Tuesday, June 3, 2014

ಯಾರನ್ನು ಮರೆಯಬೇಕೆಂದು ಬಯಸಿದ್ದೇನೆ

!!ಯಾರನ್ನು ಮರೆಯಬೇಕೆಂದು ಬಯಸಿದ್ದೇನೆ
ಬಾರಿ ಬಾರಿ ಅವಳ ನೆನಪಾಗುತ್ತದೆ
ಹಾಳಾಗಿ ಹೋಗಲಿ ಈ ಪ್ರೀತಿ
ಯಾಕೆಂದು ಅವಳ ನೆನಪಾಗುತ್ತದೆ!!
ಯಾರನ್ನು ಮರೆಯ...

!!ಮರೆಯಲಿ ಹೇಗೆಂದು ಅವಳನ್ನು
ಅದೆಂದೋ ಕುಡಿದಿದ್ದೆ ಆ ಕಂಗಳಿಂದ
ಹರಿದಾಗ ಈ ಕಣ್ಣೀರು
ಆ ಸಾಗರ ನೆನಪಾಗುತ್ತದೆ!!
ಯಾರನ್ನು ಮರೆಯ...

!!ಯಾರದ್ದೋ ಬೆಚ್ಚನೆಯ ಅಧರವಾಗಿತ್ತ
ಅಥವಾ ದೀಪದ ಜ್ವಾಲೆ ಉರಿಯುತ್ತಿತ್ತೆ
ಎಲ್ಲಿ ನಾನು ಅದೆಂದೋ ಪೂಜಿಸಿದ್ದೇನೋ
ಆ ದೇವಾಲಯ ನೆನಪಾಗುತ್ತದೆ!!
ಯಾರನ್ನು ಮರೆಯ...

!!ದೀಪ ನೀನು ಬೆಳಗುತ್ತಿರು
ಪತಂಗೆ ಹರಸುತ್ತಿದೆ
ಉರಿಯುವುದೇ  ಭಾಗ್ಯ ಎಂದಾದರೆ
ಸುಟ್ಟು ಹೋದ ನಂತರವೂ ನೆನಪಾಗುತ್ತದೆ!!
ಯಾರನ್ನು ಮರೆಯ...

ಮೂಲ : ಜಿ . ಎಲ್. ರಾವಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ :ಸೋನಿಕ್ ಓಮಿ
ಚಿತ್ರ : ಆಬ್ರೂ

Jinhen hum bhoolana chahe,
wo aksar yaad aate hain
buraa ho is mohabbat kaa,
wo kyon kar yaad aate hain

bhoolaaye kis tarah un ko,
kabhee pee thee un aankhon se
chhalak jaate hain jab aansoo,
wo saagar yaad aate hain

kisee ke sunrkha lab the yaa
diye kee lau machalatee thee
jahaa kee thee kabhee poojaa,
wo mandar yaad aate hain

rahe aye shammaa too roshan
duwaan detaa hain parawaanaa
jinhe kismat mein jalanaa hain,
wo jalakar yaad aate hain
http://www.youtube.com/watch?v=OO4HEoV_5EI

2 comments:

  1. ಮನಮುಟ್ಟುವ ಭಾವಾನುವಾದ.
    ರಾವಲ್ ಸಾಹೇಬರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ.
    ಸಿ.ಎಲ್. ರಾವಲ್ ಅವರ ನಿರ್ಧೇಶನದ ಈ ಚಿತ್ರಕ್ಕೆ ಛಾಯಾಗ್ರಾಹಣ : ಎಂ.ಎನ್. ಮಲ್ಹೋತ್ರ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...