Saturday, March 1, 2014

ನೀ ನನ್ನ ಸನಿಹದಲ್ಲಿರುವೆ


ನೀ ನನ್ನ ಸನಿಹದಲ್ಲಿರುವೆ
ನಿನ್ನ ಕೇಶ ತೆರೆದಿದೆ
ನಿನ್ನ ಸೆರಗು ಸರಿದಿದೆ
ನಾನು ಪ್ರಜ್ಞೆಯಲಿ ಹೇಗಿರಲಿ

ನಿನ್ನ ಕಂಗಳು
ಅಮಲೇರಿಸುವ ಮದ್ಯದ ಪ್ಯಾಲೆ
ಹಾಗು ನಿನ್ನ ಕಂಪಿಸುವ ಅಧರಗಳು
ಮಧುಶಾಲೆ
ನನ್ನೆಲ್ಲ ಬಯಕೆಗಳು
ಇದೆಲ್ಲದರ ಮರುಳು
ನಾನು ಪ್ರಜ್ಞೆಯಲಿ ಹೇಗಿರಲಿ....

ನೀನು ನಗುವಾಗ
ಮಿಂಚು ಬೆಳಗಿದಂತಾಗುತ್ತದೆ
ನಿನ್ನ ಉಸಿರಿನಿಂದ
ಗುಲಾಬಿಯ ಸುಗಂಧ ಬರುತ್ತದೆ
ನೀನು ನಡೆಯುವಾಗ
ಪ್ರಕೃತಿಯೂ ಮಂತ್ರಮುಗ್ಧಗೊಳುತ್ತದೆ
ನಾನು ಪ್ರಜ್ಞೆಯಲಿ ಹೇಗಿರಲಿ....

ನೀ ನನ್ನ ಸನಿಹದಲ್ಲಿರುವೆ
ನಿನ್ನ ಕೇಶ ತೆರೆದಿದೆ
ನಿನ್ನ ಸೆರಗು ಸರಿದಿದೆ
ನಾನು ಪ್ರಜ್ಞೆಯಲಿ ಹೇಗಿರಲಿ

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಸುಹಾಗನ್

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun
Tu mere samane hai

Teri aankhe to
Chhalakate hue paimaane hai
Aur tere honth
Larajate hue maikhane hai
Mere armaan isi
Baat ke deewane hai
Main bhala hosh
Mein kaise rahun
Kaise rahun tu mere samane hai

Tu jo hansati hai to
Bijali si chamak jaati hai
Teri saanso se gulaabo ki
Mahak aati hai
Tu jo chalati hai to kudarat bhi
Bahak jaati hai
Main bhala hosh mein
Kaise rahun kaise rahun

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun
Tu mere samane hai.
http://www.youtube.com/watch?v=Zmw9NgluAlw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...