Saturday, July 19, 2014

ಸಂಜೆ ನೀ ಸ್ವಲ್ಪ ತಡವಾಗಿ ಬಾ

ಸಂಜೆ ನೀ ಸ್ವಲ್ಪ
ತಡವಾಗಿ ಬಾ
ನನ್ನವಳು ಬರಲಿ
ಸ್ವಲ್ಪ ನಿದಾನವಾಗಿ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಸೂರ್ಯನ ತಾಪ
ನಾ ಸಹಿಸಲು ಸಿದ್ಧ
ಬೆವರಲಿ ಮುಳುಗಲು
ನಾನು ಸಿದ್ಧ
ಪ್ರೀತಿಯ ಬಿಸುಪು
ತಣಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಪ್ರೀತಿಯ ನಿರೀಕ್ಷೆಗೆ
ಕಣ್ಣಿಲ್ಲ ನೋಡು
ಹೃದಯದ ಮಿಡಿತಕ್ಕೆ
ನಿಯಂತ್ರಣವಿಲ್ಲ ನೋಡು
ಕನಸಿನ ಕೋಗಿಲೆ
ಸಂಧ್ಯಾರಾಗ ಹಾಡಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

ಗೊತ್ತು ನಿನ್ನ ಗತಿ
ನಿಲ್ಲುವುದಿಲ್ಲವೆಂದು
ನಿಸರ್ಗದ ನಿತ್ಯಕ್ರಮ
ಬದಲಾಗುವುದಿಲ್ಲವೆಂದು
ಆದರೂ ನಮ್ಮ ಪ್ರೇಮ ಪಲ್ಲವಿ
ಧ್ವನಿಸಿದಾಗ ಬಾ
ಸಂಜೆ ನೀ ಸ್ವಲ್ಪ
ತಡವಾಗಿ ಬಾ

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಲಯ ಮತ್ತು ಸುಲಲಿತವಾಗಿ ರಚನೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...