ಓ ದೇಹವೇ,
ವಯಸ್ಸು ಓಡುತ್ತಿರುವಂತೆ
ನೀನ್ಯಾಕೆ ಭಾರ ಭಾರವಾಗುತ್ತ ಹೋಗುತ್ತಿರುವೆ
ರೋಗಗಳನ್ನು ಯಾಕೆ ಆಹ್ವಾನಿಸುವೆ
ಯಾಕೆ ಅವುಗಳನ್ನು ತನ್ನೊಳಗೆ ನೆಲೆಸುವೆ
ದಿನನಿತ್ಯ ನಿನಗೆ ಯೋಗ ನೀಡುವೆ
ಮುಂಜಾವು ಎದ್ದು ಎಷ್ಟೋ ಸುತ್ತು ನಡೆಯುವೆ
ಒತ್ತಾಯದಿಂದ ಕೆಲವು ಸುತ್ತು ಓಡುವೆ
ಆದರೂ ನೀನ್ಯಾಕೆ ದುಂಡು ದುಂಡಾಗಿರುವೆ
ಈಗಲೂ ನಿನಗೆ
ಒಳ್ಳೆ ಆಹಾರ ನೀಡುತ್ತಿರುವೆ
ಶಕ್ತಿವರ್ಧಕ ಗುಳಿಗೆ ಕೊಡುತ್ತಿರುವೆ
ಆದರೆ ನೀನ್ಯಾಕೆ ಬೇಗನೆ ಆಯಾಸ ನೀಡುತ್ತಿರುವೆ
ಕನ್ನಡಿಯಲಿ
ನಿನ್ನನ್ನು ನೋಡುವಾಗ ಅದೇಕೋ ಬೇಸರ
ಸಪೂರ ಸುಂದರವಾಗಿದ್ದ ನೀನು ಕಳೆದಿರುವೆ ನಿನ್ನ ಆಕಾರ
ಅದೇಕೆ ನೀನು ನಿನ್ನ ಗತಕಾಲ ಮರೆತಿರುವೆ
by ಹರೀಶ್ ಶೆಟ್ಟಿ, ಶಿರ್ವ
ವಯಸ್ಸು ಓಡುತ್ತಿರುವಂತೆ
ನೀನ್ಯಾಕೆ ಭಾರ ಭಾರವಾಗುತ್ತ ಹೋಗುತ್ತಿರುವೆ
ರೋಗಗಳನ್ನು ಯಾಕೆ ಆಹ್ವಾನಿಸುವೆ
ಯಾಕೆ ಅವುಗಳನ್ನು ತನ್ನೊಳಗೆ ನೆಲೆಸುವೆ
ದಿನನಿತ್ಯ ನಿನಗೆ ಯೋಗ ನೀಡುವೆ
ಮುಂಜಾವು ಎದ್ದು ಎಷ್ಟೋ ಸುತ್ತು ನಡೆಯುವೆ
ಒತ್ತಾಯದಿಂದ ಕೆಲವು ಸುತ್ತು ಓಡುವೆ
ಆದರೂ ನೀನ್ಯಾಕೆ ದುಂಡು ದುಂಡಾಗಿರುವೆ
ಈಗಲೂ ನಿನಗೆ
ಒಳ್ಳೆ ಆಹಾರ ನೀಡುತ್ತಿರುವೆ
ಶಕ್ತಿವರ್ಧಕ ಗುಳಿಗೆ ಕೊಡುತ್ತಿರುವೆ
ಆದರೆ ನೀನ್ಯಾಕೆ ಬೇಗನೆ ಆಯಾಸ ನೀಡುತ್ತಿರುವೆ
ಕನ್ನಡಿಯಲಿ
ನಿನ್ನನ್ನು ನೋಡುವಾಗ ಅದೇಕೋ ಬೇಸರ
ಸಪೂರ ಸುಂದರವಾಗಿದ್ದ ನೀನು ಕಳೆದಿರುವೆ ನಿನ್ನ ಆಕಾರ
ಅದೇಕೆ ನೀನು ನಿನ್ನ ಗತಕಾಲ ಮರೆತಿರುವೆ
by ಹರೀಶ್ ಶೆಟ್ಟಿ, ಶಿರ್ವ
ಪ್ರತಿ ದಿನ ಕನ್ನಡಿ ಎದುರು ಅರೆ ಬರೆ ಬೋಳು ತಲೆಯನ್ನು ಬಾಚಿಕೊಳ್ಳುವ ಕೆಟ್ಟ ಗಳಿಗೆಯಲಿ ನನ್ನ ಮನವೂ ಹೀಗೇ ರೋಧಿಸುತ್ತದೆ! :(
ReplyDeleteಧನ್ಯವಾದಗಳು ಬದರಿ ಸರ್. :)
ReplyDelete