Saturday, March 29, 2014

ಕತ್ತಲ ಅಮಾವಾಸ್ಯೆ

ಅದೇಕೋ ಹೂ ಅರಳುವುದಿಲ್ಲ 
ಈಗ ನನ್ನ ಮನೆಯಂಗಳದಲಿ

ಅದೇಕೋ ನಿದ್ದೆ ಬರುವುದಿಲ್ಲ 
ಈಗ ರಾತ್ರಿಯ ನಿಶೆಯಲಿ 

ಕನಸು ಮುನಿಸಿಕೊಂಡಿದೆ 
ಸನಿಹ ಸುಳಿಯುವುದೇ ಇಲ್ಲ 

ಹೃದಯ ಬಂಜರ ಭೂಮಿಯಾಗಿದೆ 
ಎಷ್ಟೇ ಪ್ರಯತ್ನಿಸಿದರೂ ಮಿಡಿಯುವುದಿಲ್ಲ

ಪ್ರೇಮ ಚಂದ್ರ ಕರಗಿ ಕರಗಿ ಮರೆಯಾಗಿದೆ
ಜೀವನದಲಿ ಕತ್ತಲ ಅಮಾವಾಸ್ಯೆ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಹೊರಗಿನ ಅಮಾವಾಸ್ಯೆಗೆ ದೊಂದಿ ಬೆಳಕು, ಅಂತರಂಗದ ಅಮಾವಾಸ್ಯೆಗೆ? ಎಲ್ಲಿದೆ ಉಪಾಯ?

    ReplyDelete
  2. ಹೌದು ಬದರಿ ಸರ್, ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...