಿಗೆಯ ಹಾಗೆ

ಉಷಾ :
ಸನಿಹ ನೀನಿರುವೆ ನನ್ನ ಹೃದಯದ
ನನ್ನ ಸೆರಗಿನ ಹಾಗೆ
ನನ್ನ ಕಂಗಳಲಿ ನೆಲೆಸಿರುವೆ
ನನ್ನ ಕಾಡಿಗೆಯ ಹಾಗೆ

ಸುರೇಶ್ :
ಸಂಜೆ ವರ್ಣಮಯವಾಗಿದೆ.....

ಉಷಾ :
ಆಕಾಶ ಇದೆ
ನನ್ನ ಬಯಕೆಯ ದರ್ಪಣದ ಹಾಗೆ

ಸುರೇಶ್ :
ಹೃದಯ ಹೀಗೆ ಮಿಡಿಯುತ್ತಿದೆ
ಖನ ಖನ ನಿನ್ನ ಬಳೆಯ ಹಾಗೆ

ಉಷಾ :
ಪವನ ಚಂಚಲತೆಯಲ್ಲಿದೆ
ನನ್ನ ಗೆಜ್ಜೆಯ ಹಾಗೆ

ಸುರೇಶ್:
ಶ್ಯಾಮಲ ರಂಗೇರಿದೆ....

ಉಷಾ :
ನನ್ನ ಅಸ್ತಿತ್ವಕ್ಕೆ ಎಂದೂ
ಯಾವುದೇ ನೆರಳಿರಲಿಲ್ಲ

ಸುರೇಶ್:
ನಿನ್ನ ಸನಿಹ ನಾನೆಂದು
ಬರಲೇ ಇರಲಿಲ್ಲ

ಉಷಾ :
ನಾನು ಧರತಿಯ ಹಾಗೆ
ನೀನು ಯಾವುದೇ ಮೇಘೇಯ ಹಾಗೆ

ಸುರೇಶ್:
ಶ್ಯಾಮಲ ರಂಗೇರಿದೆ....

ಉಷಾ :
ಇಂತಹ ವರ್ಣಮಯ ಭೇಟಿಯ
ಅರ್ಥವೇನು

ಸುರೇಶ್:
ಈ ಸೋರುವ ಭಾವನೆಗಳ
ಅರ್ಥವೇನು

ಉಷಾ:
ಇಂದು ಎಲ್ಲ ವೇದನೆ ಮರೆತು ಬಿಡು
ಯಾವುದೇ ಮರುಳನ ಹಾಗೆ

ಸುರೇಶ್:
ಶ್ಯಾಮಲ ರಂಗೇರಿದೆ....

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸುರೇಶ್ ವಾಡ್ಕರ್, ಉಷಾ ಮಂಗೇಶ್ಕರ್
ಸಂಗೀತ : ಸಿ. ಅರ್ಜುನ್
ಚಿತ್ರ : ಕಾನೂನ ಔರ್ ಮುಜ್ರಿಮ್

 Sham rangin huyee hai, tere aanchal kee tarah
 Surmayee rang saja hai, tere kajal kee tarah
 Pas ho tum mere dil ke, mere aanchal kee tarah
 Mere aakhon me base ho, mere kajal kee tarah

 Aasama hain mere aramano ka darpan jaise
 Dil yu dhadake meraa, khan ke teraa kangan jaise
 Mast aaj hawaye, mere payal kee tarah

 Meree hastee pe kabhee yu, koyee chhaya hee naa tha
 Tere najdik mai pehale, kabhee aaya hee naa tha
 Mai hu dharatee kee tarah, tum kisee badal kee tarah

 Aisee rangin mulakat kaa matalab kya hain
 Inn chhalakate huye jajabat kaa matlab kya hain
 Aaj har dard bhula do, kisee pagal kee tarah
http://www.youtube.com/watch?v=6v64r1lZUn0&feature=kp

2 comments:

  1. "ಪವನ ಚಂಚಲತೆಯಲ್ಲಿದೆ
    ನನ್ನ ಗೆಜ್ಜೆಯ ಹಾಗೆ"

    ವಾವ್ ಕವಿ ಮಹೋದಯ....

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...