Sunday, March 16, 2014

ಚುನಾವಣೆ ಹೋಳಿ

ಅದೇಕೋ ಇತರ ರಂಗುಗಳ
ಬೇಡಿಕೆ ಇಳಿದಿದೆ
ಕಪ್ಪು ರಂಗು
ತುಂಬಾ ಬಳಕೆಯಲ್ಲಿದೆ

ಎಸೆದು ಕಪ್ಪು ರಂಗು
ಒಬ್ಬರನೊಬ್ಬರ ಮುಖಕ್ಕೆ
ತಾವೇ ನಿರ್ಮಲವೆಂಬ
ಡಂಗುರ ಸಾರುತ್ತಿದೆ
ರಾಜಕೀಯ ರೂಪ
ಕಲ್ಲಿದ್ದಲಿಗಿಂತಲೂ ಕಪ್ಪಾಗಿದೆ

ಹಳೆ ರಾಜಕಾರಣಿಗಳ
ಮುಖವಾಡ ಕಳಚಿ ಬಿದ್ದು
ಕಪ್ಪು ಮಸಿಯಿಂದ ಕಪ್ಪಾಗಿದೆ,
ಹೊಸ ರಾಜಕಾರಣಿಗಳ
ಮುಖ ವಿವಿಧ
ಮುಖವಾಡ ಪಡೆದಿದೆ

ಕೇಸರಿ ಪ್ರಯತ್ನದಲ್ಲಿದೆ
ಹಸಿರು ನಾರಂಗಿ ಉಸಿರೆಳುಯುತ್ತಿದೆ

by ಹರೀಶ್ ಶೆಟ್ಟಿ,ಶಿರ್ವ 

1 comment:

  1. ಏಳು ಬಣ್ಣಗಳ ಸಮ್ಮಿಲನ ಶುದ್ಧ ಬಿಳೀ
    ಅಶುದ್ಧ ಅಬದ್ಧ ಸಂಕೇತ ಕಡು ಕಪ್ಪು ಬಣ್ಣ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...