Monday, March 3, 2014

ನನ್ನ ಮುರಿದ ಹೃದಯದಿಂದ

ನನ್ನ ಮುರಿದ ಹೃದಯದಿಂದ 
ಯಾರಾದರು ಇಂದಿದು ಕೇಳಲಿ 
ನನ್ನ ಅವಸ್ಥೆ ಏನೆಂದು 
ನನ್ನ ಅವಸ್ಥೆ ಏನೆಂದು
ನನ್ನ ಮುರಿದ ಹೃದಯದಿಂದ......

ಭಾಗ್ಯ ನಿನ್ನ ಪದ್ಧತಿ ಅದ್ಭುತವಾದದ್ದು 
ಅದು ನಿಷ್ಕಪಟನನ್ನು ವಂಚಿಸುವಂತಹದ್ದು
ಹೂವು ಅರಳಿದರೆ ಶಾಖೆ ಮುರಿಯುವುದು
ಒಲವೆಂದು ತಿಳಿದದ್ದು 
ನನ್ನ ದೃಷ್ಟಿಯ ದೋಷವಾಗಿತ್ತು
ಯಾರದು ಏನು ತಪ್ಪು ಇದರಲಿ
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಕೇಳಿದ್ದು ಒಲವು ಪಡೆದದ್ದು ವಿರಹದ ಬೇಗೆ
ಇಷ್ಟವಾಗಲಿಲ್ಲ ಈ ಜಗತ್ತು ನನಗೆ
ಪ್ರಥಮ ಹೆಜ್ಜೆಯಲ್ಲಿಯೇ ಉರುಳಿ ಬಿದ್ದೆ ಹೀಗೆ
ಸದಾ ಮುಕ್ತವಾಗಿ ಸಂಚರಿಸುತ್ತಿದ್ದೆ
ನನಗೆ ಗೊತ್ತೇ ಏನಿತ್ತು
ಪ್ರೀತಿ ಅಂದರೆ ಏನೆಂದು
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಮೂಲ : ಕ಼ಮರ್ ಜಲಲಾಬಾದಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಚ್ಚಲಿಯ

Mere Toote Hue Dil Se Koi To Aaj Ye Puchhe
Ke Tera Haal Kya Hai, Ke Tera Haal Kya Hai
Mere Toote Hue Dil Se..................

Kismat Teri Reet Niraali,\-2
O Chhaliye Ko Chhalane Vaali
Phool Khila To Tooti Daali
Jise Ulafat Samajh Baitha,
Meri Nazaron Ka Dhokha Tha
Kisi Ki Kya Khata Hai \-2
Mere Toote Hue Dil Se..................

Maangi Muhabbat Paai Judaai, \-2
Duniya Mujh Ko Raas Na Aai
Pahale Qadam Par Thokar Khaai
Sada Aazaad Rahate The,
Hamen Maalum Hi Kya Tha
Muhabbat Kya Bala Hai \-2
Mere Toote Hue Dil Se..................

http://www.youtube.com/watch?v=u_RevIlDtMk

2 comments:

  1. ಕಮಲದ ಜಲಲಾಬಾದಿಯವರ ಸಾಹಿತ್ಯಕ್ಕೆ ಒಳ್ಳೆಯ ಭಾವಾನುವಾದ.
    ಮುಖೇಶ್ ಅಮೋಘ ಗಾಯನ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...