Tuesday, July 1, 2014

ಅನುಬಂಧ

ಗೆಳತಿ,
ಅದೇಕೆ ನೀನು 
ದೂರ ದೂರ ನನ್ನಿಂದ 
ಮನಸ್ಸಲ್ಲಿ ನಿನ್ನ 
ಯಾವ ರೀತಿಯ ನಡೆಯುತ್ತಿದೆ ದ್ವಂದ 
ಅಂತರ ಬೆಳೆಸಿ 
ಮುರಿಯದಿರು ನಮ್ಮ ಈ ಅನುಬಂಧ 
---

ಗೆಳತಿ,
ಸಂಕೋಚ ನಿನ್ನಲ್ಲೂ 
ಸಂಕೋಚ ನನ್ನಲ್ಲೂ 
ಸ್ವಲ್ಪ ಅಹಂ ನಿನ್ನಲ್ಲೂ
ಸ್ವಲ್ಪ ಅಹಂ ನನ್ನಲ್ಲೂ
ಬಹುಶಃ ನಮಗೆ ಇನ್ನೂ ಸಮಯ ಬೇಕು 
ಒಬ್ಬರನೊಬ್ಬರನ್ನು ಅರಿಯಲು 
---

ಗೆಳತಿ,
ಈ ಮೌನ ಮಾತುಗಳೇ 
ಎಷ್ಟು ಚೆನ್ನ 
ನಿನಗೂ ಇಷ್ಟ 
ನನಗೂ ಇಷ್ಟ 
ಆದರೆ ಕೆಲವೊಮ್ಮೆ ಭಾವನೆಗಳನ್ನು
ನಿಯಂತ್ರಿಸುವುದು ಕಷ್ಟ 
---

ಗೆಳತಿ,
ನಿನ್ನ ಕಟು ಮಾತಿನಿಂದ
ನನ್ನ ಹೃದಯಕ್ಕೆ ವೇದನೆ 
ಆದದ್ದು ನಿಜ 
ಆದರೆ ನಿನ್ನ ಮೇಲೆ ಇದ್ದ 
ಪ್ರೀತಿ 
ಕಿಂಚಿತ್ತು ಕಡಿಮೆಯಾಗಲಿಲ್ಲ 
ಅದೂ ನಿಜ 

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಮುಕ್ತವಾಗಿ ಹೇಳಬೇಕೆಂದರೆ, ಹರೀಶ್ ಸಾರ್,
    ನಿಮ್ಮ ಈ ಹೇಳತಿ ಹನಿಗಳು:
    "ನಿನಗೂ ಇಷ್ಟ
    ನನಗೂ ಇಷ್ಟ "
    ;-)

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್. :)

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...