Saturday, March 15, 2014

ಎಲ್ಲೊ ದೀಪ ಉರಿಯುತ್ತಿದೆ

ಎಲ್ಲೊ ದೀಪ ಉರಿಯುತ್ತಿದೆ
ಎಲ್ಲೊ ಹೃದಯ
ಸ್ವಲ್ಪ ನೋಡು ಬಂದು ಪತಂಗವೇ
ಯಾವುದು ಗಮ್ಯ ನಿನ್ನಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ನನ್ನ ಗೀತೆ ನಿನ್ನ ಹೃದಯದ ಕರೆಯಾಗಿದೆ
ನಾನೆಲ್ಲೋ ಅಲ್ಲೇ ನಿನ್ನ ಪ್ರೀತಿ ಇದೆ
ನನ್ನ ಹೃದಯವೇ ನಿನ್ನ ವಲಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ಕನಸಲ್ಲ ರಹಸ್ಯ ಅಲ್ಲ ನಾನು
ಒಂದು ನೋವ ಧ್ವನಿ ನಾನು
ನಲ್ಲ ತಡಮಾಡಬೇಡ ಸಿಗಲು ಬಾರಯ್ಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ವೈರಿಗಳು ಸಾವಿರ ಪ್ರಾಣದ ಇಲ್ಲಿ
ಕಂಗಳನ್ನು ಗುರುತಿಸಿಯೇ ಸಿಗು ನೀನಿಲ್ಲಿ
ಕೆಲವು ರೂಪದಲ್ಲಿದ್ದಾರೆ ಕೊಲೆಗಾರರು ಇನಿಯ
ಎಲ್ಲೊ ದೀಪ ಉರಿಯುತ್ತಿದೆ ಎಲ್ಲೊ ಹೃದಯ

ಮೂಲ : ಶಕೀಲ್ ಬದಾಯುನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಬೀಸ್ ಸಾಲ್ ಬಾದ್

कहीं दीप जले कहीं दिल
ज़रा देख ले आ कर परवाने
तेरी कौन सी है मंज़िल
कहीं दीप जले कहीं दिल

मेरा गीत तेरे दिल की पुकार है
जहाँ मैं हूँ वहीं तेरा प्यार है
मेरा दिल है तेरी महफ़िल
ज़रा देख ले आ कर...

ना मैं सपना हूँ ना कोई राज़ हूँ
एक दर्द भरी आवाज़ हूँ
पिया देर न कर आ मिल
ज़रा देख ले आ कर...

दुश्मन हैं हज़ारों यहाँ जान के
ज़रा मिलना नज़र पहचान के
कई रूप में हैं क़ातिल
ज़रा देख ले आ कर...
http://www.youtube.com/watch?v=1kvT_nkPnGg

1 comment:

  1. ಸರ್ವ ಕಾಲೀನ ಚಲನಚಿತ್ರ. ಪ್ರತಿಭಾವಂತ ಸಂಗೀತ ನಿರ್ದೇಶಕ ಹೇಮಂತ ಕುಮಾರ್ ಅವರ ದುನ್ ಗೇ ಶಕೀಲ್ ಬದಾಯುನ್ವಿ ಅವರ ಕಲಂ ಚೆನ್ನಾಗಿ ಮಿಳಿತವಾಗಿದೆ, ಇನ್ನು ಲತಾ ಮಂಗೇಶ್ಕರ್ ಅವಅರಅ ಬಗ್ಗೆ ಎಂತ ಹೇಳುವುದು? ತಮ್ಮ ಭಾವಾನುವಾದಕ್ಕೂ ಫುಲ್ ಮಾರ್ಕ್ಸ್.
    ಚಿತ್ರಕ್ಕೆ ಮಾರ್ಷಲ್ ಬ್ರಿಗಾಂಜಾ ಅವರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...