Showing posts with label ಹಾಯ್ಕು. Show all posts
Showing posts with label ಹಾಯ್ಕು. Show all posts

Saturday, March 29, 2014

ಅಸ್ತಾದ್ರಿ ರವಿ

ಅಸ್ತಾದ್ರಿ ರವಿ 
ತುಂಬಿ ಬಂತು ವರುಷ 
ನೆನಪು ನಿತ್ಯ 

by ಹರೀಶ್ ಶೆಟ್ಟಿ,ಶಿರ್ವ

Saturday, March 15, 2014

ಹೋಳಿ


ಹೋಳಿಯ ಹಬ್ಬ
ರಂಗುಗಳ ತುಂತುರು
ಪ್ರೀತಿಯ ರಸ

----

ಗುಲಾಬಿ ನೀಲಿ
ಬಣ್ಣಗಳ ಪ್ರವಾಹ
ತೇಲುವ ಹರ್ಷ

-----

ಬಣ್ಣದ ಸ್ನಾನ
ಒದ್ದೆ ಒದ್ದೆ ವೈರತ್ವ
ಮಿತ್ರ ಶರಣ

----

ಸಿಹಿ ಮಿಠಾಯಿ
ಗಮ್ಮತ್ತು  ಶರಬತ್ತು
ಕಷ್ಟ ವಿನಾಶ

by ಹರೀಶ್ ಶೆಟ್ಟಿ,ಶಿರ್ವ

ನಿಷ್ಪಾಪಿ ಮಗು

ಅಂಧ ಒಲವು
ಅನೈತಿಕ ಸಂಬಂಧ
ಗೌಪ್ಯ ಬಸಿರು
---
ನಾಚಿದ ಗರ್ಭ
ಹೆರಿಗೆಯಲ್ಲಿ ಶಿಶು
ಬಾಣಂತಿ ಚಿಂತೆ
---
ಕಸದ ಬುಟ್ಟಿ
ಕಳಂಕಿತ ಜನನಿ
ನಿಷ್ಪಾಪಿ ಮಗು

by ಹರೀಶ್ ಶೆಟ್ಟಿ,ಶಿರ್ವ 

Wednesday, March 12, 2014

ಹಾಯ್ಕು ೫-೭-೫

ಮೈತ್ರಿಯ ಇಚ್ಛೆ 
ಪಾರಿವಾಳ ಸಂದೇಶ 
ಶಾಂತಿ ಪ್ರಸ್ತಾವ 

---

ಕೋಪ ಇಳಿಕೆ 
ಮಲ್ಲಿಗೆ ಸುವಾಸನೆ 
ಗೃಹ ಪ್ರವೇಶ 

---

ಪ್ರೀತಿ ಸಂಕೋಲೆ
ಪೂರ್ವ ಜನ್ಮದ ಮೈತ್ರಿ 
ಋಣಾನುಬಂಧ 

---

ದಾನಿ ಸ್ವಭಾವ 
ಆನಂದ ಅನುಭವ 
ಆರದ ದೀಪ 


by ಹರೀಶ್ ಶೆಟ್ಟಿ,ಶಿರ್ವ

Tuesday, March 11, 2014

ಆತ್ಮ

ನಿರ್ಜೀವ ದೇಹ 
ಪಯಣದಲಿ ಆತ್ಮ 
ಮೌನದ ನೆಲೆ 

by ಹರೀಶ್ ಶೆಟ್ಟಿ,ಶಿರ್ವ

ನ್ಯಾಯ

ಸಜೆ, ಆಶ್ಚರ್ಯ!
ನ್ಯಾಯಕ್ಕೆ ಪ್ರಶ್ನೆ ಚಿಹ್ನೆ?
ಪೂರ್ಣ ವಿರಾಮ.

Sunday, March 9, 2014

ಹಾಯ್ಕು ಹಾಯ್ಕು

ದಾರುಣ ಸ್ಥಿತಿ 
ಆ ನವೀನ ಕವಿಯ 
ಠಕ್ಕು ಬಾರದು 
---

ಬೂಟಾಟಿಕೆಯ
ಪೂಜೆ ಭಕ್ತಿ ಆರತಿ 
ನೀರಿಗೆ ಹೋಮ 


---

ಗುಡಿಗೆ ಬೀಗ
ದೇವರಿಗೆ ವಿಶ್ರಾಂತಿ 
ಭಕ್ತ ಅಶಾಂತ 

by ಹರೀಶ್ ಶೆಟ್ಟಿ, ಶಿರ್ವ

ಕೃಷ್ಣ ವೇಣು

ರಾಧೆ ಕೋರಿಕೆ 
ಕೃಷ್ಣ ವೇಣು ವಾದನ 
ನಿಸರ್ಗ ಮಗ್ನ 

by ಹರೀಶ್ ಶೆಟ್ಟಿ,ಶಿರ್ವ

ವಸಂತ

ಹೊಸ ಚಿಗುರು 
ಮರಗಳ ಚೆಲುವು 
ವಸಂತ ಗಾನ 

by ಹರೀಶ್ ಶೆಟ್ಟಿ,ಶಿರ್ವ

ಶಿಶಿರ

ಶಿಶಿರ ಋತು 
ಬೆತ್ತಲೆ ವೃಕ್ಷಗಳ 
ದುಃಖ ಮ್ಲಾನತೆ

by ಹರೀಶ್ ಶೆಟ್ಟಿ,ಶಿರ್ವ

Thursday, March 6, 2014

"ಬಾಲ್ಯ" ಹಾಯ್ಕು

ಬಾಲ್ಯ ಜೀವನ 
ಮಾವಿನ ಮರ ಅಡಿ 
ಅದೆಷ್ಟು ಚಂದ 
---

ಎಷ್ಟೊಂದು ರುಚಿ 
ಸಂತೆಯಿಂದ ಅಪ್ಪಯ್ಯ 
ತರುವ ಬಿಸ್ಕು 

---

ಆಡಿ ಬಂದಾಗ
ಅಮ್ಮನ ಗಂಜಿ ಊಟ
ಜೀವ ಅಮೃತ

---

ಮಾವ ತರುವ
ಚಂದಮಾಮ ಪುಸ್ತಕ
ಕನಸ ಲೋಕ

----

ಶಾಲಾ ರಜೆಗೆ
ನದಿಯಲ್ಲಿ ಈಜುವ
ಆನಂದ ಕ್ಷಣ

----

ಶಿಕ್ಷಕರಿಂದ
ಶಾಲೆಯಲಿ ಸಿಗುವ
ಪೆಟ್ಟು ಪ್ರಸಾದ

----

ಜಗಳಗಳು
ಮುದ್ದು ಆಟಗಳೆಲ್ಲ
ಮುದ್ದು ಮಾತೆಲ್ಲ

by ಹರೀಶ್ ಶೆಟ್ಟಿ, ಶಿರ್ವ

Wednesday, March 5, 2014

ಸುರಭಿ

ಮಿಂದಿದೆ ಮನ
ಕುಸುಮವು ಸುರಿದ
ಸುರಭಿಯಲಿ

by ಹರೀಶ್ ಶೆಟ್ಟಿ,ಶಿರ್ವ 

Tuesday, March 4, 2014

"ವೇಶ್ಯೆ" ಹಾಯ್ಕು

ಕರಿ ಕತ್ತಲೆ
ವ್ಯಾಪಾರದಲಿ ವೇಶ್ಯೆ
ಅಳುವ ಮಗು

ವೇಶ್ಯೆಯ ವೃತ್ತಿ
ಪೂಜೆಯಲಿ ಧನಿಕ
ದೇಹ ಪ್ರಸಾದ

ಕ್ಷಣಿಕ ಸುಖ
ಬಹಿರಂಗ ಮಾನವ
ಶವ ಶರೀರ

ಹೆಚ್ಚು ಸಂದಾಯ
ಸುಳ್ಳು ಮಾನವೀಯತೆ
ಮೂಕ ಮಮತೆ

ಅಧಿಕಾದಾಯ
ಮಗು ಹಾಲು ವ್ಯವಸ್ಥೆ
ಪೋಲಿಸ್ ಪಾಲು

by ಹರೀಶ್ ಶೆಟ್ಟಿ,ಶಿರ್ವ 

"ಮಳೆ" ಹಾಯ್ಕು

ಬಾಡಿದ ಬೆಳೆ
ವರುಣನ ಮುನಿಸು
ರೈತ ಕಂಗಾಲು

---

ಒಣ ಧರತಿ
ವಿಮುಖವಾದ ವರ್ಷ
ವರುಣ ಪೂಜೆ

---

ಬಾನಲ್ಲಿ ದೃಷ್ಟಿ
ಮೇಘಗಳ ಚೆಲ್ಲಾಟ
ಸೋತ ಕಂಗಳು

---

ಕಷ್ಟದ ಕಾಲ
ಏರುತ್ತಿರುವ ಸಾಲ
ವಿವಶ ರೈತ

---
ಖಾಲಿ ಬಾಣಲೆ
ಮನೆಯಲ್ಲಿಲ್ಲ ಧಾನ್ಯ
ಹಸಿದ ಹೊಟ್ಟೆ

---

ಬಂಜರು ಭೂಮಿ
ಹೃದಯ ಸೀಳು ಸೀಳು
ಚುಚ್ಚುವ ಮುಳ್ಳು

---

ಬರಿದು ಬಾವಿ
ಒಣ ನದಿ ಕಾಲುವೆ
ಕಣ್ಣೀರ ಗತಿ

by ಹರೀಶ್ ಶೆಟ್ಟಿ, ಶಿರ್ವ 

Monday, March 3, 2014

ಹಾಯ್ಕು

ಉಣ್ಣುವ ಮಗು 
ಹಸಿದಿದ್ದ ಅಮ್ಮನ 
ತೃಪ್ತಿಯ ನೋಟ 

---

ವೇಶ್ಯ ಬಜಾರ 
ನಿತ್ಯ ಸಾಯುವ ದೇಹ 
ಕನಸ ಶ್ರಾದ್ಧ 

by ಹರೀಶ್ ಶೆಟ್ಟಿ,ಶಿರ್ವ

ಕೆಲವು ಹಾಯ್ಕುಗಳು

ಸೋಲಿನ ಭಯ 
ಬಣ್ಣವ ಬಳಸಿದ್ದ 
ಚಹರೆಯಲಿ

---

ಪಾರಿತೋಷಕ
ಸತ್ಯ ತಿರುಚಿದಕ್ಕೆ 
ಪುರಾಣಗಳ 

---

ಕಲ್ಲುಗಳಂತೆ 
ಈ ಹೃದಯಗಳೆಲ್ಲ
ಮೌನ ವಿಮರ್ಶೆ 

---

ಸಿದ್ಧತೆಯಲಿ
ತೇಲುವ ಮೇಘಗಳು,
ಧರೆಯ ಹರ್ಷ 

---

ಮುಪ್ಪು ನಿರೀಕ್ಷೆ
ಅಂಚೆಯಲಿ ಬಂದದ್ದು
ಸಾವಿನ ಸುದ್ಧಿ 

---

ಕಜ್ಜಳಯುಕ್ತ
ಕಂಗಳಲ್ಲಿ ಅನೇಕ 
ಶ್ವೇತ ಕನಸು 

by ಹರೀಶ್ ಶೆಟ್ಟಿ,ಶಿರ್ವ

Saturday, March 1, 2014

ಶಿವರಾತ್ರಿ

ಈಶ್ವರ ಲಿಂಗ 
ಬಿಲ್ವ ಎಲೆ ಅರ್ಪಣೆ 
ಸಂತುಷ್ಟ ಮನ 

------

ತಿರುಕನಿಗೆ 
ನಿತ್ಯದ ಜಾಗರಣೆ 
ತಿಂಡಿ ಇಲ್ಲದೆ 

-------

ಆರದಿರಲಿ 
ಭಕ್ತಿ ಭಾವದ ದೀಪ 
ಪ್ರಜ್ವಲಿಸಲಿ 

by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ