Tuesday, June 24, 2014

ಹಿಜಡಾ-೫

ಹಿಜಡಾ-೫

ರಿಸೆಪ್ಶನಿಸ್ಟ್ ಹೊರಗೆ ಬಂದು "ನೇರ ಆ ಕ್ಯಾಬಿನ್'ಗೆ  ಹೋಗಿ, ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ."

ಜೋನಮ್ಮ ಹಾಗು ಬಾನಮ್ಮ "ಹುಂ" ಎಂದು ಅವಳಿಗೆ ಚುಡಾಯಿಸಿ ರಜನಿಯ ರೂಮಿನತ್ತ ಹೋದರು.

ಒಳಗೆ ಬಂದ ಜೋನಮ್ಮ ಮತ್ತು ಬಾನಮ್ಮನನ್ನು ರಜನಿ ಸ್ವಲ್ಪ ಶಂಕಿತ ದೃಷ್ಟಿಯಿಂದ ನೋಡಿ "ಹೇಳಿ, ಏನಾಗಬೇಕಿತ್ತು?"

"ಆಗುವುದೇನು ಮಗಳೇ, ನಮ್ಮಿಂದ ಏನು ಸಾಧ್ಯ, ಎಲ್ಲ ನಿನ್ನ ಮಾಯೆ."

"ಸಾರೀ, ನನಗೇನು ಅರ್ಥವಾಗಲಿಲ್ಲ, ಯಾರು ನೀವು? ಏನು ವಿಷಯ?"

"ನಾವು ಇಲ್ಲಿ ಸಂಗಮ್ಮ ಹೇಳಿದಕ್ಕೆ ಬಂದಿದ್ದೇವೆ, ನಿನಗೆ ಇದು ಕೊಡಲಿಕ್ಕೆ" ಎಂದು ಹೇಳಿ ಜೋನಮ್ಮ ತನ್ನ ಕೈಯಲ್ಲಿದ್ದ ಚೀಲದಿಂದ ಒಂದು ಗಂಟು ತೆಗೆದು ರಜನಿಯ ಮೇಜಿನ ಮೇಲೆ ಇಟ್ಟಳು ಹಾಗು ತನ್ನ ರವಕಿಯಿಂದ ಒಂದು ಪತ್ರ ತೆಗೆದು ಅವಳ ಕೈಯಲ್ಲಿ ಕೊಟ್ಟಳು.

ರಜನಿ ಆಶ್ಚರ್ಯ ಪಟ್ಟು "ಏನಿದು ಎಲ್ಲ, ನೀವ್ಯಾರು"?

ಜೋನಮ್ಮ "ನಾವು ಯಾರೆಂದು ಒಳ್ಳೆ ರೀತಿಯಲ್ಲಿ ತೋರಿಸುತ್ತಿದೆ ನಿನಗೆ, ಆದರೆ ಸಂಗಮ್ಮನ ಆದೇಶ ಇದೆ ನಮಗೆ, ಇಲ್ಲಾದರೆ.......... ಹೋಗಲಿ ಬಿಡು, ಈ ಗಂಟಿನಲ್ಲಿ ಸಂಗಮ್ಮ ಮೋಹನನ ವಧುಗೋಸ್ಕರ ಅಂದರೆ ನಿನಗೋಸ್ಕರ ಮಾಡಿದ ಅದೆಷ್ಟೋ ಚಿನ್ನದ ಒಡವೆಗಳಿವೆ ಹಾಗು ಅವನ ಹೆಸರಲ್ಲಿ ಜಮ ಮಾಡಿ ಇಟ್ಟ  ಬ್ಯಾಂಕಿನ ಪಾಸ್ ಬುಕ್ ಇದೆ ಒಟ್ಟಿಗೆ ಈ ಪತ್ರ ಸಹ ನಿನಗೆ ಕೊಡಲಿಕ್ಕೆ ಹೇಳಿದ್ದಾಳೆ."

ರಜನಿ " ಆದರೆ ಯಾರು ಸಂಗಮ್ಮ, ಏನಿದೆಲ್ಲ?"

ಈ ತನಕ ಮೌನ ಇದ್ದ ಬಾನಮ್ಮ " ಹೇ ಹುಡುಗಿ , ಬಿಡು ನಿನ್ನ ಈ  ಎಲ್ಲ ನಾಟಕ, ನಮ್ಮನ್ನು ನಮ್ಮ ಮೋಹನನಿಂದ ದೂರ ಮಾಡಿದ ನಿನಗೆ....."

ಜೋನಮ್ಮ "ಬೇಡ ಬಾನಮ್ಮ ಬೇಡ, ಶಾಪ ಕೊಡ ಬೇಡ, ದಯಮಾಡಿ ಶಾಪ ಕೊಡ ಬೇಡ, ಇದರಿಂದ ನಮ್ಮ ಮೋಹನನ ಜೀವನವೇ ಹಾಳಾಗಬಹುದು." ಎಂದು ಹೇಳಿ ಜೋರಾಗಿ ಅತ್ತಳು.

ತನ್ನನ್ನು ಸ್ವಲ್ಪ ಸುಧಾರಿಸಿ ಜೋನಮ್ಮ "ನೋಡು ಹುಡುಗಿ, ನಾವು ತುಂಬಾ ದುರದೃಷ್ಟವಂತರು, ನಮ್ಮ ಮೇಲೆ ಸ್ವಲ್ಪ ದಯಾ ಮಾಡು, ಸಂಗಮ್ಮ ಕಳಿಸಿದ ಈ ಎಲ್ಲ ವಸ್ತುಗಳನ್ನು ಸ್ವೀಕರಿಸು, ಅವಳು ಆಸ್ಪತ್ರೆಯಲ್ಲಿ ಕೊನೆ ಉಸಿರೆಳುಯುತ್ತಿದ್ದಾಳೆನೀನು ಹಾಗು ಮೋಹನ ಮದುವೆಯಾಗಿ ಸುಖದಿಂದ ಇರಿ, ನಾವು ಎಂದೂ ನಿಮ್ಮ ಸುಖ ಜೀವನದ ಅಡ್ಡ ಬರಲಾರೆವು, ಆದರೆ ಇಷ್ಟೊಂದು ಉಪಕಾರ ಮಾಡು, ಮೋಹನನನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ಆ ಮುದ್ದು ಸಂಗಮ್ಮನ ಈ ಕೊನೆ ಇಚ್ಚೆಯಂತೆ ಈ ವಸ್ತುಗಳನ್ನೆಲ್ಲ ಸ್ವೀಕರಿಸು, ನಾವಿನ್ನು ಬರುತ್ತೇವೆ" ಎಂದು ಹೇಳಿ ಇಬ್ಬರೂ ಹೊರಗೆ ನಡೆದೇ ಬಿಟ್ಟರು.

ರಜನಿ ಮೇಜಿನ ಮೇಲೆ ಅವರು ಇಟ್ಟು ಹೋದ ಸಾಮಾನು ಹಾಗು ಕೈಯಲ್ಲಿ ಕೊಟ್ಟು ಹೋದ ಪತ್ರವನ್ನು ಚಕಿತ ದೃಷ್ಟಿಯಿಂದ ನೋಡುತ್ತಿದ್ದಳು.


(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

2 comments:

  1. ಯಾಕೋ ದುರದೃಷ್ಟವಂತರು ಎನ್ನುವ ಮಾತು ಮನಸ್ಸಿಗೆ ತುಂಬ ಘಾಸಿ ಮಾಡಿಹಾಕಿತು.

    ಬಂದವರು ಹಿಜಡಾಗಳು ಹಾಗೂ ಮಾತನಾಡಿದ್ದು ಮೋಹನನ ಮದುವೆಯ ಮಾತೆಂದಾಗಲೂ ರಜನಿಗೆ ಚಿತ್ರಣ ಮನಸ್ಸಿಗೆ ಮೂಡಲಿಲ್ಲವೆಂದರೆ ಯಾಕೋ ಇದು ಮೋಹನನ ಕಳ್ಳಾಟದಂತೆಯೇ ತೋರುತ್ತಿದ್ದೆ!

    ReplyDelete
  2. ಸ್ವಲ್ಪ ಸರಿಯಾಗಿಯೇ ಊಹಿಸಿದ್ದಿರಿ ಬದರಿ ಸರ್, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...