Tuesday, March 11, 2014

ಅಲ್ಲಿ ಯಾರಿದ್ದಾರೆ ನಿನ್ನ

ಅಲ್ಲಿ ಯಾರಿದ್ದಾರೆ ನಿನ್ನ
ಪಯಣಿಗ
ಹೋಗುವೆ ನೀನೆಲ್ಲಿ
ಸ್ವಲ್ಪ ಸಾವರಿಸಿಕೋ ತನ್ನನ್ನು
ಈ ನೆರಳು
ಪಡೆಯುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಕಳೆದೋದ ದಿನಗಳು
ಪ್ರೀತಿಯ ಕ್ಷಣಗಳು
ಕನಸಾಯಿತು ಆ ರಾತ್ರಿಗಳು
ಮರೆತು ಹೋದಳವಳು
ನೀನೂ ಮರೆತೋಗು
ಪ್ರೀತಿಯ ಆ ಭೇಟಿಗಳನ್ನು
ಅಲ್ಲಿ ದೂರ ತನಕ ಕತ್ತಲು
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಯಾರೂ ನಿನ್ನ
ಹಾದಿ ಕಾಯುವುದಿಲ್ಲ
ಯಾವುದೇ ಕಂಗಳು ನಿರೀಕ್ಷೆಯಲ್ಲಿಲ್ಲ
ನೋವಿನಿಂದ ನಿನ್ನ
ಯಾರು ನರಳುವುದಿಲ್ಲ
ಅಳುವುದಿಲ್ಲ ಯಾವುದೇ ಕಣ್ಣು
ಹೇಳುವೆ ಯಾರನ್ನು ನೀನು ನಿನ್ನ
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ನೀನು ಎಲ್ಲರಿಗೆ
ಹಾದಿ ತೋರಿಸಿದೆ
ನೀನು ನಿನ್ನ ಗಮ್ಯವನ್ನೇ ಏಕೆ ಮರೆತೆ
ಪರಿಹಾರಿಸಿ ನೀನು
ಇತರರ ಸಮಸ್ಯೆಗಳನ್ನು
ಕಚ್ಚಾ ದಾರದ ಉಯ್ಯಾಲೆಯಲಿ ಏಕೆ ತೂಗಿದೆ
ನಲಿಯುವನು ಹಾವಾಡಿಗ ಯಾಕೆ
ತನ್ನದೇ ರಾಗದಲಿ
ಪಯಣಿಗ
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಹೇಳುವರು ಜ್ಞಾನಿಗಳು
ಪ್ರಪಂಚ ನಶ್ವರವೆಂದು
ಬರಹ ಇದ್ದಂತೆ ನೀರಿನಲಿ 
ಇದನ್ನು ನೋಡಿದ್ದಾರೆ ಎಲ್ಲರೂ
ಇದನ್ನು ಅನುಭವಿಸಿದ್ದಾರೆ ಎಲ್ಲರೂ
ಬಾರದು ಯಾರದ್ದು ಕೈಯಲ್ಲಿ
ನಿನ್ನ ನನ್ನ ಏನಿಲ್ಲ
ಪಯಣಿಗ,
ಹೋಗುವೆ ನೀನೆಲ್ಲಿ
ಅಲ್ಲಿ ಯಾರಿದ್ದಾರೆ ನಿನ್ನ....

ಮೂಲ : ಶೈಲೇಂದ್ರ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು/ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಗೈಡ್
वहां कौन है तेरा
मुसाफिर जाएगा कहाँ
दम ले ले घड़ी भर
ये छइयां पाएगा कहाँ

बीत गए दिन
प्यार के पल-छीन
सपना बनी ये रातें
भूल गए वो
तू भी भुला दे
प्यार की वो मुलाकातें
सब दूर आंधेरा
मुसाफिर...

कोई भी तेरी
राह ने देखे
नैन बिछाए न कोई
दर्द से तेरे
कोई ना तड़पा
आँख किसी की ना रोई
कहे किसको तू मेरा
मुसाफिर...

कहते हैं ज्ञानी
दुनिया है पानी
पानी पे लिखी लिखाई
है सबकी देखी
है सबकी जानी
हाथ किसी के ना आनी
कुछ तेरा ना मेरा
मुसाफिर...
http://www.youtube.com/watch?v=QCsdHLTf0cI

2 comments:

  1. ಅಪ್ಪ ಬರ್ಮನ್ ಸಾಹೇಬರ ಅತ್ತುತ್ತಮ ಪ್ರಯೋಗ. ಇದು ನನ್ನ ಮೆಚ್ಚಿನ ಚಿತ್ತವೂ ಹೌದು.

    "ನೀನು ಎಲ್ಲರಿಗೆ
    ಹಾದಿ ತೋರಿಸಿದೆ
    ನೀನು ನಿನ್ನ ಗಮ್ಯ ಏಕೆ ಮರೆತೆ"
    ಭಾವಾನುವಾದದ ಪರಿಪೂರ್ಣತೆ.

    ಗೈಡ್ ಚಿತ್ರದ ಛಾಯಾಗ್ರಹಣ ದಂತಕಥೆಯಾದ ಪಾಲಿ ಮಿಸ್ತ್ರೀ ಅವರದು.

    *****

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...