ಹಿಜಡಾ-೭ (ಅಂತಿಮ)
-----------
ತನ್ನ ಲಂಚ್ ಮುಗಿಸಿ ಹಿಂತಿರುಗಿ ಬಂದ ಮೋಹನ ಸ್ವಲ್ಪ ಹರಟೆ ಹೊಡೆಯಲೆಂದು ನೇರ ರಜನಿಯ ಕ್ಯಾಬಿನಿಗೆ ಹೋದ, ಅಲ್ಲಿ ರಜನಿಯನ್ನು ಸ್ತಬ್ಧ ಅವಸ್ಥೆಯಲ್ಲಿ ಕುಳಿತ್ತಿದ್ದನ್ನು ನೋಡಿ ಅವನಿಗೆ ಸ್ವಲ್ಪ ಆಶ್ಚರ್ಯವಾದರೂ ತಮಾಷೆಗೆ
"ಏನು ಮೇಡಂ, ತುಂಬಾ ಯೋಚನೆಯಲ್ಲಿದ್ದಂತೆ ಕಾಣುತ್ತದೆ?"
ಮೋಹನನ ಸ್ವರ ಕೇಳಿ ಗಂಭೀರ ಆಲೋಚನೆಯಲ್ಲಿದ್ದ ರಜನಿ ಜಾಗೃತವಾದಳು.
ಮೋಹನ ಪುನಃ ತಮಾಷೆಗೆ
"ಏನು ಮೇಡಂ ಊಟ ಆಯ್ತಾ?"
ಮೋಹನನ ಈ ತಮಾಷೆ ಇಂದು ರಜನಿಗೆ ಯಾವುದೇ ಹಿತ ನೀಡಲಿಲ್ಲ, ಅವನನ್ನು ನೋಡಿದ ಕೂಡಲೇ ಅವಳ ಮುಖ ಕೆಂಪೇರಿತು ಹಾಗು ಅವಳು ಅವನಿಗೆ ನೇರ ಪ್ರಶ್ನೆ ಕೇಳಿದಳು
"ಸಂಗಮ್ಮ ಯಾರೆಂದು ಅರಿವಿದೆಯೇ?"
ಮೋಹನ ಬೆರಗಾದ, ಇಕ್ಕಟ್ಟಿಗೆ ಸಿಲುಕಿ ಅವನು "ಸಂಗಮ್ಮ, ಯಾರು ಸಂಗಮ್ಮ?"
ರಜನಿ ಕೋಪದಿಂದ ಘರ್ಜಿಸಿದ್ದಳು
" ಒಹ್ ಹೌದೆ, ತಿಳಿದಿಲ್ಲವೇ, ನಿಲ್ಲಿಸು ನಿನ್ನ ಈ ಕಳ್ಲಾಟವನ್ನು, ನನಗೆ ಎಲ್ಲ ಗೊತ್ತಾಗಿದೆ. ಏನಂಥ ಹೇಳಿದ್ದೆ ನನಗೆ, ನಿನ್ನ ಪರಿವಾರದಲ್ಲಿ ಯಾರಿಲ್ಲ ಅಲ್ಲವೇ , ನೀನು ಬಾಲ್ಯದಿಂದ ಅನಾಥ ಅಲ್ಲವೇ, ನಿನ್ನ ಈ ಎಲ್ಲ ಸುಳ್ಳು ಇಂದು ಬಯಲಾಗಿದೆ, ಕಸದ ಬುಟ್ಟಿಯಲ್ಲಿ ಸಿಕ್ಕಿದ ನಿನ್ನನ್ನು ಸಾಕಿದ ಆ ದೇವರಂಥ ಸಂಗಮ್ಮನ ಮೇಲೆ ನಿನಗೆ ಸ್ವಲ್ಪ ಸಹ ಕರುಣೆ ಬರಲಿಲ್ಲವೇ, ಅವರಿಂದ ನಾನು ನಿನ್ನ ಮುಂದೆ ಷರತ್ತು ಇಟ್ಟಿದ್ದೇನೆ ಎಂಬ ಸುಳ್ಳು ಹೇಳಿ ಅವರನ್ನು ಹಾಗು ಜೊತೆಗೆ ನನ್ನನ್ನು ವಂಚಿಸುವ ಅಗತ್ಯವಾದರೂ ಏನಿತ್ತು, ಛೆ, ನಾನು ನಿನ್ನಂತಹ ನೀಚನನ್ನು ಪ್ರೀತಿಸಿದೆ ಎಂದು ಹೇಳಲು ನನಗಿಂದು ನಾಚಿಗೆಯಾಗುತ್ತಿದೆ".
ಮೋಹನನಿಗೆ ತನ್ನ ಗುಟ್ಟು ಬಯಲಾದುದನ್ನು ನೋಡಿ
" ರಜನಿ, ಪ್ಲೀಸ್ ನನ್ನ ಕೇಳು...."
ರಜನಿ ಮುಖ ಕೋಪದಿಂದ ಉರಿಯುತ್ತಿತ್ತು "ಮುಚ್ಚು ಬಾಯಿ, ಒಂದು ಶಬ್ದ ಸಹ ನಿನ್ನ ಹಾಳು ಬಾಯಿಂದ ಹೊರಟರೆ ನಿನ್ನನ್ನು ಇಲ್ಲೇ ಕೊಂದು ಬಿಡುವೆ, ನೀಚ, ಭಡವ, ಬಹುಶಃ ನಿನ್ನ ತಾಯಿಗೆ ನಿನ್ನನು ಹೆತ್ತಾಗಲೇ 'ನಾನೊಂದು ಸರ್ಪನನ್ನು ಹೆಡೆದಿದ್ದೇನೆ"
ಎಂದು ತಿಳಿದಿತ್ತು ಕಾಣುತ್ತದೆ, ಅದಕ್ಕೆ ಅವಳು ಹೆತ್ತ ಮಗುವನ್ನು ಆ ಕಸಕ್ಕೆ ಸೇರಿಸಿ ಬಂದಿದ್ದಳು, ಆದರೆ ಆ ಮಹಾನ ಜೀವಿ ಸಂಗಮ್ಮನಿಗೆ ನೀನು ಸಿಕ್ಕಿದು ಅವರ ದುರ್ಭಾಗ್ಯ, ಆದರೆ ಆ ಸಮಯ ಅವಳಿಗೆ ಏನು ತಿಳಿದಿತ್ತು ನಾನು ಸಾಕುವ ಈ ಮಗು ಮನುಷ್ಯ ಅಲ್ಲ ಒಂದು ಸರ್ಪ ಎಂದು, ಛೀ , ಆಯ್ಯೋ ದೇವ ನಾನೆಂತಹ ಮನುಷ್ಯನನ್ನು ಪ್ರೀತಿಸಿದೆ."
ಮೋಹನ " ರಜನಿ ಆಯ್ ಲವ್ ಯು, ನಿನ್ನೊಟ್ಟಿಗೆ ಮದುವೆ ಆಗಲು ನಾನು ಈ ಎಲ್ಲ ಸುಳ್ಳು ಹೇಳಿದ್ದು, ಸತ್ಯ ಹೇಳಿದರೆ ನೀನು ನನ್ನನ್ನು ಬಿಟ್ಟು ಬಿಡುವೆ ಎಂಬ ಭಯದಿಂದ
."
ರಜನಿ "ಶಟ್ ಅಪ್ ಯು ಬಾಸ್ಟರ್ಡ್, ನಾಚಿಕೆಗೇಡಿ ಮನುಷ್ಯ,ನಿರ್ಲಜ್ಜ, ನಿನ್ನೊಟ್ಟಿಗೆ ಮದುವೆಯ ನಿನ್ನಂತಹ ಮನುಷ್ಯನನ್ನುಮದುವೆಯಾಗುವುದಕ್ಕಿಂತ ಬಾವಿಗೆ ಬಿದ್ದು ಸಾಯುವುದು ಒಳ್ಳೆಯದು, ಸ್ವತ ಸಾಕಿದವರೊಂದಿಗೆ ದ್ರೋಹ ಮಾಡಿದವನು, ನನ್ನೊಟ್ಟಿಗೆ ದ್ರೋಹ ಮಾಡುವುದಿಲ್ಲ ಎಂಬ ಏನು ಗ್ಯಾರಂಟಿ? ಸತ್ಯ ಹೇಳಬೇಕೆಂದರೆ ನಿನ್ನನ್ನು ಸಾಕಿದ ಸಂಗಮ್ಮ ಹಾಗು ಅವರ ಜತೆಗಾರರು ಹಿಜಡಾ ಅಲ್ಲ, ಹಿಜಡಾ ನೀನು............ ಹೌದು ನೀನು ಹಿಜಡಾ."
ಎಂದು ಹೇಳಿ ರಜನಿ ತನ್ನ ಮೇಜಿನಲ್ಲಿದ್ದ ಗಂಟನ್ನು ಹಿಡಿದು ತನ್ನ ಕ್ಯಾಬಿನಿನಿಂದ ಹೊರ ನಡೆದಳು, ಬಾಗಿಲಲ್ಲಿ ನಿಂತು
" ಫಾರ್ ಯುವರ್ ಕೈಂಡ್ ಇನ್ಫರ್ಮೇಷನ್ ಸಂಗಮ್ಮ ಆಸ್ಪತ್ರೆಯಲ್ಲಿ ಕೊನೆ ಉಸಿರೆಳುಯುತ್ತಿದ್ದಾಳೆ" ಎಂದು ಹೇಳಿ ಹೊರ ಬಂದಳು.
---
ಜೋನಮ್ಮ ಹಾಗು ಬಾನಮ್ಮನ್ನ ಬಗ್ಗೆ ಹೇಗೋ ಪತ್ತೆ ಹಚ್ಚಿ ಹಚ್ಚಿ ರಜನಿ ತನ್ನ ಕಾರಿನಿಂದ ಸಿಟಿ ಆಸ್ಪತ್ರೆಗೆ ಬಂದಳು, ಆಸ್ಪತ್ರೆಯಲ್ಲಿ ಸಂಗಮ್ಮನ ಬಗ್ಗೆ ವಿಚಾರಿಸಿದಾಗ ಅವಳು ಇಹಲೋಕ ತ್ಯಜಿಸಿ ಆಗಿದೆ ಎಂದು ತಿಳಿದು ಬಂತು. ರಜನಿಯ ಕೈಯಲ್ಲಿದ್ದ ಒಡವೆಯ ಗಂಟು ಕೆಳಗೆ ಬಿತ್ತು, ಅವಳು ಅಲ್ಲೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
ಆಗ ತಾನೇ ಆಸ್ಪತ್ರೆ ಮುಟ್ಟಿದ ಮೋಹನನ ಕಣ್ಣಲ್ಲಿ ಅಂಧಕಾರ ಹಬ್ಬಿತು.
(ಮುಗಿಯಿತು)
by ಹರೀಶ್ ಶೆಟ್ಟಿ, ಶಿರ್ವ
ಮೋಹನನಂತಹ ಗೋಮುಖ ವ್ಯಾಘ್ರನ ನಿಜ ರೂಪು ಈಗಲಾದರೂ ರಜನಿಗೆ ಅರಿವಾದದ್ದು ಒಳಿತೆಂದು ಆಯಿತು.
ReplyDeleteಇಡೀ ಧಾರವಾಹಿ ಇದೀಗ ಮತ್ತೆ ಓದಿಕೊಂಡವನಿಗೆ, ಮೊದಲು ತಟ್ಟಿದ್ದು ಪಾತ್ರಗಳ ವೈವಿಧ್ಯತೆ ಮತ್ತು ಸರಳ ನಿರೂಪಣೆ.
ಆದರೂ, ಈ ಸಾವು ನ್ಯಾಯವೇ?
ನಿಮ್ಮ ಸತತ ಪ್ರೋತ್ಸಾಹಕ್ಕೆ ನಾನು ಚಿರಋಣಿ ಬದರಿ ಸರ್, ನಿಮ್ಮ ಈ ಪ್ರೋತ್ಸಾಹದಿಂದಲೇ ಇದನ್ನು ಬರೆಯಲು ಸಾಧ್ಯವಾಯಿತು, ಅನೇಕ ಧನ್ಯವಾದಗಳು ನಿಮಗೆ.
ReplyDelete