Showing posts with label ನನ್ನ ಹಾಡು. Show all posts
Showing posts with label ನನ್ನ ಹಾಡು. Show all posts

Tuesday, July 22, 2014

ಹಾಡುವೆ ನಾನಿಂದು ಗೀತೆವೊಂದು ಸುಂದರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ನಲಿಯುತ್ತಿದೆ ಖುಷಿಯಿಂದ
ಪುಲಕಿತ ಮನಸ್ಸಿಂದು
ಹೃದಯದ ದ್ವಾರದಲಿ
ನಿಂತಿರುವೆ ನೀ ಬಂದು
ಅಲಂಕೃತವಾಗಿದೆ ಇಂದು
ನನ್ನ ಹೃದಯ ಮಂದಿರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಅದೆಷ್ಟೋ ಸಮಯದ ನಂತರ
ಬಂದಿದೆ ಸಂತಸದ ಕ್ಷಣ ಇದು
ಅಂತರಂಗದ ಸುಮಗಳಿಗೆ
ಬಂದಿದೆ ವಸಂತ ಇಂದು
ಅರಳುತ್ತಿದೆ ಬಯಕೆಗಳ
ಕುಸುಮಗಳು ತರಹ ತರಹ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಸಿಹಿ ಸಿಹಿ ಧ್ವನಿ ಹೊರಡುತ್ತಿದೆ
ಮನ ಕೋಗಿಲೆಯಿಂದ ಇಂದು
ಅಂಬರದ ಉತ್ತುಂಗಕ್ಕೆ ಏರಿದೆ
ನನ್ನ ಹುಮ್ಮಸ್ಸು ಉತ್ಸಾಹ ಇಂದು
ಅಪೇಕ್ಷೆ ಇಚ್ಚೆಯ ಹಕ್ಕಿಗಳು ಹಾರುತ್ತಿದೆ
ತೆರೆದು ಬಂಧನದ ಪಂಜರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

by ಹರೀಶ್ ಶೆಟ್ಟಿ, ಶಿರ್ವ 

Monday, July 21, 2014

ದೂರ ದೂರ ಇರದಿರು ಸಖಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

ಅರಿವಿದೆ ನನಗೆ
ನಿನ್ನ ಹೃದಯವೂ ಮಿಡಿಯುತ್ತದೆ
ನನ್ನ ಹಾಗೆಯೆಂದು
ಗೊತ್ತು ನನಗೆ
ನಿನ್ನ ಮನಸ್ಸೂ ಪ್ರೇಮ ಗೀತೆ ಹಾಡುತ್ತದೆ
ನನ್ನ ಹಾಗೆಯೆಂದು
ಹೀಗೆ ನೀನು ಹೆದರದಿರು ಸಖಿಯೇ
ನಿನ್ನ ಹೃದಯವನ್ನು ನನ್ನ ಮುಂದೆ
ಬಿಚ್ಚಿಡು ಪ್ರೇಯಸಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

ಈ ನಿನ್ನ ಲಜ್ಜೆ
ನನ್ನ ಹೃದಯವನ್ನು ಕೊಲ್ಲುತ್ತಿದೆ
ದಿನ ದಿನ
ನಿನ್ನ ಈ ಮುಗ್ಧತೆ
ನನ್ನನ್ನು ಮರುಳುಗೊಳಿಸುತ್ತಿದೆ
ದಿನ ದಿನ
ಹೀಗೆ ನನ್ನನ್ನು ನೀನು ಸತಾಯಿಸದಿರು ಗೆಳತಿಯೇ
ನಿನ್ನ ಮನಸ್ಸ ಗುಟ್ಟನ್ನು ನನ್ನ ಮುಂದೆ
ಬಹಿರಂಗಗೊಳಿಸು ಪ್ರೀತಿಯೇ

ದೂರ ದೂರ ಇರದಿರು ಸಖಿಯೇ
ಸ್ವಲ್ಪ ಸನಿಹ ಬಾ ಒಲವೇ
ಕೇವಲ ಮೌನ ಸಂದೇಶ ಕಳಿಸದಿರು
ಎರಡು ಮಾತನ್ನೂ ನುಡಿ ಪ್ರೀತಿಯೇ

by ಹರೀಶ್ ಶೆಟ್ಟಿ, ಶಿರ್ವ 

Sunday, July 20, 2014

ಕಂಬನಿ ಹರಿಸದಿರು ಚೆಲುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ
ಜೀವನ ಸುಖ ದುಃಖದ ನಾವೆ
ಸಹಜವಾಗಿ ತೇಲಿಕೊಂಡು ಹೋದರೆ
ಪಡೆಯುವೆ ಕಿನಾರೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

ಗಾಳಿ ಬಿರುಗಾಳಿ ಚಂಡಮಾರುತ
ಬದುಕಲಿ ಇದೆಲ್ಲ ಸಹಜವೇ
ಸತತ ಹೋರಾಟವೇ ಜೀವನ
ಇಂದಿನ ಕಷ್ಟ ಸಹಿಸಿದರೆ
ನಾಳೆ ಸಿಗುವುದು ಸುಖದ ದಿನವೇ
ಹೆದರದಿರು ನೀನು ಸಖಿಯೇ
ನೀನೆಲ್ಲಿ ಹೋದರು
ಜೊತೆಯಾಗಿ ನಾನೂ ಬರುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

ಕಷ್ಟದ ಏನು
ಅದು ನಮ್ಮಂತಹ ಬಡವರ ಒಡವೆ
ಏರು ಪೇರಿನ ಜೀವನ
ಇಂದು ಅನುಭವ ಕಹಿ ಬೇವಿನ
ನಾಳೆ ಹರಿಯುವುದು ಹೊಳೆ ಜೇನಿನ
ಭಯ ಪಡದಿರು ಪ್ರೀತಿಯೇ
ನಿನ್ನೆಲ್ಲ ಕಷ್ಟವನ್ನು
ನಿನ್ನ ಜೊತೆ ನಾನೂ ಎದುರಿಸುವೆ

ಕಂಬನಿ ಹರಿಸದಿರು ಚೆಲುವೆ
ನಿನ್ನ ಜೊತೆ ಎಂದೆಂದಿಗೂ ನಾನಿರುವೆ

by ಹರೀಶ್ ಶೆಟ್ಟಿ,ಶಿರ್ವ 

Saturday, July 19, 2014

ಸಂಜೆ ನೀ ಸ್ವಲ್ಪ ತಡವಾಗಿ ಬಾ

ಸಂಜೆ ನೀ ಸ್ವಲ್ಪ
ತಡವಾಗಿ ಬಾ
ನನ್ನವಳು ಬರಲಿ
ಸ್ವಲ್ಪ ನಿದಾನವಾಗಿ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಸೂರ್ಯನ ತಾಪ
ನಾ ಸಹಿಸಲು ಸಿದ್ಧ
ಬೆವರಲಿ ಮುಳುಗಲು
ನಾನು ಸಿದ್ಧ
ಪ್ರೀತಿಯ ಬಿಸುಪು
ತಣಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಪ್ರೀತಿಯ ನಿರೀಕ್ಷೆಗೆ
ಕಣ್ಣಿಲ್ಲ ನೋಡು
ಹೃದಯದ ಮಿಡಿತಕ್ಕೆ
ನಿಯಂತ್ರಣವಿಲ್ಲ ನೋಡು
ಕನಸಿನ ಕೋಗಿಲೆ
ಸಂಧ್ಯಾರಾಗ ಹಾಡಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಗೊತ್ತು ನಿನ್ನ ಗತಿ
ನಿಲ್ಲುವುದಿಲ್ಲವೆಂದು
ನಿಸರ್ಗದ ನಿತ್ಯಕ್ರಮ
ಬದಲಾಗುವುದಿಲ್ಲವೆಂದು
ಆದರೂ ನಮ್ಮ ಪ್ರೇಮ ಪಲ್ಲವಿ
ಧ್ವನಿಸಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

by ಹರೀಶ್ ಶೆಟ್ಟಿ,ಶಿರ್ವ 

ಹಗಲಲ್ಲಿ ಬಾ ನೀ ಇರುಳಲ್ಲಿ ಬಾ ನೀ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಸಾಗರದಲಿ ತರಂಗ 
ಏರುತ್ತಿದೆ ರಭಸದಲಿ
ನಿನ್ನ ನೆನಪ ಅಲೆಗಳು
ನನ್ನ ಹೃದಯದಲಿ
ಹರಿಯುತ್ತಿದೆ ಕಣ್ಣೀರು
ಈ ನಿರೀಕ್ಷೆಯ ಕಂಗಳಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಕಾಗದದಲಿ ಬರೆದು
ನಿನ್ನ ಹೆಸರನ್ನ
ದೋಣಿ ಮಾಡಿ ಬಿಡುವೆ
ಸಾಗರದಲಿ ಅದನ್ನ
ತೇಲುತ್ತಿದೆ ನನ್ನ
ವಿಚಲಿತ ಹೃದಯ ಅದರಲ್ಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ