ಸ್ವಪ್ನಗಳ ಅದೆಷ್ಟೋ
ಹೂ ಅರಳಿತು
ವಸಂತದ ಮಧುರ ತಂಗಾಳಿ ಸೋಕಿತು
ಬದುಕು ಸುಂದರವೆನಿಸಿತು
ನಿದ್ರೆಯಿಂದ ಕಣ್ಣು ತೆರೆಯಲಾಗಲಿಲ್ಲ
ತಡವಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಅದೆಷ್ಟು ಸುಂದವಾಗಿತ್ತು
ಆ ಕನಸ ಕುಸುಮಗಳು
ಕನ್ನಡಿಯಲಿ ಕಂಡು ಬರುತಿತ್ತು
ಸುಂದರ ಪ್ರತಿಬಿಂಬಗಳು
ವಾಸ್ತವದ ಕನ್ನಡಿ
ಚೂರು ಚೂರಾಯಿತು
ವಿಳಂಬವಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಪ್ರೀತಿಯ ಕ್ಷಣಗಳ ಮಾಧುರ್ಯ
ಹೃದಯದ ಮಿಡಿತಗಳ ತರಂಗ
ಶಹನಾಯಿಯ ಧ್ವನಿ ಮಧುರ
ಕ್ಷಣಿಕ ಪ್ರೇಮ ಸುಖಗಳೆಲ್ಲ
ಕಣ್ಣೀರ ಸಾಗರದಲಿ ಹರಿದೋಯಿತು
ಕಾಲ ಬದಲಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಬದುಕ ಹೆಜ್ಜೆ ಹೆಜ್ಜೆಯಲಿ
ಏರು ಪೇರ
ಆಸೆ ಆಕಾಂಕ್ಷೆಗಳ
ಶವಗಳ ಭಾರ
ಸುಂದರ ಕನಸ ಕವಿತೆಗಳ
ಹಾಳೆ ಅಳಿಸಿ ಹೋಯಿತು
ಹೊತ್ತು ಕಳೆಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
by ಹರೀಶ್ ಶೆಟ್ಟಿ, ಶಿರ್ವ
ಹೂ ಅರಳಿತು
ವಸಂತದ ಮಧುರ ತಂಗಾಳಿ ಸೋಕಿತು
ಬದುಕು ಸುಂದರವೆನಿಸಿತು
ನಿದ್ರೆಯಿಂದ ಕಣ್ಣು ತೆರೆಯಲಾಗಲಿಲ್ಲ
ತಡವಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಅದೆಷ್ಟು ಸುಂದವಾಗಿತ್ತು
ಆ ಕನಸ ಕುಸುಮಗಳು
ಕನ್ನಡಿಯಲಿ ಕಂಡು ಬರುತಿತ್ತು
ಸುಂದರ ಪ್ರತಿಬಿಂಬಗಳು
ವಾಸ್ತವದ ಕನ್ನಡಿ
ಚೂರು ಚೂರಾಯಿತು
ವಿಳಂಬವಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಪ್ರೀತಿಯ ಕ್ಷಣಗಳ ಮಾಧುರ್ಯ
ಹೃದಯದ ಮಿಡಿತಗಳ ತರಂಗ
ಶಹನಾಯಿಯ ಧ್ವನಿ ಮಧುರ
ಕ್ಷಣಿಕ ಪ್ರೇಮ ಸುಖಗಳೆಲ್ಲ
ಕಣ್ಣೀರ ಸಾಗರದಲಿ ಹರಿದೋಯಿತು
ಕಾಲ ಬದಲಾಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
ಬದುಕ ಹೆಜ್ಜೆ ಹೆಜ್ಜೆಯಲಿ
ಏರು ಪೇರ
ಆಸೆ ಆಕಾಂಕ್ಷೆಗಳ
ಶವಗಳ ಭಾರ
ಸುಂದರ ಕನಸ ಕವಿತೆಗಳ
ಹಾಳೆ ಅಳಿಸಿ ಹೋಯಿತು
ಹೊತ್ತು ಕಳೆಯಿತು
ಶಿಶಿರ ಪ್ರಾರಂಭವಾಯಿತು
ಕನಸ ಎಲೆಗಳು ಉದುರಿ ಹೋಯಿತು
by ಹರೀಶ್ ಶೆಟ್ಟಿ, ಶಿರ್ವ
ಬದುಕಿನಲೂ ಶಿಶಿರನ ಆಗಮನ ಕ್ರೌರ್ಯ ಸಂಕೇತವೇ.
ReplyDeleteಇಗೋ ಇದೀಗ ನಳನಳಿಸಬಹುದೆಂದು ಕಾಯುವ ಗಳಿಗೆಯಲ್ಲೇ ವಿಧ್ವಂಸಕ ಋತುಮಾನ.
ಮಾರ್ಮಿಕ ಕವನ.