Monday, March 3, 2014

ಕೆಲವು ಹಾಯ್ಕುಗಳು

ಸೋಲಿನ ಭಯ 
ಬಣ್ಣವ ಬಳಸಿದ್ದ 
ಚಹರೆಯಲಿ

---

ಪಾರಿತೋಷಕ
ಸತ್ಯ ತಿರುಚಿದಕ್ಕೆ 
ಪುರಾಣಗಳ 

---

ಕಲ್ಲುಗಳಂತೆ 
ಈ ಹೃದಯಗಳೆಲ್ಲ
ಮೌನ ವಿಮರ್ಶೆ 

---

ಸಿದ್ಧತೆಯಲಿ
ತೇಲುವ ಮೇಘಗಳು,
ಧರೆಯ ಹರ್ಷ 

---

ಮುಪ್ಪು ನಿರೀಕ್ಷೆ
ಅಂಚೆಯಲಿ ಬಂದದ್ದು
ಸಾವಿನ ಸುದ್ಧಿ 

---

ಕಜ್ಜಳಯುಕ್ತ
ಕಂಗಳಲ್ಲಿ ಅನೇಕ 
ಶ್ವೇತ ಕನಸು 

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಇಲ್ಲಿನ ಕೆಲ ಹನಿಗಳು ಜೀವನ ದರ್ಶನ ಕೊಡುತ್ತವೆ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...